Connect with us

LATEST NEWS

ಅಬ್ಬಾಬ್ಬಾ..! ಇವನು ಕಳ್ಳ ಮಾತ್ರವಲ್ಲ… ತನಿಖೆಯಲ್ಲಿ ಬಯಲಾಯ್ತು ಭಯಾನಕ ಕೃತ್ಯ……!

Published

on

ಕಳ್ಳತನದ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದಿದ್ದ ಆರೋಪಿಯೊಬ್ಬನ ವಿಚಾರಣೆ ನಡೆಸಿದ ಪೊಲೀಸರಿಗೆ ಆರೋಪಿ ಈ ಹಿಂದೆ ನಡಸಿದ್ದ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ ಎಂಬಲ್ಲಿ ಈ ಘಟನೆ ನಡೆದಿದ್ದು, ಕಳ್ಳನ ವಿಚಾರಣೆ ವೇಳೆ ಡಬಲ್ ಮರ್ಡ*ರ್ ಹಾಗೂ ಅತ್ಯಾ*ಚಾರ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಡಬಲ್ ಮರ್ಡ*ರ್ ಕೇಸ್‌ ಸಂಬಂಧಿಸಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


ಮಾರ್ಚ್‌ 2 ರಂದು ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪನ ಪುರಸಭಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿ ನಿತೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರಿಗೆ ಆರೋಪಿ ನಡೆಸಿದ್ದ ಹಳೆ ಕೃತ್ಯವೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ….450 ರೂಪಾಯಿಗೆ ನಡೆಯಿತು ಮಾ*ರಣಾಂತಿಕ ಹ*ಲ್ಲೆ..!! ಸಿಕ್ಕ ಸಿಕ್ಕಲ್ಲಿ ತಿವಿದು ಎಸ್ಕೇಪ್ ಆದ ಕಿರಾತಕರು

ಈತ ಕಳ್ಳ ಮಾತ್ರವಲ್ಲ ಕೊ*ಲೆಗಾರನೂ…!

ಆರೋಪಿಯು 2015 ರಲ್ಲಿ ವಾಮಾ*ಚಾರದ ಹೆಸರಿನಲ್ಲಿ ಯುವತಿಯೊಬ್ಬಳ ಅತ್ಯಾ*ಚಾರ ನಡೆಸಿದ್ದ. ಬಳಿಕ ಆಕೆಯಲ್ಲಿ ಜನಿಸಿದ ನಾಲ್ಕು ದಿನದ ಮಗುವನ್ನು ಕೊಂ*ದು ಹೂತು ಹಾಕಿದ್ದಾನೆ. ಇಷ್ಟೇ ಅಲ್ಲದೆ ಆಕೆಯ ತಂದೆಯನ್ನೂ ಮುಗಿಸಿ ಮನೆಯಲ್ಲೇ ಹೂತಿದ್ದು ಈಗ ಬಾಯಿ ಬಿಟ್ಟಿದ್ದಾನೆ. ಈ ಎರಡೂ ಕೊಲೆ ಪ್ರಕರಣದಲ್ಲಿ ಈತನಿಗೆ ಸಹಕರಿಸಿದ ತಾಯಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲು ವಾಮಾ*ಚಾರದ ಹೆಸರಿನಲ್ಲಿ ಮಗಳನ್ನು ಅತ್ಯಾ*ಚಾರ ಮಾಡಿದ್ದ ಆರೋಪಿ ಬಳಿಕ ಆಕೆಯ ತಾಯಿ ಮೇಲೂ ಅತ್ಯಾ*ಚಾರ ನಡೆಸಿದ್ದ. ಬಳಿಕ ಇಬ್ಬರ ಜೊತೆಯಲ್ಲೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಮಗಳಿಗೆ ಮಗುವಾದಾಗ ತಾಯಿಯ ಸಹಕಾರದೊಂದಿಗೆ ನಾಲ್ಕು ದಿನದ ಮಗುವನ್ನು ಕೊಂ*ದು ಹೂತು ಹಾಕಿದ್ದ.
ಜುಲೈ 2016 ರಲ್ಲಿ ಕಟ್ಟಪ್ಪನ ಬಳಿಯ ಸಾಗರ ಜಂಕ್ಷನ್‌ನಲ್ಲಿರುವ ಮನೆಯಲ್ಲಿ ನವಜಾತ ಶಿಶುವನ್ನು ಕೊ*ಲೆ ಮಾಡಿದ್ದ. ಈ ಬಗ್ಗೆ ಯಾರೂ ಬಾಯಿ ಬಿಟ್ಟಿರಲಿಲ್ಲ.

ಸ್ನೇಹಿತನ ತಂದೆಯ ಕೊ*ಲೆಗೈದಿದ್ದ…!


ಆಗಸ್ಟ್ 2023 ರಲ್ಲಿ ಸ್ನೇಹಿತ ವಿಷ್ಣುವಿನ ತಂದೆಯನ್ನು ಕೊ*ಲೆ ಮಾಡಿ ಮನೆಯೊಳಗೆ ಹೂತು ಹಾಕಿದ್ದರು. ಈ ಎಲ್ಲಾ ಕೃತ್ಯಗಳಲ್ಲಿ ಸ್ನೇಹಿತ ವಿಷ್ಣು ಹಾಗೂ ಆತನ ತಾಯಿ ಸುಮಾ ಸಹಕಾರ ಮಾಡಿದ ಆರೋಪದಲ್ಲಿ ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ. ಸ್ಥಳ ಮಹಜರು ನಡೆಸಿದ ಪೊಲೀಸರಿಗೆ ಮನೆಯಲ್ಲಿ ಹೂತು ಹಾಕಿರುವ ವಿಜಯನ್ ಅವರ ದೇಹದ ಅಸ್ತಿ ಪಂಜರಗಳು ಸಿಕ್ಕಿವೆ. ಆದ್ರೆ ಮಗುವಿನ ಅವಶೇಷಗಳೂ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಮಗುವಿನ ತಾಯಿಯ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ಸದ್ಯ ವಿಚಾರಣೆ ಮುಂದುವರೆಸಿದ್ದಾರೆ.

ಎ1 ಆರೋಪಿಯಾಗಿರುವ ನಿತೀಶ್‌ ವಾಮಾ*ಚಾರದ ತೆಗೆಯುವ ಹೆಸರಿನಲ್ಲಿ ಸ್ನೇಹಿತ ವಿಷ್ಣು ಮನೆ ಸೇರಿದ್ದ. ವಿಷ್ಣುವಿನ ಸಹೋದರಿಗೆ ಕುಜದೋಷವಿದ್ದು, ಅದರ ನಿವಾರಣೆಗೆ ವಿಶೇಷ ಪೂಜೆ ಮಾಡಬೇಕು ಎಂದು ಹೇಳಿ ವಿಷ್ಣುವಿನ ಸಹೋದರಿಯನ್ನು ಅತ್ಯಾ*ಚಾರ ಮಾಡಿದ್ದ. ಬಳಿಕ ಆತನೇ ಆಕೆಯನ್ನು ವಿವಾಹ ಮಾಡಿಕೊಂಡು ಅದೇ ಮನೆಯಲ್ಲಿ ವಾಸವಾಗಿದ್ದ. ಈ ನಡುವೆ ಆಕೆಯ ತಾಯಿಯನ್ನೂ ವಾಮಾ*ಚಾರದ ಹೆಸರಿನಲ್ಲಿ ಹೆದರಿಸಿ ಅತ್ಯಾ*ಚಾರ ನಡೆಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಆದ್ರೆ, ಬಳಿಕ ತಾಯಿಯ ಜೊತೆ ಆರೋಪಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ವಿಚಾರ ವಿಷ್ಣುವಿನ ತಂದೆ ಎನ್‌.ಜಿ.ವಿಜಯನ್ ಅವರಿಗೆ ಗೊತ್ತಾಗಿದ್ದಕ್ಕೆ ಅವರನ್ನೇ ಪತ್ನಿ ಸುಮಾ ಹಾಗೂ ನಿತಿಶ್ ಕೊಂ*ದು ಹೂತು ಹಾಕಿದ್ದರು. ಇದಕ್ಕೆ ವಿಷ್ಣು ಸಹಕಾರ ನೀಡಿದ್ದ ಹಿನ್ನಲೆಯಲ್ಲಿ ವಿಷ್ಣು ಹಾಗೂ ಆತನ ತಾಯಿ ಸುಮಾ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.

LATEST NEWS

ಪಾಕ್ ನಿಂದ ಬಂದಿದ್ದ ಸೀಮಾ ಹೈದರ್ ಮೇಲೆ ಪತಿಯಿಂದ ಹ*ಲ್ಲೆ; ಸೀಮಾ ಹೇಳಿದ್ದೇನು?

Published

on

ನವದೆಹಲಿ : ಸೀಮಾ ಹೈದರ್ ಯಾರಿಗೆ ತಾನೇ ಗೊತ್ತಿಲ್ಲ. ದೂರದ ಪಾಕಿಸ್ತಾನದಿಂದ ಭಾರತಕ್ಕೆ ತನ್ನ ಪ್ರೇಮಿಗಾಗಿ ಬಂದ ಮಹಿಳೆ. ಈ ವಿಚಾರ ದೇಶದಾದ್ಯಂತ ದೊಡ್ಡ ಮಟ್ಟಿನ ಸುದ್ದಿಯಾಗಿತ್ತು. ಆದರೆ, ಈಗ ಆಕೆಯ ಕುರಿತು ಮತ್ತೊಂದು ಸುದ್ದಿ ವೈರಲ್ ಆಗಿದೆ. ಹೌದು, ಯಾರ ಪ್ರೀತಿ ಅರಸಿ ಬಂದು ಆತನನ್ನು ವಿವಾಹವಾಗಿದ್ದಳೋ ಆತನೇ ಆಕೆಯ ಮೇಲೆ ತೀವ್ರ ಹ*ಲ್ಲೆ ನಡೆಸಿದ್ದಾನೆ ಎಂಬುದಾಗಿ.

ಆಕೆಯ ಪತಿ ಸಚಿನ್ ತೀವ್ರ ಹ*ಲ್ಲೆ ನಡೆಸಿದ್ದಾನೆ ಎಂಬ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವೀಡಿಯೋದಲ್ಲಿ ಸೀಮಾ ಕಣ್ಣುಗಳು ಊದಿಕೊಂಡಿವೆ. ಆಕೆಯ ಬಲಭಾಗದ ಕಣ್ಣಿನ ಕೆಳಭಾಗ ಊದಿಕೊಂಡಿದೆ. ಹೆಪ್ಪುಗಟ್ಟಿದಂತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಪತಿಯಿಂದ ಸೀಮಾ ತೀವ್ರ ಹ*ಲ್ಲೆಗೆ ಒಳಗಾಗಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ
ಸೀಮಾ ಹೈದರ್ ಹೇಳಿದ್ದೇನು?

ಈ ವೈರಲ್ ವೀಡಿಯೋ ಬಗ್ಗೆ ಸ್ವತಃ ಸೀಮಾ ಹೈದರ್ ವೀಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ. ಪತಿ-ಪತ್ನಿ ಜೊತೆಯಾಗಿ ಕುಳಿತು ಈ ವೀಡಿಯೋ ಮಾಡಿದ್ದಾರೆ. ‘ಈ ವೀಡಿಯೋ ಫೇಕ್ ಆಗಿದೆ. ನನ್ನ ಹಾಗೂ ನನ್ನ ಪತಿಯನ್ನು ಹೀಗೆ ತೋರಿಸಲು ಯಾವ ಕೀಳುಮಟ್ಟಕ್ಕೂ ಇಳಿಯಬಲ್ಲರು. ನಮ್ಮ ಪ್ರೇಮವನ್ನು ಬಲಹೀನಗೊಳಿಸಲು ಹೀಗೆ ಮಾಡಲಾಗಿದೆ. ನಿಮಗೆ ಗೊತ್ತಿರುವಂತೆ ದಯವಿಟ್ಟು ಇಂತಹ ಫೇಕ್ ವೀಡಿಯೋಗಳಿಂದ ಎಚ್ಚರವಾಗಿರಿ ಎಂದು ಸೀಮಾ ಹೈದರ್ ಹೇಳಿದ್ದಾರೆ.

Continue Reading

FILM

ಜಿಮ್ ವರ್ಕೌಟ್ ಟೈಮ್ ನ ಗ್ಲಾಮರಸ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

Published

on

ಚಂದನವನ : ಮೇಘಾ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ, ಇದೀಗ ಹಿರಿತೆರೆಗೆ ಲಗ್ಗೆ ಇಟ್ಟಿರುವ ಕಲಾವಿದೆ. ಇದೀಗ ಅವರು ಜಿಮ್ ವರ್ಕೌಟ್ ಮಾಡುವ ವೇಳೆ ಕ್ಲಿಕ್ಕಿಸಿದ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಶಾರ್ಟ್ಸ್ ತೊಟ್ಟು ಜಿಮ್ ನಲ್ಲಿ ಮೇಘಾ ಶೆಟ್ಟಿ ವರ್ಕೌಟ್ ಮಾಡಿದ್ದಾರೆ. ಮುದ್ದಾಗಿ, ಗ್ಲಾಮರಸ್ ಆಗಿ ಅವರು ಕಾಣಿಸುತ್ತಿದ್ದಾರೆ.

ಮೇಘಾ ಶೆಟ್ಟಿ ಅಂದ್ರೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗೋದು ಸಹಜ. ಈ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ನಟಿಸಿದ್ದರು. ನಟ ಅನಿರುದ್ಧ್ ಜೊತೆ ನಟಿಸಿದ್ದ ಮೇಘಾಗೆ ಈ ಧಾರಾವಾಹಿ ಜಪ್ರಿಯತೆಯ ಉತ್ತುಂಗಕ್ಕೇರಿಸಿತ್ತು.

ಈ ವೇಳೆ ಸಿನಿಮಾಗಳಿಂದಲೂ ಮೇಘಾ ಅವಕಾಶಗಳನ್ನು ಗಿಟ್ಟಿಸಿಕೊಂಡರು, ಅತ್ತ ಧಾರಾವಾಹಿ ಮುಕ್ತಾಯಗೊಂಡಿತ್ತು. ಇತ್ತು ಮೇಘಾ ಸಿನಿಮಾಗಳಲ್ಲಿ ಬಿಝಿ ಆದರು.ಮಂಗಳೂರು ಮೂಲದ ಈ ಬೆಡಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ತ್ರಿಬಲ್ ರೈಡಿಂಗ್’ ನಲ್ಲಿ ಕಾಣಿಸಿಕೊಂಡರು. ಡಾರ್ಲಿಂಗ್ ಕೃಷ್ಣ ಜೊತೆ ‘ದಿಲ್ ಪಸಂದ್’ನಲ್ಲಿ ನಟಿಸಿದ್ದಾರೆ. ಧನ್ವೀರ್ ಗೌಟ ಜೊತೆ ‘ಕೈವ’ ದಲ್ಲಿ ನಾಯಕಿಯಾಗಿದ್ದಾರೆ. ಸದ್ಯ ಮೇಘ, ಆಫ್ಟರ್ ಆಪರೇಷನ್ ಲಂಡನ್ ಕೆಫೆ, ಗ್ರಾಮಾಯಣ, ಚೀತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : ವಿಮಾನದಲ್ಲೇ ರೋಮ್ಯಾನ್ಸ್‌…ಜೋಡಿಗಳ ಫೋಟೋ ವೈರಲ್‌..!

ಇನ್ನು, ಜಿಮ್ ವರ್ಕೌಟ್ ಸಮಯದ ಫೋಟೋ ಹಂಚಿಕೊಂಡ ಮೇಘಾ ಶೆಟ್ಟಿ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಕೊಡುತ್ತಿದ್ದಾರೆ. ಬ್ಯೂಟಿಫುಲ್ ಎಂದು ಕಮೆಂಟ್ ಹಾಕುತ್ತಿದ್ದಾರೆ.

Continue Reading

DAKSHINA KANNADA

WATCH VIDEO : ದಪ್ಪು ಹಿಡಿದು ನೃತ್ಯ ಮಾಡಿದ ಯು.ಟಿ.ಖಾದರ್; ಹಬ್ಬದ ಸಂಭ್ರಮದ ವಿಡಿಯೋ ವೈರಲ್

Published

on

ಮಂಗಳೂರು : ವಿಧಾನ ಸಭಾ ಸ್ಪೀಕರ್ ಆಗಿದ್ರೂ ಸದಾ ಒಂದಿಲ್ಲ ಒಂದು ಕಾರಣದಿಂದ ಸ್ಪೀಕರ್ ಯು.ಟಿ ಖಾದರ್ ಅವರು ಸುದ್ದಿಯಾಗ್ತಾನೆ ಇರ್ತಾರೆ. ಅವರು ಎಲ್ಲೇ ಹೋದ್ರು ಅವರ ಅಭಿಮಾನಿಗಳು ಅವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡ್ತಾರೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದೆ.

ರಮ್ಜಾನ್ ಹಬ್ಬದಂದು ಈ ವಿಡಿಯೋ ಶೂಟ್ ಮಾಡಲಾಗಿದೆ ಎನ್ನಲಾಗಿದೆಯಾದ್ರೂ ಅದರ ಖಚಿತತೆ ಇಲ್ಲ. ಹಬ್ಬದ ಸಲುವಾಗಿ ನಡೆದಿದ್ದ ಮೆರವಣಿಗೆ ಒಂದರಲ್ಲಿ ಸ್ಪೀಕರ್ ಖಾದರ್ ಅವರು ದಪ್ಪು ಬಾರಿಸಿ ನೃತ್ಯ ಮಾಡಿದ್ದಾರೆ. ದಪ್ಪು ಅನ್ನೋದು ಮುಸ್ಲಿಂ ಸಮೂದಾಯದ ಸಾಂಪ್ರದಾಯಿಕ ನೃತ್ಯವಾಗಿದ್ದು, ಹೆಚ್ಚಾಗಿ ಇದನ್ನು ಮಕ್ಕಳು ಪ್ರದರ್ಶನ ಮಾಡುತ್ತಾರೆ.


ಇಲ್ಲಿ ಕೂಡಾ ಮೆರವಣಿಗೆಯಲ್ಲಿ ದಪ್ಪು ಪ್ರದರ್ಶನ ಮಾಡುತ್ತಿರುವ ಮಕ್ಕಳ ಜೊತೆ ಮಕ್ಕಳಾಗಿ ದಪ್ಪು ನೃತ್ಯಕ್ಕೆ ಖಾದರ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಖಾದರ್ ಅವರ ಅಭಿಮಾನಿಗಳು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವಿಡಿಯೋ ಯಾವಾಗಿನದ್ದು ಅನ್ನೋದು ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ : WATCH VIDEO : ಪುತ್ರಿಯ ಜೊತೆ ಖಾದರ್ ರೌಂಡಪ್‌.. ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಜನನಾಯಕ

Continue Reading

LATEST NEWS

Trending