ಲಕ್ನೋ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿನ ರೈತರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶೀಶ್ ಮಿಶ್ರಾರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಆಶೀಶ್ ಮಿಶ್ರಾಗೆ ನಿನ್ನೆ ಬೆಳಗ್ಗೆ 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎರಡನೇ ಸಮನ್ಸ್ ನೀಡಿದ್ದರು.
ಸಮನ್ಸ್ ನಂತೆಯೇ ಆಶಿಶ್ ತಮ್ಮ ವಕೀಲರು ಹಾಗೂ ಉತ್ತರ ಪ್ರದೇಶದ ಶಾಸಕ ಯೋಗೀಶ್ ವರ್ಮಾ ಜೊತೆಯಲ್ಲಿ ಅಪರಾಧ ವಿಭಾಗದ ಅಧಿಕಾರಿಗಳ ಮುಂದೆ ಹಾಜರಾಗಿದ್ದರು.
ಸತತ 12 ಗಂಟೆಗಳ ಸುದೀರ್ಘ ವಿಚಾರಣೆಗೆ ಆಶಿಶ್ ಮಿಶ್ರಾ ಸಹಕರಿಸಲಿಲ್ಲ ಹಾಗೂ ಸರಿಯಾಗಿ ಉತ್ತರಿಸದ ಕಾರಣ ಅವರನ್ನು ಆಶೀಶ್ ಮಿಶ್ರಾರನ್ನು ಬಂಧಿಸಲಾಗಿದೆ.
ಕೋರ್ಟ್ ಮುಂದೆ ಹಾಜರು ಪಡಿಸಲಿದ್ದೇವೆ ಎಂದು ಡಿಐಜಿ ಉಪೇಂದ್ರ ಕುಮಾರ್ ಅಗರ್ ವಾಲ್ ತಿಳಿಸಿದ್ದಾರೆ.
ಅ.03ರಂದು ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿದ್ದು, ಈ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹಾಯಿಸಿರುವ ಬಗ್ಗೆ ಆರೋಪ ಕೇಳಿತ್ತು. ಕಾರು ಹಾಯಿಸಿ 4 ಜನ ಮೃತಪಟ್ಟಿದ್ದರು. ನಂತರ ನಡೆದ ಹಿಂಸಾಚಾರದಲ್ಲಿ ಮತ್ತೆ ನಾಲ್ವರು ಸಾವನ್ನಪ್ಪಿದ್ದರು.