ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ. ಈ ಹಿನ್ನೆಲೆಯಲ್ಲಿ ಮೇ ದಿನಾಚರಣೆ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಕೋಮುವಾದ-ಕಾರ್ಪೋರೇಟ್ ಸಂಸ್ಥೆಗಳ ಅಕ್ರಮ ಕೂಟಗಳ ಹುನ್ನಾರ ಬಯಲಿಗೆಳೆಯಲು , ಕೆಲಸದ ಅವಧಿ 12 ಗಂಟೆಗಳ ಹೆಚ್ಚಳ ಮಾಡಿದ ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಕಾರ್ಮಿಕರ ಆಕರ್ಷಕ ಮೆರವಣಿಗೆ ಮಂಗಳೂರಿನಲ್ಲಿ ನಡೆಯಿತು.
ಮಂಗಳೂರು : ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ. ಈ ಹಿನ್ನೆಲೆಯಲ್ಲಿ ಮೇ ದಿನಾಚರಣೆ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಕೋಮುವಾದ-ಕಾರ್ಪೋರೇಟ್ ಸಂಸ್ಥೆಗಳ ಅಕ್ರಮ ಕೂಟಗಳ ಹುನ್ನಾರ ಬಯಲಿಗೆಳೆಯಲು , ಕೆಲಸದ ಅವಧಿ 12 ಗಂಟೆಗಳ ಹೆಚ್ಚಳ ಮಾಡಿದ ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಕಾರ್ಮಿಕರ ಆಕರ್ಷಕ ಮೆರವಣಿಗೆ ಮಂಗಳೂರಿನಲ್ಲಿ ನಡೆಯಿತು.
ನಗರದ ಸರ್ವೀಸ್ ಬಸ್ಸು ನಿಲ್ದಾಣದಿಂದ ಹೊರಟ ಮೆರವಣಿಗೆ ಬಳಿಕ ಡಾನ್ ಬೋಸ್ಕೋ ಹಾಲ್‌ನಲ್ಲಿ ಬಹಿರಂಗ ಸಭೆ ನಡೆಯಿತು.
2023ರ ಮೇ ದಿನಾಚರಣೆಯು ಕಾರ್ಮಿಕರ ಪಾಲಿಗೆ ಕೇವಲ ಉತ್ಸವ ಮಾತ್ರವಾಗದೇ, ಹೋರಾಟ- ಚಳುವಳಿಗಳನ್ನು ತೀಕ್ಷ್ಣಗೊಳಿಸಲು ಪ್ರತಿಜ್ಞೆಗೈಯ್ಯುವ ದಿನವಾಗಬೇಕಾಗಿದೆ ಎಂದು ಕಾರ್ಮಿಕ ನಾಯಕರು ಕರೆ ನೀಡಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಇಂದು ಜಗತ್ತಿನಾದ್ಯಂತ ವಿಶ್ವಕಾರ್ಮಿಕ ದಿನಾಚರಣೆ ನಡೆಯುತ್ತಿದ್ದು, ಕಾರ್ಮಿಕರ ದಿನಾಚರಣೆ ಮಂಗಳೂರಿನಲ್ಲೂ ನಾವು ಆಯೋಜನೆ ಮಾಡಿದ್ದೆವೆ.
ಕಾರ್ಮಿಕರನ್ನು ಮತ್ತೆ ಜೀತದಾಳು, ಗುಲಾಮರನ್ನಾಗಿ ಮಾಡಿ ಮೇ ದಿನದ ಮಹತ್ವವನ್ನೇ ಅಲ್ಲಗಳೆಯುವ ಕುತಂತ್ರ ನಡೆಯುತ್ತಿದೆ.
ಕೆಲಸದ ಅವಧಿಯನ್ನು 12 ಗಂಠೆಗೆ ಹೆಚ್ಚಳ ಮಾಡಿರುವ ಸರಕಾರದ ನೀತಿಯನ್ನು ವಿರೋಧಿಸಿ ನಾವು ಇದನ್ನು ವಿರೋಧಿ ನೀತಿಯನ್ನಾಗಿ ಇಂದು ನಡೆಸುತ್ತಿದ್ದೇವೆ.
ಯಾವುದೇ ಕಾರ್ಮಿಕ ವರ್ಗ ಅದನ್ನು 12 ಗಂಟೆಯವರೆಗೆ ಮಾಡಲು ಬಿಡುವುದಿಲ್ಲ ಎಂದು ಸುನಿಲ್ ಆಕ್ರೋಶ ವ್ಯಕ್ತಪಡಿಸಿದರು.
ಭಾರತ ದೇಶದಲ್ಲೂ ದುಡಿಯುವ ವರ್ಗದ ಹೋರಾಟ ಮುಂದುವರಿದಿದೆ.
ಈ ಬಾರಿಯ ಕಾರ್ಮಿಕ ದಿನಾಚರಣೆ ಸವಾಲಿನ ದಿನವಾಗಿದೆ ಎಂದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಡಾ ಕೃಷ್ಣಪ್ಪ ಕೊಂಚಾಡಿ, ಕಾರ್ಯಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ, ಖಜಾಂಚಿ ಯೋಗೀಶ್ ಜಪ್ಪಿನಮೊಗರು ಸೇರಿದಂತೆ ವಸಂತ ಆಚಾರಿ, ಸುಕುಮಾರ್, ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ಸದಾಶಿವದಾಸ್ ಮೊದಲಾದವರಿದ್ದರು. ಆಕರ್ಷಕ ಮೆರವಣಿಗೆ ನಡೆಯಿತು.