ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನಗಳ ಆರಂಭಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆ.18ರಂದು ಮೊದಲ ವಿಮಾನವು ಮಂಗಳೂರಿನಿಂದ ಹೊರಟು ತಿರುವನಂತಪುರ ಮೂಲಕ ದುಬೈಗೆ ತೆರಳಲಿದೆ. ಆ.19ರಂದು ಮಂಗಳೂರಿನಿಂದ ಅಬುಧಾಬಿ, ಆ.20ರಂದು ಮಂಗಳೂರಿನಿಂದ ನೇರವಾಗಿ ದುಬೈಗೆ ವಿಮಾನಯಾನ ಸೇವೆ ನೀಡಲಿದೆ.
ರ್ಯಾಪಿಡ್ ಆರ್‌ಟಿ ಪಿಸಿಆರ್ ಸೌಲಭ್ಯವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಪೊಲೊ ಡಯಾಗ್ನೋಸ್ಟಿಕ್ಸ್‌ನ ಸಹಯೋಗದೊಂದಿಗೆ ಆರಂಭಿಸಿದ್ದು, ಇತ್ತೀಚಿನ ಯುಎಇ ಸರ್ಕಾರದ ಆರೋಗ್ಯ ಅಗತ್ಯತೆಗಳ ಪ್ರಕಾರ, ಪ್ರತಿ ಪ್ರಯಾಣಿಕರೂ ವಿಮಾನ ಹತ್ತುವುದಕ್ಕೆ ಆರು ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ಆರ್‌ಟಿ ಪಿಸಿಟಿ ವರದಿಯನ್ನು ಪಡೆಯಬೇಕು. ಎಲ್ಲಾ ಪ್ರಯಾಣಿಕರನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಿಸಲು ಪ್ರಯಾಣಿಕರಿಗೆ ವಿಮಾನಕ್ಕೆ ಆರು ಗಂಟೆಗಳ ಮೊದಲು ಪ್ರಯಾಣಿಸಲು ಸೂಚಿಸಲಾಗಿದೆ.