Connect with us

LATEST NEWS

ಜೀವಮಾನದ ಸಾಧನೆಗಾಗಿ ಉಡುಪಿಯ ಅಥ್ಲೀಟ್ ಅಶ್ವಿನಿ ಅಕ್ಕುಂಜೆಗೆ ಧ್ಯಾನ್ ಚಂದ್ ಪ್ರಶಸ್ತಿ..!

Published

on

ಕರ್ನಾಟಕದ ಅಥ್ಲೀಟ್ ಉಡುಪಿ ಮೂಲದ ಅಶ್ಚಿನಿ ಅಕ್ಕುಂಜೆ( Ashwini Akkunji)  ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರು : ಕರ್ನಾಟಕದ ಅಥ್ಲೀಟ್ ಉಡುಪಿ ಮೂಲದ ಅಶ್ಚಿನಿ ಅಕ್ಕುಂಜೆ( Ashwini Akkunji)  ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಉಡುಪಿ ಜಿಲ್ಲೆಯ ಸಿದ್ದಾಪುರದ ಅಕ್ಕುಂಜೆಯ ಯಶೋದಾ ಶೆಟ್ಟಿ ಮತ್ತು ಚಿದಾನಂದ ಶೆಟ್ಟಿಯವರ ಪುತ್ರಿ ಅಶ್ವಿನಿ ಅಕ್ಕುಂಜೆ(ashwini akkunji) 400 ಮೀ. ರೀಲೆ ಓಟಗಾರ್ತಿಯಾಗಿದ್ದು, 2010ರ ಕಾಮನ್ ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಗಳ ರಿಲೇ ತಂಡದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಚೀನಾದ ಗುವಾಂಗ್ ಜುನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಅಶ್ವಿನಿ ಅಕ್ಕುಂಜೆ(ashwini akkunji)  ವೈಯಕ್ತಿಕ 400 ಮೀ. ರೇಸ್ ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದರು.

ಈ ಮಧ್ಯೆ ಉದ್ದಿಪನಾ ಮದ್ದು ಸೇವನೆ ಆರೋಪದ ಮೇಲೆ 2 ವರ್ಷ ನಿಷೇಧಕ್ಕೊಳಗಾಗಿದ್ದರು.

ನವೆಂಬರ್ 30, 2022 ರಂದು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಇತರ ಪ್ರಶಸ್ತಿ ಪುರಸ್ಕೃತರೊಂದಿಗೆ ಅಶ್ವಿನಿಯವರು ಭಾರತದ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

DAKSHINA KANNADA

ಕಾಮಿಡಿ ಕಿಲಾಡಿಗಳು ಸೀಸಲ್-7ರಲ್ಲಿ ಮಿಂಚಲಿದ್ದಾರೆ ಪುತ್ತೂರಿನ ಪ್ರತಿಭೆಗಳು .!!

Published

on

ಮಂಗಳೂರು:  ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು  ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್‌ ಆರಂಭಗೊಂಡಿದ್ದು ಈ ಬಾರಿ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಶೋನಲ್ಲಿ ನಟ ಜಗ್ಗೇಶ್ ಮಹಾ ತೀರ್ಪುಗಾರರಾಗಿದ್ದರೆ, ಐದು ಸ್ಟಾರ್  ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ರವರು ಜಡ್ಜಸ್‌ಗಳಾಗಿದ್ದಾರೆ. ರಾಜ್ಯದ 20 ಪ್ರತಿಭೆಗಳಿಂದ ಪ್ರೇಕ್ಷಕರಿಗೆ ಕಾಮಿಡಿಯ ರಸದೌಣ ನೀಡಲು ತಯಾರುಗುತ್ತಿದೆ.  ಇನ್ನು ಕಿಲಾಡಿ ಪ್ಲೇಯರ್‌ಗಳಲ್ಲಿ ಪುತ್ತೂರಿನ ಪ್ರತಿಭೆ ಪವಿತ್ರಾ ಹೆಗ್ಡೆ ಹಾಗೂ ಗಣರಾಜ್ ಭಂಡಾರಿ ಆಯ್ಕೆಯಾಗಿದ್ದಾರೆ.

comedy kiladi

ಮಂಗಳೂರಿನ 150 ಸ್ಪರ್ಧಿಗಳ ಪೈಕಿ ಪವಿತ್ರಾ ಹೆಗ್ಡೆ ಹಾಗೂ ಗಣರಾಜ್ ಭಂಡಾರಿಯವರು ಆಯ್ಕೆಯಾಗಿದ್ದಾರೆ. ಕರ್ನಾಟಕದ 2,500ಕ್ಕು ಮಿಕ್ಕಿ ಸ್ಪರ್ಧಿಗಳ ಮೂರು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ 10 ನಟರಲ್ಲಿ ಇವರಿಬ್ಬರು ಆಯ್ಕೆಯಾಗಿದ್ದಾರೆ.

ಮುಂದೆ ಓದಿ..; ಹೊಸ ಅವತಾರದಲ್ಲಿ ZEE ಕನ್ನಡ ‘ಕಾಮಿಡಿ ಕಿಲಾಡಿಗಳು’… ಸ್ಟಾರ್ ನಿರೂಪಕರು ಈಗ ಜಡ್ಜಸ್? ಏನಿದು ಟ್ವಿಸ್ಟ್?

ಪುತ್ತೂರಿನ ಪವಿತ್ರ ಹೆಗ್ಡೆ  ಆಯ್ಕೆ:

ಪವಿತ್ರ ಹೆಗ್ಡೆ ಕಳೆದ 10 ವರ್ಷಗಳಿಂದ ಮಂಗಳೂರಿನಲ್ಲಿ ಕಿಶೋರ್ ಡಿ ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ತಂಡದಲ್ಲಿ ಹಾಸ್ಯ ಕಲಾವಿದೆಯಾಗಿ ಅಭಿನಯಿಸುತ್ತಿದ್ದಾರೆ. ಹಲವಾರು ನಾಟಕ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲೇ ಕಲಾ ಕ್ಷೇತ್ರಕ್ಕೆ ಧುಮುಕಿದ ಇವರು 6ನೇ ತರಗತಿಯಿಂದ ನಾಟಕ ಅಭಿನಯ, 2012ರಿಂದ ಮಂಗಳೂರಿನ ತಂಡವಾದ ಮಾನಸ ಕಲಾವಿದರು ತಂಡದಲ್ಲಿ 3 ವರ್ಷ ಅಭಿನಯ, ಹೀಗೆ ಹಲವಾರು ತಂಡಳದಲ್ಲಿ ತಮ್ಮ ಅಭಿನಯ ಪಾತ್ರ ಮಾಡಿದ್ದಾರೆ. ತುಳು ಸಿನೆಮಾ ಮತ್ತು ತುಳು ಮತ್ತು ಕನ್ನಡ ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಬಲೆತಲಿಪಾಲೆ’ ಸೀಸನ್ 7ರಲ್ಲಿ ರನ್ನರ್ ಅಪ್ ಆಗಿದ್ದಾರೆ. ವಿ4 ನ್ಯೂಸ್‌ನಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2ನಲ್ಲಿ ಮತ್ತು ಸೀಸನ್ 3ಯಲ್ಲಿ ಅಭಿನಯಿಸಿ ಬೆಸ್ಟ್ ಫರ್ಫಾಮೆನ್ಸ್ ಅವಾರ್ಡ್ ಪಡೆದಿದ್ದಾರೆ. ವಿದೇಶದಲ್ಲೂ ನಾಟಕ ಪ್ರದರ್ಶನ ನೀಡಿದ್ದಾರೆ. ಕನ್ನಡ ಕಸ್ತೂರಿ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕಂಜೂಸ್ ಕಮಂಗಿರಾಯ, ಪುತ್ತೂರು ಚಾನೆಲ್ ದ ಚಾನಲ್ 9ನಲ್ಲಿ ಪುಸಾರವಾಗುತ್ತಿದ್ದ ಕುಡ ತೆಲಿಪುಗ, ಡಾಯಿಜಿ ವರ್ಲ್ಡ್‌ನಲ್ಲಿ ಪ್ರಸಾರವಾಗುತ್ತಿದ್ದ ಬಾಬಣ್ಣ ಬೂಬಣ್ಣ, ಕಿರುಚಿತ್ರವಾದ ಕಲ್ಕುಡ ಕಲ್ಲುರ್ಟಿ, ವಾತ್ಸಲ್ಯ, ನೋ ಬಾಲ್, ಕೊಕೊನಾಟ್ ಸಹಿತ ಹಲವು ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು. ಇವರಿಗೆ ಹಲವಾರು ಸನ್ಮಾನ ಪತ್ರಗಳು ಲಭಿಸಿದೆ. ಇವರು ಪುತ್ತೂರು ಚಂದ್ರಶೇಖ‌ರ್ ಹೆಗ್ಡೆ ಮತ್ತು ಮಯಾದೇವಿ ಅವರ ಪುತ್ರಿಯಾಗಿದ್ದು ಪುಜ್ವಲ್ ಹೆಗ್ಡೆಯವರ ಪತ್ನಿಯಾಗಿದ್ದಾರೆ.

ವೈರಲ್ ಸ್ಟಾರ್ ಗಣರಾಜ್ ಭಂಡಾರಿ:

ಪುತ್ತೂರಿನ ಸಂಸಾರ ಕಲಾವಿದೆರ್ ತಂಡದ ವೈರಲ್ ಸ್ಮಾರ್ ಖ್ಯಾತಿಯ ಗಣರಾಜ್ ಭಂಡಾರಿ ಕಾಮಿಡಿ ಕಿಲಾಡಿಗಳು ಶೋಗೆ ಆಯ್ಕೆಯಾಗಿದ್ದಾರೆ. ನಾಗೇಶ್ ಬಲ್ನಾಡು ನಿರ್ದೇಶನದ ಸೂಪರ್ ಹಿಟ್ ನಾಟಕ “ಮಲ್ಲಕ್ಕನ ಇಲ್ಲೊಕ್ಕೆಲ್” ಮೂಲಕ ರಂಗಪ್ರವೇಶ ಮಾಡಿದ ಇವರು ಬದ್‌ರೆ ಕಲ್ಪಿ, ಊರುಗೊರಿ ವಿಶ್ವನಾಥ, ಮಗೆ ಮಲ್ಲಯೆ, ಒವುಲಾ ಒರಿಯುಜಿ, ಸತ್ಯನಾ ಭಕ್ತಿ, ತಪ್ಪು ಎನ್ನೊಡ್ಡಿ, ಭಾಗ್ಯ ಬೋಡು ಅಲ್ಲದೆ ಈ ವರ್ಷದ ಸೂಪರ್ ಹಿಟ್ ಯಶಸ್ವಿ ನಾಟಕ ನಂಬಿಕೆದಾಯೆ ನಾಟಕಗಳಲ್ಲಿ ಪ್ರಮುಖ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.  ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀನಿಧಿ ಸೆಲೂನ್’ನಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದಾರೆ. ಇವರು ತನ್ನ ಸ್ವಂತ ರೀಲ್ಸ್ ಪೇಜ್’ನಲ್ಲಿ 25 ಸಾವಿರ ಕ್ಕು ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

 

Continue Reading

DAKSHINA KANNADA

ದೇವರಿಗೆ ತುಪ್ಪದಲ್ಲಿ ದೀಪ ಹಚ್ಚುವುದು ಶುಭವೇ..?

Published

on

ಮಂಗಳೂರು: ಮನೆಯ ದೇವರ ಕೊಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪ, ಎಣ್ಣೆ, ಸಾಸಿವೆ, ಎಳ್ಳು ಅಥವಾ ಮಲ್ಲಿಗೆಯ ಎಣ್ಣೆಯ ದೀಪವನ್ನು ಹಚ್ಚುವ ಪದ್ಧತಿ ಇದೆ. ಈ ರೀತಿಯಾಗಿ ಪ್ರತಿಯೊಂದು ಎಣ್ಣೆಯ ದೀಪವನ್ನು ಸುಡುವುದು ವಿಭಿನ್ನ ಮಹತ್ವವನ್ನು ಹೊಂದಿದೆ. ತುಪ್ಪದ ದೀಪವನ್ನು ಹಚ್ಚುವುದು ದುಬಾರಿಯಾದ ಕಾರಣ ಜನರು ಎಣ್ಣೆಯ ದೀಪಗಳನ್ನು ಹೆಚ್ಚು ಹಚ್ಚುತ್ತಾರೆ. ಎಣ್ಣೆ ಅಥವಾ ತುಪ್ಪದ ದೀಪಕ್ಕಿಂತ ಯಾವುದರ ದೀಪ ಹಚ್ಚುವುದು ಹೆಚ್ಚು ಮಂಗಳಕರ ಎಂಬುದನ್ನು ತಿಳಿದುಕೊಳ್ಳೋಣ.

ಯಾವ ದೀಪವನ್ನು ಬೆಳಗಬೇಕು?

ತುಪ್ಪದ ದೀಪವನ್ನು ಯಾವಾಗಲೂ ಹೂವಿನಾಕಾರದ ದೀಪದಲ್ಲಿ ಬಿಳಿ ಎಂಬ ಬೆಳಕಿನಿಂದ ಬೆಳಗಿಸಲಾಗುತ್ತದೆ ಮತ್ತು ಎಣ್ಣೆ ದೀಪವನ್ನು ಉದ್ದವಾದ ದೀಪದಿಂದ ಬೆಳಗಿಸಲಾಗುತ್ತದೆ. ಆದರೆ, ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚಿದರೆ ಅದರಲ್ಲಿ ಕೆಂಪು ಅಥವಾ ಹಳದಿ ದೀಪವನ್ನು ಬಳಸಬೇಕು.

ಯಾವ ದೀಪ ಸೂಕ್ತ?

ತುಪ್ಪದ ದೀಪವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಆದರೆ ಇಷ್ಟಾರ್ಥಗಳ ಈಡೇರಿಕೆಗಾಗಿ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೊಂದಲು ತುಪ್ಪದ ದೀಪವನ್ನು ಹಚ್ಚುವುದು ಹೆಚ್ಚು ಪ್ರಯೋಜನಕಾರಿ. ಇದರಿಂದ ದೇವರುಗಳು ಮತ್ತು ದೇವತೆಗಳು ಸಂತೋಷಪಡುತ್ತಾರೆ.

ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಮಂಗಳಕರ

ಮನೆ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಎಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಜೊತೆಗೆ ಮನೆಯ ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತದೆ. ಇದು ಎಲ್ಲಾ ರೀತಿಯ ನೋವನ್ನು ನಾಶಪಡಿಸುತ್ತದೆ. ಶಿವ ಪುರಾಣದ ಪ್ರಕಾರ ಪ್ರತಿದಿನ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳಲಾಗಿದೆ.

ತುಪ್ಪದ ದೀಪವನ್ನು ಹಚ್ಚಿದರೆ ಗಾಳಿಯು ಶುದ್ಧವಾಗುತ್ತದೆ ಮತ್ತು ಗಾಳಿಯಲ್ಲಿರುವ ರೋಗಾಣುಗಳು ನಾಶವಾಗುತ್ತದೆ. ಇದರ ಸುವಾಸನೆಯು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ. ತುಪ್ಪವು ಚರ್ಮದ ರಕ್ತ ಕಣಗಳನ್ನು ಸಕ್ರಿಯಗೊಳಿಸುವ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಇದರಿಂದಾಗಿ ಯಾವುದೇ ಚರ್ಮ ರೋಗಗಳು ಬರುವುದಿಲ್ಲ.

Continue Reading

LATEST NEWS

ತಾಯಿಯನ್ನು ಕೊಂ*ದ ಮಗನಿಗೆ ವಿಶಿಷ್ಟ ಶಿಕ್ಷೆ; ಅಪರೂಪದ ಆದೇಶ ನೀಡಿದ ಹೈಕೋರ್ಟ್

Published

on

ಮಂಗಳೂರು/ ಬೆಂಗಳೂರು : ಸಾಮಾನ್ಯವಾಗಿ ಕೊ*ಲೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ, ಜೀವಾವಧಿ ಶಿಕ್ಷೆ ಅಥವಾ ಇನ್ಯಾವುದೋ ಕಠಿಣ ಶಿಕ್ಷೆ ನೀಡಬಹುದು. ಆದ್ರೆ, ಇಲ್ಲಿ ಕೋರ್ಟ್ ವಿಭಿನ್ನ ರೀತಿಯ ಶಿಕ್ಷೆ ವಿಧಿಸಿದೆ. ಹೌದು, ಕುಡಿದ ಮತ್ತಿನಲ್ಲಿ ತಾಯಿಯನ್ನು ಮಗ ಕೊಂ*ದಿದ್ದ.


ಏನಿದು ಪ್ರಕರಣ?

2015 ರ ಏಪ್ರಿಲ್ 14 ರಂದು ಕೊಡಗು ಜಿಲ್ಲೆಯ ಮಡಿಕೇರಿಯ ಸಂಪಾಜೆ ಹೊರ ಠಾಣೆ ವ್ಯಾಪ್ತಿಯಲ್ಲಿ ಮಗನೊಬ್ಬ ತಾಯಿಯ ಹ*ತ್ಯೆ ಮಾಡಿದ್ದ. ಗಂಗಮ್ಮ ಕೊ*ಲೆಗೀಡಾದ ಮಹಿಳೆ. ಅನಿಲ್ ಕೃತ್ಯ ಎಸಗಿದ ಮಗ. ಪ್ರತಿದಿನ ಕುಡಿದು ಬರುತ್ತಿದ್ದ ಮಗ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುವುದನ್ನು ತಾಯಿ ಆಕ್ಷೇಪಿಸಿದ್ದಳು. ಇದರಿಂದ ಕೋಪಗೊಂಡ ಮಗ ಗಂಗಮ್ಮ ದೊಣ್ಣೆಯಿಂದ ಹೊಡೆದಿದ್ದಾನೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಪೊಲೀಸರು ಮರಣ ಪೂರ್ವ ಹೇಳಿಕೆಯನ್ನು ಪಡೆದಿದ್ದರು. ಅಷ್ಟರಲ್ಲೇ ಗಂಗಮ್ಮ ಅಸುನೀಗಿದ್ದರು.

ತೀರ್ಪು ಕೊಟ್ಟ ಹೈಕೋರ್ಟ್ :

ಈ ಪ್ರಕರಣವು ಕೊಡಗು ಜಿಲ್ಲಾ 1ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯವು ಈ ಪ್ರಕರಣದಿಂದ ಅನಿಲ್‌ನನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಡಿಕೇರಿ ಗ್ರಾಮೀಣ ಸರ್ಕಲ್‌ ಇನ್ಸ್‌ಪೆಕ್ಟರ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ಮರು ವಿಚಾರಣೆಗೆ ಮನವಿ ಮಾಡಿದ್ದರು. ಇದೀಗ ಹೈಕೋರ್ಟ್‌ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದೆ.

ಶಿಕ್ಷೆ ಏನು ?

ಹೈಕೋರ್ಟ್‌ ವಿಚಾರಣೆ ನಡೆಸಿ ಐಪಿಸಿ ಸೆಕ್ಷನ್‌ 304 (2) ರ ಪ್ರಕಾರ ಅನಿಲ್‌ನನ್ನು ದೋಷಿ ಎಂದು ಘೋಷಿಸಿದೆ. ಈಗಾಗಲೇ, ಅನಿಲ್‌ 2 ವರ್ಷಗಳ ಜೈಲು ವಾಸ ಅನುಭವಿಸಿದ್ದಾನೆ. ಆತ ಕುಡಿದ ಮತ್ತಿನಲ್ಲಿ ತಾಯಿಗೆ ಹಲ್ಲೆ ನಡೆಸಿದ್ದು, ಆಕೆಯನ್ನು ಕೊ*ಲ್ಲುವ ಉದ್ದೇಶದಿಂದ ಅಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ : ಮೌನ ಮುರಿದ ಪ್ರಧಾನಿ ಮೋದಿ; ಹೇಳಿದ್ದೇನು?

ಆತನ ಪಾಪಕ್ಕೆ ಪ್ರಾಯಶ್ಚಿತ್ತ ಆಗುವ ರೀತಿಯಲ್ಲಿ ಹೈಕೋರ್ಟ್‌ ಶಿಕ್ಷೆ ವಿಧಿಸಿದೆ. ಆರು ತಿಂಗಳ ಕಾಲ ಸಮುದಾಯ ಸೇವೆಯ ಶಿಕ್ಷೆಯ ನೀಡಿ ಅಪರೂಪದ ಆದೇಶ ನೀಡಿದೆ. ಸಂಪಾಜೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೌಸ್‌ ಕೀಪಿಂಗ್‌, ತೋಟಗಾರಿಕೆ ಇತ್ಯಾದಿ ಸಮುದಾಯದ ಸೇವೆಯ ಶಿಕ್ಷೆ ನೀಡಿದೆ. ಒಂದು ವೇಳೆ ಈ ಆದೇಶ ಪಾಲಿಸದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದಿದೆ.

Continue Reading

LATEST NEWS

Trending