bangalore
Biggboss: ಬಿಗ್ ಬಾಸ್ ಮನೆಯ ಶನಿ ಸಂಗೀತಾ ಎಂದ ಕಾರ್ತಿಕ್ ಗೆ ಸುದೀಪ್ ಖಡಕ್ ಕ್ಲಾಸ್..!
ಬಿಗ ಬಾಸ್: ಬಿಗ್ಬಾಸ್ ಸೀಸನ್ 10 ಫಿನಾಲೆ ಹಂತಕ್ಕೆ ಬರುತಿದ್ದಂತೆ ಈ ಫಿನಲೆ ಪಟ್ಟ ಯಾರಿಗೆ ಸೇರುತ್ತೇ ಅನ್ನೋದರ ಮಧ್ಯೆ ಸ್ಪರ್ಧಿಗಳ ನಡುವೆ ಫೈಟ್ ಗಳು ಹೆಚ್ಚಾಗುತ್ತಿದೆ. ಬಿಗ್ ಬಾಸ್ ಫಸ್ಟ್ ಗೆ ಸಂಗೀತಾ ಹಾಗೂ ಕಾರ್ತಿಕ್ ಅವರ ಭಾಂಧವ್ಯ ನೋಡಿದ್ರೆ ಅವರಿಗೆ ತುಂಬಾ ಜನ ಫ್ಯಾನ್ಸ್ ಗಳು ಹೆಚ್ಚಾಗಿದ್ದರು. ಆದರೆ ಇವರ ಮಧ್ಯೆ ಬಿರುಕು ಬಿಟ್ಟ ಮೇಲೆ ಇಬ್ಬರೂ ದೂರ ಆಗಿದ್ದಾರೆ. ಫ್ಯಾನ್ಸ್ ಕೂಡ ಕಮ್ಮಿಯಾಗಿದ್ದರು. ಇವರು ಬಿಗ್ ಬಾಸ್ ಮನೆಯಲ್ಲಿ ವೈರಿಗಳಂತೆ ಕಾಣಿಸಿಕೊಳ್ಳುತ್ತಿದ್ದಾರೆ.
ಫಿನಾಲೆ ಹತ್ತಿರಕ್ಕೆ ಬರುತ್ತಿದ್ದಂತೆ ಕಾರ್ತಿಕ್ ಗೆ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿರುವುದು ರಿಲೀಸ್ ಆದ ಪ್ರೋಮೋದಲ್ಲಿ ಕಾಣಬಹುದು. ಎರಡು ವಾರದ ಹಿಂದೆ ಕಾರ್ತಿಕ್ ಕಿಚನ್ನಲ್ಲಿ ಮಾತನಾಡುತ್ತಾ, ಮನೆಯ ಶನಿ ಯಾರೆಂದು ವರ್ತೂರು ಸಂತೋಷ್ ಬಳಿ ಕೇಳುತ್ತಿದ್ದರು. ಆಗ ವರ್ತೂರು ಸಂತೋಷ್ ನಮ್ರತಾ, ವಿನಯ್ ಹೆಸರು ಹೇಳುತ್ತಾರೆ. ಆಗ ಕಾರ್ತಿಕ್ ಮಹೇಶ್ ಇನ್ನೊಬ್ಬರ ಹೆಸರು ಬಿಟ್ಟಿದ್ದೀಯ ಎಂದು ಹೇಳಿ ಸಂಗೀತಾ ಈ ಮನೆಯ ಶನಿ ಎನ್ನುತ್ತಾರೆ. ಇದೇ ವಿಚಾರವಾಗಿ ಕಾರ್ತಿಕ್ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಳೆದ ವೀಕೆಂಡ್ ಪಂಚಾಯ್ತಿಯಲ್ಲಿ ಎಸ್-ನೋ ಗೇಮ್ ಆಡುವಾಗ ಸುದೀಪ್ ಇದೇ ಪ್ರಶ್ನೆ ಕೇಳಿದಾಗ ಕಾರ್ತಿಕ್ ‘ನೋ’ ಬೋರ್ಡ್ ಹಿಡಿದುಕೊಳ್ಳುತ್ತಾರೆ ಆಗ ಸುದೀಪ್, ಮನೆಯಲ್ಲಿ ಹೇಳಿಕೆ ನೀಡಿ, ವಾರಾಂತ್ಯದಲ್ಲಿ ನಾನು ಕೇಳಿದಾಗ ನೋ ಬೋರ್ಡ್ ಹಿಡಿಯುವುದು ಸರಿಯಲ್ಲ ಎಂದಿದ್ದರು. ಆ ಎಪಿಸೋಡ್ ಮುಗಿದ ಬಳಿಕ ಕಾರ್ತಿಕ್, ವರ್ತೂರು ಸಂತೋಷ್ ಬಳಿ ಹೋಗಿ ‘ಸಂಗೀತಾ ಶನಿ ಎಂದಿದ್ದು ನೀನು, ನಾನಲ್ಲ’ ಎಂದು ಜೋರು ವಾದ ಮಾಡುತ್ತಾರೆ. ಅದೇ ಕಾರಣಕ್ಕೆ ವರ್ತೂರು ಸಂತೋಷ್ ಕಾರ್ತಿಕ್ ಅನ್ನು ನಾಮಿನೇಟ್ ಸಹ ಮಾಡ್ತಾರೆ. ಇದೇ ವಿಚಾರದ ಬಗ್ಗೆ ಸುದೀಪ್ ಚರ್ಚೆ ಮಾಡಿದ್ದಾರೆ. ಸಂಗೀತಾ ಶನಿ ಎಂದು ಯಾರು ಹೇಳಿದ್ದು, ಎಂದು ಕೇಳಿದಾಗ ಇಂದು ಸಹ ಕಾರ್ತಿಕ್, ವರ್ತೂರು ಹೇಳಿದ್ದು ಎನ್ನುತ್ತಾರೆ. ಆದರೆ ತನಿಷಾ, ಇಲ್ಲಿ ಕಾರ್ತಿಕ್ ಅವರೇ ಹೇಳಿದ್ದು ಎನ್ನುತ್ತಾರೆ. ಕೊನೆಗೆ ಸುದೀಪ್ ‘ಸಂಗೀತಾ ಶನಿ’ ಎಂದು ನೀವೇ ಹೇಳಿದ್ದು ಕಾರ್ತಿಕ್ ಎನ್ನುತ್ತಾರೆ. ಅಲ್ಲಿಗೆ ಕಾರ್ತಿಕ್ ತಾವು ಹೇಳಿದ್ದ ಮಾತನ್ನು ಒಪ್ಪಿಕೊಳ್ಳುತ್ತಾರೆ.
bangalore
ವರದಕ್ಷಿಣೆ ಕಿರುಕುಳ; ನೇ*ಣಿಗೆ ಶರಣಾದ ಟೆಕ್ಕಿ
ಮಂಗಳೂರು/ಬೆಂಗಳೂರು : ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿಯಲ್ಲಿ ನಡೆದಿದೆ. ಪೂಜಾ (22) ಜೀವಾಂತ್ಯಗೊಳಿಸಿದ ವಿವಾಹಿತೆ. ಪೂಜಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಸುನೀಲ್ ಎಂಬಾತನನ್ನು ಪೂಜಾ ಮದುವೆಯಾಗಿದ್ದರು. ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಪತಿ ಪೀಡಿಸುತ್ತಿದ್ದ. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ : ಸೀಲ್ಡ್ ತಂಪು ಪಾನೀಯ ಬಾಟಲ್ ಒಳಗಿತ್ತು ಜೇಡರ ಹುಳ!
ಮಗಳ ಸಾವಿಗೆ ಪತಿ ಸುನೀಲ್ ಹಾಗೂ ಮೈದುನ ಅನಿಲ್ ಕಾರಣ ಎಂದು ಪೂಜಾ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಗಂಗಮ್ಮನಗುಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bangalore
ಈ ಪುಣ್ಯಕ್ಷೇತ್ರಕ್ಕೆ ಹೋಗಲು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗಲಿದೆ..!
ಬೆಂಗಳೂರು : ಕರ್ನಾಟಕ ರಾಜ್ಯದಿಂದ ಕೈಲಾಸ ಮಾನಸ ಸರೋವರ ಹಾಘೂ ಚಾರ್‌ಧಾಮ್ ಯಾತ್ರಿಗಳಿಗೆ ಅನುದಾನ ನೀಡುವ ಕುರಿತು ಮುಜರಾಯಿ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮಾನಸ ಸರೋವರ ಯಾತ್ರಿಗಳಿಗೆ ರೂ.30 ಸಾವಿರ, ಚಾರ್‌ಧಾಮ್ ಯಾತ್ರಿಗಳಿಗೆ ರೂ.20 ಸಾವಿರ , ಹಾಗೂ ಈಗಾಗಲೇ ಕಾಶಿ ಯಾತ್ರೆ ಕೈಗೊಂಡ 30 ಸಾವಿರ ಯಾತ್ರಿಗಳಿಗೆ ತಲಾ ರೂ.5 ಸಾವಿರ ಸಹಾಯಧನ ನೀಡಲಾಗುತ್ತದೆ.
ಕೇವಲ ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ಮಾತ್ರ ಈ ಸಹಾಯಧನ ಪಡೆಯಲು ಅರ್ಹರಾಗಿದ್ದಾರೆ. ಈಗಾಗಲೇ ಈ ತೀರ್ಥ ಕ್ಷೇತ್ರಗಳಿಗೆ ಹೋಗಿ ಬಂದಿರುವವರು ಸಹಾಯಧನವನ್ನು ಪಡೆಯಲು ಅರ್ಹರಾಗಿದ್ದಾರೆ. ಇದಕ್ಕಾಗಿ ರೂ.25 ಪಾವತಿಸಿ ಸಂಬಂಧಿಸಿದ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಚಾರ್‌ಧಾಮ್ ಯಾತ್ರೆಯ ಮಾರ್ಗಸೂಚಿಗಳು
- ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅನ್ನು ಅಪ್‌ಲೋಡ್ ಮಾಡುವುದು.
- 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಈ ಯೋಜನೆಯಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕೆ ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಅಪ್‌ಲೋಡ್ ಮಾಡಬೇಕು.
- ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಮತ್ತೊಮ್ಮೆ ಅನುದಾನ ನೀಡಲಾಗುವುದಿಲ್ಲ.
ಕಾಶಿ ಯಾತ್ರೆಯ ಮಾರ್ಗಸೂಚಿಗಳು
- ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್ 1ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು.
- 18 ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸಬೇಕು.
ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಾರ್ಗಸೂಚಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ
bangalore
ಗೋಬಿ ಮಂಚೂರಿ ಆಯ್ತು..! ಈಗ ಚಿಕನ್ ಕಬಾಬ್, ಫಿಶ್ ಫುಡ್ ಮೇಲೆ ಕಣ್ಣು…!
ಮಂಗಳೂರು : ಫಿಶ್ ಸೇರಿದಂತೆ ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನ ನಿಷೇಧಿಸಲಾಗಿತ್ತು.
ಇದೀಗ ಆರೋಗ್ಯ ಸಚಿವರ ಸೂಚನೆಯಂತೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಚಿಕನ್ ಕಬಾಬ್ ಮತ್ತು ಫಿಶ್ ಫುಡ್ ನಲ್ಲಿ ಕಲರಿಂಗ್ ಇರುವುದು ಪತ್ತೆಯಾಗಿದೆ. ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಚಿಕನ್ ಕಬಾಬ್ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಹಿನ್ನೆಲೆಯಲ್ಲಿ ಚಿಕನ್ ಕಬಾಬ್, ಫಿಶ್ ಆಹಾರಗಳಲ್ಲಿ ಕೃತಕ ಬಣ್ಣ ಬೆರಸುವಿಕೆಯನ್ನ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕಾನೂನು ಉಲ್ಲಂಘಿಸಿದ್ರೆ 7 ವರ್ಷದಿಂದ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ವರೆಗಿನ ದಂಡ ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಲಾಗಿದೆ.
ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. 08 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದೆ.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!