Monday, October 18, 2021

ತುಳುಕೂಟ ಕುವೈಟ್ ನಿಂದ ‘ಬಲೇ ತುಳು ಲಿಪಿ ಕಲ್ಪುಗ’

ಮಂಗಳೂರು: ತುಳುಕೂಟ ಕುವೈಟ್ ನಿನ್ನೆ ‘ಬಲೇ ತುಳು ಲಿಪಿ ಕಲ್ಪುಗ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಕುವೈತಿನ ಕಾಲಮಾನ 10.30 ಕ್ಕೆ ಸರಿಯಾಗಿ ಉದ್ಘಾಟನೆಗೊಂಡಿತು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಫಾದರ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಮತ್ತು ಒಡಿಯೂರು ಶ್ರೀ ಗುರುದೇವ ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು.


ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ತುಳು ಕೂಟ ಕುವೈಟ್ ನ ಅಧ್ಯಕ್ಷರಾದ ಸನತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.
ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್ ಅವರು ದೀಪ ಬೆಳಗಿಸಿ ಮರಳಿನಲ್ಲಿ ಹಾಗು ಬೋರ್ಡಿನಲ್ಲಿ ತುಳು ವರ್ಣಮಾಲೆಯನ್ನು ಬರೆದು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕುವೈಟ್ ತುಳು ಕೂಟದ ಚಟುವಟಿಕೆಗಳನ್ನು ಶ್ಲಾಘಿಸಿದರು. ಪ್ರಾಚೀನ ಭಾಷೆಗಳಲ್ಲಿ ಒಂದಾದ ತುಳು ಭಾಷೆಯ ಮಹತ್ವವನ್ನು ವಿವರಿಸಿದರು ಹಾಗೂ ತುಳುಭಾಷೆಯನ್ನು ನಮ್ಮ ಪ್ರತಿ ಮನೆ ಮನೆಗಳಲ್ಲಿ, ಕಚೇರಿಯಲ್ಲಿ ಅಳವಡಿಸುವುದು ಅವಶ್ಯಕ ಎಂದು ತಿಳಿಸಿದರು.


ಇದರೊಂದಿಗೆ ಅವರು ಈ ಸಮಯದಲ್ಲಿ ತುಳು ಕೂಟ ಕುವೈಟ್, ತುಳುನಾಡಿನ ಶಿಕ್ಷಕರಿಗೆ ಒಂದು ತಿಂಗಳಿನ ವೇತನದ ಹಣಕಾಸಿನ ನೆರವು ನೀಡಿದುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕರಾದ ಡಾಕ್ಟರ್ ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾಷೆಯ ಮಹತ್ವವನ್ನು ವಿವರಿಸಿದರು. ನಮ್ಮ ಸಮುದಾಯದ ಉನ್ನತಿಗೆ ಭಾಷೆಯ ಬೆಳವಣಿಗೆ ಅತ್ಯವಶ್ಯಕ. ಒಂದು ಭಾಷೆಯು ಸಂವಹನದ ಮೂಲ, ಭಾಷೆಯ ಏಳಿಗೆ ಹಾಗು ಉಳಿವು ನಮ್ಮ ಕೈಯಲ್ಲೇ ಇದೆ ಎಂದು ತಿಳಿಸಿದರು. ವಾಟ್ಸಾಪ್ ಗ್ರೂಪ್ ಮೂಲಕ ತುಳು ಲಿಪಿಯನ್ನು ಬೋಧಿಸಲಿರುವ ಅಕ್ಷಯ್ ಪೆಜಾವರ ಅವರು ತರಗತಿಯ ವಿವರಗಳನ್ನು ತಿಳಿಸಿದರು.
ವಿವಿಧ ತುಳು ಸಂಘಟನೆಯ ಮುಖಂಡರು, ಅಬುಧಾಬಿಯ ಸರ್ವೊತ್ತಮ ಶೆಟ್ಟಿ, ಕತಾರ್‌ನ ರವಿಶೆಟ್ಟಿ ಅವರು ಸಮಾರಂಭಕ್ಕೆ ಯಶಸ್ಸನ್ನು ಹಾರೈಸಿದರು.

ತುಳು ಭಾಷೆ ಮತ್ತು ತುಳು ಸಾಹಿತ್ಯ ಅಕಾಡೆಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಾಧ್ಯಮ, ಸಾಹಿತ್ಯ, ಶಿಕ್ಷಣದ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳಾದ, ಉಮರ್ ಯು ಹೆಚ್, ನವನೀತ್ ಶೆಟ್ಟಿ ಕದ್ರಿ, ನಿಟ್ಟೆ ವಿಶ್ವವಿದ್ಯಾಲಯದ ಡಾ. ಸಾಯಿ ಗೀತಾ, ಬೆಂಗಳೂರಿನ ಪುರುಷೋತ್ತಮ ಚೆಂಡ್ಲಾ, ಶಶಿರಾಜ್ ಕಾವೂರ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ತುಳುಕೂಟದ ಮುಖ್ಯ ಸಲಹೆಗಾರರಾದ ಸುಧಾಕರ ಶೆಟ್ಟಿ ಐಕಳ ಹಾಗೂ ಸಲಹೆಗಾರರಾದ ಸತೀಶ್ ಚಂದ್ರ ಶೆಟ್ಟಿ, ತಾರೆಂದ್ರ ಶೆಟ್ಟಿಗಾರ್, ವಿಲ್ಸನ್ ಡಿ ಸೋಜಾ ಮತ್ತು ರಮೇಶ್ ಭಂಡಾರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕುಮಾರಿ ಮುಗ್ದ ಭಂಡಾರಿ, ಶ್ರೀ ಸುರೇಶ್ ಸಾಲಿಯಾನ್, ಕುಮಾರಿ ಲಾರೆನ್ ಮತ್ತು ರೆಚೆಲ್ ತುಳು ಹಾಡನ್ನು ಹಾಡಿದರು. ಕುಮಾರಿ ಸಾನ್ನಿಧ್ಯ ಸನತ್ ಶೆಟ್ಟಿ ಹಾಗು ರಫೀಕ್ ಉದ್ದಿನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಸಾಂಸ್ಕೃತಿಕ ಕಾರ್ಯದರ್ಶಿ ಮನೋಜ್ ಶೆಟ್ಟಿ ನಿರ್ವಹಿಸಿದರು ಹಾಗೂ ಕಾರ್ಯದರ್ಶಿಯಾದ ರೋಷನ್ ಕ್ವಾಡ್ರಸ್ ವಂದನಾರ್ಪಣೆಗೈದರು. ಜಿಸಿಸಿಯ ಪ್ರತಿಯೊಂದು ಬಂಟ ಸಂಘ, ತುಳು ಕೂಟ, ಬಿಲ್ಲವ ಸಂಘದ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಊರ ಹಾಗೂ ಅನಿವಾಸಿ ತುಳುವರಿಗೆ ತುಳು ಕೂಟದ ಅಧ್ಯಕ್ಷ ಸನತ್‌ ಶೆಟ್ಟಿ ಅವರು ವಂದಿಸಿದರು.
ಈ ಕಾರ್ಯಕ್ರಮವು ಫೇಸ್ ಬುಕ್ ಲೈವ್ ಮೂಲಕ ಪ್ರಸಾರಗೊಂಡು 2200 ವೀಕ್ಷಕರು ವೀಕ್ಷಿಸಿದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...