ಮಂಗಳೂರು: ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಕೇರಳ ಕಾಸರಗೋಡಿನ ನಿವಾಸಿ ಇಬ್ರಾಹಿಂ ಪನಲಮ್ ಅಬ್ದುಲ್ಲ ಎಂಬವನೇ ಬಂಧಿತ ಆರೋಪಿ, ಈತ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಎನ್ನಲಾಗಿದ್ದು
, ಒಳ ಉಡುಪಿನಲ್ಲಿ ಈತ 30 ಲಕ್ಷ ರೂ ಮೌಲ್ಯದ 647 ಗ್ರಾಮ್ ಚಿನ್ನವನ್ನು ಸಾಗಾಟ ಮಾಡುತ್ತಿದ್ದು ಕಸ್ಟಮ್ಸ್ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ತನಿಖೆ ಮುಂದುವರಿದಿದೆ.