ಮಂಗಳೂರು: ಬೈಕ್‌ನಿಂದ ರಸ್ತೆಗೆ ಬಿದ್ದ ಸಹಸವಾರೆಯ ಕೈಯ ಮೇಲೆ ಲಾರಿ ಹರಿದ ಪರಿಣಾಮ ಬೆರಳುಗಳು ಹುಡಿಯಾಗಿ ಗಂಭೀರ ಗಾಯಗೊಂಡ ಘಟನೆ ನಗರ ಕೆಪಿಟಿ ಜಂಕ್ಷನ್ ಬಳಿ ನಿನ್ನೆ ಮಧ್ಯಾಹ್ನ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಮರಿಯಮ್ಮ(47) ಎಂದು ಗುರುತಿಸಲಾಗಿದೆ.
ಘಟನೆ ವಿವರ
ಜೂ.27ರಂದು ಮಹಮ್ಮದ್ ಹನೀಫ್ ತನ್ನ ಸ್ಕೂಟರ್‌ನಲ್ಲಿ ಪತ್ನಿ ಮರಿಯಮ್ಮಳನ್ನು ಕುಳ್ಳಿರಿಸಿ ಮಂಗಳೂರಿನ ಕೆಪಿಟಿ ಜಂಕ್ಷನ್ ಬಳಿಯ ಪೆಟ್ರೋಲ್ ಪಂಪ್‌ನಲ್ಲಿ ಸ್ಕೂಟರಿಗೆ ಪೆಟ್ರೋಲ್ ಹಾಕಿಸಿ ಅಲ್ಲಿಂದ ನಂತೂರು ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿಗೆ ತಲುಪುತ್ತಿದ್ದಂತೆ ವಿರುದ್ದ ದಿಕ್ಕಿನಲ್ಲಿ ಬಂದ ದ್ವಿಚಕ್ರ ಸವಾರನೊಬ್ಬ ಸ್ಕೂಟರಿಗೆ ಢಿಕ್ಕಿಹೊಡೆದ ಪರಿಣಾಮ ಮರಿಯಮ್ಮ ರಸ್ತೆಗೆ ಬಿದ್ದಿದ್ದಾರೆ.
ಈ ವೇಳೆ ಹಿಂದಿನಿಂದ ಬಂದ ಲಾರಿಯಡಿಗೆ ಮರಿಯಮ್ಮಳ ಕೈ ಸಿಲುಕಿ ಬಲಕೈಯ ಬೆರಳುಗಳು ಪೂರ್ತಿಯಾಗಿ ಹುಡಿ ಹುಡಿಯಾಗಿ ಗಂಭೀರ ಗಾಯವಾಗಿದೆ.
ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.