ಕಾಸರಗೋಡು: ಮಂಜೇಶ್ವರ ವಿಧಾನಸಭೆ ಚುನಾವಣೆ ಲಂಚ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಕ್ರೈಂ ಬ್ರಾಂಚ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಕೆ. ಸುರೇಂದ್ರನ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಇಲಾಖೆ ಆರೋಪ ಹೆಚ್ಚುವರಿಯಾಗಿ ಹೊರಿಸಲಾಗಿದೆ.
ಇದು ಜಾಮೀನು ರಹಿತ ಸೆಕ್ಷನ್ ಪ್ರಕರಣವಾಗಿದ್ದು, ಕೆ ಸುರೇಂದ್ರನ್ ಸೇರಿದಂತೆ ಆರು ಮಂದಿ ಆರೋಪಿಗಳನ್ನಾಗಿಸಲಾಗಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಕೆ. ಸುಂದರ ಅವರ ಉಮೇದುವಾರಿಕೆಯನ್ನು ಹಿಂಪಡೆಯಲು 2.5 ಲಕ್ಷ ರೂ. ಹಾಗೂ ಸ್ಮಾರ್ಟ್‌ಫೋನ್ ನೀಡಿರುವ ಬಗ್ಗೆ ಪ್ರಕರಣದಲ್ಲಿ ಆರೋಪಿಸಲಾಗಿದೆ.
ಹೊಸ ಸೆಕ್ಷನ್ ಜಾರಿಯಿಂದ ಪ್ರಕರಣದ ಮಹತ್ವ ಹೆಚ್ಚಲಿದೆ. ಪ್ರಕರಣ ದಾಖಲಾದ ಒಂದು ವರ್ಷದ ಬಳಿಕ ಕ್ರೈಂ ಬ್ರಾಂಚ್ ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.