Connect with us

    BANTWAL

    Bantwala: ಇಲೆಕ್ಟ್ರಾನಿಕ್ ಅಂಗಡಿಗೆ ಬೆಂಕಿ- ಕರಕಲಾದ ಲಕ್ಷಾಂತರ ರೂ. ವಸ್ತುಗಳು..!

    Published

    on

    ಆಕಸ್ಮಿಕವಾಗಿ ಬೆಂಕಿ ತಗುಲಿ ಇಲೆಕ್ಟ್ರಾನಿಕ್ ಅಂಗಡಿಯೊಂದು ಬಾಗಶ: ಬೆಂಕಿಗಾಹುತಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ನಡೆದಿದೆ.

    ಬಂಟ್ವಾಳ: ಆಕಸ್ಮಿಕವಾಗಿ ಬೆಂಕಿ ತಗುಲಿ ಇಲೆಕ್ಟ್ರಾನಿಕ್ ಅಂಗಡಿಯೊಂದು ಬಾಗಶ: ಬೆಂಕಿಗಾಹುತಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ನಡೆದಿದೆ.

    ಬಂಟ್ವಾಳ ಪೇಟೆಯ ಬಡ್ಡಕಟ್ಟೆಯಲ್ಲಿರುವ ಪುರಸಭಾ ವಾಣಿಜ್ಯ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಸೊತ್ತುಗಳು ಸುಟ್ಟುಹೋಗಿವೆ.

    ಬಳಿಕ ಅಗ್ನಿಶಾಮಕ ಸಿಬಂದಿ ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸುವಲ್ಲಿ ಸಫಲರಾದರು.

    ಅಂಗಡಿಯಲ್ಲಿದ್ದ ಸುಮಾರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಟಿ.ವಿ.ಸಹಿತ ಅನೇಕ ಗೃಹೋಪಯೋಗಿ ಉಪಕರಣಗಳನ್ನು ಸುಟ್ಟು ಹೋಗಿದೆ ಎಂದು ಹೇಳಲಾಗಿದೆ.

    ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    BANTWAL

    ಬಂಟ್ವಾಳ: ಇಬ್ಬರು LPG ಸಿಲಿಂಡರ್ ಕಳ್ಳರ ಬಂಧನ.!

    Published

    on

    ಬಂಟ್ವಾಳ : ಗ್ಯಾಸ್ ಸಿಲಿಂಡರ್ ಕಳವು ಗೈದಿದ್ದ ಇಬ್ಬರು ಖದೀಮ ಕಳ್ಳರನ್ನು ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೋಳಿಯಾರ್ ಧರ್ಮ ನಗರ ನಿವಾಸಿ ರಿಯಾಝ್(38) ಮತ್ತು‌ ಹಳೆಕೋಟೆ ನಿವಾಸಿ ಇಮ್ತಿಯಾಝ್‌ (38) ಬಂಧಿತ ಆರೋಪಿಗಳು.

    ಮಿತ್ತೂರು ಮತ್ತು ಕೊಡಾಜೆ ಎಂಬಲ್ಲಿ ಮನೆಯಿಂದ ಅನಿಲ ಗ್ಯಾಸ್ ಸಿಲಿಂಡರ್ ಮತ್ತು ಇನ್ನಿತರ ವಸ್ತುಗಳನ್ನು ಈ ಇಬ್ಬರು ಆರೋಪಿಗಳು ಕಳವು ಮಾಡಿದ್ದು, ಕಳವು ಪ್ರಕರಣ ದಾಖಲಾಗಿತ್ತು. ಕಳ್ಳರ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾಧ ತಂಡದ ಸಿಬ್ಬಂದಿಗಳು ಮಾಣಿ ಜಂಕ್ಷನ್ ನಲ್ಲಿ ಆಟೋ ರಿಕ್ಷಾ ಸಹಿತ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಟ್ಲ ಠಾಣೆಯ ಮಿತ್ತೂರು ಮತ್ತು ಕೊಡಾಜೆಯ ಎರಡು ಮನೆ ಕಳವು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವು ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 1.35 ಲಕ್ಷ ರೂ. ಮೌಲ್ಯದ ಗ್ಯಾಸ್ ಸಿಲಿಂಡರ್ ಹಾಗೂ ಮನೆ ಸಾಮಗ್ರಿಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಅಟೊ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2.50 ಲಕ್ಷ ರೂ ಎಂದು ಅಂದಾಜಿಸಲಾಗಿದೆ.

    Continue Reading

    BANTWAL

    ಬಂಟ್ವಾಳ : ತ*ಲವಾರು ದಾ*ಳಿ, ಕೊ*ಲೆ ಪ್ರಕರಣ; ಡಿಐಜಿ ಅಮೀತ್ ಸಿಂಗ್ ಪರಿಶೀಲನೆ

    Published

    on

    ಬಂಟ್ವಾಳ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಯುವಕರ ಮೇಲೆ ತ*ಲವಾರು ದಾಳಿ ನಡೆಸಿ ಕೊ*ಲೆಯತ್ನ ಮಾಡಿರುವ ಪ್ರಕರಣ ಫರಂಗಿಪೇಟೆ ಸಮೀಪದ ಅಮ್ಮೆಮಾರ್‌ ಶಾಲಾ ಬಳಿ ನಡೆದಿದ್ದು, ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಮ್ಮೆಮಾರಿನ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಪೊಲೀಸ್‌ ಉಪಮಹಾನಿರೀಕ್ಷಕ(ಡಿಐಜಿ) ಅಮಿತ್‌ ಸಿಂಗ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರು ಜತೆಗಿದ್ದು, ಮುಂದಿನ ತನಿಖೆಯ ಕುರಿತು ಡಿಐಜಿ ಅವರು ಸಲಹೆ-ಸೂಚನೆಗಳನ್ನು ನೀಡಿದರು. ಘಟನೆಗೆ ಸಂಬಂಧಿಸಿ ಸುಮಾರು 14 ಮಂದಿ ಆರೋಪಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಡಿವೈಎಸ್‌ಪಿಯವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನೂ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

    ತಲವಾರಿ ದಾಳಿಗೆ ಸಂಬಂಧಿಸಿ ಸಿಸಿ ಕ್ಯಾಮರಾ ವಿಡಿಯೋ ಕೂಡ ಇಲಾಖೆಗೆ ಲಭ್ಯವಾಗಿದ್ದು, ದುಷ್ಕರ್ಮಿಗಳ ತಂಡ ತಲವಾರು ಹಿಡಿದು ಬೀಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಘಟನೆಯನ್ನು ಪೊಲೀಸ್‌ ಇಲಾಖೆ ಮಟ್ಟ ಹಾಕದೇ ಇದ್ದಲ್ಲಿ ಕಾನೂನು ಸುವಸ್ಥೆಗೆ ಹದಗೆಡುವ ಆತಂಕವೂ ಎದುರಾಗಿದ್ದು, ಹೀಗಾಗಿ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಆ*ರೋಪಿಗಳನ್ನು ಮಟ್ಟ ಹಾಕುವ ವಿಶ್ವಾಸ ವ್ಯಕ್ತಪಡಿಸಿದೆ.

    ಅ. 22ರ ರಾತ್ರಿ 11.50ರ ಸುಮಾರಿಗೆ ಘಟನೆ ನಡೆಸಿದ್ದು, ಪೂರ್ವದ್ವೇಷದ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಹಾಗೂ ಇತರರು ಅಮ್ಮೆಮಾರ್‌ ನಿವಾಸಿಗಳಾದ ತಸ್ಲಿಅಂ ಹಾಗೂ ಮಹಮ್ಮದ್‌ ಶಾಕೀರ್‌ನ ಮೇಲೆ ತಲವಾರು ದಾಳಿ ನಡೆಸಿ ಗಂಭೀರ ಗಾ*ಯಗೊಳಿಸಿದ್ದು, ಗಾ*ಯಾಳುಗಳು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Continue Reading

    BANTWAL

    ದಿ. ಜಯರಾಮ್ ಆಚಾರ್ಯ ನುಡಿ ನಮನ; ಗಣ್ಯರ ಸಂತಾಪ

    Published

    on

    ಮಂಗಳೂರು: ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಜಯರಾಮ್ ಆಚಾರ್ಯ ಅವರಿಗೆ ಶೃದ್ಧಾಂಜಲಿ ಹಾಗೂ ನುಡಿ ನಮನ ಸಲ್ಲಿಸಲಾಗಿದೆ. ಉರ್ವಾ ಸ್ಟೋರ್ಸ್‌ನ ತುಳು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಜಯರಾಮ್ ಆಚಾರ್ಯ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಯಕ್ಷಗಾನದ ಹಾಸ್ಯ ಕಲಾವಿದನಾಗಿ ಯಕ್ಷಗಾನ ಕ್ಷೇತ್ರಕ್ಕೆ ಜಯರಾಮ್‌ ಆಚಾರ್ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ ಜಯರಾಮ್ ಆಚಾರ್ಯ ಎಂದೆಂದಿಗೂ ನೆನಪಿಡುವಂತ ವ್ಯಕ್ತಿತ್ವ. ಅವರು ಯಕ್ಷಗಾನದಲ್ಲಿ ಸಲ್ಲಿಸಿದ ಸೇವೆ ಮುಂದಿನ ಪೀಳಿಗೆಗೂ ಆದರ್ಶವಾಗಿದೆ. ಅವರ ಅಗಲುವಿಕೆ ಕೇವಲ ಯಕ್ಷರಂಗಕ್ಕೆ ಮಾತ್ರವಲ್ಲದೆ ಇಡೀ ಕಲಾರಂಗಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

    ರಂಗಭೂಮಿ ಕಲಾವಿದ ನಟ ಅರವಿಂದ ಬೋಳಾರ್ ಅವರು ಮಾತನಾಡಿ, ಜಯರಾಮ್ ಆಚಾರ್ಯ ಅವರೊಬ್ಬ ಅಪ್ಪಟ ಹಾಸ್ಯ ಕಲಾವಿದ. ಅವರು ಹಾಸ್ಯದಲ್ಲಿ ಎಂದಿಗೂ ಕೆಟ್ಟ ಪದ ಬಳಸಿದ ಉದಾಹರಣೆಯೇ ಇಲ್ಲ. ಅವರು ನಾಟಕದಲ್ಲಿ ಚಿತ್ರರಂಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಅವರೊಂದು ಎಷ್ಟು ದೊಡ್ಡ ಕಲಾವಿದ ಎಂದು ಅವರಿಗೇ ಗೊತ್ತಿರಲಿಲ್ಲ. ಹೀಗಾಗಿ ಅವರು ಎಲ್ಲರೊಂದಿಗೂ ಸಹಜವಾಗಿಯೇ ಬೆರೆಯುತ್ತಿದ್ದು, ಸಲಹೆಗಳನ್ನು ನೀಡುತ್ತಿದ್ದರು. ಅಂತಹ ವ್ಯಕ್ತಿ ಇಂದು ನಮ್ಮೊಂದಿಗಿಲ್ಲವಾದ್ರೂ ಅವರ ಮಾರ್ಗದರ್ಶನ ನಮ್ಮಲ್ಲಿ ಯಾವತ್ತೂ ಇದೆ ಎಂದು ಬಂಟ್ವಾಳ ಜಯರಾಮ್‌ ಆಚಾರ್ಯ ಅವರನ್ನು ನೆನಪಿಸಿಕೊಂಡರು.

    ಯಕ್ಷಗಾನ ಕಲಾವಿದ ಶಿಕ್ಷಕ ಬಾಸ್ಕರ್‌ ರೈ ಕುಕ್ಕುವಳ್ಳಿ ಜಯಾರಾಮ್ ಆಚಾರ್ಯ ಅವರ ಒಡನಾಟದ ದಿನವನ್ನು ಸ್ಮರಿಸಿಕೊಂಡು ಅವರ ಅಗಲುವಿಕೆಗೆ ಸಂತಾಪ ಸೂಚಿಸಿದ್ರು. ಜಯಾರಾಮ್ ಆಚಾರ್ಯ ಅವರ ಭಾಷಾ ಶುದ್ಧಿ ಹಾಗೂ ಅವರ ಹಾಸ್ಯ ಯಕ್ಷಗಾನ ಪ್ರಸಂಗಗಳನ್ನು ವಿಜ್ರಂಭಿಸುವಂತೆ ಮಾಡುತ್ತಿತ್ತು. ಒಬ್ಬ ಹಾಸ್ಯಗಾರನಾಗಿ ತನ್ನ ಎದುರಿಗಿದ್ದ ಪಾತ್ರಧಾರಿಯನ್ನು ಮೇಲೆತ್ತುವ ಕೆಲಸ ಅವರಿಂದ ಆಗುತ್ತಿತ್ತು. ಅಷ್ಟೊಂದು ಪ್ರಭಾವಶಾಲಿಯಾಗಿ ಹಾಸ್ಯಗಾರನ ಪಾತ್ರಕ್ಕೆ ಜಯಾರಾಮ್ ಆಚಾರ್ಯ ಅವರು ಜೀವ ತುಂಬುತ್ತಿದ್ದರು ಎಂದು ಸ್ಮರಿಸಿದ್ರು.

    ದಿವಂಗತ ಜಯರಾಮ್ ಆಚಾರ್ಯ ಅವರ ಅಗಲುವಿಕೆಗೆ ಸಂತಾಪ ಸೂಚಿಸಿದ ಹಲವು ಗಣ್ಯರು, ಯಕ್ಷರಂಗಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. ಅಗಲಿದ ಜಯರಾಮ್ ಆಚಾರ್ಯ ಅವರನ್ನು ಯಕ್ಷರಂಗ ಎಂದಿಗೂ ಮರೆಯಲಾರದು ಎಂದು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಧ್ರುವ ಪಟ್ಲ ಫೌಂಡೇಶನ್‌, ತುಳು ನಾಟಕ ಕಲಾವಿದರ ಒಕ್ಕೂಟದಿಂದ ಈ ಶೃದ್ಧಾಂಜಲಿ ನುಡಿನಮನ ಕಾರ್ಯಕ್ರಮ ನಡೆದಿದ್ದು ಹಲವು ಗಣ್ಯರು ಹಾಗೂ ಸದಸ್ಯರು ತಮ್ಮ ನುಡಿನಮನ ಸಲ್ಲಸಿದ್ದಾರೆ.

    Continue Reading

    LATEST NEWS

    Trending