FILM
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ
ಬೆಂಗಳೂರು: ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಮುಂದಿನ ವರ್ಷ ಒಳ್ಳೆ ಹುಡುಗ ಸಿಕ್ಕರೆ ಮದುವೆ ಗ್ಯಾರಂಟಿ ಎಂದಿದ್ದಾರೆ.
ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆ್ಯಂಕರ್ ಅಕುಲ್ ಅವರು ಅನುಶ್ರೀ ಅವರ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಾತನಾಡಿದ ಅನುಶ್ರೀ ಎಲ್ಲ ಹುಡಿಗಿಯರಂತೆ ನನಗೂ ಮದುವೆ ಆಗಬೇಕು ಎಂದಿದೆ. ನನಗೂ ಬಾಳ ಸಂಗಾತಿ ಬೇಕು ಎಂದಿದೆ. ಎಲ್ಲದಕ್ಕೂ ಸಮಯ ಬರಬೇಕು. ಸರಿಯಾದ ಟೈಮ್ ಅಲ್ಲಿ ಸರಿಯಾದ ವ್ಯಕ್ತಿ ಬರಬೇಕು. ನಾನು ಮದುವೆ ಆಗಬೇಕು ಎಂದು ಮನಸ್ಸು ಮಾಡಬೇಕಿತ್ತು. ಈವರೆಗೆ ಮಾಡಿರಲಿಲ್ಲ. ಈಗ ಮಾಡಿದ್ದೇನೆ. ಮುಂದಿನ ವರ್ಷ ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ. ಆ ವ್ಯಕ್ತಿ ಬರಲಿ ಎಂದು ಕಾಯುತ್ತೇನೆ. ಬಂದರೆ ನಾನು ಅವರನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ’ ಎಂದರು ಅವರು.
ಅನುಶ್ರೀ ಅವರು ಲವ್ ಮ್ಯಾರೇಜ್ ಆಗ್ತಾರಾ ಅಥವಾ ಅವರದ್ದು ಅರೇಂಜ್ ಮ್ಯಾರೇಜ್ ಎಂಬ ಪ್ರಶ್ನೆ ಮೂಡಿದೆ. ಈ ವಿಚಾರ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಅವರು ಆ್ಯಂಕರಿಂಗ್ ಜೊತೆ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು ಅಲ್ಲಿ ಅನೇಕ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಾರೆ.
FILM
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ: 2 ಕೋಟಿ ರೂ.ಗೆ ಬೇಡಿಕೆ
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಮತ್ತೆ ಜೀವ ಬೆದರಿಕೆ ಬಂದಿದೆ. ಜೊತೆಗೆ ಆ ವ್ಯಕ್ತಿಯು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ.
ಮೇಲಿಂದ ಮೇಲೆ ನಟ ಸಲ್ಮಾನ್ ಖಾನ್ ಜೀವ ಬೆದರಿಕೆಗಳು ಬರುತ್ತಲೇ ಇವೆ. ಇದೀಗ ಜೀವ ಬೆದರಿಕೆ ಸಂದೇಶದ ಜೊತೆಗೆ 2 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ತಾವು ಕೇಳಿದಷ್ಟು ಹಣ ನೀಡದೆ ಇದ್ದರೆ ಹತ್ಯೆ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ.
ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಮುಂಬೈನ ವರ್ಲಿ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಎನ್‌ಸಿಪಿ ಶಾಸಕ ದಿವಂಗತ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಹಾಗೂ ನಟ ಸಲ್ಮಾನ್ ಖಾನ್ ಇಬ್ಬರಿಗೂ ಜೀವ ಬೆದರಿಕೆ ಬಂದಿತ್ತು. ಇದರ ಬೆನ್ನಲ್ಲೇ ಬೆದರಿಕೆಯೊಡ್ಡಿದ ಆರೋಪಿಯನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದರು.
FILM
ಯಶ್ ವಿರುದ್ಧ ಎಫ್‌ಐಆರ್‌ಗೆ ಅರಣ್ಯ ಸಚಿವ ಸೂಚನೆ-ಅರೆಸ್ಟ್ ಆಗ್ತಾರಾ ಕೆಜಿಎಫ್ ಸ್ಟಾರ್?
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಕೆಜಿಎಫ್, ಕೆಜಿಎಫ್ 2 ಭಾರೀ ಸಕ್ಸಸ್ ನಂತರ ಟಾಕ್ಸಿಕ್ ಎಂಬ ಪ್ಯಾನ್ ಇಂಡಿಯಾ ಮೂವಿ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯೋಕೆ ಯಶ್ ಕೂಡ ಸಜ್ಜಾಗಿದ್ದಾರೆ. ಈ ಹೊತ್ತಲ್ಲೇ ನಟ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
ಟಾಕ್ಸಿಕ್ ಚಿತ್ರದ ಸೆಟ್‌ಗಾಗಿ ನೂರಾರು ಮರಗಳನ್ನು ಕಡಿದಿರುವ ಆರೋಪ ಕೇಳಿ ಬಂದಿದೆ.ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಶೂಟಿಂಗ್‌ಗಾಗಿ ಎಚ್‌ಎಂಟಿ ಪ್ರದೇಶದಲ್ಲಿ ಬೃಹತ್ ಸೆಟ್ ಅನ್ನು ಹಾಕಿ ಚಿತ್ರೀಕರಣ ಮಾಡಲಾಗಿತ್ತು.ಈ ವೇಳೆ ಅಲ್ಲಿನ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಸೆಟ್ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಟ್‌ಲೈಟ್ ಇಮೇಜ್ ಪಡೆದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪರಿಶೀಲನೆ ನಡೆಸಿದ್ದಾರೆ. ಸ್ಯಾಟಲೈಟ್ ಇಮೇಜ್ ಪಡೆಯುವ ವೇಳೆ ನೂರಾರು ಮರಗಳು ನೆಲಸಮವಾಗಿದ್ದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಅರಣ್ಯ ಕಾಯ್ದೆ ಅಡಿ ಕೇಸ್ ದಾಖಲಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸೆಟ್ ಹಾಕಿರೋ ಸ್ಥಳಕ್ಕೂ ಅರಣ್ಯ ಸಚಿವ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೇಸ್ ದಾಖಲಾದ ಹಿನ್ನಲೆ ನಟ ಯಶ್ ಮತ್ತು ಟಾಕ್ಸಿಕ್ ಟೀಂ ಅರೆಸ್ಟ್ ಭೀತಿಗೆ ಸಿಲುಕಿದೆ.
BIG BOSS
ಬಿಗ್ಬಾಸ್ ಮನೆಗೆ ಲಾಯರ್ ಜಗದೀಶ್ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಂತೆ? ಗುಟ್ಟು ಬಿಚ್ಚಿಟ್ಟ ಹಂಸಾ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರಿಂದ ನಾಲ್ಕನೇ ಸ್ಪರ್ಧಿಯಾಗಿ ಹಂಸಾ ಅವರು ಆಚೆ ಬಂದಿದ್ದಾರೆ. ನಾಲ್ಕು ವಾರಗಳವರೆಗೆ ಬಿಗ್ಬಾಸ್ ಮನೆಯಲ್ಲಿ ಕಾಲ ಕಳೆದ ಹಂಸಾ ಅವರು ಕೊನೆಯ ಕ್ಷಣದಲ್ಲಿ ದೊಡ್ಮನೆಯಿಂದ ಔಟ್ ಆಗಿದ್ದಾರೆ.
ಇನ್ನು, ಬಿಗ್ಬಾಸ್ ಮನೆಯಿಂದ ಆಚೆ ಬಂದ ಕೂಡಲೇ ಸ್ಪರ್ಧಿಗಳ ಬಗ್ಗೆ ಅದರಲ್ಲೂ ಲಾಯರ್ ಜಗದೀಶ್ ಅವರ ಬಗ್ಗೆ ಕೆಲವೊಂದು ವಿಚಾರದ ಬಗ್ಗೆ ಮಾತಾಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಹಂಸಾ ಹಾಗೂ ಲಾಯರ್ ಜಗದೀಶ್ ಒಳ್ಳೆಯ ಸ್ನೇಹಿತರಾಗಿದ್ದರು. ಗಲಾಟೆ ಮಾಡುತ್ತಾ ಮಾಡುತ್ತಾ ಒಳ್ಳೆಯ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕಿಚ್ಚ ಸುದೀಪ್ ಮುಂದೆಯೂ ಈ ಇಬ್ಬರು ಡ್ಯಾನ್ಸ್ ಮಾಡಿ ವೀಕ್ಷಕರ ಮೂಖದಲ್ಲಿ ನಗು ಹುಟ್ಟಿಸಿದ್ದರು.
ಆದರೆ ಅದು ಜಾಸ್ತಿ ದಿನಗಳ ಕಾಲ ಉಳಿಯಲಿಲ್ಲ. ಲಾಯರ್ ಜಗದೀಶ್ ಅವರು ಮಹಿಳಾ ಸ್ಪರ್ಧಿಗಳಿಗೆ ಬೈದಿದ್ದಕ್ಕೆ ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದರು. ಅಲ್ಲದೇ ಲಾಯರ್ ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್ ಅವರನ್ನು ಆಚೆ ಕಳುಹಿಸಲಾಗಿತ್ತು. ಇನ್ನೂ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಈ ಬಗ್ಗೆ ಮಾತಾಡಿದ ಹಂಸ ಅವರು ಲಾಯರ್ ಜಗದೀಶ್ ಅವರ ಮತ್ತೆ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡಬೇಕು ಅಂತ ಹೇಳಿದ್ದಾರೆ.
ನನಗೆ ಬಿಗ್ಬಾಸ್ ಮನೆಯಲ್ಲಿ ಅವರ ಜೊತೆಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಈಗ ಆಚೆ ಬಂದಿದ್ದೀನಿ. ಅವರು ಮನೆಗೆ ಹೋಗ್ತೀನಿ. ಜಗದೀಶ್ ಅವರ ಜೊತೆಗೆ ಮಾತಾಡಬೇಕು. ಯಾಕೆ ನನ್ನ ಬಗ್ಗೆ ಹಾಗೇ ಹೇಳಿದ್ರಿ ಅಂತ ಪ್ರಶ್ನೆ ಮಾಡ್ತೀನಿ. ಬಿಗ್ಬಾಸ್ ಮನೆಗೆ ಜಗದೀಶ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಗೆಲ್ಲುತ್ತಾರೆ. ಜಗದೀಶ್ ಅವರು ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟು ಬಂದ್ರೆ ಸಖತ್ ಮಜಾ ಇರುತ್ತೆ. ನನಗೆ ಅನಿಸುತ್ತೆ ಜಗದೀಶ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ. ಮಾತಲ್ಲಿ ಸ್ವಲ್ಪ ಹಿಡಿತವಿದ್ದರೆ ಜಗದೀಶ್ ಅವರೇ ಬಿಗ್ಬಾಸ್ ವಿನ್ನರ್ ಆಗ್ತಾರೆ ಅಂತ ಹೇಳಿದ್ದಾರೆ.
- BIG BOSS3 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- BIG BOSS6 days ago
ಕಲರ್ಸ್ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್ಗೆ ಗುಡ್ ನ್ಯೂಸ್
- LATEST NEWS2 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- FILM6 days ago
ತುಳು ಚಿತ್ರರಂಗಕ್ಕೆ ಕಾಲಿಟ್ಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್