FILM
ಪ್ರಪೋಸ್ ಮಾಡಿದ ಒಂದೇ ವಾರದಲ್ಲಿ ನಟಿ 2ನೇ ಮದುವೆ…!
ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮಲಾ ಪೌಲ್ ಸದ್ದಿಲ್ಲದೇ 2ನೇ ಮದುವೆಯಾಗಿದ್ದಾರೆ.
Amala Paul : ಕಾಲಿವುಡ್‌ನಲ್ಲಿ ಮುಂಚೂಣಿಯಲ್ಲಿರುವ ನಟಿಯರಲ್ಲಿ ಅಮಲಾ ಪೌಲ್ ಕೂಡ ಒಬ್ಬರು ಮೈನಾ ಚಿತ್ರವು ಅಮಲಾ ಪೌಲ್ ಅವರ ವೃತ್ತಿಜೀವನದಲ್ಲಿ ಪ್ರಮುಖ ತಿರುವು ಕೂಡ ಆಗಿತ್ತು.ಎ.ಎಲ್. ವಿಜಯ್ ಅವರೊಂದಿಗಿದ್ದ ಸಂಬಂಧ ಪ್ರೀತಿಯಾಗಿ ತಿರುಗಿ 2013 ರಲ್ಲಿ ಅಮಲಾ ವಿಜಯ್ ಜೊತೆ ಮದುವೆಯಾಗಿದ್ರು.ಆದರೆ ನಾಲ್ಕು ವರ್ಷಗಳ ನಂತರ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದು ವಿಜಯ್ ರಿಂದ ಬೇರ್ಪಟ್ಟರು.ವಿಚ್ಛೇದನ ಪಡೆದ ಎರಡು ವರ್ಷಗಳಲ್ಲಿ ಮಾಜಿ ಪತಿ ವಿಜಯ್ ಮತ್ತೊಂದು ಮದುವೆ ಆಗಿದ್ರು.
ಆದ್ರೆ ಅಮಲಾ ಮದುವೆ ಕಡೆ ಗಮನ ಕೊಟ್ಟಿರ್ಲಿಲ್ಲ.ಆದ್ರೀಗ ಕಳೆದ ತಿಂಗಳು ಅಕ್ಟೋಬರ್ 26ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅಮಲಾ ಪೌಲ್ ಗೆ ಅಂದು ಗೆಳೆಯ ಜಗತ್ ದೇಸಾಯಿ ಪ್ರಪೋಸ್ ಮಾಡಿದ್ದ. ಅಮಲಾ ಪಾಲ್ ಸಿನಿಮೀಯ ಶೈಲಿಯಲ್ಲಿ ಅವರ ಪ್ರಸ್ತಾಪವನ್ನು ಲಿಪ್ಲಾಕ್ ಕಿಸ್ ನೀಡುವ ಮೂಲಕ ಗ್ರೀನ್ ಸಿಗ್ನಲ್ ನೀಡಿದ್ದರು.ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು,
ಆದರೆ ನ. 5ರಂದು ಅಮಲಾ ಪೌಲ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಮದುವೆಯಾಗಿದ್ದಾರೆ ಎನ್ನುವುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.ನಟಿ ಅಮಲಾ ಪೌಲ್ ಪ್ರಪೋಸಲ್ ಮಾಡಿದ ಒಂದೇ ವಾರದಲ್ಲಿ ಗೆಳೆಯನ ಕೈ ಹಿಡಿದಿರುವುದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
FILM
ನಟಿ ಓವಿಯಾ ಖಾಸಗಿ ವಿಡಿಯೋ ಲೀಕ್? ನಿಜಾನಾ ಎಂದು ಕೇಳಿದ್ದಕ್ಕೆ ಎಂಜಾಯ್ ಮಾಡಿ ಎಂದ ಕಿರಾತಕ ಬೆಡಗಿ
ಚೆನ್ನೈ : ಯಶ್ ಜೊತೆ ಕಿರಾತಕ ಸಿನೆಮಾದಲ್ಲಿ ಹಿರೋಯಿನ್ ಆಗಿ ನಟಿಸಿದ್ದ ನಟಿ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಿನ್ನೆಯಿಂದಲೇ ಟ್ರೆಂಡಿಂಗ್ ನಲ್ಲಿರುವ #OviyaLeaked ಭಾರೀ ಸದ್ದು ಮಾಡುತ್ತಿದೆ. ತಮಿಳು, ಮಲೆಯಾಳಂ ಕನ್ನಡ ಸಿನೆಮಾಗಳಲ್ಲಿ ನಟಿಸಿರುವ ಓವಿಯಾ ಕನ್ನಡದಲ್ಲಿ ಎರಡು ಸಿನೆಮಾಗಳಲ್ಲಿ ನಟಿಸಿದ್ದಾರೆ.
ಸಿನೆಮಾಗಳಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ತಮಿಳಿನ ಬಿಗ್ ಬಾಸ್ ಸೀಸನ್ 1 ರಲ್ಲಿ ಸ್ಪರ್ದಿಯಾಗಿದ್ದ ಓವಿಯಾ ತಮ್ಮ ಕಾಂಟ್ರವರ್ಸಿಗಳಿಂದ ಪೇಮಸ್ ಆಗಿದ್ದಾರೆ. ಬಿಗ್ ಬಾಸ್ ಬಿಳಿಕ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಯೋ ಕುರಿತಂತೆ ಓವಿಯಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಪುಲ್ ವಿಡಿಯೋ ಬೇಕು ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಓವಿಯಾ, ‘ಮುಂದಿನ ಸಲ ಬ್ರೋ’ ಎಂದು ಲಘು ಕಾಮೆಂಟ್ ಹಾಕಿದ್ದಾರೆ.
ಇದು ಫೇಕ್ ವಿಡಿಯೋ ಎಂದು ಕೆಲವು ಕಮೆಂಟ್ ಮಾಡಿದ್ದಾರೆ. ಹರಿದಾಡುತ್ತಿರುವ ವಿಡಿಯೋ ನಟಿಯದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೇಳಿಕೊಳ್ಳುತ್ತಿದ್ದು, ವಿಡಿಯೋದಲ್ಲಿರುವ ಯುವತಿ ತೋಳಿನ ಮೇಲೆ ಅದೇ ಹಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ, ಇದೊಂದು ಡೀಪ್ ಫೇಕ್ ವಿಡಿಯೋ ಎಂದು ವಾದಿಸುವವರೂ ಇದ್ದಾರೆ. ’90 ಎಂಎಲ್’ ಚಿತ್ರದ ಓವಿಯಾ ಅವರ ಇಂಟಿಮೇಟ್ ದೃಶ್ಯಗಳು ಕೂಡ ಸದ್ದು ಮಾಡುತ್ತಿವೆ.
BIG BOSS
ಬಿಗ್ಬಾಸ್ ಮನೆಯಲ್ಲಿ ಜಗದೀಶ್- ಹಂಸಾ ಡುಯೇಟ್ ! ಶುರುವಾಯ್ತು ಪ್ರೇಮ್ ಕಹಾನಿ
ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ಪಡೆದು ಯಶಸ್ವಿಯಾಗಿ ಸಾಗುತ್ತಿದೆ. ಬಿಗ್ ಮನೆಯೊಳಗೆ ಸ್ಪರ್ಧಿಗಳು ಕೂಡ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಶನಿವಾರ-ಭಾನುವಾರ ಬಂದರೆ ಸಾಕು ಪ್ರೇಕ್ಷಕರೆಲ್ಲ ಕಿಚ್ಚನ ಪಂಚಾಯತಿಗಾಗಿ ಕಾಯುತ್ತಿರುತ್ತಾರೆ. ಶನಿವಾರದ ಪಂಚಾಯತಿಯಲ್ಲಿ ಸ್ಪರ್ಧಿಗಳಿಗೆ ಬಹುಮಾನ ನೀಡಲಾಗಿತ್ತು. ಇದರ ಜೊತೆಗೆ ಏನೇನು ಆಗಿದೆ ಎಂದು ನಿಮಗೆಲ್ಲ ಗೊತ್ತಿದೆ. ಸದ್ಯ ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಏನೆಲ್ಲ ನಡೆಯಲಿದೆ?
ಇಂದಿನ ಕಿಚ್ಚನ ಪಂಚಾಯತಿ ಫುಲ್ ಜೋಶ್ನಲ್ಲಿ ಇರಬಹುದೆಂದು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆದ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹಂಸಾ ಅವರ ಕ್ಯಾಪ್ಟನ್ಸಿಯಲ್ಲಿ ಏನೇನು ಫೆಸಲಿಟಿ ಇತ್ತು ಎಂದು ಲಾಯರ್ ಜಗದೀಶ್ಗೆ ಸುದೀಪ್ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಲಾಯರ್ ಜಗದೀಶ್ ಫುಲ್ ಕಾಮಿಡಿಯಾಗಿ ಉತ್ತರಿಸಿದ್ದು ಬೇಜಾರ ಎಂದರೆ ನನ್ನ ಜೊತೆ ಡುಯೇಟ್ ಮಾಡಿದ್ದು ಅಂತ ಹೇಳಿ ಎಲ್ಲ ಸ್ಪರ್ಧಿಗಳನ್ನ ನಕ್ಕು ನಲಿಸಿದ್ದಾರೆ.
ಇನ್ನು ಹಂಸಾನೂ ಮಾತನಾಡಿ ಲಾಯರ್ ಬಳಿ ಮಾತಿನಿಂದ ಗೆಲ್ಲಲು ಆಗಲ್ಲ. ಮನಸಾದ್ರೂ ಗೆದ್ದರೇ ನನ್ನ ಕೆಲಸ ಮಾಡಿಕೊಳ್ಳಬಹುದು ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಕಿಚ್ಚ ಏನ್ ಗೆದ್ದರೇ ಎಂದು ಪ್ರಶ್ನಿಸುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಇನ್ನು ಧನ್ರಾಜ್ ಕೂಡ ಪಂಚಾಯತಿಯಲ್ಲಿ ಲಾಯರ್ ಬಗ್ಗೆ ಮಾತನಾಡಿ, ರಾತ್ರಿ ಮಲಗಿಕೊಳ್ಳಬೇಕಾದರೆ, ನನಗೆ ಫೀಲ್ ಆಗ್ತಿದೆ. ನನ್ನ ಹೆಂಡತಿ ಜೊತೆ ಒಂದು ಸಾರಿನೂ ಈ ತರ ಡುಯೇಟ್ ಮಾಡಿಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ. ಇನ್ನು ಜಗದೀಶ್ ಹಾಗೂ ಹಂಸಾ ಸಾಂಗ್ಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದೆಲ್ಲ ನೋಡಲು ಇನ್ನು ಕೆಲ ಗಂಟೆ ಕಾಯಬೇಕಾಗಿದೆ.
BIG BOSS
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು
ಬಿಗ್ಬಾಸ್ ಕನ್ನಡದ ಪ್ರತಿ ಸೀಸನ್ನಲ್ಲೂ ಕೆಲವು ವಿಷಯಗಳು ಪಕ್ಕಾ ಇರುತ್ತವೆ. ಜನರು ಗಿಫ್ಟ್ ಕಳಿಸುವುದು, ಕಿಚ್ಚ ಅಡುಗೆ ಕಳಿಸುವುದು, ಪ್ರತಿ ವಾರ ಕ್ಯಾಪ್ಟನ್ ಆಗುವುದು, ಭಾನುವಾರದ ಎಲಿಮಿನೇಷನ್ ಇದೆಲ್ಲವೂ ಒಂದು ರೀತಿ ಫಿಕ್ಸ್ ಕಾರ್ಯಕ್ರಮಗಳು. ಇದೇ ರೀತಿ ಕಿಚ್ಚನ ಚಪ್ಪಾಳೆ ಸಹ ಕಳೆದ ಕೆಲ ಸೀಸನ್ನಿಂದ ಫಿಕ್ಸ್ ಕಾರ್ಯಕ್ರಮವಾಗಿದೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಜನ ಕಾಯುವಂತೆ ಈ ವಾರ ಕಿಚ್ಚ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂದು ಸಹ ಜನ ಕಾಯುತ್ತಾರೆ. ಆದರೆ ಕಳೆದ ವಾರ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಕಳೆದ ವಾರ ಮಾಡದಿದ್ದನ್ನು ಕಿಚ್ಚ ಈ ವಾರ ಮಾಡಿದ್ದಾರೆ.
ಕಳೆದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಮೊದಲ ವಾರ ಮನೆಯಲ್ಲಿ ಸಾಕಷ್ಟು ಜಗಳ, ತರ್ಲೆ ತಾಪತ್ರಯಗಳು ನಡೆದಿದ್ದವು. ಲಾಯರ್ ಜಗದೀಶ್ ಅಂತೂ ಬಿಗ್ಬಾಸ್ ಮನೆಯಲ್ಲಿದ್ದುಕೊಂಡೆ ಬಿಗ್ಬಾಸ್ಗೆ ಧಮ್ಕಿ ಹಾಕಿದ್ದರು. ಹಲವರು ನಿಯಮ ಮೀರಿದ್ದರು. ಮನೆಯಲ್ಲಿ ಮೊದಲ ದಿನದಿಂದಲೂ ಬರೀ ಜಗಳಗಳೇ ನಡೆದಿದ್ದವು. ಸುದೀಪ್ ಮೊದಲ ವಾರದ ಪಂಚಾಯ್ತಿಯ ಎರಡೂ ದಿನದಲ್ಲಿ ಸುದೀಪ್ ಮನೆಯವರಿಗೆ ವ್ಯಕ್ತಿತ್ವದ ಪಾಠ ಮಾಡಿ ಸುಸ್ತಾದರು. ಮೊದಲ ವಾರದ ಗಲಾಟೆಯ ನಡುವೆ ಆ ವಾರ ಚೆನ್ನಾಗಿ ಆಡಿದ್ದ ಸ್ಪರ್ಧಿಗೆ ಚಪ್ಪಾಳೆ ಕೊಡುವುದನ್ನೇ ಸುದೀಪ್ ಮರೆತಿದ್ದರು.
ಎರಡನೇ ವಾರಾಂತ್ಯದ ವಾರದ ಪಂಚಾಯ್ತಿಯ ಆರಂಭದಲ್ಲಿಯೇ ಒಂದು ಚಿತ್ರವೊಂದನ್ನು ಹಂಸ ಅವರಿಗೆ ಹೇಳಿ ಸ್ಟೋರ್ ರೂಂನಿಂದ ತರಲು ಹೇಳಿದರು ಸುದೀಪ್. ಆ ಚಿತ್ರ ಒಂದು ಕಾರ್ಟೂನ್ ಆಗಿತ್ತು, ವ್ಯಕ್ತಿಯೊಬ್ಬನ ತಲೆ ಬಳಿಯ ಏನೇನೋ ಚಿತ್ರಗಳಿದ್ದವು. ತಲೆ ಚಿಟ್ಟು ಹಿಡಿದ ವ್ಯಕ್ತಿಯೊಬ್ಬ ಕಾರ್ಟೂನ್ ಅದು. ಆ ಚಿತ್ರದ ಬಗ್ಗೆ ವಿವರಣೆ ನೀಡಿದ ಸುದೀಪ್, ಅದು ನನ್ನದೇ ಚಿತ್ರ. ಮೊದಲ ವಾರ ಎಪಿಸೋಡ್ ನೋಡಿ, ನಿಮ್ಮ ಬಳಿ ಎರಡು ವಾರ ಮಾತನಾಡಿದ ಬಳಿಕ ಆ ಸ್ಥಿತಿ ಆಗಿತ್ತು ಎಂದರು. ಅಲ್ಲದೆ, ಮೊದಲ ವಾರ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಆದರೆ ಈಗ ನೀಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಕಿಚ್ಚನಿಗೆ ಕಿಚ್ಚನ ಚಪ್ಪಾಳೆ ನೀಡುತ್ತಿದ್ದೇನೆ ಎಂದರು.
ನಿಮ್ಮ ಮೊದಲ ವಾರದ ಎಪಿಸೋಡ್ ಎಲ್ಲ ನೋಡಿ, ನಿಮ್ಮ ಬಳಿ ಮಾತನಾಡಿ, ನಿಮಗೆ ಅರ್ಥ ಮಾಡಿಸುವುದು, ತಪ್ಪು ತಿದ್ದುವುದು, ಮಾರ್ಗದರ್ಶನ ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಹಾಗಾಗಿ ಆ ಚಪ್ಪಾಳೆಗೆ ನಾನೇ ಅರ್ಹ ಎನಿಸಿತು, ಅದಕ್ಕೆ ಇದೇ ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಯನ್ನು ನನಗೆ ನಾನೇ ಕೊಟ್ಟುಕೊಳ್ಳುತ್ತಿದ್ದೇನೆ ಎಂದರು. ಆ ಕಾರ್ಟೂನ್ ಚಿತ್ರವನ್ನು ಮನೆಯಲ್ಲಿ ನೇತು ಹಾಕಿಸಿದರು.
- FILM5 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- LATEST NEWS5 days ago
ನ.8 ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತಿ..! 15 ದಿನದಲ್ಲಿ 8 ಪ್ರಮುಖ ತೀರ್ಪು ಸಾಧ್ಯತೆ..!
- DAKSHINA KANNADA6 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು
- BIG BOSS6 days ago
ಇದೇ ಕಾರಣಕ್ಕೆ ಮೊದಲ ವಾರವೇ ಯಮುನಾ ಶ್ರೀ ನಿಧಿ ಬಿಗ್ಬಾಸ್ ಮನೆಯಿಂದ ಔಟ್ ಆದದ್ದು..!