Connect with us

FILM

ರಾಜ್ ಬಿ ಶೆಟ್ಟಿ ಜೊತೆ ರಮ್ಯ ನಟಿಸೊಲ್ಲ ಅಂದಿದ್ದು ಯಾಕೆ ಗೊತ್ತಾ?

Published

on

FILM : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ತಮ್ಮ ಮೊದಲ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಿಂದಲೇ ಮತ್ತೆ ಕಮ್‌ಬ್ಯಾಕ್ ಆಗುತ್ತಾರೆ ಎಂದು ಹೇಳಲಾಗಿತ್ತು.ಬಳಿಕ ಚಿತ್ರದಿಂದ ಹೊರ ಬಂದು ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಇದೀಗ ಚಿತ್ರದಿಂದ ಯಾಕೆ ರಮ್ಯಾ ಹಿಂದೆ ಸರಿದ್ರು ಎಂಬುವುದಕ್ಕೆ ಕಾರಣಗಳನ್ನು ನೀಡಿದ್ದಾರೆ.

ಈಗ ಆ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಬರೆದು, ನಿರ್ದೇಶಿಸಿ ನಾಯಕನ ಪಾತ್ರದಲ್ಲಿಯೂ ನಟಿಸಿದ್ದಾರೆ. ರಮ್ಯಾ ಹೇಳಿರುವಂತೆ ರಾಜ್ ಬಿ ಶೆಟ್ಟರು ಮೊದಲು ರಮ್ಯಾಗೆ ಕತೆ ಹೇಳಿದಾಗ ಬಹಳ ಭಾವುಕರಾದರಂತೆ. ಕತೆಯಲ್ಲಿನ ಡೀಟೇಲಿಂಗ್ ಬಹಳ ಹಿಡಿಸಿತಂತೆ. ಹಾಗಾಗಿ ನಾಯಕಿ ಪಾತ್ರದಲ್ಲಿ ತಾವೇ ನಟಿಸುವ ಮನಸ್ಸು ಮಾಡಿದರಂತೆ ರಮ್ಯಾ. ಆದರೆ ಸಿನಿಮಾ ಪ್ರಾರಂಭವಾಗುವ ಸಮಯದಲ್ಲಿ ಆ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡುವುದು ಎಂದಾಯ್ತಂತೆ. ಒಂದು ಒಟಿಟಿಯವರು ಸಿನಿಮಾ ತೆಗೆದುಕೊಳ್ಳುವುದಾಗಿ ಆಗಲೇ ಭರವಸೆ ನೀಡಿದ್ದರು.

ಆದರೆ ರಮ್ಯಾಗೆ ತಮ್ಮ ಕಮ್​ಬ್ಯಾಕ್ ಸಿನಿಮಾ ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಬೇಕು ಎಂಬ ಆಸೆಯಿತ್ತಂತೆ. ಹಾಗಾಗಿ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಹೊರಗುಳಿದರು. ಆದರೆ ಯಾವ ಒಟಿಟಿ ಸಿನಿಮಾ ಖರೀದಿಸುವುದಾಗಿ ಹೇಳಿತ್ತೋ ಆ ಸಂಸ್ಥೆ ಕೊನೆಯ ಸಮಯದಲ್ಲಿ ಕೈಕೊಟ್ಟಿತಂತೆ. ‘ಕನ್ನಡ ಚಿತ್ರಗಳಿಗೆ ಈ ರೀತಿ ಮಾಡುವುದು ಸಾಮಾನ್ಯ ಆಗಿಹೋಗಿದೆ’ ಎಂದು ಬರೆದುಕೊಂಡಿರುವ ರಮ್ಯಾ, ‘ನಿಮ್ಮನ್ನು ಸೇರಿಕೊಳ್ಳಲು ಹಲವು ದಾರಿಗಳನ್ನು ಹುಡುಕುತ್ತೇವೆ’ ಎಂದು ಸಹ ಬರೆದುಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ದಿವ್ಯ ಸ್ಪಂದನಾ ಅವರ ಒಡೆತನದ ‘ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍’ ಸಂಸ್ಥೆಯ ಮೂಲಕ ನಿರ್ಮಾಣ ಆದ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ಈ ಸಿನಿಮಾದ ನಿರ್ಮಾಣದಲ್ಲಿ ‘ಲೈಟರ್‍ ಬುದ್ಧ ಫಿಲ್ಮ್ಸ್​’ ಸಂಸ್ಥೆ ಕೂಡ ಕೈ ಜೋಡಿಸಿದೆ. ‘ಕೆ.ಆರ್.ಜಿ. ಸ್ಟುಡಿಯೋಸ್‍’ ಮೂಲಕ ರಾಜ್ಯಾದ್ಯಂತ ನವೆಂಬರ್​ 24ರಂದು ರಿಲೀಸ್​ ಆಗಲಿದೆ.

bengaluru

ಅನಿಮಲ್ ಸಿನಿಮಾ ನೋಡಿದ್ರಾ..? ನಟಿಯರ ಹಾಟ್ ಸೀನ್ ವೈರಲ್..!

Published

on

Film: ಬಾಲಿವುಡ್ ನ ಅನಿಮಲ್ ಸಿನಿಮಾ ಈಗಾಗಲೆ ಬಿಡುಗಡೆಗೊಂಡು ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಬೆನ್ನಲೆ ಆ ಚಿತ್ರದಲ್ಲಿ ಕಾಣಿಸಿಕೊಂಡ ಹಸಿಬಿಸಿ ಸೀನ್ ಗಳು ವೈರಲ್ ಆಗ್ತಾ ಇದೆ.

ಆ ಸಿನಿಮಾದಲ್ಲಿ ನಟನಾಗಿ ರಣಬೀರ್ ಜೊತೆ ನಟಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕೆಲವೊಂದು ದೃಶ್ಯಗಲ್ಲಿ ರಣಬೀರ್ ಜೊತೆ ನಟಿ ತೃಪ್ತಿ ದಿಮ್ರಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇವರಿಬ್ಬರ ವಿಡಿಯೋಗಳು ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೇ ತೃಪ್ತಿ ದಿಮ್ರಿಯ ನಟಿಯ ಫಾಲೋವರ್ಸ್ ಸಂಖ್ಯೆಯು 1.5 ಮಿಲಿಯನ್ ಗೆ ತಲುಪಿದೆ.

ಅನಿಮಲ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ ನಟಿಯ ಪಾತ್ರದಿಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗ್ತ ಇದೆ ರಣಬೀರ್ ಜೊತೆ ನಟಿ ತೃಪ್ತಿ ದಿಮ್ರಿಯು ಹಾಟ್ ಸೀನ್ ಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಡಿ. 1ರಂದು ತೆರೆಗೆ ಬಂದ ಬೆನ್ನಲೆ ಸಿನಿಮಾದ ಅಬ್ಬರ ಮೇಲಕ್ಕೇರಿದೆ. ಈ ಸಿನಿಮಾ ರಿಲೀಸ್ ಆದ ಬೆನ್ನಲೆ ದಿನಕ್ಕೆ 100 ಕೋಟಿ ಕಲೆಕ್ಷನ್ ಪಡೆದಿದ್ದು, ಮೂರು ದಿನದ ಒಟ್ಟು ಕಲೆಕ್ಷನ್ 300ಕೋಟಿಯಾಗಿದೆ.

Continue Reading

bangalore

Bigboss: ನಾಯಿ ಮರಿಯಾದ ಬಿಗ್ ಬಾಸ್ ಸಂಗೀತಾ

Published

on

Bigboss: ಬಿಗ್ ಬಾಸ್ ನಲ್ಲಿ ಸಂಗೀತಾ ಅವರು ಕೆಲವೊಂದು ಟಾಸ್ಕ್ ನಲ್ಲಿ ತೆಗೆದುಕೊಂಡ ನಿರ್ಧಾರ ಫ್ಯಾನ್ಸ್ ಗಳಿಗೆ ಹಿಡಿಸಲಿಲ್ಲ. ಅಲ್ಲಿಂದ ಅವರ ಫ್ಯಾನ್ ಫಾಲೊವರ್ಸ್ ನ ಸಂಖ್ಯೆ ಸುಮಾರು 11 ಸಾವಿರಕ್ಕೂ ಅಧಿಕ ಇಳಿಕೆಯಾಗಿದೆ.

ಕಾರ್ತಿಕ್ ನ ಗುಂಪಿನಲ್ಲಿದ್ದ ಸಂಗೀತಾ ಬಳಿಕ ವಿನಯ್ ತಂಡಕ್ಕೆ ಸೇರಿದ್ದಳೂ. ಇದೀಗ ವಾಪಸು ಕಾರ್ತಿಕ್ ಗುಂಪಿಗೆ ಸೇರಿಕೊಂಡಿದ್ದಾಳೆ.
ಆದರೂ ಕೂಡ ಸಂಗೀತನ ಫ್ಯಾನ್ಸ್ ಗಳಿಗೆ ಈಗ ಸಂಗೀತನ ನಡೆತೆಗಳು ಇಷ್ಟ ಆಗುತ್ತಿಲ್ಲ.

ಇದೀಗ ಬಿಗ್ ಬಾಸ್ ನಲ್ಲಿ ನೀಡಿರುವ ಟಾಸ್ಕ್ ನಲ್ಲಿ ಎಲ್ಲ ಸ್ಪರ್ಧಿಗಳಿ ಒಂದೊಂದು ಟಾಸ್ಕ್ ಕೊಟ್ಟಿದ್ದಾರೆ. ಅದರಲ್ಲಿ ಸಂಗೀತಾಗೆ ಅಳುವ ನಾಯಿಮರಿಯಂತಹ ಟಾಸ್ಕ್ ಸಿಕ್ಕಿದ್ದು, ನಾಯಿಯಂತೆ ಅದರ ಧ್ವನಿಯಂತೆ ಅನುಕರಣೆ ಮಾಡಿದ್ದಾರೆ.

ಇದಕ್ಕೆ ತುಕಾಲಿ ಸಂತೋಷ್ ಸಾಥ್ ನೀಡಿದ್ದಾರೆ. ಅಲ್ಲದೇ ಬಿಗ್ಗ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್​ ಮತ್ತು ವರ್ತೂರ್​ ಸಂತೋಷ್​​ಗೆ ಬಿಗ್​ ಬಾಸ್​​ ಸಂಗೀತಾ ಮತ್ತು ಕಾರ್ತಿಕ್​ ಅವರನ್ನು ಅನುಕರಿಸುವ ಟಾಸ್ಕ್​ ನೀಡಿದ್ದರು. ಅದರಂತೆ ಇಬ್ಬರೂ ಕೂಡ ಆ ಪಾತ್ರವನ್ನು ಭಿನ್ನವಾಗಿ ಮಾಡಿ ಎಲ್ಲ ಸ್ಪರ್ಧಿಗಳನ್ನು ನಕ್ಕು ನಗಿಸಿದ್ದಾರೆ. ಅಲ್ಲದೆ ಸಂಗೀತಾ ಶೃಂಗೇರಿಗೆ ಕರೆಕ್ಟ್ ಆಗಿ ಟಾಂಗ್ ಕೊಟ್ಟಿದ್ದಾರೆ.

 

Continue Reading

bengaluru

Film: ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಟಾಲಿವುಡ್ ಗೆ ಎಂಟ್ರಿ

Published

on

Film: ಸ್ಯಾಂಡಲ್ ವುಡ್ ಖ್ಯಾತಿಯ ನಟಿ ಸಪ್ತಮಿ ಗೌಡ ಅವರಿಗೆ ಕಾಂತಾರ ಸಿನಿಮಾದ ನಂತರ ಬೇಡಿಕೆ ಹೆಚ್ಚಾಗಿದ್ದು, ಇದೀಗ ಟಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ನ ತಾರೆಯಾಗಿದ್ದ ಸಪ್ತಮಿ ಗೌಡ ಕನ್ನಡ ಮಾತ್ರವಲ್ಲದೇ ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಯುವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ಯುವ ಸಿನಿಮಾದಲ್ಲಿ ನಾಯಕಿಯಾಗಿ ಇವರೇ ನಟಿಸುತ್ತಿದ್ದಾರೆ.

ಸಪ್ತಮಿ ಗೌಡ ಮೊದಲು ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಳಿಕ ಡಾಲಿಯ ಜೊತೆ ನಾಯಕಿಯಾಗಿ ನಟಿಸಿದ್ದರು.

ಇದಾದ ಬಳಿಕ ‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ನಾಯಕಿ ನಟಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಕಾಂತರ ಸಿನಿಮಾದಲ್ಲಿ ನಟಿಸಿದ್ದೇ ನಟಿಸಿದ್ದು, ಆ ಬಳಿಕ ಅವಕಾಶಗಳು ಹೆಚ್ಚುತ್ತಲೇ ಇದೆ.ಇದೀಗ ಅವರು ತೆಲುಗಿನ ‘ತಮ್ಮುಡು’ ಚಿತ್ರದಲ್ಲಿ ನಟಿಸಲಿದ್ದಾರೆ.

 

 

Continue Reading

LATEST NEWS

Trending