Connect with us

LATEST NEWS

“ಎಲ್ಲರ ಮನೆಯಲ್ಲಿ ಪ್ರತಿದಿನ 5 ಶ್ಲೋಕಗಳನ್ನಾದರೂ ಪಠಣ ಮಾಡಿ”

Published

on

ಉಡುಪಿ: ಜೀವನದಲ್ಲಿ ಸಾಧನೆಯ ಹಾದಿಗೆ ಸ್ಪೂರ್ತಿಯಾಗಿರುವ ಭಗವದ್ಗೀತೆಯನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಗೊಳಿಸುವ ಅಗತ್ಯವಿದೆ. ಕನಿಷ್ಠ ದಿನಕ್ಕೆ 5 ಶ್ಲೋಕಗಳನ್ನಾದರೂ ಮನೆಯಲ್ಲಿ ಎಲ್ಲರೂ ಪಠಣ ಮಾಡಬೇಕು ಎಂದು ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.


ಉಡುಪಿಯ ಶ್ರೀ ಕೃಷ್ಣ ಸೇವಾ ಬಳಗ, ಶ್ರೀ ಅದಮಾರು ಮಠದ ಇವುಗಳ ಸಂಯುಕ್ತಾಶ್ರಯದಲ್ಲಿ ನಿನ್ನೆ ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀ ಪಾದಂಗಳವರ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವ ಸವಿನೆನಪಿಗಾಗಿ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀ ಪಾದಂಗಳವರ ನೇತೃತ್ವದಲ್ಲಿ “ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ರಾಷ್ಟ್ರಧ್ವಜದ ಮೇಲೆ ಕೇಸರಿ ಇದೆ. ಅದು ತ್ಯಾಗದ ಸಂಕೇತ. ಆದರೆ ಜನತೆ ತ್ಯಾಗಕ್ಕೆ ಸಿದ್ಧರಿಲ್ಲ. ಭೋಗಕ್ಕೆ ಸಿದ್ಧರಿದ್ದಾರೆ.

ದೇಶದ ಮೇಲೆ ನಿಷ್ಠೆ ಇಲ್ಲದವರನ್ನು ಸರಿ ಮಾಡುವುದು ಕಷ್ಟ ಎಂದರು. ವಿಶ್ವಪ್ರಿಯ ಶ್ರೀಗಳು ನಡೆದು ಬಂದ ಹಾದಿ, ಅವರ ಸನ್ಯಾಸದೀಕ್ಷೆ, ಅವರ ಕಾರ್ಯಯೋಜನೆಗಳ ಬಗ್ಗೆ ಶ್ರೀನಿವಾಸ ಪೆಜತ್ತಾಯ, ಶ್ರೀ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಅವರು ಮಾತನಾಡಿದರು.

ಶ್ರೀಗಳಿಗೆ ರಾಘವೇಂದ್ರ ರಾವ್‌ ಅವರು ಫಲಪುಷ್ಪ ನೀಡಿ ಗೌರವಿಸಿದರು. ಪಾಂಡಿಚೇರಿ ಋಷಿ ಧರ್ಮ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷ ಪ್ರವಚನ ಭಾಸ್ಕರ, ಡಿ ಎ ಜೋಸೆಫ್‌ ಅವರು ಮಾತನಾಡಿ,

ತ್ರಿಗುಣ ಸಂಸ್ಕಾರದ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ವ್ಯಕ್ತಿಗೆ ಆತ ಮಾಡಿದ ತಪ್ಪಿನ ಅರಿವಾದಾಗ ಆತ ಸಹಜವಾಗಿಯೇ ಅಪರಾಧಗಳನ್ನು ಮಾಡುವುದನ್ನು ನಿಲ್ಲಿಸುತ್ತಾನೆ ಎಂದರು.

ದೇವರು ನೀಡುವ ಶಿಕ್ಷೆಗಿಂತ ದೊಡ್ಡ ಶಿಕ್ಷೆ ಯಾವುದೂ ಇಲ್ಲ ಎಂದರು. ಅತಿಥಿ ಕರ್ನೂಲಿನ ಖ್ಯಾತ ವಿದ್ವಾಂಸ ಶ್ರೀನಿವಾಸ ಆಚಾರ್ಯ ಉಪಸ್ಥಿತರಿದ್ದು ಗುರುಗಳ ಅಭಿವಂದನೆ ಮಾಡಿದರು.

ಈ ಸಂದರ್ಭದಲ್ಲಿ ಕೃಷ್ಣ ಪ್ರಿಯ ವಿಶ್ವಪ್ರಿಯ ಪುಸ್ತಕ ಅನಾವರಣ, 2020-22ರ ಶ್ರೀ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ ವಿಶ್ವಪ್ರಿಯ ಈಶಪ್ರಿಯ ಅನಾವರಣ, ಯಕ್ಷಗಾನದ ತೃತೀಯ ವರ್ಷದ ಶ್ರಿ ನರಹರಿ ತೀರ್ಥ ಪ್ರಶಸ್ತಿ ಪ್ರದಾನ, ಪೆರುವೋಡಿ ನಾರಾಯಣ ಭಟ್ಟ ಪುತ್ತೂರು ಇವರಿಗೆ ಪ್ರದಾನ ಮಾಡಲಾಯಿತು.

ಶಾಸಕ ರಘುಪತಿ ಭಟ್‌, ಮಹಾಲಕ್ಷ್ಮೀ ಬ್ಯಾಂಕ್‌ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಹರಿಕೃಷ್ಣ ಪುನರೂರು, ಎಂಬಿ ಪುರಾಣಿಕ್‌ ಮೊದಲಾದವರಿದ್ದರು.

Click to comment

Leave a Reply

Your email address will not be published. Required fields are marked *

LATEST NEWS

ವಧು ಕೇಳಿದ ಆ ಒಂದು ಪ್ರಶ್ನೆ; ತಬ್ಬಿಬ್ಬಾದ ವರ..ಮದುವೆ ಕ್ಯಾನ್ಸಲ್!

Published

on

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದರ ಸಂಭ್ರಮ ಹೇಳತೀರದು. ಅದ್ದೂರಿತನವೇ ಮೇಲುಗೈ ಸಾಧಿಸುತ್ತೆ. ಈ ನಡುವೆ ಮದುವೆ ಮುರಿದು ಬೀಳುವ ಘಟನೆಯೂ ಹೆಚ್ಚುತ್ತಲಿದೆ. ಕ್ಷುಲ್ಲಕ ಕಾರಣ ಇರಬಹುದು ಅಥವಾ ಇನ್ಯಾವುದೇ ಕಾರಣ ಇರಬಹುದು ಮದುವೆ ಮುರಿದು ಬೀಳುತ್ತಿದೆ.


ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಗಾದೆ ಮಾತಿದೆ. ಅಂತೆಯೇ ಇಲ್ಲಿ ವರ ಸುಳ್ಳು ಹೇಳಿದ್ದಾನೆ. ಹಾಗಂತ ಮದುವೆ ಆಗಿಲ್ಲ. ಬದಲಿಗೆ ಸಿಕ್ಕಿ ಬಿದ್ದಿದ್ದಾನೆ. ವಧು ಕೇಳಿದ ಆ ಒಂದು ಪ್ರಶ್ನೆಯಿಂದ ಮದುವೆ ಮುರಿದು ಬಿದ್ದಿದೆ.

ಸುಳ್ಳು ಹೇಳಿ ತಗ್ಲಾಕ್ಕೊಂಡ!

ಸುಳ್ಳು ಹೇಳಿ ಮದುವೆಯಾಗಲು ಹೊರಟಿದ್ದ ವರನ ಅಸಲಿ ವಿಚಾರ ಗೊತ್ತಾಗಿದೆ. ಹೀಗಾಗಿ ಯುವತಿ ಮದುವೆ ನಿರಾಕರಿಸಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಪನ್ವಾರಿನಲ್ಲಿ. ಓದು, ಬರಹ ಏನೊಂದು ಬರದ ಅನಕ್ಷರಸ್ಥನೊಬ್ಬ ತಾನು ದೊಡ್ಡ ಸರ್ಕಾರಿ ಅಧಿಕಾರಿ ಎಂದು ಮದುವೆಯಾಗಲು ಹೊರಟಿದ್ದ.

ಆದರೆ, ಈ ಸತ್ಯ ಮದುವೆ ಮನೆಯಲ್ಲೇ ಬಯಲಾಗಿದೆ. ಸಂಶಯಗೊಂಡ ವಧು ವರನ ಬಳಿ, ಎರಡರ ಮಗ್ಗಿ ಹೇಳಲು ತಿಳಿಸಿದ್ದಾಳೆ. ಆಗ ಆತ ತಡವರಿಸಿದ್ದಾರೆ. ಹಾಗಾಗಿ, ಯುವತಿಗೆ ಸತ್ಯಾಂಶ ಗೊತ್ತಾಗಿದೆ. ಎರಡರ ಮಗ್ಗಿ ಬೇಸಿಕ್ ಗಣಿತವೂ ಗೊತ್ತಿಲ್ಲ, ನೀನು ಅಧಿಕಾರಿಯಾಗಲು ಹೇಗೆ ಸಾಧ್ಯ? ಎಂದು ಮದುವೆ ಮುರಿದುಕೊಂಡಿದ್ದಾಳೆ.

ಇದನ್ನೂ ಓದಿ : ಮತ್ತೆ ಬಾಯ್‌ ಫ್ರೆಂಡ್ ಬದಲಾಯಿಸಿದ ಶೃತಿ ಹಾಸನ್..!

ಇಷ್ಟಾದರೂ ಬಿಡದ ಕುಟುಂಬದವರು ವಧುವಿನ ಮನವೊಲಿಸುವ ಯತ್ನ ಮಾಡಿದ್ದಾರೆ. ಆದರೆ, ವಧು ಮಾತ್ರ ಇದಕ್ಕೆ ಒಪ್ಪಿಲ್ಲ. ಹೀಗಾಗಿ ವರದಕ್ಷಿಣೆಯನ್ನು ಹಿಂದಿರುಗಿಸಿದ್ದಾರೆ. ಪರಸ್ಪರ ನೀಡಿದ ಉಡುಗೊರೆ, ಆಭರಣಗಳನ್ನು ಹಿಂದಿರುಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

Continue Reading

LATEST NEWS

ಮತಗಟ್ಟೆಯನ್ನೇ ಧ್ವಂಸ ಮಾಡಿದ ಗ್ರಾಮಸ್ಥರು!

Published

on

ಚಾಮರಾಜನಗರ : ಲೋಕಸಭಾ ಚುನಾವಣೆಗೆ ನಡೆಯುತ್ತಿರುವ ಮತದಾನ ರಾಜ್ಯದೆಲ್ಲಡೆ ಸುಸೂತ್ರವಾಗಿಯೇ ನಡೆದಿದೆ. ಆದರೆ ಚಾಮರಾಜನಗರದಲ್ಲಿ ಮಾತ್ರ ಜನರು ಮತಗಟ್ಟೆಯನ್ನೇ ಪುಡಿ ಮಾಡಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಚಾಮರಾಜನಗರದ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಈ ವೇಳೆ ಇಂಡಿಗನತ್ತ ಎಂಬ ಗ್ರಾಮದಲ್ಲಿ ಮತಗಟ್ಟೆಯನ್ನು ಗ್ರಾಮಸ್ಥರು ಧ್ವಂಸ ಮಾಡಿದ್ದಾರೆ.


ಚುನಾವಣೆ ಬಹಿಷ್ಕಾರಿಸಿದ್ದ 5 ಗ್ರಾಮ :

ಮೂಲ ಸೌಕರ್ಯದಿಂದ ವಂಚಿತರಾಗಿದ್ದ ಈ ಗ್ರಾಮದ ಜನರು ತಮ್ಮ ಹಕ್ಕಿಗಾಗಿ ಹಲವು ಹೋರಾಟ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಹೋಗುವ ಜನ ಪ್ರತಿನಿಧಿಗಳು ಬಳಿಕ ಇತ್ತ ಸುಳಿಯುತ್ತಿರಲಿಲ್ಲ. ಹೀಗಾಗಿ ಐದು ಗ್ರಾಮಗಳ ಜನರು ಈ ಬಾರಿ ಮತ ಕೇಳಲು ಬರಬೇಡಿ, ನಾವು ಮತದಾನ ಮಾಡೋದಿಲ್ಲ ಎಂದಿದ್ದರು.

ಚುನಾವಣೆ ಬಹಿಷ್ಕಾರ ಮಾಡಿದ್ದರೂ ಕಾನೂನು ರೀತಿಯಲ್ಲಿ ಗ್ರಾಮದಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು. ಇಂಡಿಗನತ್ತ, ತೇಕಣೆ, ಮೆಂದಾರೆ ಈ ಗ್ರಾಮದಲ್ಲಿ ಯಾವೊಬ್ಬ ಗ್ರಾಮಸ್ಥರೂ ಮತದಾನ ಮಾಡಿಲ್ಲ. ಇನ್ನು ಪಡಸಲನತ್ತ ಗ್ರಾಮದಲ್ಲಿ 85 ಮತದಾರು ಇದ್ದು ಇಬ್ಬರು ಮತದಾನ ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ತೆರೆಯುವುದಕ್ಕೆ ಗ್ರಾಮಸ್ಥರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಚುನಾವಣಾ ಆಯೋಗ ಇಲ್ಲಿ ಮತಗಟ್ಟೆ ತೆರೆದು ‘ಮತದಾನ ಮಾಡಲು ಬನ್ನಿ’ ಎಂದು ಜನರನ್ನು ಕರೆದಿದ್ದರು. ಆದ್ರೆ ರೊಚ್ಚಿಗೆದ್ದ ಜನರು ಮತದಾನ ಕೇಂದ್ರದ ಒಳಗೆ ನುಗ್ಗಿ ಇವಿಎಂ ಮೆಷಿನ್ ಸಹಿತ ಮೇಜು ಕುರ್ಚಿ ಎಲ್ಲವನ್ನೂ ಧ್ವಂಸ ಮಾಡಿದ್ದಾರೆ.

ಕನಿಷ್ಠ ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಯಾವುದೂ ಇಲ್ಲದ ನಮ್ಮ ಗ್ರಾಮದ ಮತ ಯಾಕೆ ಬೇಕು? ಎಂದು ಜನ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

ಪೊಲೀಸ್ ಲಾಠಿ ಚಾರ್ಜ್…ಕೆರಳಿದ ಗ್ರಾಮಸ್ಥರು!

ಜನರು ಮತಗಟ್ಟೆ ಧ್ವಂಸಕ್ಕೆ ಮುಂದಾಗುತ್ತಿದ್ದಂತೆ ಭದ್ರತೆಯಲ್ಲಿದ್ದ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಹಲ್ಲೆ ಮಾಡಿದ ಜನರು ಬಳಿಕ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಗಾಯಗಳಾಗಿದೆ.

ಪೊಲೀಸರು ಮಹಿಳೆಯರು ಪುರುಷರು ಎಂದು ನೋಡದೆ ಎಲ್ಲರ ಮೇಲೂ ಲಾಠಿ ಚಾರ್ಚ್ ಮಾಡಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಸದ್ಯಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಮತದಾನ ಕೇಂದ್ರವನ್ನು ಬಂದ್ ಮಾಡಲಾಗಿದೆ.

Continue Reading

LATEST NEWS

ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

Published

on

ಮಂಗಳೂರು (ಕೇರಳ) : ಸುಡು ಬಿಸಿಲಿನ ಬೇಗೆಯ ನಡುವೆ ಜನರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆಯ ವೇಳೆ ಕರ್ತವ್ಯದಲ್ಲಿದ್ದ ಸಹಾಯಕ ರಿಟರ್ನಿಂಗ್ ಆಫೀಸರ್ ಒಬ್ಬರು ಹೃದಯಾಘಾ*ತದಿಂದ ಅಸುನೀಗಿದ್ದಾರೆ. ಆದರೆ, ಕೇರಳದಲ್ಲಿ ಚುನಾವಣೆಯಲ್ಲಿ ಮತದಾನ ಮಾಡಿದ ಆರು ಜನ ಮೃ*ತ ಪಟ್ಟಿದ್ದಾರೆ. ಬಿಸಿಲಿನ ತಾಪಕ್ಕೆ ಆರು ಜನ ಸಾ*ವನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ :

ಪಾಲಕ್ಕಾಡಿನ ಒಟ್ಟಪಾಲಂ ಚುನಂಗಾಡ್ ಎಂಬಲ್ಲಿ ಮತದಾನ ಮಾಡಿ ಮನೆಗೆ ವಾಪಾಸಾಗಿದ್ದ ವಾಣಿವಿಲಾಸಿನಿ ಮಾಡೆಲ್ ಕಟ್ಟಿಲ್ ಚಂದ್ರು ಎಂಬವರು ಅಸು ನೀಗಿದ್ದಾರೆ. ಇನ್ನು ತೆಂಕುರಿಸ್ಸಿ ವಡಕ್ಕೆತ್ತಾರ ಜೆಎಲ್‌ಪಿ ಶಾಲೆಯಲ್ಲಿ ಮತ ಚಲಾಯಿಸಿದ ವಾಪಾಸಾದ ಮಡಕ್ಕೆತ್ತರ ಮೂಲದ 35 ವರ್ಷದ ಶಬರಿ ಎಂಬವರು ಕೂಡಾ ಇದೇ ರೀತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನು ಪಾಲಕ್ಕಾಡ್ ವಲಯೋಡಿಯಲ್ಲಿ ಮತದಾನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಪುದುಶೇರಿಯ ಕಂದನ್ ಎಂಬವರಿಗೂ ಹೃದಯಾಘಾ*ತವಾಗಿದೆ.


ಇನ್ನು ನಿರಾಮರತ್ತೂರು ಮೂಲದ ಅಲುಕನಕತ್ ಸಿದ್ದಿಕ್ ಮೌಲ್ವಿ ಎಂಬವರು ಮಲಪ್ಪುರಂನ ತಿರೂರಿನಲ್ಲಿ ಮತದಾನ ಮಾಡಿ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಅವರಿಗೂ ಹೃದಯಾಘಾ*ತವಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಕೋಝಿಕ್ಕೋಡ್‌ನ ಕಚ್ಚರಾ ಶಾಲೆಯಲ್ಲಿ ಸಿಪಿಎಂ ಬೂತ್ ಏಜೆಂಟ್ ಆಗಿದ್ದ ನಿವೃತ್ತ ಕೆಸ್‌ಇಬಿ ಇಂಜಿನಿಯರ್ ಅನೀಸ್ ಅಹಮ್ಮದ್ ಎಂಬವರು ಅಲಪ್ಪುಳ ಕಾಕಜಾಮನ್‌ನಲ್ಲಿ ಮತ ಚಲಾಯಿಸಿದ್ದರು. ಅವರಿಗೂ ಹೃದಯಾಘಾ*ತ ಉಂಟಾಗಿ ಸಾ*ವನ್ನಪ್ಪಿದ್ದಾರೆ. ಇನ್ನು, ಸೋಮರಾಜನ್ ಎಂಬ 82 ವರ್ಷದ ಪ್ರಾಯದ ವಯೋ ವೃದ್ಧರೊಬ್ಬರು ಕುಡಾ ಮತ ಚಲಾಯಿಸಿದ ಬಳಿಕ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ : ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

ಆರು ಜನರ ಈ ಹೃದಯಾಘಾ*ತಕ್ಕೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದ್ರೆ ಬಿಸಿಲಿನ ತಾಪಕ್ಕೆ ಇವರು ಮೃ*ತ ಪಟ್ಟಿದ್ದಾರೆ ಎಂದು ಅನುಮಾನಿಸಲಾಗಿದೆ. ಒಟ್ಟಾರೆ ಬಿಸಿಲಿನ ನಡುವೆಯೂ ಬಂದು ತಮ್ಮ ಹಕ್ಕು ಚಲಾಯಿಸಿದ ಇವರು ಇಹಲೋಕ ತಜ್ಯಸಿರುವುದು ನಿಜಕ್ಕೂ ವಿಷಾದನೀಯ.

Continue Reading

LATEST NEWS

Trending