Connect with us

DAKSHINA KANNADA

ಬೆಂದೂರುವೆಲ್ ಸರ್ಕಲ್ ಬಳಿ ಮತ್ತೊಂದು ಅಪಘಾತ; ಬಸ್ ಹೊಡೆದು ಮಹಿಳೆ ಸಾವು – ಬಸ್ಸಿನೊಂದಿಗೆ ಚಾಲಕ ಪರಾರಿ..!

Published

on

ನಗರದ ಬೆಂದೂರು ಬಳಿ ಮೊನ್ನೆ ತಾನೆ ತಾಯಿ- ಮಗು ಪ್ರಯಾಣಿಸುತ್ತಿದ್ದ ಸ್ಕೂಟಿ ಮೇಲೆ ಬಸ್ ಹರಿದು ಮಗು ದಾರುಣವಾಗಿ ಮೃತಪಟ್ಟ ಸ್ಥಳದಲ್ಲೇ ಇಂದು ಮದ್ಯಾಹ್ನ ಮತ್ತೊಂದು ಅಪಘಾತ ಸಂಭವಿಸಿದೆ.

ಮಂಗಳೂರು : ಮಂಗಳೂರು ನಗರದಲ್ಲಿ ಬಸ್‌ ಗಳ ಮೇಲಾಟ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಕಿಲ್ಲರ್ ಬಸ್‌ ಗಳ ಧಾವಂತಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ.

ನಗರದ ಬೆಂದೂರು ಬಳಿ ಮೊನ್ನೆ ತಾನೆ ತಾಯಿ- ಮಗು ಪ್ರಯಾಣಿಸುತ್ತಿದ್ದ ಸ್ಕೂಟಿ ಮೇಲೆ ಬಸ್ ಹರಿದು ಮಗು ದಾರುಣವಾಗಿ ಮೃತಪಟ್ಟ ಸ್ಥಳದಲ್ಲೇ ಇಂದು ಮದ್ಯಾಹ್ನ ಮತ್ತೊಂದು ಅಪಘಾತ ಸಂಭವಿಸಿದೆ.

ನಡೆದುಕೊಂಡು ಹೋಗುತ್ತಿದ್ದ ಸುಮಾರು 65 ವರ್ಷ ಪ್ರಾಯದ ಮಹಿಳೆ ಮೇಲೆ ಬಸ್ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಮಹಿಳೆಯನ್ನು ಐರಿನ್ ಡಿಸೋಜಾ ಎಂದು ಗುರುತ್ತಿಸಲಾಗಿದೆ.

ಸುಮಾರು 12:00 ಗಂಟೆಗೆ  ಬೆಂದೂರುವೆಲ್ ಸರ್ಕಲ್ ನಲ್ಲಿ ಈ ಘಟನೆ ನಡೆದಿದ್ದು, KA-19-AA-2282 ನಂಬ್ರದ 4B ಆ್ಯಸ್ಲೇನ್ ಟ್ರಾವೆಲ್ಸ್ ಸಿಟಿ ಬಸ್  ಸರಿಪಳ್ಳದಿಂದ ಮಂಗಳೂರು ನಗರಕ್ಕೆ ಬರುತ್ತಿದ್ದಾಗ ಬೆಂದೂರುವೆಲ್ ಸರ್ಕಲ್ ನಲ್ಲಿ ಪ್ರಯಾಣಿಕರನ್ನು ಇಳಿಸಿದ್ದು, ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಐರಿನ್ ಬೆಂದೂರುವೆಲ್ ಸರ್ಕಲ್ ನಲ್ಲಿ ಇಳಿದು ಬಸ್ಸಿನ ಮುಂಬಾಗ ರಸ್ತೆಯನ್ನು ದಾಟುತ್ತಿದ್ದಾಗ ಅದೇ ಬಸ್  ಡಿಕ್ಕಿ ಹೊಡೆದು ಐರಿನ್ ಮೇಲೆ ಹರಿದಿದೆ.

ಈ ಸಂದರ್ಭ ಬಸ್ಸಿನ ಮುಂಭಾಗದ ಟಯರ್ ಐರಿನ್ ಮೇಲೆ ಹರಿದು ಹೋಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ಬಳಿಕ ಚಾಲಕ ಬಸ್ ನೊಂದಿಗೆ ಪರಾರಿಯಾಗಿದ್ದಾನ. ಪರಾರಿಯಾಗಿದ್ದ ಬಸ್ ಗುರುತು ಪತ್ತೆ ಹಚ್ಚಿದ್ದು ಪೊಲೀಸರು ಬಂಧಿಸುವ ಪ್ರಕ್ರೀಯೇ ಆರಂಭಿಸಿದ್ದಾರೆ.

ಸ್ಥಳಕ್ಕೆ ಸಂಚಾರಿ ಎಸಿಪಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದು, ಈ ಸಂದರ್ಭ ಸಾರ್ವಜನಿಕರು ಪೋಲಿಸರನ್ನ ತರಾಟೆಗೆ ತಗೊಂಡಿದ್ದಾರೆ. ಮಂಗಳೂರು ನಗರದಲ್ಲಿ ಸಿಟಿ, ಸರ್ವಿಸ್ ಬಸ್‌ಗಳ ಮೇಲಾಟ ಹೆಚ್ಚುತ್ತಿದ್ದು ಕಿಲ್ಲರ್ ಬಸ್‌ ಗಳೆಂಬ ಹಣೆ ಪಟ್ಟಿ ಮಂಗಳೂರಿಗೂ ಬಂದಿದೆ.

ಮತ್ತೊಂದೆಡೆ ಕಾನೂನಿನ ಹೆದರಿಕೆ ಇಲ್ಲದ ಕಾರಣ ರಸ್ತೆಗಳಲ್ಲೇ, ಫುಟ್ ಪಾತ್‌ಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಯಿಂದ ಅಮಾಯಕರು ವಾಹನಗಳ ಅಡಿಗೆ ಬಿದ್ದು ಪ್ರಾಣಕಳಕೊಳ್ಳಿತಿದ್ದರೆ ಮತ್ತೆ ಕೆಲವರು ಶಾಶ್ವತವಾಗಿ ಅಂಗಊನರಾಗಿರಬೇಕಾಗಿದೆ.

3 Comments

3 Comments

  1. Roshan kumar

    30/03/2023 at 1:59 PM

    ಮಂಗಳೂರು ಖಾಸಗಿ ಬಸ್ಸುಗಳಿಗೆ speed limiter device ಅಳವಡಿಸಬೇಕು.

  2. ARUN

    30/03/2023 at 2:05 PM

    THIS IS MISTAKE OF MCC WHO GAVE PERMISSION (TAKING BRIBE )TO BUILD BUILDING WITHOUT PROPER PARKING SPACE… ALL VEHICLE PARKED IN FOOTPATH AND GENERAL PUBLIC WALKS IN ROAD SO THEY WILL HIT BY THE BUS … EVEN NO ZEBRA CROSS TO CROSS THE ROAD….. SO WHERE IS THE ACTUAL PROBLEM ??????

  3. Naveen kulshekar

    02/04/2023 at 12:40 PM

    Let government take over the city and service bus transport and provide safe travel service to the people.This is because private bus service providers are cruel,they see their profits. They don’t consider passangers
    Are their bread providers no value for the life,no speed limit etc.

Leave a Reply

Your email address will not be published. Required fields are marked *

DAKSHINA KANNADA

ದೊಡ್ಡವರ ಜಗಳದಲ್ಲಿ ಇಹಲೋಕ ತಜ್ಯಿಸಿದ 3 ರ ಕಂದಮ್ಮ…

Published

on

ಮಂಗಳೂರು (ಬೆಳಗಾವಿ): ಅದು ಎರಡು ಕುಟುಂಬಗಳ ನಡುವೆ ನಡೆದಿರೋ ಜಗಳ . ಆದ್ರೆ ಆ ಜಗಳಕ್ಕೆ ಏನೂ ಅರಿಯದ ಮೂರು ವರ್ಷದ ಪುಟ್ಟ ಮಗು ಬಲಿಯಾಗಿದೆ. ಪಾಪಿಯೊಬ್ಬ ಮಗುವಿನ ಎದೆಗೆ ಕಾಲಿಟ್ಟು ಮಗುವಿನ ಉಸಿರು ನಿಲ್ಲಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಎಂಬ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ದೊಡ್ಡವರ ಜಗಳದಲ್ಲಿ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಎಂಬ ಮೂರು ವರ್ಷದ ಮಗು ಹತವಾಗಿದೆ. ಜೋತಿಭಾ ತುಕಾರಾಮ ಬಾಬಬರ ಎಂಬಾತ ಮಗುವಿನ ಜೀವಕ್ಕೆ ಕುತ್ತು ತಂದ ಆರೋಪಿಯಾಗಿದ್ದಾನೆ.
ಹಣಕಾಸಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ತಾರಕ್ಕೇರಿದಾಗ ಸಿಟ್ಟಿನಲ್ಲಿ ಜೋತಿಬಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ನಿಂತಿದ್ದಾನೆ. ಈ ವೇಳೆ ಮಗುವನ್ನು ಆತನ ಕಾಲಿನ ಅಡಿಯಿಂದ ತೆಗೆಯಲು ಮಗುವಿನ ತಾಯಿ ಯತ್ನಿಸಿದ್ದಾಳೆ . ಆ ವೇಳಗೆ ಇನ್ನಷ್ಟು ಗಟ್ಟಿಯಾಗಿ ಕಾಲಿನಿಂದ ಮಗುವಿನ ಎದೆಗೆ ಕಾಲಿನಿಂದ ಒತ್ತಿದ ಕಾರಣ ಮಗು ಉಸಿರು ನಿಲ್ಲಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Continue Reading

DAKSHINA KANNADA

ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

Published

on

ನ್ಯೂಯಾರ್ಕ್‌ : ಅಮೇರಿಕಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಹಿಳೆಯರು ಇಹಲೋಕ ತ್ಯಜಿಸಿದ್ದಾರೆ. ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಕಾರಣ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಕಾರು ಪ್ರಯಾಣಿಸುತ್ತಿದ್ದು, ಎಲ್ಲಾ ಲೇನ್‌ಗಳನ್ನು ದಾಟಿ, ಹಂಪ್‌ ಮೇಲೆ ವೇಗವಾಗಿ ಏರಿತ್ತು. ಈ ಕಾರಣದಿಂದ ಕನಿಷ್ಟ 20 ಅಡಿಗಳಷ್ಟು ಮೇಲಕ್ಕೆ ಹಾರಿ ಸೇತುವೆಯ ಮುಂದೆ ಇದ್ದ ಮರಗಳಿಗೆ ಕಾರು ಅಪ್ಪಳಿಸಿದೆ. ಗುಜಾರಾತ್ ಮೂಲದ ಮೂವರು ಮಹಿಳೆಯರು ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗುಜರಾತ್‌ನ ಆನಂದ್ ಜಿಲ್ಲೆಯ ರೇಖಾಬೆನ್‌ ಪಟೇಲ್ , ಸಂಗೀತಾಬೆನ್ ಪಟೇಲ್ ಹಾಗೂ ಮನೀಶಾಬೆನ್ ಪಟೇಲ್‌ ಅವರು ಇಹಲೋಕ ತ್ಯಜಿಸಿದವರಾಗಿದ್ದಾರೆ.

 

ಕಾರು ನಿಗದಿಪಡಿಸಿದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಪ್ರಮಾಣ ಎಷ್ಟಿತ್ತು ಮತ್ತು ಕಾರು ಎಷ್ಟು ಎತ್ತರಕ್ಕೆ ಹಾರಿತ್ತು ಅನ್ನೋದಿಕ್ಕೆ ಮರದ ಮೇಲಿರುವ ಕಾರಿನ ಅವಶೇಷಗಳು ಸಾಕ್ಷಿ ಎಂದು ಅವರು ಹೇಳಿದ್ದಾರೆ. ಮರದ ಮೇಲೆ ಬಿದ್ದ ಕಾರು ಛಿದ್ರಗೊಂಡು ಕಾರಿನ ಅವಶೇಷಗಳು ಚೆಲ್ಲಾಪಿಲ್ಲಿಯಾಗಿತ್ತು.


ದಕ್ಷಿಣ ಕೆರೊಲಿನಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡಗಳು, ಪೊಲೀಸರು ಆಗಮಿಸಿದ್ದಾರೆ. ಅಪಘಾತದಲ್ಲಿ ಓರ್ವ ಬದುಕಿ ಉಳಿದಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು ಈಗಲೇ ಏನೂ ಹೇಳಲು ಆಗದ ಪರಿಸ್ಥಿತಿಯಲ್ಲಿದ್ದಾನೆ. ವಾಹನ ಅಪಘಾತವಾದ ತಕ್ಷಣ ಅದರಲ್ಲಿದ್ದ ತಾಂತ್ರಿಕ ವ್ಯವಸ್ಥೆಯ ಕಾರಣ ತಕ್ಷಣ ಕುಟುಂಬ ಸದಸ್ಯರಿಗೆ ಅಲರ್ಟ್‌ ಮೆಸೆಜ್ ರವಾನೆಯಾಗಿತ್ತು. ಹೀಗಾಗಿ ತಕ್ಷಣ ಕುಟುಂಬಸ್ಥರು ಕೂಡಾ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.

Continue Reading

DAKSHINA KANNADA

ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣ; ಮೂಡುಬಿದಿರೆ ಸ್ವಾಮೀಜಿ ಭಾಗಿ

Published

on

ನವದೆಹಲಿ : ದೆಹಲಿಯ ರಾಣಾ ಪ್ರತಾಪ್ ನಗರ ದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣವು ರಾಷ್ಟ್ರ ಸಂತ 108 ಉಪಾಧ್ಯಾಯ ಗುಪ್ತಿ ಸಾಗರ ಮುನಿ ರಾಜ್ ಮಾರ್ಗದರ್ಶನ ಪಾವನ ಸಾನ್ನಿಧ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿತು.

3 ಅಡಿ ಎತ್ತರ ದ ಪಂಚಲೋಹದ ಇಪ್ಪತ್ತನಾಲ್ಕು ತೀರ್ಥಂಕರ ಹಾಗೂ ವಿವಿಧ ಜಿನ ಬಿಂಬಗಳ ಸ್ಥಾಪನೆ ಬೆಳಿಗ್ಗೆ 7.30 ರಿಂದ 9.00ರ ವರೆಗೆ ಮೋಕ್ಷ ಕಲ್ಯಾಣ ಪೂಜೆ, ದೆಹಲಿ ವಿಶ್ವವಿದ್ಯಾಲಯ ಸ್ಪೋರ್ಟ್ಸ್ ಕ್ಲಬ್ ಸಭಾಂಗಣ ಹಾಗೂ ಮೆರವಣಿಗೆ ಮೂಲಕ ಮೂರ್ತಿ 3 ಕಿ.ಮೀ ದೂರದ ಬಸದಿಗೆ ತೆರಳಿ ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1 ಗಂಟೆ ವರೆಗೂ ಮೂರ್ತಿ ಸ್ಥಾಪನೆ ದೆಹಲಿ ರಾಣಾ ಪತ್ ನಗರ ಬಸದಿಯಲ್ಲಿ ಜರುಗಿತು.


ಬಳಿಕ ಧಾರ್ಮಿಕ ಸಭೆಯಲ್ಲಿ ಧರ್ಮೋಪದೇಶ ನೀಡಿದ ಮೂಡುಬಿದಿರೆ ಸ್ವಾಮೀಜಿ, ಜಿನ ಬಿಂಬ ಸ್ಥಾಪನೆಯಿಂದ ಆತ್ಮ ಕಲ್ಯಾಣ ಹಾಗೂ ಪರ ಕಲ್ಯಾಣವಾಗುವುದು ಜನ ಸಂಸ್ಕೃತಿ ಸಂಸ್ಕಾರ ಧರ್ಮದಿಂದ ಸಾಧ್ಯ ಎಂದು ನುಡಿದರು. ಈ ಸಂದರ್ಭ ಸುಂದರ ಜಿನಾಲಯ ಸ್ಥಾಪನೆಗೆ ಕಾರಣರಾದ ದಾನಿಗಳನ್ನು ಗೌರವಿಸಲಾಯಿತು.


ರಾಷ್ಟ್ರ ಸಂತ 108 ಗುಪ್ತಿ ಸಾಗರ ಮುನಿ ರಾಜ್ ಮೂಡು ಬಿದಿರೆ ಶ್ರೀಗಳವರಿಗೆ ಶಾಸ್ತ್ರ ಸ್ಮರಣಿಕೆ ನೀಡಿದರು. ಬಳಿಕ ದೆಹಲಿ ಗ್ರೀನ್ ಪಾರ್ಕ್ ಬಸದಿಯಲ್ಲಿ ಉಪಸ್ಥಿತರಿದ್ದ 108 ರಾಷ್ಟ್ರ ಸಂತ ಆಚಾರ್ಯ ಪ್ರಾಗ್ಯ ಸಾಗರ ಮುನಿಮಹಾರಾಜ್, ಮೂಡುಬಿದಿರೆ ಶ್ರೀಗಳಿಗೆ ಗೌರವಾನ್ವಿತ ಪ್ರಧಾನಮಂತ್ರಿಗಳಿಂದ ಭಗವಾನ್ ಮಹಾವೀರ ಜನ್ಮ ಕಲ್ಯಾಣದಂದು ನಿರ್ವಾಣ ವರ್ಷ 2550ರ ಅಂಗವಾಗಿ ಬಿಡುಗಡೆಗೊಳಿಸಿದ ರೂ. 100 ರ ನಾಣ್ಯ ಹಾಗೂ ಅಂಚೆ ಇಲಾಖೆ ಬಿಡುಗಡೆಗೊಳಿಸಿದ ಪಾವಪುರಿ ಸಿದ್ದ ಕ್ಷೇತ್ರ ಫಸ್ಟ್ ಡೇ ಕವರ್ ನೀಡಿ ಹರಸಿ ಆಶೀರ್ವಾದ ಮಾಡಿದರು.

ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!

ಈ ಸಂದರ್ಭ ಮೂಡುಬಿದಿರೆ ಸ್ವಾಮೀಜಿ ಈ ವರ್ಷ ಪೂರ್ತಿ ಆಚಾರ್ಯ ಶಾಂತಿ ಸಾಗರ ಆಚಾರ್ಯ ಶತಾಬ್ದಿ ವರ್ಷ ಹಾಗೂ ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಕಲ್ಯಾಣ ವಿವಿಧೆಡೆ ಆಚರಿಸಲು ಸಂಕಲ್ಪ ಮಾಡಿದರು.

Continue Reading

LATEST NEWS

Trending