Thursday, October 21, 2021

ವಾಯುಪಡೆಯ ವಿಮಾನ ಪತನ: 6 ಮಂದಿ ಸಾವು

ಬೊಲಿವಿಯಾ: ವಾಯುಪಡೆಯ ವಿಮಾನ ಪತನವಾಗಿ ಸುಮಾರು 6 ಮಂದಿ ಸಾವನ್ನಪ್ಪಿರುವ ಘಟನೆ ವಾಯವ್ಯ ಬೊಲಿವಿಯಾದ ಬೆನಿ ಪ್ರದೇಶದ ಅಮೆಜಾನ್ ಕಾಡಿನಲ್ಲಿ ಸಂಭವಿಸಿದೆ.


ವಿಮಾನದಲ್ಲಿ ಇಬ್ಬರು ಮಿಲಿಟರಿ ಪೈಲೆಟ್​ಗಳು ಹಾಗೂ ನಾಲ್ವರು ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಅಮೆಜಾನ್​ನ ದಟ್ಟ ಅರಣ್ಯದಲ್ಲಿ ವಿಮಾನ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಅಗುವಾ ಡಲ್ಸೆ ಸಮುದಾಯದ ಜನರು ಬೆಂಕಿ ನಂದಿಸಿದ್ದಾರೆ.

ಬೊಲಿವಿಯಾದ ಆರೋಗ್ಯ ಸಚಿವಾಲಯದ ಡೆಂಗ್ಯೂ-ಚಿಕೂನ್‌ ಗುನ್ಯಾ ಕಾರ್ಯಕ್ರಮದ ನಾಲ್ವರು ಆರೋಗ್ಯಾಧಿಕಾರಿಗಳನ್ನು ರಿಬೆರಾಲ್ಟಾದಿಂದ ಕೋಬಿಜಾಗೆ ಕರೆದೊಯ್ಯಲಾಗುತ್ತಿತ್ತು.

ಮಲೇರಿಯಾ ರೋಗ ಜಾಗೃತಿ ಮೂಡಿಸುವ ಜೊತೆಗೆ, ಮೌಲ್ಯಮಾಪನ ಕಾರ್ಯದಲ್ಲಿ ಇವರೆಲ್ಲ ತೊಡಗಿಸಿಕೊಂಡಿದ್ದರು. ನಾಲ್ವರೂ ಅಧಿಕಾರಿಗಳು ಮೃತಪಟ್ಟಿದ್ದಾರೆ. ದುರಂತದ ತನಿಖೆ ನಡೆಸಲಾಗುತ್ತಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...