Monday, August 10, 2020

ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಗುಡ್​ಬೈ…!? ಹಸೆಮಣೆ ಏರಲು ಸಿದ್ದತೆ ಮಾಡ್ತಾ ಇದ್ದರಾ ಕರಾವಳಿ ಬೆಡಗಿ..!

Array

ಬ್ರಹ್ಮಗಿರಿ ಬೆಟ್ಟ ಕುಸಿತ ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸಿ – ಆರ್ ಅಶೋಕ್

ಕೊಡಗು : ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿ ಕಣ್ಮರೆಯಾಗಿರುವ ನಾಲ್ವರನ್ನು ಹುಡುಕುವ ಕೆಲಸ ಎರಡೇ ದಿನಗಳಲ್ಲಿ ಮುಗಿಯಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೊಡಗಿನ ತಲಕಾವೇರಿಯ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಳಿಕೆ ಹಾದಿಯಲ್ಲಿ ಕೊರೊನಾ ಪ್ರಕರಣ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಳಿಕೆ ಹಾದಿಯಲ್ಲಿ ಕೊರೊನಾ ಪ್ರಕರಣ..! ಮಂಗಳೂರು :ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸದ್ಯ ಇಳಿಕೆ ಹಾದಿಯಲ್ಲಿದ್ದು, ಇಂದು ಕೇವಲ 132 ಕೊರೊನಾ ಪ್ರಕರಣ ದಾಖಲಾಗಿದೆ. ಆದರೆ ಕೊರೊನಾದಿಂದ ಸಾವನಪ್ಪುತ್ತಿರುವವರ ಸಂಖ್ಯೆ...

ಉಡುಪಿ 6 ಸಾವಿರ ದಾಟಿದ ಕೊರೊನಾ ಒಟ್ಟು ಸೊಂಕಿತರ ಸಂಖ್ಯೆ

ಉಡುಪಿ ; ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 282 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಆರು ಸಾವಿರ ದಾಟಿದೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 6201...

ಬಾಲಿವುಡ್ ಸ್ಟಾರ್ ನಿಧಿ ಅಗ್ರವಾಲ್..!

ಬಾಲಿವುಡ್ ಸ್ಟಾರ್ ನಿಧಿ ಅಗ್ರವಾಲ್...  ಸಮಯ ಸಿಕ್ಕಾಗ ಸೋಷಿಯಲ್ ಮೀಡಿಯಾ ಲೈವ್ ಬರುತ್ತಾ, ಅಭಿಮಾನಿಗಳ ಜೊತೆ ಮಾತನಾಡುತ್ತ ಕಾಲ ಕಳೆಯುವ ಹವ್ಯಾಸ ಇಟ್ಟುಕೊಟ್ಟಿದ್ದಾಳೆ ನಿಧಿ ಅಗ್ರವಾಲ್.. ಹೈದ್ರಾಬಾದ್ ನಲ್ಲಿ ನಲ್ಲಿ ಹುಟ್ಟಿ ಬಳಿಕ...

ಚಾಕಲೇಟ್ ಗಂಟಲಲ್ಲಿ ಸಿಲುಕಿ ಬಾಲಕ ಸಾವು

ಮಂಗಳೂರು: ಚಾಕಲೇಟ್ ಗಂಟಲಲ್ಲಿ ಸಿಲುಕಿದ ಪರಿಣಾಮ ಎಂಟು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಉಳ್ಳಾಲ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡದಲ್ಲಿ ಈ ದುರ್ಘಟನೆ ನಡೆದಿದೆ.ರಹೀಂ ಎಂಬವರ ಮಗ...

ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಗುಡ್​ಬೈ…!? ಹಸೆಮಣೆ ಏರಲು ಸಿದ್ದತೆ ಮಾಡ್ತಾ ಇದ್ದರಾ ಕರಾವಳಿ ಬೆಡಗಿ..!

ಬೆಂಗಳೂರು : ಟಾಲಿವುಡ್​ನ ಟಾಪ್ ನಟಿಯರ ನಡುವೆ ಭರ್ಜರಿ ಪೈಪೋಟಿಯನ್ನೇ ನಡೆಸುತ್ತಿರುವ ಕರಾವಳಿಯ ಬೆಡಗಿ ಸಿನಿಮಾ ಕ್ಷೇತ್ರಕ್ಕೆ ಗುಡ್‌ ಬೈ ಹೇಳ್ತಾರಾ..? ಹೀಗಂತಾ ಒಂದು ಸುದ್ದಿ ಹರಡಲು ಆರಂಭಿಸಿದೆ. 

38ರ ಅನುಷ್ಕಾ ಶೆಟ್ಟಿ ಈಗಲೂ ಬಹುಬೇಡಿಕೆಯ ನಟಿಯಾಗಿದ್ದಾರೆ. ಆದರೆ ಸಿನಿಮಾಗಳಿಗೆ ಬಂದ ಅಫರ್‌ ಗಳನ್ನು ಈ ನಟಿ ನಯವಾಗಿ ತಿರಸ್ಕರಿಸುತ್ತಿದ್ದರಂತೆ.

ಕಾರಣ ಮಾತ್ರ ನಿಗೂಢ. ತೆಲುಗು ಫಿಲ್ಮ್ ಇಂಡಸ್ಟ್ರೀಯಲ್ಲಿ ಈಗಲು ಟಾಪ್‌ ನಟಿಯಾಗಿದ್ದಾರೆ ಈ ಕರಾವಳಿ ಬೆಡಗಿ ಅನುಷ್ಕಾ. ಮಹಿಳಾ ಪ್ರಧಾನ ಚಿತ್ರಗಳ ಮೂಲಕ ಕಮಾಲ್ ಮಾಡುವ ಕರಾವಳಿ ಚೆಲುವೆಗೂ ಸರಿಸಾಟಿಯಾಗಿ ಸದ್ಯಕ್ಕಂತು ತೆಲುಗು ಚಿತ್ರರಂಗದಲ್ಲಿ ಮತ್ತೊಬ್ಬರಿಲ್ಲ.

ಟಾಲಿವುಡ್​ನ ಟಾಪ್ ನಟಿಯರ ನಡುವೆ ಭರ್ಜರಿ ಪೈಪೋಟಿಯನ್ನೇ ನಡೆಸುತ್ತಿರುವ ಅನುಷ್ಕಾ, ಈಗಲೂ ಬಹುಬೇಡಿಕೆಯ ನಟಿ ಎಂಬುದರಲ್ಲಿ ನೋ ಡೌಟ್.

ಅದರಲ್ಲೂ ಮಹಿಳಾ ಪ್ರಧಾನ ಚಿತ್ರಗಳ ಮೂಲಕ ಕಮಾಲ್ ಮಾಡುವ ಕರಾವಳಿ ಚೆಲುವೆಗೂ ಸರಿಸಾಟಿಯಾಗಿ ಸದ್ಯಕ್ಕಂತು ತೆಲುಗು ಚಿತ್ರರಂಗದಲ್ಲಿ ಮತ್ತೊಬ್ಬರಿಲ್ಲವೆಂದೇ ವಿಶ್ಲೇಷಿಸಲಾಗುತ್ತಿದೆ. ಗ್ಲಾಮರಸ್ ಪಾತ್ರಕ್ಕೂ ಸೈ, ಐತಿಹಾಸಿಕ ಚಿತ್ರಗಳಿಗೂ ಜೈ ಎಂದು ಅನುಷ್ಕಾ ಈಗಾಗಲೇ ಪ್ರೂ ಮಾಡಿದ್ದಾರೆ.

ಬಾಹುಬಲಿ ಸರಣಿಯಲ್ಲಿ ಮನೋಜ್ಞ ಅಭಿನಯ ನೀಡಿದ್ದ ನಟಿ ಆ ಬಳಿಕ ಕಾಣಿಸಿಕೊಂಡಿದ್ದು ಬೆರಳಣಿಕೆ ಚಿತ್ರಗಳಲ್ಲಿ ಮಾತ್ರ ಎಂಬುದೇ ಅಚ್ಚರಿ. ಬಾಹುಬಲಿ-2 ಬಳಿಕ ಭಾಗಮತಿ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದರು.

ಇದರ ಬೆನ್ನಲ್ಲೇ ಬಹು ಬಜೆಟ್​ ಚಿತ್ರ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಝಾನ್ಸಿ ರಾಣಿಯಾಗಿ ವಿಶೇಷ ಪಾತ್ರದಲ್ಲಿ ಕತ್ತಿ ಝಳಪಳಿಸಿದ್ದರು. ಬಾಹುಬಲಿ-2 ಬಳಿಕ ಭಾಗಮತಿ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದರು.

ಇದರ ಬೆನ್ನಲ್ಲೇ ಬಹು ಬಜೆಟ್​ ಚಿತ್ರ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಝಾನ್ಸಿ ರಾಣಿಯಾಗಿ ವಿಶೇಷ ಪಾತ್ರದಲ್ಲಿ ಕತ್ತಿ ಝಳಪಳಿಸಿದ್ದರು. ಇನ್ನು ದ್ವಿಭಾಷಾ ಚಿತ್ರ ನಿಶ್ಶಬ್ದಂ ನಲ್ಲಿ ಅನುಷ್ಕಾ ಮೂಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಕೊರೋನಾ ಕಾರಣದಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ನಿಶ್ಶಬ್ದಂ ಚಿತ್ರದ ಬಳಿಕ ಹೊಸ ಸಿನಿಮಾಗಳನ್ನ ಒಪ್ಪಿಕೊಳ್ಳದೇ ಅನುಷ್ಕಾ ಶೆಟ್ಟಿ ಸೈಲೆಂಟಾಗಿದ್ದನ್ನು ನೋಡಿದ್ರೆ ಚಿತ್ರರಂಗಕ್ಕೆ ಗುಡ್​ ಬೈ ಹೇಳಿ ಹಸೆಮಣೆ ಏರುವ ಸಿದ್ದತೆ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿದೆ.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.