ಮಂಗಳೂರು: ಶುಕ್ರವಾರ ನಮಾಜ್ ಹೆಸರಿನಲ್ಲಿ ರಸ್ತೆ ಬಂದ್ ಮಾಡುವುದು ಮಾಡಿದರೆ ನಾವೂ ಸಹ ಶನಿವಾರ ಹನುಮಾನ್ ಚಾಲೀಸ್ ಪಠಣ ಮಾಡುತ್ತೇವೆ ಎಂದು ಬಜರಂಗದಳ ಸಹ ಸಂಚಾಲಕ ಪುನೀತ್ ಅತ್ತಾವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ವಿಎಚ್‌ಪಿ ಹಾಗೂ ಬಜರಂಗದಳದಿಂದ ನಡೆದ ಮೈಸೂರು ದೇವಾಸ್ಥಾನ ಧ್ವಂಸ ಪ್ರತಿಭಟನೆಯಲ್ಲಿ ಮಾತನಾಡಿ, ಇಂದಿನ ದಿನ ಮುಸಲ್ಮಾನರಿಗೊಂದು ಕಾನೂನು, ಹಿಂದುಗಳಿಗೊಂದು ಕಾನೂನು ಎಂಬಂತಾಗಿದೆ.
ಶುಕ್ರವಾರ ನಮಾಝ್ ನ ಹೆಸರಿನಲ್ಲಿ ಇಡೀ ರಸ್ತೆ ಬಂದ್ ಮಾಡಿ ಸಂಚಾರ ಅಸ್ತವ್ಯಸ್ತ ಮಾಡಬಹುದು. ಮುಂದಿನ ಶುಕ್ರವಾರದಿಂದ ನಮಾಝ್ ಹೆಸರಿನಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾದರೆ
ಮುಂದಿನ ಶನಿವಾರದಿಂದ ನಗರದ ಎಲ್ಲಾ ಹನುಮಂತನ ದೇವಸ್ಥಾನದಲ್ಲಿ ನಾವೆಲ್ಲರೂ ಸೇರಿ ಹನುಮಾನ್ ಚಾಲೀಸ್ ಪಠಣ ಮಾಡುತ್ತೇವೆ ಎಂದರು.
ಆದ್ದರಿಂದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ನೀಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.