ದುಬೈ:ಯುಎಇ ಅಧ್ಯಕ್ಷ ಶೇಕ್ ಖಲೀಫಾ ಬಿನ್ ಝಾಯದ್ ಅಲ್ ನಹ್ಯಾನ್ ಇಂದು ನಿಧನರಾಗಿದ್ದಾರೆ.
ಇವರಿಗೆ ಎಪ್ಪತ್ತ ಮೂರು ವರ್ಷ ವಯಸ್ಸಾಗಿತ್ತು. ಇವರು 2014 ರಲ್ಲಿ ಪಾರ್ಶ್ವವಾಯುಪೀಡಿತರಾಗಿದ್ದರು.
ಆದ್ದರಿಂದ ದುಬೈ ನಗರದ ಎಲ್ಲಾ ಕಚೇರಿಗಳನ್ನು, ಶಿಕ್ಷಣ ಸಂಸ್ಥೆಗಳನ್ನು, ಖಾಸಗಿ ವಲಯದ ಉದ್ದಿಮೆ ಸಂಸ್ಥೆಗಳನ್ನು, ಸಾರ್ವಜನಿಕ ಹಾಗೂ ಸರ್ಕಾರಿ ಸಂಸ್ಥೆಗಳನ್ನು ಮೂರು ದಿನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಖಲೀಫಾ ಬಿನ್ ಜಾಯೆದ್ ಯುಎಇಯ ಸ್ಥಾಪಕ ನಾಯಕ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹಿರಿಯ ಮಗ. ಅಬುಧಾಬಿಯ 16 ನೇ ಎಮಿರ್ ಆಗಿರುವ ಅವರು 2004 ರಿಂದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದ ದೇಶದ ನಾಯಕರಾಗಿದ್ದಾರೆ – ಯುಎಇ ಇತಿಹಾಸದಲ್ಲಿ ಇದು ಎರಡನೆಯದಾಗಿದೆ.
ಅವರು 17 ವರ್ಷಗಳ ಕಾಲ ಅಧ್ಯಕ್ಷರಾಗಿ ಅತ್ತುತ್ತಮ ಸೇವೆ ನೀಡಿದ್ದಾರೆ. ಯುಎಇಯನ್ನು ಅಭಿವೃದ್ಧಿ ಹೊಂದುತ್ತಿರುವ ಪ್ರಾದೇಶಿಕ ಶಕ್ತಿಯಾಗಿ ಮತ್ತು ಪ್ರಮುಖ ವ್ಯಾಪಾರ ಮತ್ತು ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸಲು ಸಹಾಯ ಮಾಡಿದ್ದಾರೆ. ಐತಿಹಾಸಿಕ ಅಬ್ರಹಾಂ ಒಪ್ಪಂದದಿಂದ ಯುಎಇ ಇಸ್ರೇಲ್‌ನೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿದ್ದರು.
2014 ರಲ್ಲಿ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದ ಅವರು ಹೆಚ್ಚಿನ ಅಧಿಕಾರವನ್ನು ಸಹೋದರ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಹಸ್ತಾಂತರಿಸಿದ್ದರು.
ಇವರ ನಿಧನಕ್ಕೆ ಸಂತಾಪ ಸೂಚಿಸಿ ದುಬೈ ಸಿಟಿಯಲ್ಲಿ 40 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ನಡೆಸಲು ನಿರ್ಧರಿಸಲಾಗಿದೆ.