Connect with us

    International news

    ಎಲೆಕ್ಟೋರಲ್ ಬಾಂಡ್ ನೀಡಲು ಮಾರ್ಚ್ 12 ಗಡುವು ನೀಡಿದ ಸುಪ್ರೀಂ ಕೋರ್ಟ್… ! SBI ಗೆ ತೀವ್ರ ಮುಖಭಂಗ ..!

    Published

    on

    ಮಾರ್ಚ್‌ 12ರ ಒಳಗಾಗಿ ಎಲೆಕ್ಟೋರಲ್ ಬಾಂಡ್‌ಗಳ ವಿವರಗಳನ್ನು ಕೊಡಲೇಬೇಕೆಂದು ಸುಪ್ರೀಮ್ ಕೋರ್ಟ್ ಎಸ್‌ಬಿಐ ಗೆ ನಿರ್ದೇಶನ ಕೊಟ್ಟಿದೆ. ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಸಲ್ಲಿಕೆಯಾಗಿದ್ದು, ಇದರ ವಿವರವನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಆದ್ರೆ ಎಸ್‌ಬಿಐ ದಾಖಲೆ ಒದಗಿಸಲು ಜೂನ್ ಅಂತ್ಯದವರೆಗೂ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

    തിരഞ്ഞെടുപ്പ് ബോണ്ട് വിവരങ്ങള്‍ ഉടന്‍ പുറത്തുവിടണമെന്ന് സുപ്രീം കോടതി; എസ്.ബി.ഐക്ക് രൂക്ഷവിമര്‍ശനം, SBI, Supreme Court, Electoral Bonds case

    ಎಸ್‌ಬಿಐ ಪರ ಖ್ಯಾತ ನ್ಯಾಯವಾದಿ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ಆದ್ರೆ ಸುಪ್ರೀಂ ಕೋರ್ಟ್‌ ಹೆಚ್ಚಿನ ಸಮಯಾವಕಾಶ ನೀಡಲು ಸಾದ್ಯವಿಲ್ಲ ಎಂದು ಹೇಳಿದ್ದು, ಮಾರ್ಚ್‌ 12 ಒಳಗೆ ಎಲ್ಲಾ ಮಾಹಿತಿ ಸಲ್ಲಿಸಬೇಕು ಹಾಗೂ ಮಾರ್ಚ್‌ 15 ರ ಒಳಗೆ ಚುನಾವಣಾ ಆಯೋಗ ಅದನ್ನು ಪ್ರಕಟಪಡಿಸಬೇಕು ಎಂದು ಆದೇಶ ನೀಡಿದೆ.

    ಹೀಗಾಗಿ ಎಲೆಕ್ಟೋರಲ್ ಬಾಂಡ್‌ ನೀಡಲು ಹಿಂದೇಟು ಹಾಕಿರುವ ಎಸ್‌ಬಿಐಗೆ ಭಾರಿ ಮುಖಭಂಗವಾಗಿದ್ದು, ಮಾತ್ರವಲ್ಲದೆ ಚುನಾವಣಾ ಬಾಂಡ್ ಮೂಲಕ ಅತೀ ಹೆಚ್ಚು ಹಣ ಪಡೆದಿರುವ ರಾಜಕೀಯ ಪಕ್ಷದ ಬಂಡವಾಳ ಕೂಡಾ ಬಯಲಾಗಲಿದೆ. ಬಾಂಡ್ ಮೂಲಕ ಹಣ ನೀಡಿದವರು ಯಾರು ಎಷ್ಟು ಹಣವನ್ನು ನೀಡಿದ್ದಾರೆ ಈ ಎಲ್ಲಾ ದಾಖಲೆಗಳನ್ನು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಿದೆ.

    Click to comment

    Leave a Reply

    Your email address will not be published. Required fields are marked *

    International news

    ಟ್ರಂಪ್ ಜೀವ ಉಳಿಸಿದ ಜಗನ್ನಾಥ..! ಇಸ್ಕಾನ್ ಉಪಾಧ್ಯಕ್ಷರ ಪೋಸ್ಟ್‌..!

    Published

    on

    ಮಂಗಳೂರು/ನವದೆಹಲಿ: ಗುಂಡಿನ ದಾ*ಳಿಯಿಂದ ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್‌ ಜೀವ ಉಳಿದಿದ್ದು ಜಗನ್ನಾಥನ ಕೃಪೆಯಿಂದ ಎಂದು ಇಸ್ಕಾನ್ ಉಪಾಧ್ಯಕ್ಷ ರಾಧಾರಾಮನ್ ದಾಸ್ ಅಭಿಪ್ರಾಯ ಪಟ್ಟಿದ್ದಾರೆ. ಇಸ್ಕಾನ್‌ ರಥಯಾತ್ರೆಗೆ 48 ವರ್ಷಗಳ ಹಿಂದೆ ಟ್ರಂಪ್ ಸಹಾಯ ಮಾಡಿದ್ದು, ಜಗನ್ನಾಥನ ರಥಯಾತ್ರೆಯ ಸಮಯದಲ್ಲೇ ನಡೆದ ದಾ*ಳಿಯಿಂದ ಟ್ರಂಪ್‌ ಜೀವ ಉಳಿದಿದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


    ನ್ಯೂಯಾರ್ಕ್‌ನಲ್ಲಿ ಮೊದಲ ಜಗನ್ನಾಥ ರಥಯಾತ್ರೆ 1976 ರಲ್ಲಿ ನಡೆದಿದ್ದು, ಅದು ಟ್ರಂಪ್ ಸಹಕಾರದಿಂದಲೇ ನಡೆದಿತ್ತು. ಜಗನ್ನಾಥನ ರಥ ನಿರ್ಮಾಣಕ್ಕೆ ಆಗ 30 ವರ್ಷ ಪ್ರಾಯದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಟ್ರಂಪ್ ನೆರವು ನೀಡಿದ್ದಾಗಿ ಅವರು ಬರೆದುಕೊಂಡಿದ್ದಾರೆ. ಒಂಬತ್ತು ದಿನಗಳ ಜಗನ್ನಾಥ ರಥಯಾತ್ರೆಯ ನಡೆಯುತ್ತಿರುವಾಗಲೇ ನಡೆದ ದಾಳಿಯಿಂದ ದೇವರೇ ಅವರನ್ನು ಕಾಪಾಡಿದ್ದಾರೆ ಎಂದಿದ್ದಾರೆ.

    ಸುಮಾರು 48 ವರ್ಷಗಳ ಹಿಂದೆ, ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ನ್ಯೂಯಾರ್ಕ್‌ನಲ್ಲಿ ಮೊದಲ ರಥಯಾತ್ರೆಯನ್ನು ಆಯೋಜಿಸಿತ್ತು. ಈ ರಥಯಾತ್ರೆ ಆಯೋಜಿಸಲು ಸಾಕಷ್ಟು ಅಡೆತಡೆಗಳು ಉಂಟಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಐದನೇ ಅಡ್ಡರಸ್ತೆಯಲ್ಲಿ ರಥಯಾತ್ರೆಗೆ ಅನುಮೋದನೆ ನೀಡಿದ್ದು, ಪವಾಡಕ್ಕಿಂತ ಕಡಿಮೆಯೇನೂ ಆಗಿರಲಿಲ್ಲ. ರಥಯಾತ್ರೆಯ ಸಹಕಾರಕ್ಕಾಗಿ ಎಲ್ಲಾ ಪ್ರಯತ್ನಗಳು ನಡೆದ ಬಳಿಕ ಟ್ರಂಪ್ ಕೃಷ್ಣ ಭಕ್ತರ ಕೈ ಹಿಡಿದಿದ್ದರು. ತಾವು ಖರೀದಿಸಿದ್ದ ರೈಲ್ವೇ ಯಾರ್ಡ್‌ನಲ್ಲಿ ರಥ ನಿರ್ಮಾಣಕ್ಕೆ ಅವಕಾಶ ನೀಡಿದ್ದರು. ಮೊದಲಿಗೆ ಟ್ರಂಪ್ ಒಪ್ಪಿಗೆ ನೀಡಿಲ್ಲವಾದ್ರೂ ಬಳಿಕ ಕೃಷ್ಣನೇ ಅವರಿಗೆ ಜಾಗವನ್ನು ನೀಡಲು ಪ್ರೇರೇಪಿಸಿದ್ದನಂತೆ.

    ಇದನ್ನೂ ಓದಿ : ಕಣ್ಣೂರು: ರಬ್ಬರ್ ತೋಟದಲ್ಲಿ ಪುರಾತನ ನಿಧಿ ಪತ್ತೆ..!!

    ಟ್ರಂಪ್ ಮೇಲೆ ದಾ*ಳಿಯ ಮುನ್ಸೂಚನೆ ನೀಡಿದ್ದ ಪಾದ್ರಿ

    ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಮಾ*ರಣಾಂತಿಕ ದಾ*ಳಿಗೆ ಹಲವು ತಿಂಗಳುಗಳ ಮೊದಲು ಪಾದ್ರಿಯೊಬ್ಬರು ಈ ದಾಳಿಯ ಮುನ್ಸೂಚನೆ ನೀಡಿದ್ದರು ಎನ್ನಲಾಗಿದೆ. ಬ್ರಾಂಡನ್ ಬಿಗ್ಸ್‌ ಎಂಬ ಪಾದ್ರಿ ಈ ಬಗ್ಗೆ ಭವಿಷ್ಯ ನುಡಿದಿದ್ದು, ಅಮೆರಿಕಾದಲ್ಲಿ ಇನ್ನೂ ಹೆಚ್ಚು ಇಂತಹ ಘಟನೆ ನಡೆಯಲಿದೆ ಎಂದು ಎಚ್ಚರಿಸಿದ್ದಾರಂತೆ.

    Continue Reading

    International news

    ಜಗತ್ತಿನ ದೊಡ್ಡಣ್ಣನಲ್ಲಿ ಹ*ತ್ಯೆಯಾದ ಅಧ್ಯಕ್ಷರುಗಳು ಇವರು..!

    Published

    on

    ಮಂಗಳೂರು/ವಾಷಿಂಗ್ಟನ್ : ಅಮೆರಿಕಾದಲ್ಲಿ ಅಧ್ಯಕ್ಷರ ಮೇಲೆ ಗುಂ*ಡಿನ ದಾಳಿ ನಡೆದಿರುವುದು ಹಾಗೂ ಅಧ್ಯಕ್ಷರ ಹ*ತ್ಯೆ ನಡೆದಿರುವುದು ಇದೇ ಮೊದಲೇನಲ್ಲ. 1865 ರಲ್ಲಿ ಅಮೇರಿಕಾದ ಅಧ್ಯಕ್ಷ ಅಬ್ರಾಹಂ ಲಿಂಕನ್ ಈ ರೀತಿಯ ದಾ*ಳಿಯಲ್ಲಿ ಹ*ತ್ಯೆಯಾದ ಮೊದಲ ಅಮೆರಿಕಾ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ ಟ್ರಂಪ್‌ ದಾಳಿಗೆ ಒಳಗಾದ ಅಮೆರಿಕಾದ ಎರಡನೇ ಮಾಜಿ ಅಧ್ಯಕ್ಷರಾಗಿದ್ದಾರೆ.

    ಜಗತ್ತಿನ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೆರಿಕಾದ ಅಧ್ಯಕ್ಷರಿಗೆ ದೊಡ್ಡ ಬೆಂಗಾವಲು ಪಡೆಯೇ ಇದೆ. ಆದ್ರೆ, ಆ ಬೆಂಗಾವಲು ಪಡೆಯನ್ನು ಬೇಧಿಸಿ ಗುಂ*ಡಿನ ದಾಳಿ ನಡೆಸಿ ಇದುವರೆಗೆ ನಾಲ್ವರು ಅಧ್ಯಕ್ಷರನ್ನು ಹ*ತ್ಯೆ ಮಾಡಲಾಗಿದೆ. ಇನ್ನು ನಾಲ್ವರು ಅಧ್ಯಕ್ಷರ ಮೇಲೆ ದಾ*ಳಿ ನಡೆದಿದ್ದರೂ ಜೀವ ಉಳಿಸಿಕೊಂಡಿದ್ದಾರೆ. ಇನ್ನು ಟ್ರಂಪ್‌ಗೂ ಮೊದಲು 1912 ರಲ್ಲಿ ಮಾಜಿ ಅಧ್ಯಕ್ಷ ಥಿಯೋಡೋರ್‌ ರೋಸ್‌ವೆಲ್ಸ್‌ ಮೇಲೆ ದಾಳಿ ನಡೆಸಲಾಗಿತ್ತು. ಅವರೂ ಕೂಡ ಗಾ*ಯಗೊಂಡು ಜೀವ ಉಳಿಸಿಕೊಂಡಿದ್ದರು.

    ಇದುವರೆಗೆ ಗುಂ*ಡಿನ ದಾಳಿಗೆ ಹ*ತ್ಯೆಯಾದ ಅಮೆರಿಕಾ ಅಧ್ಯಕ್ಷರು ಇವರು..!


    1. ಅಬ್ರಹಾಮ್ ಲಿಂಕನ್ (Abraham Lincoln). ಹ*ತ್ಯೆ ನಡೆದ ವರ್ಷ: 1865 . ಹ*ತ್ಯೆ ನಡೆದ ಸ್ಥಳ : ವಾಷಿಂಗ್ಟನ್‌ ಡಿ.ಸಿ. , ಫೋರ್ಡ್‌ ಥಿಯೇಟರ್‌. ಹ*ತ್ಯೆ ಮಾಡಿದಾತ : ಜಾನ್‌ ವಿಲ್ಕ್ಸ್‌ ಬೂತ್.

     


    2. ಜೇಮ್ಸ್ ಎ. ಗಾರ್ಫೀಲ್ಡ್ (James A. Garfield). ಹ*ತ್ಯೆ ನಡೆದ ವರ್ಷ: 1881. ಹ*ತ್ಯೆ ನಡೆದ ಸ್ಥಳ : ವಾಷಿಂಗ್ಟನ್‌ ಡಿ.ಸಿ. Baltimore and Potomac Railroad Station. ಹ*ತ್ಯೆ ಮಾಡಿದಾತ : ಚಾರ್ಲ್ಸ್ ಜೆ. ಗುಟೀಯೋ


    3. ವಿಲಿಯಂ ಮಕ್ಕಿನ್‌ಲಿಯೆ (William McKinley). ಹ*ತ್ಯೆ ನಡೆದ ವರ್ಷ: 1901. ಹತ್ಯೆ ನಡೆದ ಸ್ಥಳ : ಬಫಲೋ, ನ್ಯೂಯಾರ್ಕ್. ಹ*ತ್ಯೆ ಮಾಡಿದಾತ : ಲಿಯೋನ್ ಚೋಲ್ಗೊಶ್


    4. ಜಾನ್ ಎಫ್. ಕೆನಡಿ (John F. Kennedy). ಹ*ತ್ಯೆ ನಡೆದ ವರ್ಷ: 1963. ಹ*ತ್ಯೆ ನಡೆದ ಸ್ಥಳ : ಡಲ್ಲಾಸ್, ಟೆಕ್ಸಾಸ್, ಹ*ತ್ಯೆ ಮಾಡಿದಾತ : ಲೀ ಹಾರ್ವೇ ಓಸ್ವಾಲ್ಡ್

    ಅಧ್ಯಕ್ಷರಾಗಿದ್ದಾಗಲೇ ಇವರ ಮೇಲೆ ದಾ*ಳಿ ನಡೆದಿತ್ತು..!


    1. ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ (Franklin D. Roosevelt). ದಾ*ಳಿ ನಡೆದ ವರ್ಷ : 1933. ದಾ*ಳಿ ನಡೆದ ಸ್ಥಳ : ಮಿಯಾಮಿ, ಫ್ಲೋರಿಡಾ. ದಾ*ಳಿ ಮಾಡಿದ ಆರೋಪಿ : ಜ್ಯೂಸೆಪ್ಸ್‌.


    2. ಹ್ಯಾರಿ ಎಸ್. ಟ್ರೂಮನ್ (Harry S. Truman). ದಾ*ಳಿ ನಡೆದ ವರ್ಷ : 1950 . ದಾ*ಳಿ ನಡೆದ ಸ್ಥಳ : ಬ್ಲೇರ್ ಹೌಸ್, ವಾಷಿಂಗ್ಟನ್‌ ಡಿ.ಸಿ., ದಾ*ಳಿ ಮಾಡಿದಾತ : ಓಸ್ಕರ್ ಕೊಲ್ಲಾಜೋ ಮತ್ತು ಗ್ರೈಸಿಯೋ ಟೊರ್ರೆಸೊಲಾ.


    3. ಜೆರಾಲ್ಡ್ ಫೋರ್ಡ್ (Gerald Ford). ದಾಳಿ ನಡೆದ ವರ್ಷ : 1975 . ಇವರ ಮೇಲೆ ಎರಡು ಬಾರಿ ದಾ*ಳಿ ನಡೆಸಲಾಗಿದ್ದು ಒಂದು ಬಾರಿ ಸಕ್ರಾಮೆಂಟೋ, ಕ್ಯಾಲಿಫೋರ್ನಿಯಾ ಹಾಗೂ ಸಾನ್‌ ಫ್ರಾನ್ಸಿಸ್ಕೋದಲ್ಲಿ ದಾ*ಳಿ ನಡೆದಿತ್ತು. ಲಿನೆಟ್ “ಸ್ಕ್ವೀಕಿ” ಫ್ರೊಮ್ ಮತ್ತು ಸಾರೆ ಜೇನ್ಮೂರ್ ಎಂಬವರು ಈ ವಿಫಲ ದಾ*ಳಿ ನಡೆಸಿದ್ದರು.


    4. ರೋನಾಲ್ಡ್ ರೀಗನ್ (Ronald Reagan). ದಾ*ಳಿ ನಡೆದ ವರ್ಷ : 1981 . ದಾಳಿ ನಡೆದ ಸ್ಥಳ : ವಾಷಿಂಗ್ಟನ್ ಡಿ.ಸಿ. ದಾ*ಳಿ ಮಾಡಿದವ : ಜಾನ್‌ ಹಿಂಕ್ಲಿ ಜೂನಿಯರ್‌.

    ಇದನ್ನೂ ಓದಿ : ಶ್ವಾನಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕರು!
    ಅಧ್ಯಕ್ಷರನ್ನು ಗುರಿಯಾಗಿಸಿ ದಾ*ಳಿ ನಡೆದಿದ್ದ ಅಮೆರಿಕಾದಲ್ಲಿ ಎರಡು ಬಾರಿ ಮಾಜಿ ಅಧ್ಯಕ್ಷರ ಮೇಲೆ ದಾ*ಳಿ ನಡೆಸಲಾಗಿದೆ. ಮೊದಲ ಬಾರಿ 1912 ರಲ್ಲಿ ಮಾಜಿ ಅಧ್ಯಕ್ಷ ಥಿಯೋಡೋರ್ ರೂಸ್‌ವೆಲ್ಟ್ ಮೇಲೆ ದಾ*ಳಿ ನಡೆದಿತ್ತು. ದಾ*ಳಿಯಲ್ಲಿ ರೂಸ್‌ವೆಲ್ಟ್‌ ಬದುಕಿ ಉಳಿದಿದ್ದರು. ಇದಾದ ಬಳಿಕ 2024 ರಲ್ಲಿ ಡೊನಾಲ್ಡ್‌ ಟ್ರಂಪ್‌ ಮೇಲೆ ದಾ*ಳಿ ನಡೆಸಲಾಗಿದೆ. ಕಿವಿಗೆ ಗಾ*ಯವಾಗಿ ಟ್ರಂಪ್ ಕೂಡ ಬದುಕಿ ಉಳಿದಿದ್ದಾರೆ.

    Continue Reading

    International news

    WATCH : ನೋಡು ನೋಡುತ್ತಿದ್ದಂತೆ ಕೆಂಪಾದ ಸಮುದ್ರ…ವೀಡಿಯೋ ವೈರಲ್

    Published

    on

    ಮಂಗಳೂರು/ಟೆಕ್ಸಾಸ್ : ಆ ಸಮುದ್ರ ನೋಡು ನೋಡುತ್ತಿದ್ದಂತೆ ಕೆಂಪಾಗಿದೆ. ಆಶ್ಚರ್ಯ ಆದ್ರೂ ಇದು ಸತ್ಯ! ಆದ್ರೆ, ಇದಕ್ಕೆ ಕಾರಣ ಶಾರ್ಕ್. ಈ ಘಟನೆ ನಡೆದಿರೋದು ಟೆಕ್ಸಾಸ್‌ನ ಸೌತ್ ಪಾಡ್ರೆ ದ್ವೀಪದಲ್ಲಿ.


    ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಮಹಿಳೆಯ ಕಾಲಿಗೆ ಬಾಯಿ ಹಾಕಿರುವ ಶಾರ್ಕ್ ಆಕೆಯ ಕಾಲಿನ ಪೀಸ್ ತಿಂದು ಹಾಕಿದೆ. ಇದರಿಂದ ಸಮುದ್ರದ ನೀರು ಕೆಂಬಣ್ಣಕ್ಕೆ ತಿರುಗಿದೆ. ಈ ಭಯಾನಕ ವಿಡಿಯೋ ವೈರಲ್ ಆಗಿದೆ.

    ಆ ಶಾರ್ಕ್ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಮಹಿಳೆಯ ಕಾಲು ಕಟ್ ಆಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸಮುದ್ರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.

    ಇದನ್ನೂ ಓದಿ : ಏನಾಶ್ಚರ್ಯ!! ನಾಗರ ಹಾವು ಕಡಿದು ಮಹಿಳೆ ಸಾ*ವು; ಅಂತ್ಯಸಂಸ್ಕಾರದ ವಿಧಿಗೆ ಬಂದು ನೀರು ಕುಡಿದು ಹೋದ ನಾಗರಹಾವು

    ಸುಮಾರು 6 ಅಡಿ (ಸುಮಾರು 1.8 ಮೀಟರ್) ಉದ್ದದ ಒಂದೇ ಶಾರ್ಕ್ ಈ ಘಟನೆಗೆ ಕಾರಣ. ಈ ದಾಳಿಯ ನಂತರ ಸುರಕ್ಷತಾ ದೃಷ್ಟಿಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಡಲ ತೀರದಲ್ಲಿ ಗಸ್ತು ತಿರುಗುತ್ತಿದ್ದಾರೆ ಮತ್ತು ಡ್ರೋನ್‌ಗಳನ್ನು ಹಾರಿಸುತ್ತಿದ್ದು ಕಟ್ಟುನಿಟ್ಟಿನ ಎಚ್ಚರ ವಹಿಸಿದ್ದಾರೆ.

    Continue Reading

    LATEST NEWS

    Trending