Connect with us

LATEST NEWS

ಯುವಕನ ಕೊಲೆ ಪ್ರಕರಣ: ಗೃಹಸಚಿವರಿಂದ ತಪ್ಪು ಹೇಳಿಕೆ-ಮತ್ತೆ ಯೂಟರ್ನ್‌ ಹೊಡೆದ ಹೋಂ ಮಿನಿಸ್ಟರ್‌

Published

on

ಬೆಂಗಳೂರು: ಜೆ.ಜೆ. ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹಸಚಿವರು ತಪ್ಪು ಹೇಳಿಕೆ ನೀಡಿ, ಮತ್ತೆ ಅವರೇ ಯೂಟರ್ನ್‌ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ತೀವ್ರ ವಾಕ್ಸಮರ ಉಂಟಾಗಿದೆ.


ಇಂದು ಬೆಳಗ್ಗೆ ಮಾಧ್ಯಮಗಳಿಗೆ ಕೊಲೆ ಬಗ್ಗೆ ಮಾಹಿತಿ ನೀಡುವ ವೇಳೆ ಮೊದಲು ‘ಉರ್ದು ಮಾತನಾಡದಿದ್ದಕ್ಕೆ ಚಂದ್ರು ಎಂಬ ದಲಿತ ಯುವಕನನ್ನು ಚುಚ್ಚಿ ಚುಚ್ಚಿ ಅಮಾನುಷವಾಗಿ ಹತ್ಯೆ ನಡೆಸಿದ್ದಾರೆ ಎಂದಿದ್ದರು.

ಈಗ ಬೈಕ್ ಟಚ್ ಆಗಿ ಗಲಾಟೆ ವೇಳೆ ಹತ್ಯೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೇ ಮಾಧ್ಯಮಗಳು ಸಹ ವರದಿ ಮಾಡಿದ್ದವು ಇದೀಗ ಅವರೇ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.
ಗೃಹ ಸಚಿವರ ಇವತ್ತಿನ ಹೇಳಿಕೆಯಿಂದ ಅಧಿಕಾರಿಗಳಲ್ಲೆ ಗೊಂದಲ ಉಂಟಾಗಿದೆ.

ಪೊಲೀಸರ ಅಧಿಕಾರಿಗಳಲ್ಲಿಯೇ ಗೊಂದಲ ಸೃಷ್ಟಿಯಾಗಿದೆ. ಅಪಘಾತದ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದ ಅಧಿಕಾರಿಗಳು, ಘಟನೆ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದರು. ಪ್ರಕರಣ ಸಂಬಂಧ ಮೂವರನ್ನ ಬಂಧಿಸಿರುವುದಾಗಿ ಮಾಹಿತಿ ನೀಡಿದರು. ಆದ್ರೆ ಆರಗ ಜ್ಞಾನೇಂದ್ರ ನೀಡಿರುವ ಮಾಹಿತಿ ಬಗ್ಗೆ ಪೊಲೀಸರಿಗೆ ಗೊತ್ತಿಲ್ಲ ಎಂಬುದು ತಿಳಿದುಬಂದಿದೆ.
ಈ ಹೇಳಿಕೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ಪೊಲೀಸರ ಸ್ಪಷ್ಟನೆ ಏನು?
ಏಪ್ರಿಲ್ 5 ರಂದು ಮಧ್ಯರಾತ್ರಿ ಸೈಮನ್ ರಾಜ್ ಮತ್ತು ಚಂದ್ರು ಎಂಬ ಇಬ್ಬರು ಸ್ನೇಹಿತರು ಮೈಸೂರು ರಸ್ತೆಯಲ್ಲಿರುವ ಅಂಗಡಿಯೊಂದಕ್ಕೆ ಊಟಕ್ಕೆ ಹೋಗಿದ್ದಾರೆ.
ಬಳಿಕ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ, ಶಾಹಿದ್ ಎಂಬಾತನ ಬೈಕ್’ಗೆ ಢಿಕ್ಕಿಹೊಡೆದಿದೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಶಾಹೀದ್ ಸ್ನೇಹಿತರ ಜೊತೆಗೂಡಿ ಚಂದ್ರ ಅವರ ಬಲ ತೊಡೆಗೆ ಇರಿದಿದ್ದಾರೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಗಾಯಗೊಂಡಿದ್ದ ಚಂದ್ರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರು ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ

FILM

ಅರೆಬೆತ್ತಲೆ ಫೊಟೊ ಪೋಸ್ಟ್ ಮಾಡಿದ ಸಮಂತಾ..! ಅಸಲಿಯತ್ತೇನು?

Published

on

ಜನಪ್ರಿಯ ನಟಿ ಸಮಂತಾರುತು ಪ್ರಭು  ತಮ್ಮ ಸಿನೆಮಾ ನಟನೆ ಮೂಲಕ ಎಲ್ಲರ ಫೇವರೆಟ್ ಆಗಿದ್ದವರು. ಮುದ್ದು ಮುಖದ ಚೆಲುವೆಯ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಈಕೆ ಅನಾರೋಗ್ಯಕ್ಕೂ ತುತ್ತಾಗಿದ್ದರು. ಇತ್ತೀಚೆಗೆ ತನ್ನ ಮಾಜಿ ಪತಿಯ ವಿಚಾರಕ್ಕೆ ಸಂಬಂಧಿಸಿ ಹಲವಾರು ವಿಚಾರಗಳಲ್ಲಿ ಸುದ್ದಿಯಲ್ಲಿರುತ್ತಾರೆ.

ಇದೀಗ ಸಮಂತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತನ್ನ ಖಾತೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಅರೆನಗ್ನ ಫೊಟೋವನ್ನು ಪೋಸ್ಟ್‌ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿತ್ತು. ಯಾರೋ ಕಿಡಿಗೇಡಿಗಳು ಸಮಂತಾ ಫೊಟೋವನ್ನು ತಿರುಚಿ ಪೋಸ್ಟ್ ಮಾಡಿದ್ದಾರೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಇನ್ನು ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವ ಸಮಂತಾ ದಿನಕ್ಕೊಂದು ಆರೋಗ್ಯ ಮಾಹಿತಿಯನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ಫಾರ್ ಇನ್‌ಫ್ರಾರೆಡ್ ಸೌನಾ’ ಉಪಯೋಗಗಳು ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  ಪೋಸ್ಟ್‌ನಲ್ಲಿ ದೀರ್ಘಕಾಲದ ಕಾಯಿಲೆಗಳು, ಚರ್ಮದ ಸೌಂದರ್ಯ, ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಜನರು ಬಾತ್‌ ಟಬ್‌ನಲ್ಲಿ ಸ್ವಲ್ಪ ಸಮಯ ಇರುತ್ತಾರೆ ಎಂದು ಬರೆದುಕೊಂಡಿದ್ದರು.

ಅರೆಬೆತ್ತಲೆ ಫೊಟೊ ವೈರಲ್:

ಇನ್ನು ಬಾತ್ ಟಬ್‌ನಲ್ಲಿ ಟವಲ್ ಸುತ್ತಿಕೊಂಡು ಇರುವ ಸಮಂತಾ ಅವರ ಫೊಟೋದ ಜೊತೆಗೆ ಕೆಲವೊಂದು ಹೆಲ್ತ್‌ ಟಿಪ್ಸ್‌ಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲೇ ಇನ್ನೊಂದು ಸಮಂತಾ ಅರೆಬೆತ್ತಲೆ ಫೊಟೋ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಆದರೆ ಅದರಲ್ಲಿ ಆಕೆಯ ಮುಖ ಕಾಣುತ್ತಿಲ್ಲ. ಅಸಲಿಗೆ ಅದು ನಕಲಿ ಎಂದು ಗೊತ್ತಾಗಿದೆ.  ಸೋಶಿಯಲ್ ಮೀಡಿಯಾದಲ್ಲಿ ಫೇಕ್‌ ಸುದ್ದಿ ಹಬ್ಬಿಸುವವರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಖುದ್ದು ಸಮಂತಾ ಈ ಫೋಟೊ ಹಾಕಿ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ವೈರಲ್ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ಆಕೆಯ ಅಂತಹ ಯಾವುದೇ ಫೋಟೊ ಪೋಸ್ಟ್ ಮಾಡಿಲ್ಲ. ಕಿಡಿಗೇಡಿಗಳು ಈ ರೀತಿ ಫೋಟೊ ವೈರಲ್ ಮಾಡುತ್ತಿದ್ದಾರೆ ಎನ್ನುವ ಚರ್ಚೆಯೂ ನಡೀತಿದೆ. ಒಟ್ಟಾರೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಕಾಮೆಂಟ್ಸ್ ಬರುತ್ತಿವೆ.

Continue Reading

FILM

ಹೆಣ್ಣು ಮಕ್ಕಳು ಕನಿಷ್ಠ 25 ದಾಟಿದ ಮೇಲೆ ಮದುವೆಯಾಗಿ; ಮಿಲನಾ ನಾಗರಾಜ್

Published

on

ಮಂಗಳೂರು : ಮದುವೆ ಎಂಬುದು ಎಲ್ಲರ ಬಾಳಿನ ಪ್ರಮುಖ ಘಟ್ಟ. ಕೆಲವೊಂದು ವಿಷಯ, ಜವಾಬ್ದಾರಿಗಳು ಮದುವೆ ಆದ ಮೇಲೆಯೇ ಬರುತ್ತದೆ. ಇನ್ನು ಮನೆಯ ಹಿರಿಯರು ಹೇಳುತ್ತಾ ಇರುತ್ತಾರೆ ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ. ಆ ಸಂಬಂಧವನ್ನು ದೂರ ಮಾಡಲು ಯಾರಿಂದ ಸಾಧ್ಯವಿಲ್ಲ ಎಂದು. ಹೀಗೆ ಕೆಲವೊಂದು ಬುದ್ಧಿವಾದದ ಮಾತುಗಳನ್ನು ಎಲ್ಲರೂ ಹೇಳುತ್ತಾ ಇರುತ್ತಾರೆ. ಇದೇ ರೀತಿ ಫಿಲ್ಮ ಸ್ಟಾರ್ ತಾಯಿಯಾಗ್ತಿರೋ ಮಿಲನಾ ನಾಗರಾಜ್ ಈಗ ತಮ್ಮ ಬದುಕಿನ ಸಂತಸದ ಘಟ್ಟದಲ್ಲಿ ಇದ್ದಾರೆ. ಮಿಲನಾ ಮತ್ತು ಪತಿ ಡಾರ್ಲಿಂಗ್ ಕೃಷ್ಣ ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಮಿಲನಾ ನಾಗರಾಜ್ ಯಾವಾಗಲೂ ಪ್ರಬುದ್ಧತೆಯಿಂದಲೇ ಮಾತನಾಡುತ್ತಾರೆ.

ಇದೇ ರೀತಿಯಾಗಿ ನಮ್ಮ ಬದುಕಿನ ಸಾರ್ಥಕ ಕ್ಷಣಗಳನ್ನು ಮಿಲನಾ ತನ್ನ ವಿಡಿಯೋದಲ್ಲಿ ಮೆಲುಕು ಹಾಡಿದ್ದಾರೆ. ಹಾಗೆಯೇ ನಿಮಗೆ 25 ವರ್ಷಗಳಿಗಿಂತ ಹೆಚ್ಚು ವಯಸ್ಸಾಗುವವರಗೆ ಖಂಡಿತಾ ಮದುವೆಯಾಗ್ಬೇಡಿ. ಮೊದಲು ನೀವು ದುಡಿಯಿರಿ, ಗಳಿಸಿ, ಸ್ವತಂತ್ರರಾಗಿ, ಮಾನಸಿಕವಾಗಿ ಗಟ್ಟಿಯಾಗಿ, ಪ್ರಬುದ್ಧರಾಗಿ. ನಿಮ್ಮ ಬದುಕಿನ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವಷ್ಟು ಗಟ್ಟಿಯಾಗಿ ಆಗ ಮದುವೆಯಾಗಿ. ಅನೇಕ ಹುಡುಗಿಯರು, ಹುಡುಗರು ಕೂಡಾ ಗೊಂದಲದಲ್ಲೇ ಮದುವೆಯಾಗ್ತಾರೆ. ಹಾಗೆ ಆಗಬಾರದು. ಎಂದು ನಟಿ ಮಿಲನಾ ಹೇಳಿದ್ದರು.

ಅದೇ ರೀತಿ ಗಂಡು ಹೆಣ್ಣಿನ ಹೊಂದಾಣಿಕೆ ಹೇಳುವಷ್ಟು ಸುಲಭದ ಮಾತಲ್ಲ. ಮನೆಯಲ್ಲಿ ನಾವು ನಮ್ಮ ತಂದೆ- ತಾಯಿ ಜೊತೆಗೇ ಚಿಕ್ಕ ಚಿಕ್ಕ ವಿಚಾರಗಳಿಗೆ ಜಗಳ ಆಡುತ್ತಿರುತ್ತೇವೆ. ಆದರೆ ಮಕ್ಕಳು ಎನ್ನುವ ಕಾರಣಕ್ಕೆ ತಂದೆ ತಾಯಿ ಹೊಂದಿಕೊಳ್ಳುತ್ತಾರೆ. ಸುಲಭವಾಗಿ ಕ್ಷಮಿಸಿಬಿಡುತ್ತಾರೆ. ಆದರೆ ನಮ್ಮ ಬದುಕಿನಲ್ಲಿ ಒಬ್ಬ ಹೊಸ ವ್ಯಕ್ತಿ ಬಂದಾಗ ಹಾಗಿರುವುದಿಲ್ಲ. ಅವರು ಈ ಎಲ್ಲಾ ವಿಚಾರಗಳಿಗೆ ರೆಡಿ ಇರುವುದಿಲ್ಲ. ಅವರು ನಮ್ಮಿಂದ ಒಳ್ಳೆಯ ವಿಚಾರಗಳನ್ನ, ಸಿಹಿಯಾದ ವಿಚಾರಗಳನ್ನಷ್ಟೇ ಬಯಸುತ್ತಾರೆ. ಹಾಗಾಗಿ ಈ ಪ್ರಬುದ್ಧತೆ ಸಂಸಾರ ಸಾಮರಸ್ಯದಲ್ಲಿ ಬಹಳ ಮುಖ್ಯ ಎಂದಿದ್ದಾರೆ ಮಿಲನಾ ನಾಗರಾಜ್.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹೆಚ್ಚು ಹರಿದಾಡುತ್ತಿದೆ. ಮದುವೆ, ಸಂಬಂಧಗಳು, ಬದುಕು-ಭವಿಷ್ಯ ಈ ಎಲ್ಲದರ ಬಗ್ಗೆ ಅದೆಷ್ಟು ಸರಳವಾಗಿ ಮಿಲನಾ ವಿವರಿಸಿದ್ದಾರೆ ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಇನ್ನು ಈ ವರ್ಷ ಪೂರ್ತಿ ಡಾರ್ಲಿಂಗ್ ಕೃಷ್ಣ ಬಹಳ ಬ್ಯುಸಿಯಂತೆ. ಸಾಲು ಸಾಲು ಪ್ರಾಜೆಕ್ಟ್ ಗಳ ನಡುವೆ ಪತ್ನಿ ಜೊತೆ ಸಮಯ ಕಳೆಯಲು ಸಾಕಷ್ಟು ಪ್ಲಾನಿಂಗ್ ಮಾಡಿಕೊಳ್ತಿದ್ದಾರಂತೆ. ಮೊದಲ ಎರಡು ತಿಂಗಳು ನನಗೂ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಿದ್ದವು, ಆದರೆ ನಂತರ ನಿಧಾನಕ್ಕೆ ದೇಹ ಮತ್ತು ಮನಸ್ಸು ಈ ಸನ್ನಿವೇಶಕ್ಕೆ ಹೊಂದಿಕೊಂಡಿದೆ. ಸೆಪ್ಟೆಂಬರ್ ಗಾಗಿ ಎದುರು ನೋಡುತ್ತಿದ್ದೇವೆ ಎಂದು ಮಿಲನಾ ನಾಗರಾಜ್ ಖುಷಿಯಿಂದ ತಿಳಿಸಿದ್ದಾರೆ.

Continue Reading

bangalore

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕಪಲ್ ‘ರೊಮ್ಯಾನ್ಸ್..’! ಪ್ರಿಯತಮಗೆ ಚುಂಬಿಸಿದ ಯುವತಿ.!!ವೀಡಿಯೋ ವೈರಲ್

Published

on

ಬೆಂಗಳೂರು:  ಅಗಾಗ ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳ ಆಲಿಂಗನದ ವೀಡಿಯೋ ವೈರಲ್ ಆಗುತ್ತಲೇ ಇದೆ.  ಇದೀಗ ಬೆಂಗಳೂರಿನಲ್ಲಿಯೂ ಇಂಥದ್ದೇ ಒಂದು ಘಟನೆ ಮರುಕಳಿಸಿದೆ. ಕಪಲ್ಸ್ ಇಬ್ಬರು ಒಬ್ಬರನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

bangalore metro

ಬೆಂಗಳೂರು ನಮ್ಮ ಮೆಟ್ರೋದ ಬಾಗಿಲಿನ ಬಳಿ ಯುವತಿ-ಯವಕರಿಬ್ಬರೂ ನಿಂತುಕೊಂಡಿದ್ದು ಒಬ್ಬರನೊಬ್ಬರು ತಬ್ಬಿಕೊಂಡಿದ್ದಾರೆ. ಯುವತಿ ಯುವಕನ ಕೆನ್ನೆಗೆ ಮುತ್ತು ನೀಡಿದ್ದಾಳೆ. ಈ ದೃಶ್ಯವನ್ನು ಮೆಟ್ರೋದಲ್ಲಿದ್ದ ಪ್ರಯಾಣಿಕರೋರ್ವರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋವನ್ನು KPSB 52 ಎಂಬ ಎಕ್ಸ್​ ಖಾತೆಯಲ್ಲಿ ಪೋಸ್ಟ್​​​ ಮಾಡಿದ್ದು ‘ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ’ ಎಂದು ಪ್ರಶ್ನಿಸಿದ್ದಾರೆ. ಇನ್ನು ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರು ಈ ಜೋಡಿಯ ರೋಮ್ಯಾನ್ಸ್‌ನಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ.

Read More..; 15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

ದೆಹಲಿಯಲ್ಲೂ ನಡೆದಿತ್ತು ಈ ಘಟನೆ:

ಈ ಹಿಂದೆ ದೆಹಲಿಯ ಮೆಟ್ರೋ ಸ್ಟೇಷನ್‌ ನಲ್ಲಿ ದಂಪಂತಿ ರೊಮ್ಯಾನ್ಸ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ದಂಪತಿ ಮೈಮರೆತು ರೋಮ್ಯಾನ್ಸ್ ಮಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಅಲ್ಲದೇ ಇಬ್ಬರೂ ಲಿಪ್‌ಲಾಕ್‌ ಕೂಡಾ ಮಾಡಿದ್ದಾರೆ. ದಂಪತಿಯ ಸರಸಸಲ್ಲಾಪವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ವೀಡಿಯೋ ಮಾಡಿದ್ದಾನೆ. ಇನ್ನು ದೆಹಲಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಜನರನ್ನು ಮುಜುಗರಕ್ಕೆ ಒಳಪಡಿಸುತ್ತಿದೆ. ಈ ಬಗ್ಗೆ ಮೆಟ್ರೋ ಆಡಳಿತ ಮಂಡಳಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದರೂ ಜನರು ಮಾತ್ರ ಕ್ಯಾರೇ ಅನ್ನುತ್ತಿಲ್ಲ.

 

 

Continue Reading

LATEST NEWS

Trending