Friday, August 19, 2022

ಉಳ್ಳಾಲ: ಅಪಘಾತದಲ್ಲಿ ಗಾಯಗೊಂಡು 7 ತಿಂಗಳು ಕೋಮಾ ಸ್ಥಿತಿಯಲ್ಲಿದ್ದ ಯುವತಿ ಕೊನೆಯುಸಿರು

ಉಳ್ಳಾಲ:  ಬೈಕ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿ ಏಳು ತಿಂಗಳುಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಬೈಕ್‌ ಸವಾರ ಅಂದು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಪಲ್ಲವಿ (25) ಮೃತ ಯುವತಿ.

ಘಟನೆ ವಿವರ
2021ರ ಡಿ.2 ರಂದು ಮಂಗಳೂರಿನಿಂದ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ಪಲ್ಲವಿ ಕೊಲ್ಯ ಸಮೀಪ ರಾ.ಹೆ.66 ನ್ನು ದಾಟುವ ಸಂದರ್ಭ ಮೊಬೈಲ್‌ ಕೈಯಿಂದ ಕೆಳಗೆ ಬಿತ್ತೆಂದು ಹೆಕ್ಕಲು ಮುಂದಾದಾಗ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್‌ ಸವಾರ  ಢಿಕ್ಕಿ ಹೊಡೆದಿದ್ದರು.

ಆದರೆ ಅಪಘಾತದ ತೀವ್ರತೆಗೆ ಬೈಕ್‌ ಸವಾರ ಕುಂಪಲ ಆಶ್ರಯಕಾಲನಿ ನಿವಾಸಿ ವಿಜೇಶ್‌ (31) ಸ್ಥಳದಲ್ಲೇ ಸಾವನ್ನಪ್ಪಿದ್ದರು.

ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಪಲ್ಲವಿ ಅವರನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಆರು ತಿಂಗಳು ಕಳೆದರೂ ಆರೋಗ್ಯ ಸ್ಥಿತಿ ಸುಧಾರಿಸದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.  ಮಂಗಳೂರು ನಾಗುರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಮೃತ ಪಲ್ಲವಿ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಇಂದು & ನಾಳೆ ಮಂಗಳೂರಿನಲ್ಲಿ ಮೂಡುಬಿದ್ರೆ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ

ಮಂಗಳೂರು: ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ವಿವೇಕ್ ಮೋಟಾರ್ ಫೀಡರ್ ಮತ್ತು 11ಕೆ.ವಿ ಮಾರ್ಕೆಟ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.ಆದ ಕಾರಣ ಇಂದು ಬೆಳಿಗ್ಗೆ 10...

1924ರ ನಂತರದ ಹೋರಾಟದಲ್ಲಿ ಸಾವರ್ಕರ್ ಭಾಗವಹಿಸಿದ ಸಾಕ್ಷಿ ಇದ್ರೆ ತೋರ್ಸಿ-ಖಾದರ್ ಸವಾಲ್

ಮಂಗಳೂರು: ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಇತಿಹಾಸ ಇದ್ರೆ , ಇತಿಹಾಸ ಪುಸ್ತಕದಲ್ಲಿ ಅದು ಕಾಣ ಸಿಕ್ಕರೆ ಅಥವಾ ಸಾಕ್ಷಿ ಇದ್ರೆ ನನಗೆ ತೋರಿಸುತ್ತೀರಾ ಎಂದು...

ಈ ಪುಟ್ಟ ಹುಡುಗನಿಗಿರುವಷ್ಟು ಕಾಳಜಿಯೂ ಜನಪ್ರತಿನಿಧಿ, ಅಧಿಕಾರಿಗಳಿಗೆ ಇಲ್ವಾಲ್ಲಾ ಛೇ..!

ಮಂಗಳೂರು: ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ತಂದು ಮಂಗಳೂರು ನಗರವನ್ನು ಸುಂದರೀಕರಣಗೊಳಿಸಲಾಗುತ್ತಿದೆ. ಆದರೆ ಹೊಂಡಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ.ಕಾರಿನಲ್ಲಿ ಸಂಚಾರ ಮಾಡುವವರಿಗೆ ಬೈಕಿನ ಸವಾರರ ಕಷ್ಟ...