Friday, July 1, 2022

‘ಅಸಾನಿ ” ಚಂಡಮಾರುತದ ಎಫೆಕ್ಟ್ : ಮಾರ್ಚ್ 23 ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಮಳೆ ಎಚ್ಚರಿಕೆ..!

ಮಂಗಳೂರು : ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಕರಾವಳಿಯಲ್ಲಿ ಇಂದು ಸಂಜೆ ವೇಳೆಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ. ಅಸಾನಿ ಚಂಡಮಾರುತದ ಪರಿಣಾಮದಿಂದ ಮಳೆಯಾಗುತ್ತಿದೆ.

ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ಕಳೆದ ಒಂದು ವಾರದಿಂದ ಮಿತಿಮೀರಿದ್ದ ಬಿಸಿಲ ಧಗೆಯನ್ನು ವರುಣರಾಯ ತಂಪಾಗಿಸಿದ್ದಾನೆ. ಇಂದು ಸಂಜೆಯ ಹೊತ್ತಿಗೆ ಕೃಷ್ಣ ನಗರಿ ಉಡುಪಿಯಲ್ಲಿ ಮಳೆ ಸುರಿದಿದ್ದು, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ಸಾಧಾರಣ ಮಳೆಯಾಗಿದೆ.

ಇನ್ನು ಕಾರ್ಕಳದಲ್ಲೂ ವೈಭವದ ಕಾರ್ಕಳ ಉತ್ಸವದ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಕ್ಕೆ ಮಳೆರಾಯ ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಇತ್ತ ಮಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ.

ಕೊಡಗಿನ ಮಡಿಕೇರಿ, ಸುಂಟಿಕೊಪ್ಪ, ನಾಪೋಕ್ಲು, ಭಾಗಮಂಡಲಗಳಲ್ಲಿ ಭಾರಿ ಗಾಳಿ ಮಳೆಯಾಗಿದೆ.ಉತ್ತರ ಕನ್ನಡದ ಶಿರಸಿಯಲ್ಲೂ ಗಾಳಿ- ಮಳೆಯಿಂದ ಹಲವು ಕಡೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಶಿರಸಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕ ಮಳೆಯಾಗಿದೆ. ಭಾರೀ ಗಾಳಿ, ಮಳೆಗೆ ಶಿರಸಿ ಮಾರಿಕಾಂಬೆಯನ್ನು ಇರಿಸಿರುವ ಜಾತ್ರಾ ಗದ್ದುಗೆಯ ಚಪ್ಪರದ ಮೇಲ್ಭಾಗಕ್ಕೆ ಹಾನಿಯಾಗಿದೆ.

ಶಿರಸಿ, ಸಿದ್ಧಾಪುರ ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರಿದಿದೆ.ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು, ನಾಳೆ ಮತ್ತು ಮಾರ್ಚ್ 20ರಿಂದ 23 ರವರೆಗೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here

Hot Topics

ಕ್ಷುಲ್ಲಕ ಕಾರಣಕ್ಕೆ ಮಗುವನ್ನು ಕತ್ತು ಹಿಸುಕಿ ಕೊಂದು ತಾಯಿ ಜೀವಾಂತ್ಯ

ಬೆಂಗಳೂರು: ಮೂರೂವರೆ ವರ್ಷದ ಮಗುವನ್ನು ವೇಲ್‌ನಿಂದ ನೇಣು ಬಿಗಿದು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ RR ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ದೀಪಾ (31) ತನ್ನ ಮಗು...

ಮುಲ್ಕಿ: ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಕೃಷಿ ಗ್ರಾಮಗಳಿಗೆ DYFI ನಿಯೋಗ ಭೇಟಿ

ಮಂಗಳೂರು: ಭೂಸ್ವಾಧೀನದ ಉದ್ದೇಶ, ಪುನರ್ವಸತಿಯ ಕುರಿತಾಗಿ ಸ್ಪಷ್ಟ ಮಾಹಿತಿ ಒದಗಿಸದೆ ಸಾವಿರ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಮುಲ್ಕಿ ತಾಲೂಕಿನ ಕೃಷಿ ಪ್ರಧಾನ ಗ್ರಾಮಗಳಾದ ಬಳ್ಕುಂಜೆ, ಐಕಳ, ಕೊಲ್ಲೂರು, ಕರ್ನಿರೆ ಮೊದಲಾದ ಗ್ರಾಮಗಳಿಗೆ...

ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ‘ನನಗೆ EDಯಿಂದ ಲವ್‌ ಲೆಟರ್‌ ಬಂದಿದೆ’ ಎಂದ ಶರದ್‌ ಪವಾರ್‌

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 2004, 2009, 2014 ಮತ್ತು 2020ರ ಚುನಾವಣೆಗಳಲ್ಲಿ ಅವರು ಸಲ್ಲಿಸಿದ್ದ...