Sunday, May 16, 2021

ಅನಾಮಧೇಯ ಕರೆ ಸ್ವೀಕರಿಸುವಾಗ ಇರಲಿ ಎಚ್ಚರಿಕೆ: ಎಚ್ಚರ ತಪ್ಪಿದರೆ  ಕಳೆದುಕೊಳ್ಳುವಿರಿ ಪೂರ್ತಿ ಬ್ಯಾಂಕ್ ಬ್ಯಾಲೆನ್ಸ್..

ಸುಳ್ಯ:ಸುಳ್ಯ :ಇತ್ತೀಚೆಗೆ ಬ್ಯಾಂಕ್ ಖಾತೆಯ ಹಣ ವಂಚನೆ ಪ್ರಕರಣಗಳು ಬಹಳಷ್ಟು ಹೆಚ್ಚುತ್ತಿವೆ. ಅಮಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅಂತರ್ಜಾಲ ಕಳ್ಳರು.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನ ವ್ಯಕ್ತಿಯೊಬ್ಬರಿಗೆ ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಓಟಿಪಿ ಪಡೆದು 40ಸಾವಿರಕ್ಕೂ ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ.ವಂಚಿತ ವ್ಯಕ್ತಿಯ ಮೊಬೈಲ್ ಗೆ ಅನಾಮಧೇಯನೋರ್ವ” ನಾನು ಸುಳ್ಯ ಕೆನರಾ ಬ್ಯಾಂಕಿನ ಮ್ಯಾನೇಜರ್ ಮಾತನಾಡುತ್ತಿದ್ದೇನೆ ಎಂದು ಕರೆ ಮಾಡಿದ್ದಾನೆ ಬಳಿಕ ನಿಮ್ಮ ದೂರವಾಣಿಗೆ ಒಂದು ಓಟಿಪಿ ಸಂಖ್ಯೆ ಬರಲಿದ್ದು, ಆ ಸಂಖ್ಯೆಯನ್ನು ಕೂಡಲೇ ನನಗೆ ನೀಡಬೇಕು ಎಂದು ತಿಳಿಸಿದ್ದಾನೆ.

ಬ್ಯಾಂಕ್ ಮ್ಯಾನೇಜರ್ ಎಂದು ತಿಳಿದುಕೊಂಡು ಕರೆ ಸ್ವೀಕರಿಸಿದ ವ್ಯಕ್ತಿ ಓಟಿಪಿ ಸಂಖ್ಯೆ ನೀಡಿದ್ದಾರೆ. ಸಂಖ್ಯೆ ನೀಡಿದ ಬಳಿಕ
ಪ್ರಥಮ ಬಾರಿಗೆ 30ಸಾವಿರ ರೂಪಾಯಿ ಎರಡನೇ ಬಾರಿಗೆ 9ಸಾವಿರದ ಒಂಬೈನೂರ ತೊಂಭತ್ತೊಂಬತ್ತು ರೂಪಾಯಿ ಸೇರಿದಂತೆ ಒಟ್ಟು 40ಸಾವಿರದ ಒಂಬೈನೂರ ತೊಂಭತ್ತೆಂಟು ರೂಪಾಯಿಯನ್ನು ಕರೆ ಮಾಡಿದಾತ ವಿದ್ ಡ್ರಾ ಮಾಡಿದ್ದಾನೆ.

ಹಣ ವಿದ್ಡ್ರಾ ಮಾಡಿದ ಮೆಸೇಜ್ ಬಂದ ಆ ಬಳಿಕ ತಾನು ಮೋಸ ಹೋಗಿರುವ ವಿಷಯ ಓಟಿಪಿ ನೀಡಿದಾತನಿಗೆ ತಿಳಿದು ಬಂದಿದೆ. ಈ ಕುರಿತು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...