Home ಕರ್ನಾಟಕ ವಾರ್ತೆ ಚಾಲಕ ನಿಯಂತ್ರಣ ತಪ್ಪಿ ಮಹಿಳೆಗೆ ಕಾರು ಡಿಕ್ಕಿ

ಚಾಲಕ ನಿಯಂತ್ರಣ ತಪ್ಪಿ ಮಹಿಳೆಗೆ ಕಾರು ಡಿಕ್ಕಿ

ಚಾಲಕ ನಿಯಂತ್ರಣ ತಪ್ಪಿ ಮಹಿಳೆಗೆ ಕಾರು ಡಿಕ್ಕಿ

ಬಂಟ್ವಾಳ: ಪಾದಚಾರಿ ಮಹಿಳೆಯೋರ್ವಗಳಿಗೆ ಕಾರು ಡಿಕ್ಕಿಯಾಗಿ, ಮಹಿಳೆ ಗಂಭೀರ ಗಾಯಗೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಭ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಹಿಳೆಗೆ ಡಿಕ್ಕಿ ಹೊಡೆದು ಆಳವಾದ ಗುಂಡಿಗೆ ಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಮಹಿಳೆಯನ್ನು ವೀರಕಂಭ ನಿವಾಸಿ ಪತ್ನಿ ಧರ್ಮಾವತಿ ಗೌಡ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಂಭಿರ ಸ್ವರೂಪದ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಧರ್ಮಾವತಿ ಬಿಸಿರೋಡಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದಾರೆ. ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುವ ವೇಳೆ ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಬಳಿಕ ಚಾಲಕನ ನಿಯಂತ್ರಣ ಕಳೆದು ಕೊಂಡ ಕಾರು ರಸ್ತೆ ಯ ಬದಿಯಲ್ಲಿ ಆಳವಾದ ಗುಡಿಗೆ ಬಿದ್ದಿದೆ. ಘಟನೆಯಲ್ಲಿ ಪಾದಚಾರಿ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಜೊತೆಗೆ ಕಾರು ಕೂಡಾ ನಜ್ಜುಗುಜ್ಜಾಗಿದ್ದು, ಕಾರು ಚಾಲಕ ಯಾವುದೇ ಪ್ರಾಣಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಎಸ್.ಐ.ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisment -

RECENT NEWS

ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ

ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ ಬೆಳ್ತಂಗಡಿ: ಒಂದೆಡೆ ಕೊರೊನಾ ವೈರಸ್ ಭೀತಿಯಾದ್ರೆ, ಇತ್ತ ಮಳೆರಾಯ ಕೂಡ ತನ್ನ ಕೆಲಸ ಶುರು ಹಚ್ಚಿಕೊಂಡು ಬಿಟ್ಟಿದ್ದಾನೆ. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿ ಜನತೆಗೆ ವರುಣ...

ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.?

ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.? ಕೋವಿಡ್ 19 ನ ವ್ಯಾಪಕ ಹರಡುವಿಕೆಯನ್ನು ತಡೆಯಲು ದೇಶ  ಸಂಪೂರ್ಣ ಲಾಕ್ ಡೌನ್ ಆಗಿದೆ. ಇಡೀ ದೇಶದಲ್ಲಿ ಚಟುವಟಿಕೆ ಸ್ಥಬ್ದಗೊಂಡಿದೆ. ಜನ ರಸ್ತೆಗಿಳಿಯದಂತೆ ನಿಷೇಧಾಜ್ಞೆ...

ರಾಜ್ಯದ ಪ್ರಥಮ ಕೊರೊನಾ ಮುಕ್ತ ಜಿಲ್ಲೆ “ಮಂಜಿನನಗರಿ”

ರಾಜ್ಯದ ಪ್ರಥಮ ಕೊರೊನಾ ಮುಕ್ತ ಜಿಲ್ಲೆ “ಮಂಜಿನನಗರಿ” ಮಡಿಕೇರಿ: ರಾಜ್ಯದಾದ್ಯಂತ ಎಲ್ಲೆಲ್ಲೋ ಕೊರೊನಾ ಭೀತಿ ಆವರಿಸಿಕೊಂಡಿದ್ದರು. ಮಂಜಿನನಗರಿ ಕೊಡಗು ಜಿಲ್ಲೆಯ ಮಡಿಕೇರಿ ಜನ ಮಾತ್ರ ರಿಲ್ಯಾಕ್ಸ್ ಆಗಿದ್ದಾರೆ. ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ್ದ ಕೊಡಗು ಜನತೆ...

ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್

ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್ ಕಾಸರಗೋಡು: ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯಗೊಂಡಿದೆ. ತುರ್ತು ವೈದ್ಯಕೀಯ ಅಗತ್ಯ ಇದ್ದರೆ ಮಾತ್ರ ಕೇರಳಕ್ಕೆ...