Wednesday, December 1, 2021

ಬೈಂದೂರು: ತಲವಾರು ಬೀಸಿ, ರಾಡ್‌ನಿಂದ ಹಲ್ಲೆ-ಇಬ್ಬರು ಆಸ್ಪತ್ರೆಗೆ ದಾಖಲು

ಬೈಂದೂರು: ಬಾರ್‌ನಲ್ಲಿ ನಡೆದ ಗಲಾಟೆ ಪ್ರಕರಣದ ಮಹಜರಿಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ತಲವಾರು ಬೀಸಿ, ರಾಡ್‌ನಿಂದ ಇಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣ ಶಿರೂರು ನಿರ್ಗದ್ದೆಯ ಬಳಿ ನಡೆದಿದೆ.


ಘಟನೆ ಹಿನ್ನೆಲೆ
ಬೈಂದೂರು ತಾಲೂಕು ಶಿರೂರು ಗ್ರಾಮದ ನೀರ್ಗದ್ದೆಯಲ್ಲಿ ಸಿಲ್ವರ್ ಅರ್ಚ್ ಫ್ಯಾಮಿಲಿ ಬಾರ್ & ರೆಸ್ಟೊರೆಂಟ್‌ ಅನ್ನು ಅಣ್ಣಪ್ಪ ಶೆಟ್ಟಿ ನಡೆಸಿಕೊಂಡಿದ್ದರು. ಅ.20ರಂದು ರಾತ್ರಿ 09:00 ಗಂಟೆಗೆ ಬಾರ್ ನಲ್ಲಿ ಮ್ಯಾನೇಜರ್ ಆಗಿರುವ ಅಶ್ವೀಜ್ ಶೆಟ್ಟಿ ಅವರಿಗೆ ಕಿರಣ ಪೂಜಾರಿ ಹಾಗೂ ಅಶೋಕ್ ಹಣ ಕೊಡುವಂತೆ ಹೆದರಿಸಿ ಬಾಟಲಿಯಿಂದ ಹೊಡೆದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರು ತಯಾರಿಸಲು ಬಾರ್ & ರೆಸ್ಟೊರೆಂಟ್ ಬಳಿ ಬರುವಂತೆ ಪೊಲೀಸರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಾರ್‌ ಮಾಲಕ ಅಣ್ಣಪ್ಪ ಶೆಟ್ಟಿ ಹಾಗೂ ಸ್ನೇಹಿತರಾದ ರವಿ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯ ಕಾರಿನಲ್ಲಿ ತೆರಳಿದ್ದರು. ಶಿರೂರು ನಿರ್ಗದ್ದೆಯ ನಿಖಿಲ್‌ ಹೊಟೇಲ್‌ ಸಮೀಪ ತಲುಪಿದಾಗ ಅಣ್ಣಪ್ಪ ಅವರ ಜೊತೆಗಿದ್ದ ಸ್ನೇಹಿತರು ಅವರ ಪರಿಚಯಸ್ಥರನ್ನು ಮಾತನಾಡಲು ಕಾರು ನಿಲ್ಲಿಸಿ ಇಳಿದಿದ್ದರು.
ಈ ವೇಳೆ ಬಾರ್‌ನಲ್ಲಿ ಗಲಾಟೆ ನಡೆಸಿದ ಆರೋಪಿಗಳಾದ ಕಿರಣ ಪೂಜಾರಿ ಹಾಗೂ ಅಶೋಕ್ ಅವರು ನೀನು ಅಣ್ಣಪ್ಪ ಶೆಟ್ಟಿಯ ಪರವಾಗಿ ಸಾಕ್ಷಿ ಹೇಳಲು ಬಂದಿದ್ದಿಯಾ?. ಅವರ ಪರವಾಗಿ ಬಂದರೆ ನಿಮ್ಮನ್ನೂ ಕೊಲೆ ಮಾಡುವುದಾಗಿ ಪ್ರಶಾಂತ್‌ ಶೆಟ್ಟಿಯನ್ನು ಬೆದರಿಸಿದ್ದಾರೆ. ಜೊತೆಗೆ ಮೊದಲೇ ತಂದಿರಿಸಿದ್ದ ಒಂದು ತಲವಾರಿನಿಂದ ಆರೋಪಿ ಕಿರಣ್‌, ರವಿ ಶೆಟ್ಟಿಯ ಮೇಲೆ ಬೀಸಿದ್ದಾರೆ. ಆಗ ರವಿ ಶೆಟ್ಟಿ ತಪ್ಪಿಸಿಕೊಂಡಿದ್ದು, ಈ ವೇಳೆ ತಲವಾರು ಅವರ ಬೆನ್ನಿಗೆ ತಾಗಿದೆ. ಮತ್ತೊಂದೆಡೆ ಆರೋಪಿ ಅಶೋಕ್‌ ದೇವಾಡಿಗ ಪ್ರಶಾಂತ್‌ ಶೆಟ್ಟಿಗೆ ಹಾರೆಯಿಂದ ಹೊಡೆದಿದ್ದಾನೆ.

ನಂತರ ಆರೋಪಿಗಳು ಅಣ್ಣಪ್ಪ ಶೆಟ್ಟಿಯ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಅವರು ತಪ್ಪಿಸಿಕೊಂಡಿದ್ದರು.ಈ ವೇಳೆ ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ ರಾಡ್‌ನಿಂದ ಅಕ್ಷಯ ಹಾಗೂ ಪ್ರಶಾಂತನಿಗೆ ಹೊಡೆದಿದ್ದಾನೆ. ಸ್ಥಳದಲ್ಲಿ ಸಾರ್ವಜನಿಕರು ಗುಂಪುಸೇರಿದಾಗ ಆರೋಪಿಗಳು ತಲವಾರಿನೊಂದಿಗೆ ಓಡಿ ಹೋಗಿದ್ದಾರೆ.

ಮುಂದಕ್ಕೆ ನೀನು ಬಾರ್‌ನಲ್ಲಿ ಹೇಗೆ ವ್ಯವಹಾರ ಮಾಡುತ್ತೀಯಾ ನೋಡಿಕೊಳ್ಳುತ್ತೇನೆ ಎಂದು ಅಣ್ಣಪ್ಪ ಶೆಟ್ಟಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಾಯಗೊಂಡ ರವಿ ಶೆಟ್ಟಿ ಹಾಗೂ ಪ್ರಶಾಂತ್‌ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...