FILM
ಬಿಗ್ ಬಾಸ್ ಮನೆಯೊಳಗೆ ಗರ್ಭಿಣಿಯಾದ ನಟಿ ಅಂಕಿತಾ…
ಹಿಂದಿ ಬಿಗ್ ಬಾಸ್ ಸ್ಪರ್ಧಿಯಾದ ನಟಿ ಅಂಕಿತಾ ಲೋಖಂಡೆ ಬಿಗ್ ಬಾಸ್ ಮನೆಯಲ್ಲಿಯೇ ಗರ್ಭಣಿ ಆಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಈ ಕುರಿತು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿರುವ ಅಂಕಿತಾ “ನಾನು ಗರ್ಭಿಣಿಯಾಗಿದ್ದೇನೆ. ರಕ್ತ ಪರೀಕ್ಷೆ ಮಾಡಿಸಿದ್ದೇನೆ. ದಯವಿಟ್ಟು ಮನೆಯಿಂದ ನನ್ನ ಆಚೆ ಕಳುಹಿಸಿ ಎಂದು ಹೇಳಿದ್ದಾರೆ.
ಈಗ ಪ್ರಸಾರವಾಗುತ್ತಿರುವ ಸೀಸನ್ ನಲ್ಲಿ ನಟಿ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ.ಇದೇ ಮೊದಲ ಬಾರಿಗೆ ಇಂಥದ್ದೊಂದು ಸುದ್ದಿ ಬಿಗ್ ಬಾಸ್ ಮನೆಯಿಂದ ಬಂದಿದೆ ಎಂದು ಹೇಳಾಗುತ್ತಿದೆ.ಈ ಕುರಿತಂತೆ ಬಿಗ್ ಬಾಸ್ ಆಯೋಜಕರು ಅಧಿಕೃತವಾಗಿ ಹೇಳಿಕೆ ನೀಡದೇ ಇದ್ದರೂ,ಸದ್ಯದಲ್ಲೇ ಸತ್ಯ ಆಚೆ ಬರಲಿದೆ ಎಂದು ಚರ್ಚಿಸಲಾಗುತ್ತಿದೆ.
ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ.ಈ ಬಾರಿ ಮದುವೆಯಾದ ಎರಡು ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು.ಅದರಲ್ಲಿ ಒಂದು ಜೋಡಿಯಿಂದ ಈ ಶುಭ ಸುದ್ದಿ ಸಿಕ್ಕಿದೆ. ಈಗಾಗಲೇ ಅಂಕಿತಾ ಲೋಖಂಡೆ ಅವರನ್ನು ಮನೆಯಿಂದ ಹೊರಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಇದೆ.
FILM
ಖಡಕ್ ಪೊಲೀಸ್ ಅಧಿಕಾರಿಯಾದ ರೂಪೇಶ್ ಶೆಟ್ಟಿ
ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 9ರ ರೂಪೇಶ್ ಶೆಟ್ಟಿ ‘ಅಧಿಪತ್ರ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿನ ರೂಪೇಶ್ ಲುಕ್ ಇದೀಗ ರಿವೀಲ್ ಆಗಿದೆ.
ಚಹನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಅಧಿಪತ್ರ ಚಿತ್ರದಲ್ಲಿ ಹೀರೋ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಜಾಹ್ನವಿ ನಟಿಸುತ್ತಿದ್ದಾರೆ. ಬೃಹತಿ ಎಂಬ ಪಾತ್ರಕ್ಕೆ ಗಿಚ್ಚಿ ಗಿಲಿ ಗಿಲಿ ನಟಿ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಬೈಕ್ ಮೇಲೆ ಕುಳಿತು ಖಡಕ್ ಆಗಿ ಕ್ಯಾಮೆರಾ ಕಣ್ಣಿಗೆ ರೂಪೇಶ್ ಪೋಸ್ ನೀಡಿದ್ದಾರೆ.
bangalore
ನ. 29ಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಮದುವೆ…
ಬೆಂಗಳೂರು : ಮಳೆ ಹುಡುಗಿ ಪೂಜಾ ಗಾಂಧಿ ಕೊನೆಗೂ ಮದುವೆ ಆಗುತ್ತಿದ್ದಾರೆ. ಬಹು ದಿನಗಳ ಗೆಳೆಯ ಉದ್ಯಮಿ ವಿಜಯ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ, ಮಕ್ಕಳು, ಸಂಸಾರ ಅನ್ನುವ ವಿಚಾರದ ಬಗ್ಗೆ ಪೂಜಾ ಯೋಚನೆ ಮಾಡಿದ್ದರು. ಆದರೆ ಅದು ಈಗಲೇ ಅಲ್ಲ ಅನ್ನುವ ಮಾತನ್ನು ಹೇಳಿಕೊಳ್ಳುತ್ತಿದ್ದರು. ಅದರ ಮಧ್ಯೆ ಆನಂದ್ ಗೌಡ ಜೊತೆಗೆ ನಿಶ್ಚಿತಾರ್ಥವೂ ಆಗಿತ್ತು. ಅದು ಅಷ್ಟೇ ಬೇಗ ಮುರಿದು ಬಿತ್ತು. ಆದರೆ ಇದೀಗ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡಲು ಡಿಸೈಡ್ ಮಾಡಿದ್ದಾರೆ.
ಇದೇ ನವೆಂಬರ್ 29ರಂದು ಬೆಂಗಳೂರಿನ ಯಲಂಹಕದ ಸಮೀಪ ನಟಿ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಶೇಷ ಅಂದರೆ, ಮಂತ್ರ ಮಾಂಗಲ್ಯ ಪದ್ಧತಿಯ ಪ್ರಕಾರ ಈ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.ಪೂಜಾಗಾಂಧಿ ಮೂಲತ: ಉತ್ತರ ಪ್ರದೇಶದ ಮೀರತ್‌ನವರು. ಪಂಜಾಬಿ ಕುಟುಂಬದಲ್ಲಿ ಜನಿಸಿದ್ದ ಪೂಜಾ ಗಾಂಧಿ ದೆಹಲಿಯಲ್ಲಿ ನೆಲೆಸಿದ್ದರು. ಜಾಹೀತಾರು ಹಾಗೂ ಮಾಡಲಿಂಗ್ ಮೂಲಕ ಜನಪ್ರಿಯರಾಗಿದ್ದ ನಟಿ ‘ಮುಂಗಾರು ಮಳೆ’ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಒಂದರ ಹಿಂದೊಂದರಂತೆ ಯಶಸ್ಸು ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು.
2012ರಲ್ಲಿ ಪೂಜಾ ಗಾಂಧಿ ಅವರಿಗೆ ಉದ್ಯಮಿ ಆನಂದ್ ಗೌಡ ಜತೆ ನಿಶ್ಚಿತಾರ್ಥವಾಗಿ, ನಂತರ ಮುರಿದು ಬಿದ್ದಿತ್ತು. ಆದರೆ, ಈಗ ಹರಿದಾಡುತ್ತಿರುವ ಮದುವೆ ವಿಷಯದ ಬಗ್ಗೆ ನಟಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.ಕನ್ನಡವನ್ನು ಕಲಿತು ಕನ್ನಡಿಗರಿಂದ ಬೇಷ್ ಎನಿಸಿಕೊಂಡಿರೋ ಮುಂಗಾರು ಮಳೆ ಬೆಡಗಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಮದುವೆಗೆ ರೆಡಿ ಆಗಿದ್ದಾರೆ. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಕರ್ನಾಟಕದ ಸೊಸೆ ಆಗಲು ಪೂಜಾ ಸಿದ್ಧವಾಗುತ್ತಿದ್ದಾರೆ ಎನ್ನಲಾಗಿದೆ
FILM
ಆಲಿಯಾ ಭಟ್ ಡೀಫ್ ಫೇಕ್ ವಿಡಿಯೋ ವೈರಲ್ – ವಿಡಿಯೋ ನೋಡಿದ್ರಾ..?
ಮುಂಬೈ: ರಶ್ಮಿಕಾ ಮಂದಣ್ಣ, ಕಾಜೋಲ್ ಡೀಫ್ ಫೇಕ್ ವಿಡಿಯೋ ವೈರಲ್ ಬೆನ್ನಲ್ಲೇ ಇದೀಗ ಮತ್ತೊಂದು ನಟಿ ಆಲಿಯಾ ಭಟ್ ನ ಡೀಫ್ ಫೇಕ್ ವಿಡಿಯೋ ವೈರಲ್ ಆಗ್ತಾ ಇದೆ.
ಕೆಲವು ದಿನಗಳ ಹಿಂದೆಯಿಂದ ಡೀಫ್ ಫೇಕ್ ಎಂಬ ಫೇಸ್ ಆ್ಯಪ್ ಮೂಲಕ ಸಿನಿಮಾ ತಾರೆಯರ ಫೋಟೋಗಳನ್ನು ಅರೆ ಬಟ್ಟೆಯಲ್ಲಿ ಹಾಟ್ ಕಾಣಿಸುವಂತೆ ವಿಡಿಯೋ ಮಾಡಿ ವೈರಲ್ ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರೆ ಬಟ್ಟೆಯಲ್ಲಿ ಹಾಟ್ ಕಾಣಿಸಿಕೊಂಡಿರುವ ಯಾವುದೋ ಯುವತಿಯ ದೇಹಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ನ ಮುಖವನ್ನು ಅಂಟಿಸಿ ವಿಡಿಯೋ ಮಾಡಿರೋದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ಹಿಂದೆ ಹಲವು ನಟಿಗಳ ಡೀಫ್ ಫೇಕ್ ವಿಡಿಯೋ ವೈರಲ್ ಅದಾಗ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಂಡರೂ ಈ ಡೀಫ್ ಫೇಕ್ ವಿಡಿಯೋ ವೈರಲ್ ಮಾಡೋ ಕಿಡಿಗೇಡಿಗಳ ಕಾಟ ನಿಲ್ಲಿಸ್ತಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಂತಹ ವಿಡಿಯೋಗಳು ಇನ್ನು ಹೆಚ್ಚಾಗುತ್ತದೆ ಎಂದು ನೆಟ್ಟಿಗರು ಹೇಳ್ತಾ ಇದ್ದಾರೆ.
- FILM6 days ago
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನೋಡಿ ‘ಕತ್ತೆ’ ಎಂದ ಕಿಚ್ಚ ಸುದೀಪ
- bengaluru5 days ago
ಇನ್ಸ್ಟಾಗ್ರಾಂನಲ್ಲಿ 11 ಸಾವಿರ ಫಾಲೋವರ್ಸ್ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಸಂಗೀತಾ
- LATEST NEWS6 days ago
36 ಮಂದಿ ಶಬರಿಮಲೆ ಯಾತ್ರಿಕರನ್ನು ಒಯ್ಯುತ್ತಿದ್ದ ಬಸ್ ಪಲ್ಟಿ-7ಮಂದಿಗೆ ಗಾಯ..!
- DAKSHINA KANNADA5 days ago
Breaking news :ಮಂಗಳೂರಿನ ಹೊಟೇಲ್ ರೂಂನಲ್ಲಿ ಬೆಂಕಿ-ಒಳಗಿದ್ದ ವ್ಯಕ್ತಿ ಸಾವು