Tuesday, January 31, 2023

ಪತ್ನಿಯನ್ನು ಕೊಂದು ವಿಮಾನದಲ್ಲಿ ಪರಾರಿಯಾಗಿದ್ದ ಪತಿ ಬಂಧನ..!!

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೊದಲೇ ರೂಪಿಸಿದ್ದ ಸಂಚಿನಂತೆ ವಿಮಾನದಲ್ಲಿ‌ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಗಳೂರು ಸದ್ದುಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪತ್ನಿ ನಾಝ್​’ಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಸಿರ್ ಹುಸೇನ್ ಬಂಧಿತ ಆರೋಪಿಯಾಗಿದ್ದಾನೆ.

ಕೊಲೆಯಾದ ನಾಝ್​, ಸಾಫ್ಟ್‌ವೇರ್ ಉದ್ಯೋಗಿ ಎಂದು ನಾಸಿರ್ ಹುಸೇನ್​ನನ್ನು ಪ್ರೀತಿಸಿ ವಿವಾಹವಾಗಿದ್ದಳು. ಅರೋಪಿ ನಾಸಿರ್ ಪಶ್ಚಿಮ ಬಂಗಾಳ ಮೂಲದವನಾಗಿದ್ದು, ಕೊಲೆ ಮಾಡುವ ಮೊದಲೇ ದೆಹಲಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ.

ನಂತರ ಕೊಲೆ ಮಾಡಿ ಟ್ಯಾಕ್ಸಿ ಮೂಲಕ ವಿಮಾನ‌ನಿಲ್ದಾಣಕ್ಕೆ​ ತೆರಳಿದ್ದ. ನಂತರ ಟ್ಯಾಕ್ಸಿ ಚಾಲಕನಿಗೆ 4000 ರೂ. ಹಣ ಫೋನ್ ಪೇ ಮಾಡಿ 3500 ರೂ. ಹಣವನ್ನು ಮರಳಿ ಪಡೆದುಕೊಂಡಿದ್ದ.

ದೆಹಲಿ ವಿಮಾನ ಟೇಕ್​ ಆಫ್ ಆಗುತ್ತಿದ್ದಂತೆ ಪತ್ನಿ ನಾಝ್​ಳನ್ನು ಕೊಲೆ ಮಾಡಿರುವುದಾಗಿ ಆಕೆಯ ಸಹೋದರನಿಗೆ ಮೆಸೇಜ್ ಮಾಡಿ, “ನಿನ್ನ ತಂಗಿಯ ಅಕ್ರಮ ಸಂಬಂದಕ್ಕೆ ಕೋಪಗೊಂಡು ಕೊಲೆ ಮಾಡಿದ್ದೇನೆ. ಮನೆಗೆ ಹೋಗಿ ಮೃತದೇಹವನ್ನು ತೆಗೆದುಕೊಳ್ಳಿ” ಎಂದು ಹೇಳಿ ಮೊಬೈಲ್ ಆಫ್ ಮಾಡಿ ಪರಾರಿಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಸುದ್ದಗುಂಟೆ ಪಾಳ್ಯ ಪೊಲೀಸರು ಮೊಬೈಲ್ ಜಾಡು ಹಿಡಿದು ದೆಹಲಿಗೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here

Hot Topics

“ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ..ನಾಚಿಕೆ ಇಲ್ವಾ.!?” ಉಳ್ಳಾಲ ಪೊಲೀಸರಿಗೆ ಶಾಸಕ ಖಾದರ್ ಕ್ಲಾಸ್..!

ಮಂಗಳೂರು: ಜನ ಸಾಮಾನ್ಯರ ಮನೆಯ ತಳಪಾಯ ಬಿದ್ದುಹೋಗುವ ಸ್ಥಿತಿ ನಿರ್ಮಾಣ ಮಾಡಿದ ಮರಳು ಮಾಫಿಯಾ ವಿರುದ್ದ ಉಳ್ಳಾಲ ಶಾಸಕ ಯು ಟಿ. ಖಾದರ್ ಗರಂ ಆಗಿದ್ದಾರೆ.ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗದ ಉಳ್ಳಾಲ ಪೊಲೀಸರು...

ಬೆಳ್ತಂಗಡಿ ಆಟೋ ಚಾಲಕನ ನಿರ್ಲಕ್ಷ್ಯಕ್ಕೆ ಒಂದು ವರ್ಷದ ಮಗು ಮೃತ್ಯು..!

ಆಟೋ ರಿಕ್ಷಾವೊಂದು ಸೇತುವೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಒಂದು ವರ್ಷದ ಗಂಡು ಮಗು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಾಲಾಡಿಯಲ್ಲಿ ನಡೆದಿದೆ.ಬೆಳ್ತಂಗಡಿ : ಆಟೋ ರಿಕ್ಷಾವೊಂದು ಸೇತುವೆ...

15 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 32ರ ಮಹಿಳೆ..!

ಮುಂಬೈ: ಮಹಿಳೆಯೊಬ್ಬಳು 15 ವರ್ಷದ ಬಾಲಕನ ಮೇಲೇ ಲೈಂಗಿಕ ದೌರ್ಜನ್ಯ (Sexual Abuse) ಎಸಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ನಡೆದಿದೆ.ಈ ಸಂಬಂಧ ಮಹಿಳೆಯ ವಿರುದ್ಧ ಪೋಸ್ಕೋ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.32...