sports
ಟೀಮ್ ಇಂಡಿಯಾಗೆ ಭಾರೀ ಅಘಾತ: ಮೊದಲ ಪಂದ್ಯದಲ್ಲಿ ಸ್ಟಾರ್ ಆಟಗಾರ ಔಟ್
Published
9 hours agoon
ಮಂಗಳೂರು/ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹತ್ವದ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿವೆ. ವಿಶೇಷವೆಂದರೆ, ಈ ಸರಣಿಯಲ್ಲಿ ಭಾರತ 4-0 ಅಂತರದಿಂದ ಗೆದ್ದರೆ ಮಾತ್ರ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಫೈನಲ್ ತಲುಪುವ ಆಸೆ ಜೀವಂತವಾಗಿರಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಪರ್ತ್‌ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ, ಇದರ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಹೊರಗುಳಿಯಲಿದ್ದಾರೆ.
ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸದ ವೇಳೆ ಶುಭ್‌ಮನ್ ಹೆಬ್ಬೆರಳಿಗೆ ಗಾಯವಾಗಿದ್ದು, ಮೊದಲ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಫೀಲ್ಡಿಂಗ್ ಅಭ್ಯಾಸದ ವೇಳೆ ಗಿಲ್ ಅವರ ಎಡಗ್ಯೆ ಹೆಬ್ಬೆರಳು ಮುರಿತಕ್ಕೊಳಗಾಗಿದ್ದು, ವೈದ್ಯಕೀಯ ಪರೀಶೀಲನೆ ಬಳಿಕ ವಿಶ್ರಾಂತಿಗೆ ಸೂಚಿಸಲಾಗಿದೆ. ಇನ್ನೂ ಶುಭ್‌ಮನ್ ಮೊದಲ ಪಂದ್ಯದಿಂದ ಹೊರಗುಳಿದರೆ, ಅವರ ಸ್ಥಾನದಲ್ಲಿ ಆಭಿಮನ್ಯು ಈಶ್ವರನ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಡಿಸೆಂಬರ್ 6 ರಿಂದ 2ನೇ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಲಿದೆ. ಹಾಗೇಯೇ 3ನೇ ಪಂದ್ಯ ಡಿಸೆಂಬರ್ 14 ರಿಂದ ಬ್ರಿಸ್ಬೇನ್ ನಲ್ಲಿ ಜರುಗಲಿದೆ.ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಮೆಲ್ಬೋರ್ನ್ ನಲ್ಲಿ ನಡೆಯಲಿದ್ದು, ಕೊನೆಯ ಟೆಸ್ಟ್ ಪಂದ್ಯ ಜನವರಿ 3 ರಿಂದ ಆರಂಭವಾಗಲಿದೆ.
sports
IPL 2025 : ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗುತ್ತಾರಾ ಕರ್ನಾಟಕದ ಆಟಗಾರರು!
Published
6 hours agoon
17/11/2024By
NEWS DESK4ಮಂಗಳೂರು/ಮುಂಬೈ : ಭಾರತೀಯರು 2025ರ ಐಪಿಎಲ್ ಗಾಗಿ ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ನವೆಂಬರ್ 24 ಮತ್ತು 25ರಂದು ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದರಲ್ಲಿ ಒಟ್ಟು 1574 ಆಟಗಾರರು ಹರಾಜಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಇದೀಗ ಆಟಗಾರರ ಸಂಖ್ಯೆ 574ಕ್ಕೆ ಸೀಮಿತಗೊಳಿಸಲಾಗಿದೆ. ಈಗಾಗಲೇ ನೋಂದಾಯಿಸಿಕೊಂಡಿರುವವರ ಪಟ್ಟಿಯಲ್ಲಿ ಕರ್ನಾಟಕದ 24 ಆಟಗಾರರ ಹೆಸರು ಇದೆ.
ಯಾರು ಈ ಆಟಗಾರರು?
ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಕೆ.ಎಲ್ ರಾಹುಲ್ ಮನೀಷ್ ಪಾಂಡೆ, ದೇವದತ್ತ್ ಪಡಿಕಲ್, ಮಾಯಂಕ್ ಅಗರ್ವಾಲ್, ಪ್ರಸಿದ್ದ್ ಕೃಷ್ಣ ಘಟಾನುಘಾಟಿ ಆಟಗಾರರ ಜೊತೆ ಲವ್ನಿತ್ ಸಿಸೋಡಿಯಾ, ಆರ್ ಸ್ಮರಣ್, ಎಲ್.ಆರ್.ಚೇತನ್, ಮನೋಜ್ ಭಾಂಡಗೆ, ವೈಶಾಖ್ ವಿಜಯ್ ಕುಮಾರ್, ಅಭಿಲಾಶ್ ಶೆಟ್ಟಿ, ಪ್ರವೀಣ್ ದುಬೆ, ಕೆ.ಗೌತಮ್, ಮನ್ವಂತ್ ಕುಮಾರ್, ಶ್ರೇಯಶ್ ಗೋಪಾಲ್, ಹಾರ್ದಿಕ್ ರಾಜ್, ಅಭೀನವ್ ಮನೋಹರ್, ಬಿ. ಅರ್ ಶರತ್, ಕೃಷ್ಣನ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್ ಈ ಎಲ್ಲಾ ಆಟಗಾರರು ಐಪಿಎಲ್ ನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಂಗಳೂರು/ಮುಂಬೈ: 2025ರ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದ್ದು,ನವೆಂಬರ್ 24 ಮತ್ತು 25ರಂದು ನಡೆಯಲಿದೆ.ಈ ಬಾರಿ ನಡೆಯುವ ಮೆಗಾ ಹರಾಜಿನಲ್ಲಿ ಒಟ್ಟು 574 ಆಟಗಾರರು ಭಾಗಿಯಾಗಲಿದ್ದು, 366 ಭಾರತೀಯರು ಮತ್ತು 208 ವಿದೇಶಿ ಆಟಗಾರರು ಸೇರಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಅತ್ಯಂತ ಹಿರಿಯ ಆಟಗಾರರು ಹಾಗೂ ಅತ್ಯಂತ ಕಿರಿಯ ಆಟಗಾರರು ಪಾಲ್ಗೋಳ್ಳಲಿದ್ದಾರೆ.
2025ರ ಮೆಗಾ ಹರಾಜಿನಲ್ಲಿ ಬಾಗಿಯಾಗುವ ಅತ್ಯಂತ ಹಿರಿಯ ಆಟಗಾರ ಜೇಮ್ಸ್ ಆಂಡರ್ಸನ್ ಭಾಗಿಯಾಗಲಿದ್ದಾರೆ ಆದರೆ, ಅತ್ಯಂತ ಕಿರಿಯ ಆಟಗಾರ ನಮ್ಮ ಭಾರತದವರೇ ಅನ್ನೋದು ವಿಶೇಷ. ಅವರೇ 13 ವರ್ಷದ ವೈಭವ್ ಸೂರ್ಯವಂಶಿ.
ಸೌದಿ ಅರೇಬಿಯಾದಲ್ಲಿ ಹರಾಜು ಪ್ರಕ್ರೀಯೆ
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಹರಾಜು ಪ್ರಕ್ರೀಯೆಯಲ್ಲಿ ಈ ಎಲ್ಲಾ ಆಟಗಾರರು ಪಾಲ್ಗೋಳ್ಳಲಿದ್ದಾರೆ. ಬಿಸಿಸಿಐ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಈ ಬಾರಿ 574 ಆಟಗಾರರ ಪೈಕಿ 366 ಭಾರತೀಯರು ಮತ್ತು 208 ವಿದೇಶಿಯರು 3 ಜೊತೆಗಾರ ದೇಶಗಳ ಆಟಗಾರರು ಸೇರಿದ್ದಾರೆ. ಈ ಮೆಗಾ ಹರಾಜಿನಲ್ಲಿ 318 ಭಾರತೀಯ ಅನ್ ಕ್ಯಾಪ್ಡ್ ಮತ್ತು 12 ಅನ್ ಕ್ಯಾಪ್ಡ್ ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ.
ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ
ಈ ಬಾರಿಯ ಹರಾಜು ಪ್ರಕ್ರೀಯೆಯಲ್ಲಿ, 42 ವರ್ಷದ ಜೇಮ್ಸ್ ಆಂಡರ್ಸನ್ ಅತ್ಯಂತ ಹಿರಿಯ ಆಟಗಾರ ಖ್ಯಾತಿಗೆ ಪಾತ್ರರಾಗಿದ್ದರೆ, ಅತ್ಯಂತ ಕಿರಿಯ ಆಟಗಾರ ಬಿಹಾರದ ಸಮಸ್ತಿಪುರದ ವೈಭವ್ ಸೂರ್ಯವಂಶಿ. ಇನ್ನೂ 13 ವರ್ಷದ ಹುಡುಗ, ಚಿಕ್ಕ ವಯಸ್ಸಿನಲ್ಲಿಯೇ ರಣಜೀ ಟ್ರೋಫಿ,ಹೇಮಂತ್ ಟ್ರೋಫಿ,ಕೂಚ್ ಬೆಹಾರ್ ಟ್ರೋಫಿ ಹಾಗೂ ವಿನೂ ಮಂಕಡ್ ಟ್ರೋಫಿಗಳನ್ನು ಆಡಿದ್ದಾರೆ.
ಇತ್ತೀಚೆಗೆ ಭಾರತ ತಂಡದ ಅಂಡರ್-19 ತಂಡಕ್ಕೂ ಆಯ್ಕೆಯಾಗಿದ್ದ ಸೂರ್ಯವಂಶಿ, ಬಿಹಾರ ಪರ ರಣಜಿಗೆ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿದ್ದರು. ಆ ನಂತರ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತದ ಎ ತಂಡದಲ್ಲಿ ಆಯ್ಕೆ ಮಾಡಲಾಯಿತು, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಸೂರ್ಯವಂಶಿ, ಕೇವಲ 58 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಅವರ ಈ ಇನ್ನಿಂಗ್ಸ್ ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸ್ ರಗಳು ಸೇರಿದ್ದವು. ಸೂರ್ಯವಂಶಿ ತಮ್ಮ ವೃತ್ತಿಜೀವನದಲ್ಲಿ ಇದೂವರೆಗೆ 5 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಆಡಿರುವ 10 ಇನ್ನಿಂಗ್ಸ್ ಗಳಲ್ಲಿ 100 ರನ್ ಗಳಿಸಿದ್ದಾರೆ.
ಬಿಸಿಸಿಐ ಪ್ರಕಟಿಸಿರುವ ಅಂತಿಮ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ 491ನೇ ಸ್ಥಾನದಲ್ಲಿದ್ದು ಅನ್ ಕ್ಯಾಪ್ಡ್ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.
ಮಂಗಳೂರು/ಜೋಹಾನ್ಸ್ ಬರ್ಗ್: ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ-ದಕ್ಷಿಣ ಆಫ್ರೀಕಾ ನಡುವಿನ ಟಿ-20 ಸರಣಿಯ 4ನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು 135 ರನ್ ಗಳ ಭರ್ಜರಿ ಜಯ ದಾಖಲಿಸಿದೆ.ಈ ಮೂಲಕ 3-1ರ ಅಂತರದಿಂದ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ 109 ರನ್ ಸಿಡಿಸಿದರು. ಇದರಲ್ಲಿ 9 ಸಿಕ್ಸರ್,6 ಬೌಂಡರಿ ಸೇರಿದೆ. ತಿಲಕ್ ವರ್ಮಾ 47 ಎಸೆತಗಳಲ್ಲಿ 120 ರನ್ ಗಳ ಶತಕ ಆಟ ಆಡಿದರು.ಇದರಲ್ಲಿ 10 ಸಿಕ್ಸರ್,9 ಬೌಂಡರಿ ಇದ್ದವು. ಇವರಿಬ್ಬರ ಶತಕದಾಟದ ನೆರವಿನಿಂದ 20 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಗಳ ಬೃಹತ್ ಮೊತ್ತ ಪ್ರೇರಿಸಿತು. ಈ ಮೂಲಕ ದಕ್ಷಿಣ ಆಫ್ರೀಕಾದ ಬೌಲರ್ ಗಳು ದುಬಾರಿಯಾದರು.
ನಂತರ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರೀಕಾ ತಂಡದ ಬ್ಯಾಟರ್ ಗಳನ್ನು,ಭಾರತದ ಬೌಲರ್ ಗಳು ಇನ್ನಿಲ್ಲದಂತೆ ಕಾಡಿದರು. ಭಾರತ ತಂಡ ದಕ್ಷಿಣ ಆಫ್ರೀಕಾವನ್ನು 148 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 135 ರನ್ ಗಳ ಭರ್ಜರಿ ಜಯ ತಂದುಕೊಟ್ಟರು. ಭಾರತದ ಪರ 3 ಓವರ್ ಬೌಲಿಂಗ್ ಮಾಡಿದ ವೇಗಿ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದು 20 ರನ್ ಬಿಟ್ಟುಕೊಟ್ಟರು,4 ಓವರ್ ಬೌಲಿಂಗ್ ಮಾಡಿದ ಸ್ಪೀನ್ನರ್ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದು 42 ರನ್ ಕೊಟ್ಟರು ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ 2 ಓವರ್ ಬೌಲಿಂಗ್ ಮಾಡಿ,ಕೇವಲ 6 ರನ್ ಕೊಟ್ಟು 2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳು
ಅಂತರಾಷ್ಟ್ರೀಯ ಟಿ-20 ಮಾದರಿಯ ಈ ಪಂದ್ಯದಲ್ಲಿ ಭಾರತ 283 ರನ್ ಕಲೆ ಹಾಕುವ ಮೂಲಕ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಮೊತ್ತ ಪ್ರೇರಿಸುವ ಮುಲಕ ದಾಖಲೆ ಬರೆದಿದೆ.ಸಂಜು ಸ್ಯಾಮ್ಸನ್ ಒಂದು ವರ್ಷದಲ್ಲಿ ಮೂರು ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು.ಒಂದೇ ಸರಣಿಯಲ್ಲಿ 2 ಶತಕ ಸಿಡಿಸಿದ ದಾಖಲೆಗೂ ಸಂಜು ಭಾಜನರಾದರು.ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭರ್ಜರಿ ಶತಕ ಬಾರಿಸುವ ಮೂಲಕ ಭರ್ಜರಿ ಜೊತೆಯಾಟವಾಡಿ ಒಂದೇ ಇನ್ನಿಂಗ್ಸ್ ನಲ್ಲಿ ಇಬ್ಬರು ಬ್ಯಾಟ್ಸ್ ಮ್ಯಾನ್ ಗಳು ಶತಕ ಸಿಡಿಸಿದ್ದು ಇದೇ ಮೊದಲು.ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಶತಕ ಸಿಡಿಸಿದಲ್ಲದೆ, 210 ರನ್ ಗಳ ದಾಖಲೆಯ ಜೊತೆಯಾಟವನ್ನು ಆಡಿದರು.ಈಗಾಗೀ ಅತೀ ದೊಡ್ಡ ಜೊತೆಯಾಟವಾಡಿದ ದಾಖಲೆ ಈ ಇಬ್ಬರು ಆಟಗಾರರ ಪಾಲಾಯಿತು.
LATEST NEWS
ಇಸ್ರೇಲ್ ವಿಸಾ ಹೆಸರಿನಲ್ಲಿ ಯುವಕರಿಗೆ ವಂಚನೆ. ಕೇರಳದ ಏಜನ್ಸಿ ವಿರುದ್ದ ಯುವಕರ ದೂರು
ಮಣಿಪುರದಲ್ಲಿ ಭುಗಿಲೆದ್ದ ಹಿಂ*ಸಾಚಾರ; ಸಿಎಂ ಮನೆಗೆ ನುಗ್ಗಿದ ಆಕ್ರೋಶಿತರ ಗುಂಪು
ಉಡುಪಿ ಹಿಟ್ ಆ್ಯಂಡ್ ರನ್ ಕೇಸ್; ಆರೋಪಿಗೆ ಬೇಲ್
ಸರಳವಾಗಿ ನಡೆಯಿತು ಡಾಲಿ ಧನಂಜಯ್, ಧನ್ಯತಾ ನಿಶ್ಚಿತಾರ್ಥ- ಫೆ.16ಕ್ಕೆ ಮದುವೆ
ಅಜ್ಜಿಗಾಗಿ 12 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮೊಮ್ಮಗ! Mclaren 675 LT
ಊಟ ಮಾಡುವಾಗ ಅನ್ನದಲ್ಲಿ ಪದೇ ಪದೇ ಕೂದಲು ಸಿಗುತ್ತಿದೆಯೇ? ಇದು ಶುಭನಾ? ಅಶುಭನಾ?
Trending
- LATEST NEWS4 days ago
ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್ ಆಹಾರದಿಂದಲೇ 32 ಕೆಜಿ ಸ್ಲಿಮ್ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್!
- FILM4 days ago
ಅಭಿಷೇಕ್-ಅವಿವಾ ಪುತ್ರನಿಗೆ ಅಂಬರೀಷ್ ಹೆಸರು
- DAKSHINA KANNADA4 days ago
ತೃತೀಯ ಲಿಂಗಿ ತಾಯಿಯ ಹೋರಾಟ ; ಅಪ್ಪನ ಹೆಸರಿಲ್ಲದೆ ಪಾಸ್ಪೋರ್ಟ್ ಪಡೆದ ಮಗ .. !
- FILM5 days ago
ಅಂಬಿ ಮನೆಗೆ ಜ್ಯೂನಿಯರ್ ಅಭಿ ಎಂಟ್ರಿ; ಗಂಡು ಮಗುವಿಗೆ ಜನ್ಮವಿತ್ತ ಅವಿವಾ