Home ಪ್ರಮುಖ ಸುದ್ದಿ ಗೃಹಬಂಧನದಲ್ಲಿ ಫಾರಿನ್ ರಿಟರ್ನ್ ಆದ ನಟಿ ಸುಹಾಸಿನಿ ಪುತ್ರ ಹಾಗೂ ಅಮರೇಂದ್ರ ಬಾಹುಬಲಿ.!

ಗೃಹಬಂಧನದಲ್ಲಿ ಫಾರಿನ್ ರಿಟರ್ನ್ ಆದ ನಟಿ ಸುಹಾಸಿನಿ ಪುತ್ರ ಹಾಗೂ ಅಮರೇಂದ್ರ ಬಾಹುಬಲಿ.!

ಗೃಹಬಂಧನದಲ್ಲಿ ಫಾರಿನ್ ರಿಟರ್ನ್ ಆದ ನಟಿ ಸುಹಾಸಿನಿ ಪುತ್ರ ಹಾಗೂ ಅಮರೇಂದ್ರ ಬಾಹುಬಲಿ.!

ವಿಶ್ವದಾದ್ಯಂತ ಕೊರೊನಾ ವೈರಸ್ ಎಂಬ ಮಾಹಾಮಾರಿ ಮರಣ ಮೃದಂಗ ಬಾರಿಸುತ್ತಿದೆ.

ಭಾರತದಲ್ಲಿಯೂ ಕೊರೊನಾ ಆತಂಕ ಹೆಚ್ಚಾಗಿದ್ದು ಎಪ್ರಿಲ್ 14ರ ವರೆಗೂ ಸಂಪೂರ್ಣ ಭಾರತ ಲಾಕ್ ಡೌನ್ ಮಾಡಲಾಗಿದೆ.

ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದಂತೆ ವಿದೇಶದಲ್ಲಿ ನಲೆಸಿದ್ದ ಭಾರತೀಯರನ್ನು ಈಗಾಗಲೆ ತಾಯ್ನಾಡಿಗೆ ಕರೆ ತರಲಾಗುತ್ತಿದೆ.

ಇದೀಗ ಇಂಗ್ಲೆಂಡ್ ನಲ್ಲಿದ್ದ ಖ್ಯಾತ ನಟಿ ಸುಹಾಸಿನಿ ಪುತ್ರ ನಂದನ್ ಮನೆಗೆ ವಾಪಸ್ ಆಗಿದ್ದಾರೆ.

ಇಂಗ್ಲೆಂಡ್ ನಲ್ಲಿ ಈಗಾಗಲೆ ಶೈಕ್ಷಣಿಕ ಸಂಸ್ಥೆಗಳನ್ನು ಕ್ಲಾಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಆಯಾದೇಶಕ್ಕೆ ವಾಪಸ್ ಆಗುತ್ತಿದ್ದಾರೆ.

ಇಂಗ್ಲೆಂಡ್ ನಲ್ಲಿ ಓದುತ್ತಿದ್ದ ನಟಿ ಸುಹಾಸಿನಿ ಪುತ್ರ ನಂದನ್ ಕೂಡ ವಾಪಸ್ ಆಗಿದ್ದು ಸದ್ಯ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ.

ವಿದೇಶದಿಂದ ವಾಪಸ್ ಆದ ಪ್ರತಿಯೊಬ್ಬರ ಕೈಗೂ ‘Home Quarantained’ ಅಂತ ಸೀಲ್ ಒತ್ತಲಾಗುತ್ತದೆ.

ಹಾಗೂ ಅವರು ಎಲ್ಲಿಯೂ ಓಡಾಡದೆ ಸ್ವಯಂ ನಿರ್ಬಂಧದಲ್ಲಿ ಇರಬೇಕು. ಹಾಗಾಗಿ ವಿದೇಶದಿಂದ ವಾಪಸ್ ಆದ ನಟಿ ಸುಹಾಸಿನಿ ಪುತ್ರ ನಂದನ್ ಕೂಡ ಈಗ ಗೃಹ ಬಂಧನದಲ್ಲಿ ಇದ್ದಾರೆ.

ಮನೆಯ ಒಂದು ಕೋಣೆಯಲ್ಲಿಯೆ ಸುಹಾಸಿನಿ ಪುತ್ರ ಬಂಧಿಯಾಗಿದ್ದಾರೆ. ಈಗಾಗಲೆ ಕೆಲವು ದಿನಗಳು ಕಳೆದಿದ್ದು, ಇನ್ನೂ ಕೆಲವಾರು ದಿನಗಳು ಯಾರೊಂದಿಗೂ ಸಂಪರ್ಕ ಸಾದಿಸದಂತೆ ಮುಂಜಾಗೃತಿ ವಹಿಸಲಾಗಿದೆ.

ಮಗ ಆರೋಗ್ಯವಾಗಿರುವ ಬಗ್ಗೆ ಸುಹಾಸಿನಿ ಬಹಿರಂಗಪಡಿಸಿದ್ದಾರೆ. ನಂದನ್ ಗೆ ಕೋಣೆಯಲ್ಲಿಯೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಕೋಣೆಯೊಳಗೆ ಊಟ ಇಡುವಾಗ ಮತ್ತು ನಂತರ ಆ ಜಾಗಕ್ಕೆ ಸ್ಪ್ರೇ ಮಾಡಲಾಗುತ್ತಿದೆ.

ಇತ್ತ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಕೂಡ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ.

ಇತ್ತೀಚಿಗೆ ಚಿತ್ರೀಕರಣ ಮುಗಿಸಿ ವಿದೇಶದಿಂದ ವಾಪಸ್ ಆಗಿದ್ದ ನಟ ಪ್ರಭಾಸ್ ಮನೆಯಲ್ಲಿಯೆ ಸ್ವಯಂ ನಿರ್ಬಂಧದಲ್ಲಿ ಇರುವುದಾಗಿ ಹೇಳಿದ್ದಾರೆ.

‘ಜಾನ್’ ಸಿನಿಮಾದ ಚಿತ್ರೀಕರಣಕ್ಕಾಗಿ ಪ್ರಭಾಸ್ ಜಾರ್ಜಿಯಾಗೆ ತೆರಳಿದ್ದರು. ಇತ್ತೀಚಿಗಷ್ಟೆ ವಾಪಸ್ ಆಗಿದ್ದಾರೆ. ಪ್ರಭಾಸ್ ಜೊತೆ ಇಡೀ ಚಿತ್ರತಂಡವೇ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ.

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...