Monday, January 24, 2022

‘ಮೀಟೂ ಕೇಸ್‌’: ನಟ ಅರ್ಜುನ್ ಸರ್ಜಾಗೆ ಕ್ಲೀನ್‌ ಚೀಟ್‌-ನಟಿ ಶೃತಿಗೆ ಹಿನ್ನಡೆ

ಬೆಂಗಳೂರು: ನಟಿ ಶ್ರುತಿ ಹರಿಹರನ್ ಹೊರಿಸಿದ್ದ ಲೈಂಗಿಕ ಕಿರುಕುಳ ಆರೋಪದಿಂದ ಬಹುಭಾಷಾ ನಟ ಅರ್ಜುನ್ ಸರ್ಜಾ ಮೂರು ವರ್ಷದ ಬಳಿಕ ಮುಕ್ತರಾಗಿದ್ದಾರೆ.

ಸರ್ಜಾ ಅವರಿಗೆ ಕ್ಲೀನ್ ಚೀಟಿ ನೀಡಿ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಕಬ್ಬನ್ ಪಾರ್ಕ್ ಪೊಲೀಸರು ಸೋಮವಾರ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ.


ಬಿ ರಿಪೋರ್ಟ್ ಸಲ್ಲಿಕೆಗೂ ಮುನ್ನ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ಖ್ಯಾತ ನಟಿ ಶ್ರುತಿ ಹರಿಹರನ್ ಅವರಿಗೆ ಶನಿವಾರ ನೋಟಿಸ್‌ ಮೂಲಕ ಪೊಲೀಸರು ಮಾಹಿತಿ ನೀಡಿದ್ದರು.

ಈ ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸರ್ಜಾ ಅವರನ್ನು ದೋಷಮುಕ್ತಗೊಳಿಸಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇಘನಾ ರಾಜ್‌-ಧ್ರುವ ಸರ್ಜಾ ಪ್ರತಿಕ್ರಿಯೆ
ಅರ್ಜುನ್​ ಸರ್ಜಾ ಯಾವಾಗಲೂ ಜಂಟಲ್​ಮ್ಯಾನ್​’ ಎಂದು ಮೇಘನಾ ರಾಜ್​ ಅವರು ಇನ್​ಸ್ಟಾಗ್ರಾಮ್​ ಸ್ಟೋರಿ ಪೋಸ್ಟ್​ ಮಾಡಿದ್ದಾರೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲ, ಅವರು ವ್ಯಂಗ್ಯವಾಗಿ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಸೊಳ್ಳೆ ಬ್ಯಾಟ್​ನಿಂದ ಕೀಟಗಳನ್ನು ಸಾಯಿಸುತ್ತಿರುವ ದೃಶ್ಯ ಅದರಲ್ಲಿದ್ದು, ‘ಸೊಳ್ಳೆ ಕ್ರಿಮಿ ಕೀಟ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಈ ಹಿಂದೆ ಅರ್ಜುನ್​ ಸರ್ಜಾ ಮೇಲಿನ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುವಾಗ ಧ್ರುವ ಸರ್ಜಾ ಅವರು ‘ನಾಯಿ ನರಿ ಸೊಳ್ಳೆ ಕ್ರಿಮಿ ಕೀಟ’ ಎಂಬ ಪದಗಳನ್ನು ಬಳಸಿದ್ದು ಚರ್ಚೆ ಆಗಿತ್ತು. ಈಗ ಮತ್ತೆ ಅದೇ ಪದಗಳನ್ನು ಅವರು ತಮ್ಮ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ
ಅರುಣ್​ ವೈದ್ಯನಾಥನ್​ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್​ ಮತ್ತು ಅರ್ಜುನ್​ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು.

ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್​ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್​ವುಡ್​ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ದರೆ,

ಅನೇಕರು ಅರ್ಜುನ್​ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು.
2018ರಲ್ಲಿ ಈ ವಿವಾದ ಬಗೆಹರಿಸಲು ‘ರೆಬೆಲ್​ ಸ್ಟಾರ್​’ ಅಂಬರೀಷ್​ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.

ಆದರೆ ಶ್ರುತಿ ಹರಿಹರನ್​ ಅವರು ಸಭೆಯ ಅರ್ಧದಲ್ಲೇ ಹೊರ ನಡೆದಿದ್ದರು. ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಅವರು ಹೇಳಿದ್ದರು.

ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಅರ್ಜುನ್​ ಸರ್ಜಾ ವಿರುದ್ಧ ದೂರು ನೀಡಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ (354, 509), ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ ಕೇಸ್ ದಾಖಲಾಗಿತ್ತು.

Hot Topics

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...