Connect with us

LATEST NEWS

ರಾಜ್ಯದ ಎಲ್ಲಾ ಟ್ರಕ್ಕಿಂಗ್ ಪಾಯಿಂಟ್ ಬಂದ್..!

Published

on

ರಾಜ್ಯ ಸರ್ಕಾರ ಚಾರಣ ಪ್ರೀಯರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದು, ರಾಜ್ಯದ ಎಲ್ಲಾ ಚಾರಣ ತಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಆದೇಶ ಹೊರಡಿಸಿದೆ.

ಇತ್ತೀಚಿನ ದಿನಗಳಲ್ಲಿ ವೀಕೆಂಡ್‌ ಸಮಯದಲ್ಲಿ ಚಾರಣ ಪ್ರದೇಶಗಳು ತುಂಬಿ ತುಳುಕುತ್ತಿರುತ್ತದೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುತ್ತವೆ ಹೀಗಾಗಿ ಇಂತಹ ಚಾರಣ ಪಥಕ್ಕೆ ಕಡಿವಾಣ ಹಾಕಿ ಎಂದು ಅರಣ್ಯ ಸಚಿವರು ಸೂಚಿಸಿದ್ದಾರೆ. ಜ.26 ರಂದು ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರ ಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಆಗಮಿಸಿದ ಕಾರಣ ಅಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಇದನ್ನು ಪರಿಗಣಿಸಿ ಅರಣ್ಯದೊಳಗೆ ಜನಜಂಗುಳಿ ತಪ್ಪಿಸಲು ಚಾರಣಕ್ಕೆ ಆನ್‌ಲೈನ್‌ ವ್ಯವಸ್ಥೆ ಜಾರಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ವಿಚಾರವಾಗಿ ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿ ಹಾಗೂ ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಹೀಗಾಗಿ ಇನ್ನು ಮುಂದೆ ಚಾರಣ ಪ್ರೀಯರು ಸರ್ಕಾರದ ಆನ್‌ಲೈನ್ ವ್ಯವಸ್ಥೆ ಇರುವ ಜಾಗಗಳಿಗೆ ಮುಂಗಡ ಬುಕ್ಕಿಂಗ್ ಮಾಡಿ ಹೋಗಲು ಮಾತ್ರ ಅವಕಾಶ ಇರುತ್ತದೆ. ಚಾರಣಿಗರು ಅರಣ್ಯ ಅಂಚಿನ ಗ್ರಾಮಗಳಲ್ಲಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥಗಳನ್ನು ಎಸೆದು ಹೋಗುತ್ತಿದ್ದಾರೆ . ಇದರಿಂದ ವನ್ಯ ಜೀವಿಗಳಿಗೆ ಅಪಾಯ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಏಕಾಏಕಿ ಹರಿದು ಬರುವ ಇಷ್ಟೊಂದು ಜನರನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ ಹೀಗಾಗಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ತಾಣಗಳು ಅಂದರೆ ಕುಮಾರ ಪರ್ವತ, ಮೂರುಕಣ್ಣಿನಗುಡ್ಡ ಸೇರಿದಂತೆ ಎಲ್ಲ ಚಾರಣ ತಾಣಗಳಲ್ಲಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ತರುವವರೆಗೆ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!

Published

on

ಬೆಂಗಳೂರು: ಹುಟ್ಟಿದ ನಾಲ್ಕು ತಿಂಗಳಿನಲ್ಲಿ ಮಗುವೊಂದು ವಿಶ್ವದಾಖಲೆಯನ್ನು ನಿರ್ಮಿಸಿದೆ. ಬೆಂಗಳೂರಿನ ಪ್ರಜ್ವಲ್ ಹಾಗೂ ಸ್ನೇಹಾ ದಂಪತಿ ಪುತ್ರಿ ಇಶಾನ್ವಿ.ಪಿ ಹೆಸರಿನ ನಾಲ್ಕು ತಿಂಗಳ ಮಗು ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ಪುಟ್ಟ ಕಂದಮ್ಮ ಎರಡು ತಿಂಗಳಿದ್ದಾಗಲೇ ಪೋಷಕರು ಎರಡು ಫ್ಲಾಶ್ ಕಾರ್ಡ್‌ ಇಟ್ಟು ಒಂದನ್ನು ಗುರುತಿಸುವಂತೆ ಹೇಳಿದರೆ, ಅದಕ್ಕೆ ಸರಿಯಾದ ಕಾರ್ಡ್‌ ಸೆಲೆಕ್ಟ್ ಮಾಡುತ್ತಿದ್ದಳು. ಇದನ್ನು ತಾಯಿ ಸ್ನೇಹಾ ಗಮನಿಸಿದ್ದಾರೆ.

world record

125 ಫ್ಲಾಶ್ ಕಾರ್ಡ್‌ಗಳನ್ನು ಗುರುತಿಸುತ್ತಾಳೆ ಇಶಾನ್ವಿ:

ಇಶಾನ್ವಿ ಸುಮಾರು 125 ವಿವಿಧ ರೀತಿಯ ವಸ್ತುಗಳು, ಪ್ರಾಣಿ-ಪಕ್ಷಿಗಳು, ತರಕಾರಿ ಫೊಟೋಗಳನ್ನು ಗುರುತಿಸುತ್ತಾಳೆ. ಅದರಲ್ಲಿ 10 ಹಕ್ಕಿಗಳು, 15 ತರಕಾರಿಗಳು, 10 ಕಾಡು ಪ್ರಾಣಿಗಳು, 10 ಸಾಕು ಪ್ರಾಣಿಗಳು, 11 ಕಲರ್ಸ್, 10 ವಿವಿಧ ದೇಶದ ಧ್ವಜಗಳು, 10 ವಾಹನಗಳು, 14 ಹಣ್ಣುಗಳು, 13 ಜನರಲ್ ಇಮೇಜ್, 12 ಶೇಪ್ಸ್‌ಗಳನ್ನು ಗುರತಿಸುವ ಸಾಮರ್ಥ್ಯ ಹೊಂದಿದ್ದಾಳೆ ಈ ಪುಟ್ಟ ಪೋರಿ. 125 ಫ್ಲಾಶ್ ಕಾರ್ಡ್‌ಗಳನ್ನು ಗುರುತಿಸುವ ಮೂಲಕ ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ್ದಾಳೆ.

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

world record

ಇನ್ನು ಮಗುವಿನ ಸಾಮರ್ಥ್ಯವನ್ನು ಅರಿತ ಮಗುವಿನ ತಾಯಿ ಸ್ನೇಹಾ ತನ್ನ ಕುಟುಂಬದವರ ಸಹಾಯದಿಂದ ವೀಡಿಯೋ ರೆಕಾರ್ಡ್‌ ಮಾಡಿ ನೋಬಲ್ ವರ್ಲ್ಡ್‌ ರೆಕಾರ್ಡ್‌ಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿ ಮಗುವಿನ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗೆ ಆಯ್ಕೆ ಮಾಡಿದೆ. ಆಂಧ್ರಪ್ರದೇಶದ ನಾಲ್ಕು ತಿಂಗಳ ಮಗು ಕೈವಲ್ಯ ಮಾಡಿದ್ದ ಸಾಧನೆಯನ್ನು ಇಶಾನ್ವಿ ಹಿಂದಿಕ್ಕಿದ್ದಾಳೆ. ಕೈವಲ್ಯ 120 ಫ್ಲಾಶ್‌ಗಳನ್ನು ಗುರುತಿಸಿದ್ರೆ, ಇಶಾನ್ವಿ 125 ಫ್ಲಾಶ್‌ಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ.

Continue Reading

DAKSHINA KANNADA

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

Published

on

ಮಂಗಳೂರು: ಮುಲ್ಕಿ  ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ  ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ಎಂದು ಗುರುತಿಸಲಾಗಿದೆ.

abhilash

ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಚಿಪ್ಪು ಮತ್ತು ಏಡಿ ಹಿಡಿಯಲು ಮುಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದಿದ್ದಾರೆ. ಶಾಂಭವಿ ನದಿಯಲ್ಲಿ ನೀರಿನ ಇಳಿತ ವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದಾರೆ.   ಈಜು ಅರಿತಿದ್ದ  ಅಭಿಲಾಶ್ ಅವರನ್ನು ರಕ್ಷಿಸಲು ಮುಂದಾಗಿದ್ದಾನೆ. ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್  ಧಾವಿಸಿ ಧನುಷ್ ಮತ್ತು ಜೀವನ್ ರವರ ನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಶ್ ಪತ್ತೆಯಾಗಿಲ್ಲ. ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್ ಡಿ ಆರ್ ಎಫ್ ತಂಡ,ಕರಾವಳಿ  ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.

Continue Reading

LATEST NEWS

ಇಲ್ಲಿ ಹೆಂಡತಿ ಬಾಡಿಗೆಗೆ ಸಿಗ್ತಾಳೆ..! ಹೀಗೊಂದು ಪದ್ಧತಿ ಇರೋದು ಎಲ್ಲಿ ಗೊತ್ತಾ?

Published

on

ಮಧ್ಯ ಪ್ರದೇಶ/ ಮಂಗಳೂರು: ಹೆಂಡತಿಯನ್ನು ಬಾಡಿಗೆಗೆ ಕೊಡುವಂತ  ಪದ್ಧತಿಯೊಂದು ಭಾರತದಲ್ಲಿ ಇದೆ ಅಂದ್ರೆ ನೀವು ನಂಬುತ್ತೀರಾ? ನಂಬಲೇಬೇಕು… ನಮ್ಮ ಸಂಸ್ಕೃತಿಯಲ್ಲಿ ಹೆಣ್ಣನ್ನು ಮಾತೆಗೆ ಹೋಲಿಕೆ ಮಾಡ್ತಾರೆ. ಆದರೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮಾತ್ರ ಇನ್ನೂ ಹೆಚ್ಚಾಗುತ್ತಲೇ ಇದೆ. ಅಲ್ಲೊಂದು ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಬಾಡಿಗೆಗೆ ಪಡೆದು ತಮ್ಮ ತೃಷೆ ತೀರಿಸಿಕೊಳ್ತಾರೆ. ಮಧ್ಯಪ್ರದೇಶದ ಶಿವಪುರಿ ಎಂಬಲ್ಲಿ ಅಂತಹದೊಂದು ಪದ್ಧತಿ ಈಗಲೂ ರೂಢಿಯಲ್ಲಿದೆ. ಇಲ್ಲಿ ತುಸು ಶ್ರೀಮಂತರ, ಸ್ವಲ್ಪ ಬಡವರ ಮನೆಯ ಹೆಣ್ಣುಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ. ತಂದೆ ತನ್ನ ಹೆಣ್ಣುಮಕ್ಕಳನ್ನು, ಗಂಡ ತನ್ನ ಹೆಂಡತಿಯನ್ನು ಬಾಡಿಗೆಗೆ ಕೊಡುತ್ತಾರೆ.

rent

ನಾವು ವಸ್ತುಗಳನ್ನು, ಮನೆಯನ್ನೆಲ್ಲಾ ಬಾಡಿಗೆ ಕೊಡೋದನ್ನ ಕೇಳಿದ್ದೇವೆ. ಇಲ್ಲಿ ಹೆತ್ತ ಮಗಳು,  ಕಟ್ಕೊಂಡ ಹೆಂಡತಿಯನ್ನು ಇನ್ನೊಬ್ಬರಿಗೆ ಬಾಡಿಗೆ ಕೊಡುವವರು ಇದ್ದಾರೆ ಅಂದ್ರೆ ನಂಬೋಕೆ ಸಾಧ್ಯ ಇಲ್ಲಾ ಅಲ್ವಾ? ಇಂತಹದೊಂದು ಕೀಳು ಪದ್ಧತಿ ಈಗಲೂ ಮಧ್ಯ ಪ್ರದೇಶದಲ್ಲಿ ನಡೆಯುತ್ತಿದೆ.

ಇದೊಂದು ಒಪ್ಪಂದವಂತೆ. ಇದೊಂದು ಪದ್ಧತಿಯಾಗಿದ್ದು ಇದನ್ನು ‘ದಧೀಚ’ ಎಂದು ಕರೆಯುತ್ತಾರೆ. ‘ದಧೀಚ’ ಅಂದ ಕೂಡಲೇ ಪುರಾಣದಲ್ಲಿ ಬರುವ ಮುನಿಯಲ್ಲ. ಇವರಿಗೂ ಈ ಪದ್ಧತಿಗೂ ಯಾವುದೇ ಸಂಬಂಧವಿಲ್ಲ. ಇದು ನೂರು ವರ್ಷದಿಂದ ಆಚರಣೆಗೆ ಬಂದ ಪದ್ಧತಿಯಂತೆ. ಶ್ರೀಮಂತರು ಬಡವರ ಹೆಣ್ಣು ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ತಾರೆ. ಇನ್ನು ಹುಡುಗಿ ಬಾಡಿಗೆಗೆ ಪಡೆದವನ ಇಚ್ಛೆಗೆ ತಕ್ಕ ಹಾಗೆ ನಡೆದುಕೊಳ್ಳಬೇಕು. ಹೆಚ್ಚಾಗಿ ದೈಹಿಕ ಸುಖಕ್ಕಾಗಿಯೆ ಇದು ನಡೆಯುತ್ತದೆ. ರಾತ್ರಿ ವೇಳೆ ಅವನಿಗೆ ಸುಖ ನೀಡುವಲ್ಲಿ ಸಹಕರಿಸಬೇಕು. ಇನ್ನು ಹಗಲಿನಲ್ಲಿ ಉಳಿದ ಮನೆ ಕೆಲಸ, ಗದ್ದೆ ಕೆಲಸಗಳನ್ನು ಮಾಡಿಕೊಂಡು ಅವನ ಆಳಾಗಿರಬೇಕು. ಇನ್ನು ಒಂದು ವರ್ಷದ ಬಳಿಕ ಮತ್ತೆ ಅವಳೇ ಬೇಕು ಎಂದಾದಲ್ಲಿ ಅಗ್ರಿಮೆಂಟ್ ರಿನಿವಲ್ ಮಾಡಬೇಕು.

ಇಲ್ಲಿ ಸಂಬಂಧಗಳಿಗೆ ಬೆಲೆನೇ ಇಲ್ಲ..!

ತಂದೆ ತನ್ನ ಮಗಳನ್ನು ಎಂಟು ಒಂಭತ್ತು ವರ್ಷಗಳಲ್ಲಿ ಹಣಕ್ಕಾಗಿ ಬಾಡಿಗೆಗೆ ಕೊಡಲು ಆರಂಭಿಸುತ್ತಾನೆ. ಅವಳು ಋತುಮತಿಯಾಗಬೇಕೆಂದಿಲ್ಲ. ಇನ್ನು ಮದುವೆಯಾದ ಗಂಡ ಮೊದಲ ರಾತ್ರಿಯನ್ನು ಅವಳ ಜೊತೆ ಕಳೆದು, ಎರಡನೇ ದಿನ ಸಿರಿವಂತನಿಗೆ ಹಣಕ್ಕಾಗಿ ಬಾಡಿಗೆಗೆ ಕೊಡುತ್ತಾನೆ. ಇದು ಒಂದು ರೀತಿಯ ಸೆ*ಕ್ಸ್ ದಂಧೆಯೇ ಆಗಿದೆ.  ಇನ್ನು ಬಾಡಿಗೆಗೆ ತೆಗೆದುಕೊಳ್ಳುವವನು ಮುಖ್ಯವಾಗಿ ತನ್ನ ಚಪಲ ತೀರಿಸಿಕೊಳ್ಳುವ ಉದ್ದೇಶ. ಜೊತೆಗೆ ಅವಳ ಬಳಿ ಮನೆ ಕೆಲಸ, ಇತರ ಕೆಲಸಗಳಿಗೆ ಬಳಸಿಕೊಳ್ಳುತ್ತಾನೆ. ಅಲ್ಲದೇ ಗಂಡನ ಅಣ್ಣ, ಮಾವ, ತಮ್ಮ ಹೀಗೆ ಯಾರೂ ಬೇಕಾದರು ಅವಳನ್ನು ಹಣ ಕೊಟ್ಟು ಕೊಂಡುಕೊಳ್ಳಬಹುದು.ಇಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.

ಇದು ಹೆಣ್ಣಿನ ಕರಾಳ ಬದುಕಿನ ಕಥೆ..! ಬಲಿಯಾಗಿದ್ದಾರೆ 30 ಲಕ್ಷ ಮಹಿಳೆಯರು..!

ಇನ್ನು ಇಲ್ಲಿ ಹುಡುಗಿಯರನ್ನು ಹೇಗೆ ಆರಿಸ್ತಾರೆ ಅಂದ್ರೆ ಅವರ ಅಂದ ಚಂದವನ್ನು ನೋಡಿ. ಹಡುಗಿಯ ಮೈಮಾಟ, ವಯಸ್ಸು, ಬಣ್ಣ ಇದೆಲ್ಲವನ್ನು ಒಳಗಂಡ ಕನ್ಯೆಗೆ ಭಾರೀ ಮೊತ್ತ ಕೊಟ್ಟು ಬಾಡಿಗೆ ಪಡೆಯುತ್ತಾರಂತೆ. ಈ ಹೆಣ್ಣಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಖರೀದಿ ಮಾಡ್ತಾರೆ. ಕನ್ಯೆಯರಲ್ಲದ ಹುಡುಗಿಯರಿಗೆ 10,000 ದಿಂದ 15000 ಸಾವಿರದವೆರೆಗೆ ಕೊಟ್ಟು ಪಡೆದುಕೊಳ್ಳುತ್ತಾರೆ. ಹುಡುಗಿಯ ಚರ್ಮದ ಟೋನ್, ಒಪ್ಪಂದದ ಮದುವೆಗಳ ಅಂಶಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳುತ್ತಾರೆ.

ಪೊಲೀಸರು ಏನು ಮಾಡ್ತಿದ್ದಾರೆ..?

ಅಯ್ಯೋ!! ಹಾಗಿದ್ರೆ ಪೊಲೀಸರಿಗೆ ಇದು ಗೊತ್ತಿಲ್ವಾ? ಬೇಲಿನೇ ಎದ್ದು ಹೊಲ ಮೇದಂತಾಗಿದೆ  ಇಲ್ಲಿನ ಪರಿಸ್ಥಿತಿ. ಪೊಲೀಸರು ಕೂಡಾ ಇದರಲ್ಲಿ ಪಾಲುದಾರರು. ದುರಾದೃಷ್ಟ ಅಂದ್ರೆ ಇಲ್ಲಿನ ಹೆಣ್ಮಕ್ಕಳಿಗೆ ಅವರ ಮೇಲೆ ಆಗ್ತಾ ಇರೋದು ಅತ್ಯಾಚಾರ ಅನ್ನೋದೆ ತಿಳಿದಿಲ್ಲ. ಈ ಹಳ್ಳಿಗೆ ಕೆಲವು ಎನ್‌ಜಿಒ ಗಳು ಭೇಟಿ ನೀಡಿ ಇವರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಪದ್ಧತಿ ಶುರು ಆಗಲು ಕಾರಣ:

ಅಷ್ಟಕ್ಕೂ ಈ ಪದ್ದತಿ ಶುರುವಾಗಲು ಕಾರಣವಾದ್ರೂ ಏನು? ಈ ಹಿಂದೆ ಊರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಬಹಳ ವಿರಳವಾಗಿತ್ತು. ಹಾಗಾಗಿ ಇಲ್ಲಿ ಹೆಣ್ಣು ಮಕ್ಕಳನ್ನು ಹಂಚಿಕೊಳ್ಳಲು ಆರಂಭ ಮಾಡ್ತಾರೆ. ಇನ್ನೂ ಕೆಲವು ಶ್ರೀಮಂತರು ವಧುದಕ್ಷಿಣೆ ಕೊಟ್ಟು ಕನ್ಯೆಯರನ್ನು ಕೊಂಡುಕೊಳ್ಳುತ್ತಿದ್ದರು. ಆದರೆ ಬಡವರು ಅಷ್ಟೆಲ್ಲಾ ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲದಿದ್ದಾಗ ಹುಡುಗಿಯನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದರು. ಅಂದು ಈ ನೀಚ ಬಾಡಿಗೆ ಪದ್ಧತಿ ಹುಟ್ಟಿಕೊಂಡಿತು. ಪುರುಷ ಪ್ರಧಾನ ಸಮಾಜ ಸ್ತ್ರೀಯನ್ನು ಈ ರೀತಿಯಲ್ಲಿ ಶೋಷಣೆ ಒಳಪಡಿಸಲು ಆರಂಭಗೊಂಡಿತು.

 

 

 

 

Continue Reading

LATEST NEWS

Trending