Connect with us

    LATEST NEWS

    ವರನ ಸೋಗಿನಲ್ಲಿ ಯುವತಿಯರಿಗೆ ವಂಚನೆ; ಆರೋಪಿ ಬಂಧನ

    Published

    on

    ಮಂಗಳೂರು/ದಾವಣಗೆರೆ: ವರನ ಸೋಗಿನಲ್ಲಿ ಅಮಾಯಕ ಯುವತಿಯರಿಗೆ 62 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

     

    ಮಂಡ್ಯ ತಾಲೂಕಿನ ಮಾಚನಹಳ್ಳಿ ನಿವಾಸಿ ಎಂ.ಮಧು (31) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

    ವಧು-ವರ ಶೋಧ ತಾಣಗಳಾದ ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಬಳಿಕ, “ನಿಮಗೆ ಸರ್ಕಾರಿ ನೌಕರಿ ಕೊಡಿಸಿ, ನಂತರ ಮದುವೆ ಆಗುತ್ತೇನೆ” ಎಂದು ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ್ದಾನೆ.

    ದಾವಣಗೆರೆ ಮೂಲದ ಯುವತಿಯೊಬ್ಬಳಿಗೆ ಮೈಸೂರು ರೇಲ್ವೆ ವರ್ಕಶಾಪ್​ನಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಮಧು 21 ಲಕ್ಷ ರೂಪಾಯಿ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ. ಹಣ ಖಾತೆಗೆ ಬಂದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ತಾನು ವಂಚನೆಗೆ ಒಳಗಾಗಿರವುದಾಗು ಯುವತಿ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

    ಆರೋಪಿ ಮಧು, ಚಿಕ್ಕಮಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಯುವತಿಯಿಂದ 3.80 ಲಕ್ಷ ರೂ., ಮಂಡ್ಯ ಸಿಇಎನ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿನ ಯುವತಿಯಿಂದ 26 ಲಕ್ಷ ರೂ., ಬೆಂಗಳೂರು ಕಾಟನ್ ಪೇಟ್​ ಠಾಣೆ ವ್ಯಾಪ್ತಿಯಲ್ಲಿನ ಯುವತಿಯಿಂದ 2.8 ಲಕ್ಷ ರೂ., ಮೈಸೂರು ಸಿಇಎನ್ ಠಾಣೆಯ ಸೇರಿದಂತೆ ಏಳು ‌ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಯುವತಿರಿಂದ ಒಟ್ಟು 62 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.

    ಮ್ಯಾಟ್ರಿಮೋನಿಗಳ ಮೂಲಕ ವಂಚಕರು ಪರಿಚಯ ಮಾಡಿಕೊಂಡು ಹೆಣ್ಣು ಮಕ್ಕಳಿಗೆ ನಯವಾಗಿ ಮಾತನಾಡಿ ವಂಚಿಸುವವರ ಬಗ್ಗೆ ಹಾಗೂ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುವವರ ಬಗ್ಗೆ ಜಾಗೃತರಾಗಿರಿ. ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಸ್ಥಳೀಯ ಠಾಣೆಗೆ ಹೋಗಿ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

    Published

    on

    ಮಂಗಳೂರು/ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಶುಕ್ರವಾರ(ನ.15) ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಮೋದಿ ದಿಯೋಗರ್‌ಗೆ ತೆರಳಿದ್ದರು.

    ಚುನಾವಣಾ ಭಾಷಣವನ್ನು ಮುಗಿಸಿ ದಿಯೋಗರ್‌ ಏರ್‌ಪೋರ್ಟ್‌ಗೆ ಹೋಗಿ ವಿಮಾನವೇರಿದ್ದರು. ಈ ವೇಳೆ ಅವರ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿಯಿದ್ದ ವಿಮಾನ ದಿಯೋಗರ್‌ ಏರ್‌ಪೋರ್ಟ್‌ನಲ್ಲಿಯೇ ಇದ್ದು, ಪ್ರಧಾನಿ ಮೋದಿ ನವದೆಹಲಿಗೆ ತೆರಳುವುದು ಕೆಲಕಾಲ ತಡವಾಗಲಿದೆ ಎಂದು ವರದಿಯಾಗಿದೆ.

    ದಿಯೋಗರ್‌ ಏರ್‌ಪೋರ್ಟ್‌ನಲ್ಲಿಯೇ ವಿಮಾನದಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಅವರು ದೆಹಲಿಗೆ ತೆರಳುವುದು ವಿಳಂಬವಾಗಲಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ : ಸ*ತ್ತ ಬಳಿಕ ದೇಹದಲ್ಲಿ ಏನೇನಾಗುತ್ತೆ ಗೊತ್ತಾ? ಮೈ ಝುಂ ಎನ್ನುವ ಮಾಹಿತಿ ಇಲ್ಲಿದೆ ..!

    ಇದಕ್ಕೂ ಮುನ್ನ ಪ್ರಧಾನಿ ಮೋದಿ ಬುಡಕಟ್ಟು ವೀರ ಬಿರ್ಸಾ ಮುಂಡಾ ಅವರನ್ನು ಗೌರವಿಸುವ ಜಂಜಾಟಿಯಾ ಗೌರವ್ ದಿವಸ್ ಆಚರಣೆಯ ಅಂಗವಾಗಿ ಜಾರ್ಖಂಡ್‌ನಲ್ಲಿ ಎರಡು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

    Continue Reading

    LATEST NEWS

    ಸ*ತ್ತ ಬಳಿಕ ದೇಹದಲ್ಲಿ ಏನೇನಾಗುತ್ತೆ ಗೊತ್ತಾ? ಮೈ ಝುಂ ಎನ್ನುವ ಮಾಹಿತಿ ಇಲ್ಲಿದೆ ..!

    Published

    on

    ಸ*ತ್ತ ಬಳಿಕ ದೇಹ ಏನಾಗುತ್ತದೆ? ಯಾವೆಲ್ಲಾ ಬದಲಾವಣೆ ಉಂಟಾಗುತ್ತದೆ? ದೇಹ ಹಾಗೆಯೇ ಬಿಟ್ಟರೆ ಕೊನೆಗೆ ಏನಾಗಬಹುದು?  ಮೈ ಝುಂ ಎನ್ನುವ ಮಾಹಿತಿಯನ್ನು ನರ್ಸ್‌ ಒಬ್ಬರು ನೀಡಿದ್ದು, ಅದು ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿವೆ.

    ‘ಸಾ*ವು’ ‌ಎನ್ನುವುದು ಒಂದು ರೀತಿಯ ಭಯಾನಕ ವಾತಾವರಣವನ್ನು ಸೃಷ್ಠಿಸುತ್ತದೆ. ಎಷ್ಟೇ ವಯಸ್ಸಾಗಿರಲಿ ಸಾ*ವು ಎಂದಾಕ್ಷಣ ಅರೆಕ್ಷಣ ಬೆಚ್ಚಿಬೀಳಬಹುದು. ಆದರೆ ಹುಟ್ಟಿದ ಮೇಲೆ ಸಾ*ಯಲೇಬೇಕು ಎನ್ನುವುದು ಅಷ್ಟೇ ದಿಟ. ಸ*ತ್ತ ಬಳಿಕ ದೇಹದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಆದರೆ ಅದನ್ನು ಅನುಭವಿಸುವುದಕ್ಕಂತೂ ಸಾಧ್ಯವಿಲ್ಲ. ಸ*ತ್ತ ಮೇಲೆ ಏನಾಗಬಹುದು ಎನ್ನುವುದನ್ನು ಊಹೆ ಮಾಡಿಕೊಳ್ಳಲಿಕ್ಕಷ್ಟೇ ಸಾಧ್ಯ. ಆದರೆ ಇದೀಗ ನರ್ಸ್ ಒಬ್ಬರು ಸತ್ತ ತಕ್ಷಣ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಹಂತ ಹಂತವಾಗಿ ವಿವರಿಸಿದ್ದಾರೆ.

    ಸ*ತ್ತ ಮೇಲೆ ದೇಹ ಏನಾಗುವುದು ?

    ಅಮೆರಿಕದ ಹಿರಿಯ ನರ್ಸ್ ಜೂಲಿ ಮ್ಯಾಕ್‌ಫ್ಯಾಡೆನ್ ಸಾವಿನ ನಂತರ ಮಾನವ ದೇಹದಲ್ಲಿ ಸಂಭವಿಸುವ ದೈಹಿಕ ಬದಲಾವಣೆಗಳನ್ನು ವಿವರಿಸಿದ್ದಾರೆ. ಅವರ ಪ್ರಕಾರ ‘ಸಾ*ವಿನ ನಂತರ ದೇಹವು ವಿಶ್ರಾಂತ ಸ್ಥಿತಿಯಲ್ಲಿರುತ್ತದೆಯಾದರೂ, ಸತ್ತ* ತಕ್ಷಣ ದೇಹದಿಂದ ದ್ರವಗಳು ಹೊರಬರುತ್ತವೆ. ಶರೀರದಲ್ಲಿ ನೀರಿನ ಅಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸ*ತ್ತ ಬಳಿಕ ದೇಹದ ಎಲ್ಲಾ ಭಾಗಗಳಿಂದಲೂ ನೀರು ಬರುತ್ತವೆ.  ಕೆಲವೊಮ್ಮೆ ಕಣ್ಣು, ಮೂಗು, ಕಿವಿಗಳಿಂದಲೂ ನೀರು ಬರುತ್ತವೆ. ದೇಹ ಸಂಪೂರ್ಣ ಶಾಂತವಾಗಿರುವ ಹಿನ್ನೆಲೆಯಲ್ಲಿ ದೇಹದಲ್ಲಿ ಉಳಿದುಕೊಂಡಿರುವ ಮೂತ್ರ ಮತ್ತು  ಮಲ ಕೂಡ ಕೆಲವೊಮ್ಮೆ ಹೊರಕ್ಕೆ ಬರುತ್ತದೆ. ಇದನ್ನು ನೋಡಿ ಕುಟುಂಬಸ್ಥರು ಭಯ ಪಡುವ ಅಗತ್ಯವಿಲ್ಲ’ ಎಂದಿದ್ದಾರೆ.

    ಸಾ*ವು ಬಹುಶಃ ಬದುಕಿಗಿಂತ ನಮ್ಮನ್ನು ಹೆಚ್ಚು ಕಾಡುವುದು. ಸಾ*ವು ಎಂದರೆ ನೋವು. ಸಾ*ವು ಎಂದರೆ ಅಂತ್ಯ. ಸ*ತ್ತಾಗ ದೇಹ ಕೊಳೆಯುತ್ತವೆ ಮತ್ತು ಕ್ಯಾರಿಯನ್ ಕೀಟಗಳಿಂದ ವಸಾಹತು ಮಾಡಬಹುದು. ಮೃ*ತ ದೇಹದ ವಾಸನೆಯನ್ನು ಸಹಿಸಲೂ ಅಸಾಧ್ಯ ಆದ್ದರಿಂದ ಸ*ತ್ತ 24 ಗಂಟೆಗಳ ಒಳಗಾಗಿ ಅಂ*ತ್ಯ ಸಂಸ್ಕಾರವನ್ನು ಮಾಡುವುದು ಸೂಕ್ತ.

    Continue Reading

    LATEST NEWS

    ದರ್ಶನ್‌ಗೆ ಮಧ್ಯಂತರ ಜಾಮೀನು; ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರದ ಒಪ್ಪಿಗೆ

    Published

    on

    ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ದರ್ಶನ್ ಅವರಿಗೆ  ​ ಬೆನ್ನು ನೋ*ವಿನ ಚಿಕಿತ್ಸೆಗಾಗಿ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಈ ಮಧ್ಯಂತರ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದು, ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

    ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ ಅವರಿಗೆ ಇದುವರೆಗೆ ಶಸ್ತ್ರಚಿಕಿತ್ಸೆ ನಡೆದಿಲ್ಲ. ಅವರು ಹೊರಗಿದ್ದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಮಧ್ಯಂತರ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

    ದರ್ಶನ್ ಅವರು ರೇಣುಕಾಸ್ವಾಮಿ ಕೊ*ಲೆ ಕೇಸ್​ನಲ್ಲಿ ಎ2 ಆರೋಪಿ ಆಗಿದ್ದು,  ಬೆನ್ನು ನೋ*ವಿನ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಇದನ್ನು ಸರ್ಕಾರಿ ಪರ ವಕೀಲರು ವಿರೋಧಿಸಿದ್ದು, ಈಗ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಪೊಲೀಸರು ಮುಂದಾಗಿದ್ದಾರೆ. ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಿರುವ ಕಡತವನ್ನು ಪೊಲೀಸರು ಗೃಹ ಇಲಾಖೆಗೆ ಕೊಟ್ಟಿದ್ದಾರೆ.

    ಇದನ್ನೂ ಓದಿ : ಕಣ್ಣು ಮುಚ್ಚಿದ ಕೂಡಲೇ ನಿದ್ದೆ ಬಾರದೆ ಆಫೀಸ್ ಕೆಲಸ ನೆನಪಾಗುತ್ತಾ? ಹೀಗೆ ಮಾಡಿ

    ಹೈಕೋರ್ಟ್ ಮಧ್ಯಂತರ ಜಾಮೀನು ಆದೇಶ ಪ್ರತಿಯನ್ನು ಗೃಹ ಇಲಾಖೆ ಪರಿಶೀಲಿಸಿದೆ. ಸುಪ್ರೀಂ ಕೋರ್ಟ್​ನಲ್ಲಿ ಪೊಲೀಸರು ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ. ಹೀಗಾಗಿ ದರ್ಶನ್​ಗೆ ಮತ್ತೆ ಸಂ*ಕಷ್ಟ ಎದುರಾಗುವ ಸಾಧ್ಯತೆ ಇದೆ. ಸದ್ಯ  ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಬಿಜಿಎಸ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

    Continue Reading

    LATEST NEWS

    Trending