FILM
ರಿಷಬ್ ಬರ್ತ್‌ಡೇ ವೇಳೆ ಒಂದೇ ತಟ್ಟೆಯಲ್ಲಿ ಊಟ ಮಾಡಿದ ಶೆಟ್ಟಿ ಗ್ಯಾಂಗ್: ವೀಡಿಯೋ ವೈರಲ್
ಬೆಂಗಳೂರು: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಈ ಹಿನ್ನೆಲೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ನಲ್ಲಿ ಅಭಿಮಾನಿಗಳನ್ನು ಈಗಾಗಲೇ ಭೇಟಿಯಾಗಿದ್ದಾರೆ. ಇದೇ ವೇಳೆ ಅಭಿಮಾನಿಗಳಿಗಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಇದೇ ವೇಳೆ ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಈ ವೀಡಿಯೋವನ್ನು ಶೀತಲ್ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ “ಕಳೆದ ರಾತ್ರಿ ನಡೆದದ್ದು ತುಂಬಾ ನೆನಪುಳಿಯುವಂತದ್ದು. ರಿಷಬ್ ಅವರ ಜನ್ಮದಿನದ ಆಚರಣೆಯಾಗಿತ್ತು. ಈ ರೀತಿ ಒಟ್ಟಿಗೆ ಒಂದೇ ತಟ್ಟೆಯಲ್ಲಿ ರಿಷಬ್, ಪ್ರಮೋದ್, ರಕ್ಷಿತ್ ಊಟ ಮಾಡುವ ಕ್ಷಣ ತುಂಬ ಮುದ್ದಾಗಿತ್ತು” ಎಂದು ಬರೆದುಕೊಂಡಿದ್ದಾರೆ.
ಕುಂದಾರಪುರದ ಕೆರಾಡಿ ಗ್ರಾಮದ ರಿಷಬ್ ಶೆಟ್ಟಿ ಬಾಲ್ಯದಿಂದಲೇ ಸಿನಿಮಾ ಆಸಕ್ತಿ ಬೆಳೆಸಿಕೊಂಡಿದ್ದರು. ಸಿನಿಮಾಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದ ಅವರು ತಮ್ಮ ಸಾಧನೆಗಾಗಿ ನಾನಾ ಕೆಲಸಗಳನ್ನು ಮಾಡಿದ್ದರು. ಆರಂಭದಲ್ಲಿ ಸಾಕಷ್ಟು ನಿರಾಸೆ ಎದುರಿಸಿದ್ದ ಅವರು ಸಣ್ಣ ಪುಟ್ಟ ಪಾತ್ರಗಳಿಗೆ ತೃಪ್ತಿಪಡಬೇಕಾಗಿತ್ತು.
ರಿಕ್ಕಿ ಸಿನಿಮಾ ಮಾಡಿ ಗುರುತಿಸಿಕೊಂಡಿದ್ದರೂ ಖ್ಯಾತಿ ಗಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ʻಉಳಿದವರು ಕಂಡಂತೆʼ ಸಿನಿಮಾ ಮೂಲಕ ಅವರು ಹೆಚ್ಚು ಮಂದಿಗೆ ಪರಿಚಿತರಾದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಮೂಲಕ ಅವರು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದರು.
Last night was quite an occasion to remember!! It was Rishab’s Birthday celebration💁♀️
It couldn’t have gone better than this. I really found this moment so adorable and thought why not take it to social media feed❤️my apologies😛 @shetty_rishab @rakshitshetty pic.twitter.com/htFt0n4VYw
— sheetal shetty (@isheetalshetty) July 7, 2023
FILM
Film: ಹಂದಿ ಮಾಂಸ ಸೇವಿಸಿದ ಟಿಕ್‌ಟಾಕ್ ಸ್ಟಾರ್‌ಗೆ 2 ವರ್ಷ ಜೈಲು ಶಿಕ್ಷೆ..!
ಟಿಕ್ ಟಾಕ್ ಸ್ಟಾರ್ ಒಬ್ಬರು ಹಂದಿ ಮಾಂಸ ಸೇವಿಸಿದಕ್ಕೆ ಇಂಡೋನೇಷ್ಯಾ ನ್ಯಾಯಾಲಯವು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಜಕಾರ್ತ: ಟಿಕ್ ಟಾಕ್ ಸ್ಟಾರ್ ಒಬ್ಬರು ಹಂದಿ ಮಾಂಸ ಸೇವಿಸಿದಕ್ಕೆ ಇಂಡೋನೇಷ್ಯಾ ನ್ಯಾಯಾಲಯವು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಲೀನಾ ಮುಖರ್ಜಿ (33) ಶಿಕ್ಷೆಗೊಳಗಾದ ಟಿಕ್ ಟಾಕ್ ಸ್ಟಾರ್.
ಲೀನಾ ಮುಖರ್ಜಿ ಅವರು ಬಾಲಿಯಲ್ಲಿ ಕಳೆದ ಮಾರ್ಚ್‌ನಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ವಿಡಿಯೊ ವೈರಲ್ ಆಗುತ್ತಿದ್ದ ಬೆನ್ನಲೇ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇಸ್ಲಾಂನಲ್ಲಿ ಹಂದಿ ಮಾಂಸವು ನಿಷಿದ್ಧವಾಗಿದೆ.
ಆ ಕಾರಣದಿಂದ ಲೀನಾ ಮುಖರ್ಜಿಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಹಾಗಾಗಿ ಇದೀಗ ಧರ್ಮ ನಿಂದನೆಯ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಲೀನಾ ಮುಖರ್ಜಿಯವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇದರೊಂದಿಗೆ 16,245 ಡಾಲರ್ (13.47 ಲಕ್ಷ ರೂ.) ದಂಡ ವಿಧಿಸಿದೆ.
ನಿಗದಿತ ಅವಧಿಯಲ್ಲಿ ದಂಡ ಪಾವತಿಸದೇ ಇದ್ದರೆ ಇನ್ನೂ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವುದಾಗಿ ಕೋರ್ಟ್ ಹೇಳಿದೆ.
ಧಾರ್ಮಿಕ ಆಚಾರ-ವಿಚಾರಗಳನ್ನು ನಂಬುವವರು ಹಾಗೂ ನಿಗದಿತ ಸಮುದಾಯದ ಜನರ ವಿರುದ್ಧ ದ್ವೇಷ ಹರಡಿಸುವ ಉದ್ದೇಶದಿಂದ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಲೀನಾ ಮುಖರ್ಜಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಲೆಮ್‌ಬಾಂಗ್ ನ್ಯಾಯಾಲಯವು ತಿಳಿಸಿದೆ.
ಇಸ್ಲಾಮಿಕ್ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಧರ್ಮನಿಂದನೆಯ ಕಾನೂನುಗಳು ಬಲಿಷ್ಠವಾಗಿವೆ.
FILM
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
ಆ್ಯಮಿ ಜಾಕ್ಸನ್ ಅವರ ಅಚ್ಚರಿಯ ಬದಲಾವಣೆಯನ್ನು ನೋಡಿದ ನೆಟ್ಟಿಗರು ಆ್ಯಮಿ ಮುರ್ಫಿ ಕಾಪಿ ಎನ್ನುತ್ತಿದ್ದಾರೆ. ಚೆನ್ನಾಗಿದ್ದ ಆ್ಯಮಿಗೆ ಏನಾಯ್ತು ಅಂತ ಯೋಚಿಸುತ್ತಿದ್ದಾರೆ.
ಬಹುಭಾಷಾ ನಟಿ ಹಾಗೂ ರೂಪದರ್ಶಿಯೂ ಆಗಿರುವ ಆ್ಯಮಿ ಜಾಕ್ಸನ್ ಕನ್ನಡಿಗರಿಗೆ ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ಗೆ ಜೋಡಿಯಾಗಿ ನಟಿಸಿ ಹೆಸರುವಾಸಿಯಾಗಿದ್ದರು. ಆದ್ರೆ ಈಗಿನ ಆ್ಯಮಿ ಜಾಕ್ಸನ್ ಗೂ ಅಂದಿನ ಆ್ಯಮಿ ಜಾಕ್ಸನ್ ಗೂ ಅಜಗಜಾಂತರ ವ್ಯತ್ಯಾಸವಾಗಿದೆ. ನಿಜಕ್ಕೂ ಕುರೂಪಿ ಆಗೋದ್ರಾ ಎಂಬ ಅನುಮಾನ ಕಾಡದಿರದು.
ಈಗ ತಮ್ಮ ಹೊಸ ಲುಕ್ನಿಂದಾಗಿ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದ್ದಾರೆ.ಅವರ ಫಾಲೋವರ್ಸ ಹಾಗೂ ಫ್ಯಾನ್ಸ್ ಅವರ ಲುಕ್ನಲ್ಲಿ ಹಲವಾರು ಬದಲಾವಣೆಗಳನ್ನು ಗುರುತಿಸಿಕೊಂಡಿದ್ದಾರೆ.
ನಟಿಯ ಹೊಸ ಲುಕ್ನಲ್ಲಿ ಅವರ ಚೀಕ್ ಬೋನ್ಸ್ ಹಾಗೂ ಚಿಕ್ಕ ಕಣ್ಣು ಎಲ್ಲರಿಗೂ ಅಚ್ಚರಿ ಮೂಡಿಸಿದೆ.ಆ್ಯಮಿ ಜಾಕ್ಸನ್ ಅವರ ಈ ಅಚ್ಚರಿಯ ಬದಲಾವಣೆಯನ್ನು ನೋಡಿದ ನೆಟ್ಟಿಗರು ಆ್ಯಮಿ ಮುರ್ಫಿ ಅವರ ಕಾಪಿಯಂತೆ ಕಾಣುತ್ತಿದ್ದಾರೆ ಎಂದಿದ್ದಾರೆ.
ಸದ್ಯ ಇದು ಸರ್ಜರಿಯಾ, ಮೇಕಪ್ ಮಾಡಿರೋದಾ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಸುಂದರಿಯಾಗಿದ್ದ ಆ್ಯಮಿ ಈ ರೀತಿಯಾಗಿ ಯಾಕೆ ಕಾಣಿಸಿಕೊಂಡ್ರು. ಮೊದಲಿದ್ದ ಚಾರ್ಮ್ ಈಗ ಕುಂದಿದಂತೆ ಕಾಣುತ್ತಿದ್ದು, ಸ್ಕೆಲಿಟನ್ ರೀತಿ ಕಾಣುತ್ತಿದ್ದಾರೆ.
FILM
ಸಮಂತ ಇನ್ಸ್ಟಾ ಫೀಡ್ ನಲ್ಲಿ ಕಾಣಿಸಿಕೊಂಡ ‘ಗಂಡ’ನ ಫೋಟೋ


- FILM6 days ago
‘ಜವಾನ್’ ಶಾಕಿಂಗ್ ಕಲೆಕ್ಷನ್ – ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ 700 ಕೋಟಿ..!
- LATEST NEWS6 days ago
“ಕಚೇರಿ ವೇಳೆಯಲ್ಲಿ ಗಂಟೆ ಗಟ್ಟಲೆ ಕಾಫಿ, ಟೀಗೆ ಹೋಗುವ ಸರ್ಕಾರಿ ನೌಕರರ ವಿರುದ್ದ ಕಠಿಣ ಕ್ರಮ”
- FILM6 days ago
ಸೈಮಾ 2023-ಅತೀ ಹೆಚ್ಚು ಪ್ರಶಸ್ತಿ ಗೆದ್ದು ಬೀಗಿದ ಕನ್ನಡದ “ಕಾಂತಾರ”
- bangalore6 days ago
ಮುಂದಿನ ವಾರವೇ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್- ರಿಲೀಸ್ ಡೇಟ್?