Connect with us

BELTHANGADY

Belthangady: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು..!

Published

on

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬೆಳಾಲು ಗ್ರಾಮದಲ್ಲಿ ವ್ಯಕ್ತಿಯೋರ್ವ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬೆಳಾಲು ಗ್ರಾಮದಲ್ಲಿ ವ್ಯಕ್ತಿಯೋರ್ವ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಮಾಯಾ ಅತ್ರಿಜಾಲು ಮನೆಯ ತಮ್ಮಯ ಗೌಡ (46) ಕೆರೆಗೆ ಬಿದ್ದು ಮೃತಪಟ್ಟ ವ್ಯಕ್ತಿಯಾಗಿದ್ದಾನೆ.

ಜು. 12 ಸಂಜೆಯಿಂದ ಕಾಣೆಯಾಗಿದ್ದ ತಮ್ಮಯ ಗೌಡರನ್ನು ಮನೆಯವರು ಹುಡುಕಿದ್ದು ಆದರೂ ಸಿಗದೆ ಇದ್ದಾಗ ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಹರೀಶ ಕೂಡಿಗೆಯವರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸೇವಾಪ್ರತಿನಿಧಿ ಆಶಾರವರ ನೇತೃತ್ವದಲ್ಲಿ ಯಶೋಧರ ಮಂಡಾಲು, ಸುಲೈಮಾನ್ ಬೆಳಾಲು, ಸಂತೋಷ ಕನೆಕ್ಕಿಲ ಹಾಗೂ ಊರಿನವರೊಂದಿಗೆ ಸೇರಿಕೊಂಡು ಹುಡುಕಾಡುವಾಗ ಸಮೀಪದ ಕೆರೆಯ ಬಳಿ ಒಂದು ಟಾರ್ಚ್ ಲೈಟ್ ಕಾಣಸಿಕ್ಕಿತ್ತು.

ಕೆರೆಗೆ ಬಿದ್ದಿರುವ ಸಂಶಯದಿಂದ ಆಳವಾದ ಕೆರೆಯಲ್ಲಿ ಹುಡುಕುವ ಪ್ರಯತ್ನ ಮಾಡಲಾಯಿತು.

ಕೂಡಿಗೆ ಹರೀಶರವರು ದೋಟಿಯ ಸಹಾಯದಿಂದ 2 ನೇ ಬಾರಿ ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ನೀರಿನಿಂದ ಮೇಲೆ ಬಂತು.

ಬಳಿಕ ಧರ್ಮಸ್ಥಳ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿ, ಎ ಎಸ್ ಐ ಬಾಲಕೃಷ್ಣರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಶಿಧರ್ ಮತ್ತು ಅಭಿಜಿತ್‌ರವರು ಸ್ಥಳಕ್ಕೆ ಬಂದು ಪರೀಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

BELTHANGADY

ಪಶುವೈದ್ಯರಿಂದ ಹ*ಲ್ಲೆ ಆರೋಪ; ರೀಲ್ಸ್ ಮೂಲಕ ಫೇಮಸ್ ಆಗಿದ್ದ ವ್ಯಕ್ತಿ ಸಾ*ವು

Published

on

ಕೊಕ್ಕಡ  : ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಹ*ಲ್ಲೆ ನಡೆಸಿ ಆತನ ಸಾ*ವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಲ್ಲಿ ಪಶುವೈದ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, 58 ವರ್ಷ ಪ್ರಾಯದ ಕಿಟ್ಟಿ ಯಾನೆ ಕೃಷ್ಣ ಮೃ*ತ ವ್ಯಕ್ತಿಯಾಗಿದ್ದಾರೆ.

ಕೊಕ್ಕಡ ಪಶುವೈದ್ಯಾಧಿಕಾರಿ ಕುಮಾರ್ ಅವರ ಮೇಲೆ ಕೊ*ಲೆ ಆರೋಪ ಕೇಳಿ ಬಂದಿದ್ದು, ಅವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯಿಂದ ದೂರು ದಾಖಲು :

ವಿಪರೀತ ಕುಡಿತದ ಚಟ ಹೊಂದಿದ್ದ ಕೃಷ್ಣ ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸುಧಾರಿಸುವ ಮೊದಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ನಿನ್ನೆ ಕೊಕ್ಕಡಕ್ಕೆ ಬಂದು ಇಳಿದಿದ್ದರು. ಈ ವೇಳೆ ಕೃಷ್ಣರ ಪರಿಚಿತ ವ್ಯಕ್ತಿ ಹಾಗೂ ಸ್ಥಳೀಯ ಪಶುವೈದ್ಯಾಧಿಕಾರಿ ಕುಮಾರ್ ಅವರು ಆತನ ಆರೋಗ್ಯ ವಿಚಾರಿಸಿದ್ದಾರೆ.

ಈ ವೇಳೆ ಇಷ್ಟು ಬೇಗ ಯಾಕೆ ಡಿಸ್ಚಾರ್ಜ್ ಆಗಿ ಬಂದಿದ್ದು? ಎಂದು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಮಾತುಕತೆ ನಡೆಯುತ್ತಿದ್ದಾಗ ಕೃಷ್ಣ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ. ಆದರೆ ಮಾತನಾಡುತ್ತಿದ್ದ ಪಶು ವೈದ್ಯಾಧಿಕಾರಿ ಕುಮಾರ್ ಅವರು ತನ್ನ ಪತಿಗೆ ಹ*ಲ್ಲೆ ನಡೆಸಿದ್ದಾರೆ ಎಂದು ಪತ್ನಿ ಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಕಳ್ಳತನ ಮಾಡಲೆಂದೇ ವರ್ಷದಲ್ಲಿ ಸುಮಾರು 200 ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ

ಈ ಹಿನ್ನಲೆಯಲ್ಲಿ ಪೊಲೀಸರು ಪಶುವೈದ್ಯಾಧಿಕಾರಿಯನ್ನು ಬಂಧಿಸಿದ್ದಾರೆ. ಆದ್ರೆ, ಕೃಷ್ಣ ಸಾ*ವಿನ ಬಗ್ಗೆ ಅನುಮಾನ ಮೂಡಿರುವ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃ*ತದೇಹವನ್ನು ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಕೃಷ್ಣ ಸಾ*ವಿನ ನಿಖರ ಕಾರಣ ತಿಳಿದು ಬರಲಿದೆ.

ಮೃ*ತ ಕೃಷ್ಣ ಅವರು ಕೊಕ್ಕಡ ಭಾಗದಲ್ಲಿ ರೀಲ್ಸ್ ನಲ್ಲಿ ಹೆಚ್ಚಾಗಿ ಜನಜನಿತರಾಗಿದ್ದರು. ಇತ್ತೀಚೆಗೂ ಒಂದು ಕನ್ನಡ ಸಿನೆಮಾದ ಡೈಲಾಗ್ ನ್ನ ರೀಲ್ಸ್ ಮಾಡಿದ್ದರು.

Continue Reading

BANTWAL

ಕಡಬ : ಸಿಡಿಲು ಬಡಿದು ಓರ್ವ ಸಾವು; ಇಬ್ಬರಿಗೆ ಗಾಯ

Published

on

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ವರುಣ ಕೃಪೆ ತೋರಿದ್ದಾನೆ. ಇನ್ನೊಂದೆಡೆ ಸಿಡಿಲಾರ್ಭಟಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ.. ಕಡಬ ತಾಲೂಕಿನಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶ,ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿ.

ಇದನ್ನು ಓದಿ:ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ! 

ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್ ಗೇ ಸಿಡಿಲು ಬಡಿದಿದೆ. ಪರಿಣಾಮ ಮರಳು ತೆಗೆಯುವ ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

Continue Reading

BELTHANGADY

ಪಂಚಭೂತಗಳಲ್ಲಿ ಲೀನವಾದ ಜನ ಮೆಚ್ಚಿದ ನಾಯಕ…!

Published

on

ಮಂಗಳೂರು : ಮೇಲ್ನೋಟಕ್ಕೆ ಕೋಪಿಷ್ಟನಂತೆ ಕಂಡರೂ ಒಳಗಡೆ ಮಗುವಿನಂತಹ ಮನಸ್ಸು…ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾದ್ರೆ ಬಡವರ ಪಾಲಿಗೆ ಇವರು ಬಂಗಾರದ ವ್ಯಕ್ತಿ. ಇದ್ದಿದ್ದು ಇದ್ದ ಹಾಗೆ ಖಡಕ್ ಆಗಿ ಮಾತನಾಡೋ ಕಾರಣ ಸಾಕಷ್ಟು ಜನರ ವಿರೋಧಿಯಾದ್ರೂ, ಒಳಗೊಳಗೆ ಅವರಿಂದಲೇ ಪ್ರೀತಿಯನ್ನು ಕೂಡಾ ಪಡಿತಾ ಇದ್ದ ಜನಪ್ರೀಯ ಜನನಾಯಕ. ಜನರನ್ನು ತನ್ನವರೆಂದೇ ಒಬ್ಬ ಜನಪ್ರತಿನಿಧಿಯಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸ್ತಾ ಇದ್ದ ವಸಂತ ಬಂಗೇರ ಇನ್ನು ನೆನಪು ಮಾತ್ರ…

ಸದಾ ತನ್ನ ಮಾತಿನ ಮೂಲಕವೇ ಸುದ್ದಿಯಾಗುತ್ತಿದ್ದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಶಾಶ್ವತವಾಗಿ ಮಾತು ಮುಗಿಸಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತನ್ನ ಕ್ಷೇತ್ರದ ಜನರ ಸೇವೆಗಾಗಿ ತನ್ನ ಜೀವನ ಮುಡಿಪಾಗಿಟ್ಟ ವಸಂತ ಬಂಗೇರ ನಿಜವಾಗಿಯೂ ಒಬ್ಬ ಜನನಾಯಕರಾಗಿದ್ದರು. ತನ್ನ ಬಳಿ ಕಷ್ಟ ಹೇಳಿಕೊಂಡು ಯಾರೇ ಬಂದ್ರೂ ಹಿಂದೂ ಮುಂದು ನೋಡದೆ ಸಹಾಯ ಮಾಡ್ತಾ ಇದ್ರು. ತನ್ನ ಕೈ ಖಾಲಿ ಮಾಡಿ ಮತ್ತೊಬ್ಬರಿಗೆ ಕೈ ಎತ್ತಿ ದಾನ ಮಾಡ್ತಾ ಇದ್ದ ವಸಂತ ಬಂಗೇರ ಇದೇ ಕಾರಣಕ್ಕೆ ಜನಾನುರಾಗಿಯಾಗಿದ್ದರು.


ಇದೀಗ ಅವರಿಲ್ಲಾ ಅನ್ನೋ ಸುದ್ದಿ ಅವರ ಅಭಿಮಾನಿಗಳನ್ನ ಕಣ್ಣೀರಿನ ಕಡಲಿನಲ್ಲಿ ಮುಳುಗಿಸಿದೆ. ಅವರ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆ ಅವರ ಮನೆಗೆ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ತಾಲೂಕು ಕ್ರೀಡಾಂಗಣಕ್ಕೂ ಸಾವಿರಾರು ಅಭಿಮಾನಿಗಳು ಆಗಮಿಸಿ ಅವರಿಗೆ ಅಂತಿನ ನಮನ ಸಲ್ಲಿಸಿದ್ದಾರೆ. ನೇರವಾಗಿ ನಿಷ್ಠೂರವಾಗಿ ತಪ್ಪುಗಳನ್ನು ಖಂಡಿಸುತ್ತಿದ್ದ ತಮ್ಮ ಪರ ಧ್ವನಿಯಾಗಿದ್ದ ನಾಯಕ ಇನ್ನಿಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾದ್ಯವಾಗಿಲ್ಲ. ಬಡವರಿಗೆ ಅನ್ಯಾಯ ಆಗ್ತಾ ಇದೆ ಅಂತ ಗೊತ್ತಾದ್ರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ತಾ ಇದ್ದ ವಸಂತ ಬಂಗೇರ ಅವರ ಆ ಸ್ಟೈಲ್‌ ಯಾವತ್ತೂ ಮರೆಯಲು ಸಾದ್ಯವಿಲ್ಲ.


ರಾಜ್ಯ ರಾಜಕಾರಣದಲ್ಲಿ ಸರಿಸುಮಾರು 40 ವರ್ಷಗಳ ಕಾಲ ಚಾಲ್ತಿಯಲ್ಲಿದ್ದ ಹೆಸರು ವಸಂತ ಬಂಗೇರ. ಬೆಳ್ತಂಗಡಿ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಶಾಸಕರಾಗಿದ್ದ ವಸಂತ ಬಂಗೇರ ಕೊನೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಭದ್ರವಾಗಿ ನೆಲೆಯೂರಿದ್ದರು. ಬಿಜೆಪಿಯಿಂದ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ವಸಂತ ಬಂಗೇರ ಬಳಿಕ ನಡೆದ ರಾಜಕೀಯ ದ್ರುವೀಕರಣದಲ್ಲಿ ಜೆಡಿಎಸ್‌ ಮತ್ತು ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಜಾತ್ಯಾತೀತ ನಾಯಕನಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಒಡನಾಡಿಯಾಗಿ ರಾಜ್ಯದ ಅಪಾರ ರಾಜಕೀಯ ನಾಯಕರು ಮೆಚ್ಚಿಕೊಂಡಿದ್ದ ವ್ಯಕ್ತಿ ಇವರು. ವಿಪರ್ಯಾಸ ಅಂದ್ರೆ ರಾಜಕೀಯದ ಉತ್ತುಂಗಕ್ಕೆ ಏರಿದ್ರೂ ಸಚಿವರಾಗುವ ಅವಕಾಶ ವಸಂತ ಬಂಗೇರ ಅವರಿಗೆ ಸಿಗಲೇ ಇಲ್ಲ ಅನ್ನೋದು. 2013 ರಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದಿದ್ರೂ ವಸಂತ ಬಂಗೇರ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದ್ರೆ ಯಾವೊಬ್ಬ ಸಚಿವನಿಗೂ ಸಾದ್ಯವಾಗದ ಕೆಲಸವನ್ನು ಸಿಎಂ ಆಗಿದ್ದ ಸಿದ್ಧರಾಮಯ್ಯ ಮೂಲಕ ಮಾಡಿಸೋ ತಾಕತ್ತು ಇದ್ದಿದ್ದು ವಸಂತ ಬಂಗೇರ ಅವರಿಗೆ ಮಾತ್ರ ಅನ್ನೋದನ್ನ ಮರೆಯುವ ಹಾಗಿಲ್ಲ.


ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಇದ್ದಿದ್ದು ಇದ್ದಹಾಗೇ ಹೇಳೋ … ಬಡವರು ಅಂದ್ರೆ ನನ್ನವರು ಎಂದು ಪ್ರೀತಿ ಮಾಡೋ ಜನ ನಾಯಕ ಇಂದು ಎಲ್ಲರ ಪ್ರೀತಿಗೆ ವಿದಾಯ ಹೇಳಿ ಮೌನವಾಗಿದ್ದಾರೆ. ” ನನ್ನನ್ನು ಆರಿಸಿದವರು ನೀವು .. ನೀವು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಮೋಸ ಮಾಡಿಲ್ಲ. ಹಣ ಮಾಡದೆ ಸ್ವಚ್ಚವಾಗಿ ಜನ ಸೇವೆ ಮಾಡಿದ ತೃಪ್ತಿ ಇದೆ” ಅಂತಲೇ ರಾಜಕೀಯಕ್ಕೆ ವಿದಾಯ ಹೇಳಿದ್ದ ವಸಂತ ಬಂಗೇರ ಇಂದು ಎಲ್ಲವನ್ನೂ ಬಿಟ್ಟು ತಮ್ಮ ಅಂತಿಮಯಾತ್ರೆ ಮುಗಿಸಿದ್ದಾರೆ.


ವಸಂತ ಬಂಗೇರ ಅವರ ಅಂತ್ಯಕ್ರೀಯೆ ಅವರ ಕುವೆಟ್ಟು ಕೇದೆ ಮನೆಯಲ್ಲಿ ನಡೆಸಲಾಗಿದೆ. ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಷ ಮಾಡುವ ಮೂಲಕ ಅಂತಿಮ ವಿಧಿಯನ್ನು ಪೂರೈಸಿದ್ದಾರೆ. ಪಂಚಭೂತಗಳಲ್ಲಿ ಲೀನವಾಗಿರುವ ಮಾಜಿ ಶಾಸಕ ವಸಂತ ಬಂಗೇರ ಇನ್ನು ನೆನಪು ಮಾತ್ರ. ಆದ್ರೆ ವಸಂತ ಬಂಗೇರ ಅವರು ಅವರ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಜನನಾಯಕರಾಗಿರುತ್ತಾರೆ.

ವಿಡಿಯೋ ನೋಡಿ : ವಸಂತ ಬಂಗೇರ ಅವರ ರಾಜಕೀಯ ಜೀವನ ಕುರಿತಾದ ಸ್ಟೋರಿ

Continue Reading

LATEST NEWS

Trending