Home ಪ್ರಮುಖ ಸುದ್ದಿ ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್

ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು

ಮಂಗಳೂರು : ಕರಾವಳಿಯ ಜೀವನಾಡಿಯಾಗಿ ಗುರುತಿಸಿಕೊಂಡಿದ್ದ, ಕರಾವಳಿಯಲ್ಲೇ ಹುಟ್ಟಿಬೆಳೆದು ಇಲ್ಲಿನ ಸಾವಿರಾರು ಮಂದಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ನೀಡಿ ಅವರ ಬದುಕಿನಲ್ಲಿ ಅಭಿವೃದ್ಧಿಗೆ ಮುನ್ನಡಿ ಹಾಕಿದ್ದ ಬ್ಯಾಂಕುಗಳು ಕಣ್ಮರೆಯಾಗುತ್ತಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಾಕಷ್ಟು ಆರ್ಥಿಕ ನೆರವು ನೀಡಿದ್ದ ವಿಜಯಾ ಬ್ಯಾಂಕ್‌ ಬ್ಯಾಂಕ್ 2019ರಲ್ಲಿ ಆಫ್‌ ಬರೋಡಾದೊಂದಿಗೆ ವಿಲಿನೀಕರಣ ಮಾಡಿದಾಗ ಇಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಲಾಭದಲ್ಲಿದ್ದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿದ್ದ ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲಿನೀಕರಣ ಮಾಡಿದಾಗ ಕರಾವಳಿಯಾದ್ಯಂತ ರಾತ್ರಿಹಗಳೆನ್ನದೇ ಭಾರೀ ಪ್ರತಿಭಟನೆ ನಡೆದಿತ್ತು. ಬ್ಯಾಂಕನ್ನು ಉಳಿಸಿಕೊಳ್ಳಬೇಕೆಂದು ಬೀದಿಗಿಳಿದು ಹೋರಾಟ ಮಾಡಿದ್ದರು. ಆದರೆ ಕೇಂದ್ರ ಸರಕಾರ ಈ ಹೋರಾಟಕ್ಕೆ ಕ್ಯಾರೇ ಅನ್ನಲಿಲ್ಲ. ಅಷ್ಟೇ ಏಕೆ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಬ್ಯಾಂಕ್‌ ವಿಲಿನೀಕರಣಕ್ಕೆ ಕೇಂದ್ರ ಮುಂದಾದಾಗ ತುಟಿಕ್‌ ಪಿಟಿಕ್‌ ಎನ್ನದೇ ಕುಳಿತುಕೊಂಡಿದ್ದು ಕೂಡಾ ಬೇಸರವನ್ನು ತರಿಸಿತ್ತು.

ಅಂತೂ ಇಂತು ಒಂದು ಬ್ಯಾಂಕ್‌ ವಿಲಿನೀಕರಣವಾದಾಗ ಉಳಿದ ಬ್ಯಾಂಕ್‌ಗಳಿಗೂ ವಿಲಿನೀಕರಣದ ಭೀತಿ ಸಹಜವಾಗಿಯೇ ಕಾಡಿತ್ತು. ಅದು ಬಳಿಕದ ದಿನಗಳಲ್ಲಿ ನಿಜ ಆಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್‌ ವಿಲೀನವಾಗಲಿದೆ ಎಂದು ಕೇಂದ್ರ ಸರಕಾರ ಮುನ್ಸೂಚನೆಯನ್ನೂ ಕೊಟ್ಟಿತ್ತು. ಅದೀಗ ನಿಜ ಆಗಿದೆ.

ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಮತ್ತೆ ಎರಡು ಕರಾವಳಿ ಬ್ಯಾಂಕ್‌ಗಳು ಕಣ್ಮರೆಯಾದವು. ಪ್ರತಿಷ್ಟಿತ ಬ್ಯಾಂಕ್‌ಗಳಾದ ಕಾರ್ಪೋರೇಶನ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಆಸ್ತಿತ್ವ ಕಳೆದುಕೊಂಡಿದ್ದು,  ಇನ್ನೇನಿದ್ದರೂ ನೆನಪು ಮಾತ್ರ. ಕೇಂದ್ರ ಸರಕಾರ ತೀರ್ಮಾನದಂತೆ ಕಾರ್ಪೋರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ಹಾಗೂ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನೊಂದಿಗೆ ಅಧಿಕೃತವಾಗಿ ವಿಲೀನವಾಗುತ್ತಿದೆ. ಈ ಹಿಂದೆ ವಿಜಯಾ ಬ್ಯಾಂಕ್‌ ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲಿನೀಕರಣಗೊಂಡಿತ್ತು.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಮಧ್ಯೆ  ಸಾರ್ವಜನಿಕ ಬ್ಯಾಂಕ್ ಗಳ ಪೈಕಿ ಕೆನರಾ ಬ್ಯಾಂಕ್ ಮಾತ್ರ ಉಳಿದುಕೊಳ್ಳಲಿದೆ. ಕೆನರಾ ಹಾಗೂ ಸಿಂಡಿಕೇಟ್ ಬ್ಯಾಂಕ್ ಗಳ ವಿಲೀನದಿಂದ ಕೆನರಾ ಬ್ಯಾಂಕ್ ದೇಶದ 4 ನೇ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಣಿಸಿಕೊಳ್ಳಲಿದೆ.

ಕೊರೊನಾ ಆತಂಕದ ನಡುವೆ ಜನ ಮನೆಯಿಂದ ಹೊರ ಬರಲಾಗದೆ ಕುಳಿತುಕೊಂಡಿದ್ದರೆ ಕೇಂದ್ರ ಸರಕಾರ ಇತ್ತ ಬ್ಯಾಂಕ್‌ಗಳ ವಿಲಿನೀಕರಣ ಮಾಡಲು ಏಪ್ರಿಲ್‌ 1ರಿಂದಲೇ ಅನ್ವಯ ಮಾಡಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಯಾಕೆಂದರೆ ತಮ್ಮ ಅಸಮಾಧಾನವನ್ನು ತೋರಿಸಲು ಅವರು ಮನೆಯಿಂದ ಹೊರ ಬಂದು ಪ್ರತಿಭಟನೆಯನ್ನೂ ಮಾಡಲಾಗದ ಅಸಹಾಯ ಸ್ಥಿತಿಯಲ್ಲಿದ್ದಾರೆ. ಆದರೆ ಇದೇ ಅವಧಿಯಲ್ಲಿ ಸರಕಾರದ ಈ ವಿಲಿನೀಕರಣ ನಿರ್ಣಯ ಅವರನ್ನು ಸಹಜವಾಗಿಯೂ ಒಂದೆಡೆ ಗೊಂದಲಕ್ಕೆ ದೂಡಿದ್ರೆ, ಇನ್ನೊಂದೆಡೆ ಆಕ್ರೋಶಕ್ಕೂ ಕಾರಣವಾಗಿದೆ.

 

- Advertisment -

RECENT NEWS

ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್ ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ...

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...