ಉಡುಪಿ: ಜಿಲ್ಲೆಯ ಕಾಪು ಸಮೀಪದ ಕೈಪುಂಜಾಲು ಓಂ ಸಾಗರ್ ಜೋಡು ದೋಣಿಯಲ್ಲಿ ಟನ್ ಗಟ್ಟಲೆ ಭೂತಾಯಿ ಮೀನು ಬಲೆಗೆ ಬಿದ್ದಿದೆ.
ಈ ಕುರಿತು ಮೀನುಗಾರರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ‘ಅಸಾನಿ ಚಂಡ ಮಾರುತದ ಪರಿಣಾಮದಿಂದ ಕಡಲು ಪ್ರಕ್ಷ್ಯುಬ್ದಗೊಂಡಿದ್ದು, ಭೂತಾಯಿ ಮೀನು ಗಂಗೊಳ್ಳಿಯಿಂದ ಮಂಗಳೂರು ಕರಾವಳಿ ತೀರದಲ್ಲಿ ಹೆಚ್ಚಾಗಿದೆ’ ಎಂದು ತಿಳಿಸಿದ್ದಾರೆ.
ಒಮ್ಮೆಲೆ ಭೂತಾಯಿ ಮೀನಿನ ರಾಶಿಯನ್ನು ಕಂಡ ಮೀನುಗಾರರು, ಜಿಲ್ಲೆಯ ಜನರು ಪುಲ್ ಖುಷ್ ಆಗಿದ್ದಾರೆ. ಸದ್ಯ ಭೂತಾಯಿ ಮೀನಿನ ಸುಗ್ಗಿಯ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.