Home ಕರ್ನಾಟಕ ವಾರ್ತೆ ಅಮೂಲ್ಯ ವಿರುದ್ಧ ಸಂಸದ ಹೆಗ್ಗಡೆ ವಾಗ್ದಾಳಿ: ಕಠಿಣ ಶಿಕ್ಷೆಗೆ ಆಗ್ರಹ

ಅಮೂಲ್ಯ ವಿರುದ್ಧ ಸಂಸದ ಹೆಗ್ಗಡೆ ವಾಗ್ದಾಳಿ: ಕಠಿಣ ಶಿಕ್ಷೆಗೆ ಆಗ್ರಹ

ಅಮೂಲ್ಯ ವಿರುದ್ಧ ಸಂಸದ ಹೆಗ್ಗಡೆ ವಾಗ್ದಾಳಿ: ಕಠಿಣ ಶಿಕ್ಷೆಗೆ ಆಗ್ರಹ 

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಸಿಎಎ ವಿರೋಧಿ ಹೋರಾಟಗಾರ್ತಿ ಅಮೂಲ್ಯ ಲಿಯೋನ ಅವರನ್ನು ಪಾಕಿಸ್ತಾನ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಇದೀಗ ಸಂಸದ, ಸಚಿವ ಅನಂತ್ ಕುಮಾರ್ ಹೆಗಡೆ ಅವರು ತೀಕ್ಷ್ನ ಪ್ರತಿಕ್ರಿಯೆ ನೀಡಿದ್ದಾರೆ. ‘ಬೆಂಗಳೂರಿನಲ್ಲಿ ಸಿಎಎ ವಿರುದ್ಧ ನಡೆದ ಘಟನೆಯಿಂದ ಇಡೀ ಕರ್ನಾಟಕದ ಪ್ರಜ್ಞಾವಂತ ಜನತೆ ತಲೆತಗ್ಗಿಸುವಂತಾಗಿದೆ. ಎಡಪಂಥೀಯ ಚಿಂತಕಿ ಎಂದು ಕರೆಸಿಕೊಳ್ಳುವ ಹುಡುಗಿಯೊಬ್ಬಳು ವೇದಿಕೆಯ ಮೇಲೆ ಪಾಕಿಸ್ತಾನ  ಪರ’ ಅಂತ ಘೋಷಣೆ ಕೂಗುತ್ತಾಳೆ. ಅದಕ್ಕೆ ಇಡೀ ಸಭೆಯಲ್ಲಿರೋ ಸಾವಿರಾರು ಜನತೆ ಸಾಕ್ಷಿಯಾಗುತ್ತದೆ. ಕರ್ನಾಟಕದ ನೆಲದಲ್ಲಿ ಇದು ನಡೆಯಬಾರದು. ಕರ್ನಾಟಕದ ಪ್ರಜ್ಞಾವಂತ ಜನತೆ ಇದಕ್ಕೆ ಸೂಕ್ತ ರೀತಿಯ ಉತ್ತರ ಕೊಡಬೇಕು. ಇಂತಹ ದೇಶದ್ರೋಹಿ ಚಟುವಟಿಕೆಯನ್ನು ಕರ್ನಾಟಕದವರು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವೇ ಇಲ್ಲ. ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

‘ಇತ್ತೀಚಿನ ದಿನಗಳಲ್ಲಿ ಎಡಪಂಥೀಯ ವಿಚಾರಗಳು ಎಂಬುದು ದೇಶದ್ರೋಹಿ ವಿಚಾರವಾಗಿ ಮಾರ್ಪಟ್ಟಿದೆ. ಸಿಎಎ ಹೋರಾಟ ಇತ್ತೀಚಿನ ದಿನಗಳಲ್ಲಿ ದೇಶದ್ರೋಹದ ಹೋರಾಟವಾಗಿದೆ. ಅಲ್ಲದೇ ಸ್ಪಷ್ಟವಾಗಿ ಇದು ಹಿಂದುತ್ವದ ವಿರುದ್ಧದ ಹೋರಾಟವಾಗುತ್ತಿದೆ.

ಇದೀಗ ಬರೀ ಅವಳ ಮೇಲೆ ಕೇಸು ದಾಖಲಿಸುವುದಷ್ಟೇ ಅಲ್ಲದೇ ಆ ವೇದಿಕೆಯಲ್ಲಿದ್ದವರೆಲ್ಲರ ಮೇಲೆ ಹಾಗೂ ಕಾರ್ಯಕ್ರಮದ ಆಯೋಜಕರ ಮೇಲೂ ದೇಶದ್ರೋಹದ ಆಪಾದನೆ ಹೊರಿಸಿ, ಬಂಧಿಸಿ, ಕೇಸು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ದೇಶದ್ರೋಹಿಗಳ ಆಡಂಬರ ಇದಾಗಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಲಿಕಾನ್ ಸಿಟಿಯ ಫ್ರೀಡಂ ಪಾರ್ಕ್ ನಲ್ಲಿ ನೆನ್ನೆ ನಡೆದ ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಂಸದ ಒವೈಸಿ ಸಹಿತ ಹಲವಾರು ಸಿಎಎ ವಿರೋಧಿ ಹೋರಾಟಗಾರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಅಮೂಲ್ಯ ಲಿಯೋನಾ ಅವರು ಮಾತನಾಡಲು ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ ಪಾಕಿಸ್ಥಾನ ಪರ’ ಎಂದು ಘೋಷಣೆ ಕೂಗಿದ್ದಾಳೆ. ಕೂಡಲೇ ವೇದಿಕೆ ಏರಿದ ಪೊಲೀಸರು ಅವಳನ್ನು ವೇದಿಕೆಯಿಂದಲೇ ವಶಕ್ಕೆ ಪಡೆದಿದ್ದಾರೆ.

ವಿಡಿಯೋಗಾಗಿ

- Advertisment -

RECENT NEWS

ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ

ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ ಬೆಳ್ತಂಗಡಿ: ಒಂದೆಡೆ ಕೊರೊನಾ ವೈರಸ್ ಭೀತಿಯಾದ್ರೆ, ಇತ್ತ ಮಳೆರಾಯ ಕೂಡ ತನ್ನ ಕೆಲಸ ಶುರು ಹಚ್ಚಿಕೊಂಡು ಬಿಟ್ಟಿದ್ದಾನೆ. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿ ಜನತೆಗೆ ವರುಣ...

ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.?

ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.? ಕೋವಿಡ್ 19 ನ ವ್ಯಾಪಕ ಹರಡುವಿಕೆಯನ್ನು ತಡೆಯಲು ದೇಶ  ಸಂಪೂರ್ಣ ಲಾಕ್ ಡೌನ್ ಆಗಿದೆ. ಇಡೀ ದೇಶದಲ್ಲಿ ಚಟುವಟಿಕೆ ಸ್ಥಬ್ದಗೊಂಡಿದೆ. ಜನ ರಸ್ತೆಗಿಳಿಯದಂತೆ ನಿಷೇಧಾಜ್ಞೆ...

ರಾಜ್ಯದ ಪ್ರಥಮ ಕೊರೊನಾ ಮುಕ್ತ ಜಿಲ್ಲೆ “ಮಂಜಿನನಗರಿ”

ರಾಜ್ಯದ ಪ್ರಥಮ ಕೊರೊನಾ ಮುಕ್ತ ಜಿಲ್ಲೆ “ಮಂಜಿನನಗರಿ” ಮಡಿಕೇರಿ: ರಾಜ್ಯದಾದ್ಯಂತ ಎಲ್ಲೆಲ್ಲೋ ಕೊರೊನಾ ಭೀತಿ ಆವರಿಸಿಕೊಂಡಿದ್ದರು. ಮಂಜಿನನಗರಿ ಕೊಡಗು ಜಿಲ್ಲೆಯ ಮಡಿಕೇರಿ ಜನ ಮಾತ್ರ ರಿಲ್ಯಾಕ್ಸ್ ಆಗಿದ್ದಾರೆ. ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ್ದ ಕೊಡಗು ಜನತೆ...

ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್

ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್ ಕಾಸರಗೋಡು: ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯಗೊಂಡಿದೆ. ತುರ್ತು ವೈದ್ಯಕೀಯ ಅಗತ್ಯ ಇದ್ದರೆ ಮಾತ್ರ ಕೇರಳಕ್ಕೆ...