LATEST NEWS
ಕಷ್ಟ ಪಟ್ಟು ಓದಿ ಡಾಕ್ಟರ್ ಆಗಿದ್ದಾಳೆ; ಭಾವಿ ಪತ್ನಿ ಬಗ್ಗೆ ಭಾವುಕನಾದ ಡಾಲಿ ..!
Published
3 weeks agoon
ಕರಿಯರ್‌ನ ಪೀಕ್‌ನಲ್ಲಿರುವ ಡಾಲಿ ಧನಂಜಯ್ ಇದೀಗ ಮದುವೆ ಅನೌನ್ಸ್ ಮಾಡಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿ ಡಾ. ಧನ್ಯತಾರನ್ನು 2025, ಫೆಬ್ರವರಿ ತಿಂಗಳಲ್ಲಿ ಕೈ ಹಿಡಿಯಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ಸುದ್ದಿಯನ್ನು ಜನರ ಜೊತೆ ಹಂಚಿಕೊಂಡಿರುವ ಡಾಲಿ ಮದುವೆ ತಯಾರಿ ಕೂಡ ಶುರು ಮಾಡಿಕೊಂಡಿದ್ದಾರೆ. ಡಾಲಿ ಸಿನಿಮಾ ನಟಿನ ಮದುವೆ ಆಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದವರು ಈಗ ಹುಡುಗಿ ಡಾಕ್ಟರ್ ಎಂದು ಕೇಳಿ ಶಾಕ್ ಆಗಿದ್ದಾರೆ.
ಹುಡುಗಿ ಬಗ್ಗೆ ಡಾಲಿ ಅಭಿಪ್ರಾಯ :
‘ಮದುವೆ ತಯಾರಿ ಶುರುವಾಗಿದೆ ಸಂಪೂರ್ಣವಾಗಿ ಮನೆಯವರು ನೋಡಿಕೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ ಫೆಬ್ರವರಿ 16ರಂದು ಮದುವೆ ನಡೆಯುತ್ತಿದೆ. ಮದುವೆ ತಯಾರಿ ವಿಚಾರದಲ್ಲಿ ಸ್ವಲ್ಪ ಟೆನ್ಶನ್ ಇದ್ದೇ ಇರುತ್ತದೆ ಏಕೆಂದರೆ ಪ್ರತಿಯೊಬ್ಬರನ್ನು ಕರೆಯಬೇಕು ಹೀಗಾಗಿ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡು ಇನ್‌ವೈಟ್ ಮಾಡಲು ಹೋಗಬೇಕು. ಇಲ್ಲಿ ಆಕ್ಟರ್ ಮತ್ತು ಡಾಕ್ಟರ್ ಲವ್ ಆಂಡ್ ಮದುವೆ ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ ಆಲೋಚನೆಗಳು ಮ್ಯಾಚ್ ಆಗುತ್ತದೆ ಹೀಗಾಗಿ ಒಟ್ಟಿಗೆ ಜರ್ನಿ ಶುರು ಮಾಡಿದರೆ ಚೆನ್ನಾಗಿರುತ್ತದೆ. ಆಕೆ ಮಿಡಲ್ ಕ್ಲಾಸ್ ಹುಡುಗಿ, ಕಷ್ಟ ಪಟ್ಟು ಡಾಕ್ಟರ್ ಆಗಿದ್ದಾರೆ ಅಲ್ಲದೆ ಅವರ ವರ್ಕ್, ಎಥಿಕ್ಸ್, ಯೋಚನೆಗಳು ನನಗೆ ಇಷ್ಟ ಆಯ್ತು’ ಎಂದು ಸಂದರ್ಶನವೊಂದರಲ್ಲಿ ಡಾಲಿ ಹೇಳಿದ್ದಾರೆ.
ಇದನ್ನೂ ಓದಿ : ‘ಇಷ್ಟರಲ್ಲೇ ಮದುವೆ ಆಗ್ತೀನಿ’ ; ಡಾಲಿ ಧನಂಜಯ್ ಕಡೆಯಿಂದ ಗುಡ್ ನ್ಯೂಸ್
‘ಆಪ್ತರನ್ನು ಮದುವೆಗೆ ಆಹ್ವಾನ ಮಾಡಲು ಶುರು ಮಾಡಬೇಕು ಆಗ ಭಾವಿ ಪತ್ನಿಯನ್ನು ಒಟ್ಟಿಗೆ ಕರೆದುಕೊಂಡು ಬರುತ್ತೀನಿ. ನಾವಿಬ್ಬರು ಒಂದೇ ರೀತಿಯಲ್ಲಿ ಯೋಚನೆ ಮಾಡುತ್ತೀವಿ. ಸಿನಿಮಾದವರ ಜೊತೆ ಜೀವನದ ಜರ್ನಿ ಹಾಗೆ ಶುರು ಮಾಡುವುದು ಬಹಳ ಕಷ್ಟ ಹಾಗಾಗಿ ಪ್ರೀತಿಸಿ ಹುಡುಗಿ ಆಯ್ಕೆ ಮಾಡಿಕೊಂಡು ಮದುವೆ ಆಗುತ್ತಿರುವುದು. ಇದು ಪಕ್ಕಾ ಲವ್ ಸ್ಟೋರಿ’ ಎಂದು ಡಾಲಿ ತಿಳಿಸಿದ್ದಾರೆ.
International news
ಸಿರಿಯಾ ಸಂಘರ್ಷ: ಸಿರಿಯಾದಿಂದ ಹೊರಡುವಂತೆ ಭಾರತೀಯ ಪ್ರಜೆಗಳಿಗೆ ವಿದೇಶಾಂಗ ಇಲಾಖೆ ಸೂಚನೆ
Published
27 minutes agoon
07/12/2024By
NEWS DESK3ಮಂಗಳೂರು/ಸಿರಿಯಾ: ಸಿರಿಯಾದಲ್ಲಿ ರಾಜಕೀಯ ಪ್ರಕ್ಷುಬ್ದತೆ ಉಂಟಾಗಿದ್ದು, ಅಲ್ಲಿ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷ ತೀವ್ರಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತದ ವಿದೇಶಾಂಗ ಸಚಿವಾಲಯ (ಎಂವಿಎ), ಮುಂದಿನ ಸೂಚನೆ ನೀಡುವವರೆಗೆ ಆ ದೇಶಕ್ಕೆ ಪ್ರಯಾಣ ಕೈಗೊಳ್ಳದಿರಿ ಎಂದು ನಾಗರಿಕರಿಗೆ ಸಲಹೆ ನೀಡಿದೆ.
ಸಿರಿಯಾ ರಾಜಕೀಯ ಪ್ರಕ್ಷುಬ್ದತೆಯ ಮಧ್ಯ ರಷ್ಯಾ ಮತ್ತು ಇರಾನ್ ಬೆಂಬಲಿತ ಬಶರ್-ಅಲ್-ಅಸ್ಸಾದ್ ಆಡಳಿತವನ್ನು ಟರ್ಕಿಯಿಂದ ಬೆಂಬಲಿತವಾಗಿರುವ ಬಂಡುಕೋರ ಗುಂಪುಗಳು ಮತ್ತು ಮಿಲಿಷಿಯಾಗಳಿಂದ ಸುತ್ತುವರಿದಿದೆ. ಈ ಕಾರಣದಿಂದ ಸಿರಿಯಾದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇದೀಗ ಸಿರಿಯಾದಲ್ಲಿರುವ ಭಾರತೀಯರನ್ನು ಎಚ್ಚರಿಕೆ ಹಾಗೂ ಜಾಗೃತೆಯಲ್ಲಿ ಇರುವಂತೆ ಭಾರತ ಹೇಳಿದೆ. ಸಿರಿಯಾ ಪರಿಸ್ಥಿಯ ಬಗ್ಗೆ ಭಾರತ ಸರ್ಕಾರವು ಕಳವಳ ವ್ಯಕ್ತಪಡಿಸಿದೆ.
2011ರಲ್ಲಿ ಅಂತರ್ ಯುದ್ದಕ್ಕೆ ಸಾಕ್ಷಿಯಾಗಿದ್ದ ಸಿರಿಯಾ, ಇತ್ತೀಚಿನ ಬೆಳವಣಿಗೆಗಳಿಂದಾಗಿ ವಿಶ್ವದಾದ್ಯಂತ ಕಳವಳ ಉಂಟುಮಾಡಿದೆ. ಬಂಡುಕೋರರು ಅಲೆಪ್ಪೊ ನಗರವನ್ನು ವಶಪಡಿಸಿಕೊಳ್ಳುತ್ತಿದ್ದಂತೆ, ಅಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
ಇದನ್ನೂ ಓದಿ: ಕಲಬುರಗಿ ಜೈಲಿನಲ್ಲಿ ಕೈದಿಗಳ ಐಶಾರಾಮಿ ಜೀವನ !
ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಯಾಣ ಅಧಿಸೂಚನೆ ಬಿಡುಗಡೆ ಮಾಡಿರುವ ಎಂವಿಎ, ‘ಸದ್ಯದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಆದೇಶದವರೆಗೆ ಭಾರತದ ಪ್ರಜೆಗಳು ಸಿರಿಯಾಕ್ಕೆ ಪ್ರಯಾಣಿಸದಂತೆ ಸೂಚಿಸಲಾಗುತ್ತಿದೆ’ ಎಂದು ತಿಳಿಸಿದೆ.
ಇನ್ನೂ ಈ ಬಗ್ಗೆ ಭಾರತ ಸರ್ಕಾರ ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಹಂಚಿಕೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಸ್ತುತ ಸಿರಿಯಾದಲ್ಲಿರುವ ಎಲ್ಲಾ ಭಾರತೀಯರಿಗೆ ಡಮಾಸ್ಕಸ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕ ಸಾಧಿಸುವಂತೆ ತಿಳಿಸಿದೆ.
ಭಾರತ ಸರ್ಕಾರ ಸಿರಿಯಾದಲ್ಲಿರುವ ಭಾರತೀಯರನ್ನು ಕರೆತರಲು ಈಗಾಗಲೇ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸರ್ಕಾರದ ಸೂಚನೆ ಬರುವವರೆಗೆ ಯಾರು ಕೂಡ ಹೊರಗೆ ಬರಬೇಡಿ. ಸಾಧ್ಯವಿರುವವರು, ಲಭ್ಯವಿರುವ ಆರಂಭಿಕ ವಾಣಿಜ್ಯ ವಿಮಾನಗಳ ಮೂಲಕ ಸಿರಿಯಾವನ್ನು ತೊರೆಯುವಂತೆ ಸೂಚನೆ ನೀಡಿದೆ.
ಸಿರಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೊಬೈಲ್ ಸಂಖ್ಯೆ +963 993385973 ಹಂಚಿಕೊಂಡಿದೆ. ಹಾಗೂ WhatsApp ಮತ್ತು [email protected] ಮೇಲ್ ಮೂಲಕವೂ ಸಂಪರ್ಕ ಸಾಧಿಸಬಹುದು ಎಂದು ಹೇಳಿದೆ.
LATEST NEWS
ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಬಿಸಿನೆಸ್ ಪಾರ್ಟ್ನರ್
Published
1 hour agoon
07/12/2024By
NEWS DESK2ಮಂಗಳೂರು: ಚಂಪಾಷಷ್ಠಿ ಹಿನ್ನೆಲೆಯಲ್ಲಿ ಶನಿವಾರ (ಡಿಸೆಂಬರ್ 07) ಕುಕ್ಕೆ ಸುಬ್ರಮಣ್ಯದಲ್ಲಿ ರಥೋತ್ಸವ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಮಣ್ಯಕ್ಕೆ ಅಮೆರಿಕಾದ ನಿಯೋಜಿತ ಡೊನಾಲ್ಡ್ ಟ್ರಂಪ್ ಅವರ ಬಿಸಿನೆಸ್ ಪಾರ್ಟ್ನರ್ ಶಶಿಭೂಷಣ್ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಹೈದರಾಬಾದ್ ಮೂಲದ ಶಶಿಭೂಷಣ್ ಅವರು ಅಮೇರಿಕಾದಲ್ಲಿ ನೆಲೆಸಿದ್ದಾರೆ.
ಶಶಿಭೂಷಣ್ ಅಮೆರಿಕಾದಲ್ಲಿ 500 ಎಕರೆ ಜಾಗದಲ್ಲಿ 3000 ಕೋಟಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಶಶಿಭೂಷಣ್ ಅವರು ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ‘ಎ’ ಪ್ಯಾಕ್ ಮುನ್ನೆಡಿಸಿದ್ದಾರೆ. ಟ್ರಂಪ್ ಗೆಲುವಿನಲ್ಲಿ ಎ ಪ್ಯಾಕ್ ಸಾಕಷ್ಟು ಶ್ರಮ ವಹಿಸಿದೆ.
ಸುಬ್ರಮಣ್ಯ ಸ್ವಾಮಿ ದರ್ಶನ ಬಳಿಕ ಮಾತನಾಡಿದ ಶಶಿಭೂಷಣ್, ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೇರಿಕಾದಲ್ಲಿ 500 ಎಕರೆ ಜಾಗದಲ್ಲಿ ಸನಾತನ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರಿಂದ ಸನಾತನ ಧರ್ಮಕ್ಕೆ ಒಳ್ಳೆಯದಾಗಲಿದೆ.
ಚಂಪಾಷಷ್ಠಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.57ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಉಮಾಮಹೇಶ್ವರ ಸ್ವಾಮೀಯ ಬ್ರಹ್ಮರಥೋತ್ಸವ ನಡೆಯಿತು. ಶುಕ್ರವಾರ (ಡಿ.06) ರಾತ್ರಿ ಚಂಪಾಷಷ್ಠಿ ಹಿನ್ನಲೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ತಂದು ಮೆರವಣಿಗೆ ಮಾಡಲಾಯಿತು. ಪಟಾಕಿ ಸಿಡಿಸುವುದನ್ನು ನೋಡಲು ಮದ್ಯರಾತ್ರಿ 2 ಗಂಟೆವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
LATEST NEWS
9 ವರ್ಷ ಲಿವ್ಇನ್ ಟುಗೆದರ್ ; 102ರ ಅಜ್ಜಿಯೊಡನೆ 100ರ ಅಜ್ಜನ ಮದುವೆ
Published
1 hour agoon
07/12/2024100 ವರ್ಷದ ಅಜ್ಜನೊಂದಿಗೆ 102 ವಯಸ್ಸಿನ ಅಜ್ಜಿ ಸಪ್ತಪದಿ ತುಳಿಯುವ ಮುಖಾಂತರ ವಿಶ್ವದ ಅತ್ಯಂತ ಹಳೆಯ ನವವಿವಾಹಿತ ಜೋಡಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಒಂದೇ ವಿಶ್ವವಿದ್ಯಾನಿಲಯದಲ್ಲಿ ಜೊತೆಯಾಗಿ ವ್ಯಾಸಂಗ ಮುಗಿಸಿದರೂ ಪರಸ್ಪರ ಪರಿಚಯವಿರಲಿಲ್ಲ. 9 ವರ್ಷಗಳ ಕಾಲ ಲಿವ್ಇನ್ ರಿಲೇಷನ್ಶಿಪ್ ನಲ್ಲಿದ್ದ ವೃದ್ಧ ಜೋಡಿ ಇದೀಗ ವಿವಾಹವಾಗುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.
ಈ ‘ಪ್ರೀತಿ’ ಎಂಬುದು ಬರೆಯಲು ಚಿಕ್ಕ ಪದವಾಗಿರಬಹುದು, ಆದರೆ ಆ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಯಾರಿಗೆ ಈ ‘ಪ್ರೀತಿ’ ಬೇಡ ಹೇಳಿ? ಈ ಪ್ರೀತಿಯು ಉಳಿದಿರುವುದೇ ನಂಬಿಕೆ, ತಿಳುವಳಿಕೆ ಮತ್ತು ಕಾಳಜಿಯ ಮೇಲೆ ಎಂದು ಹೇಳಬಹುದು. ಪ್ರೀತಿಗೆ ವಯಸ್ಸು ಮುಖ್ಯವಲ್ಲ, ಮನಸ್ಸು ಮುಖ್ಯ. ಇದೀಗ, ವಯಸ್ಸಾದ ಮುದುಕ – ಮುದುಕಿ ಪ್ರೀತಿಸಿ ಮದುವೆಯಾಗುವ ಮೂಲಕ ಜೀವನಕ್ಕೆ ಹೊಸ ತಿರುವು ನೀಡಿಕೊಂಡಿದ್ದಾರೆ.
ಈ ಪ್ರೇಮಕಥೆ ಕುಂಟುಂಬಕ್ಕೆ ಬಹಳ ಅಚ್ಚರಿ ಮೂಡಸಿತು. ಆದರೂ ಅವರಿಬ್ಬರು ಹೊಂದಿಕೊಳ್ಳುವ ಗುಣ, ಪರಸ್ಪರ ಹಾಸ್ಯ ಭಾವ ಎಲ್ಲವೂ ಕುಟುಂಬದವರನ್ನು ಮೂಖರನ್ನಾಗಿಸಿತ್ತು. ಎಲ್ಲರ ಸಮ್ಮುಖದಲ್ಲೇ ನಡೆದ, ಅಜ್ಜ – ಅಜ್ಜಿಯ ಮದುವೆಗೆ ನಾಲ್ಕು ತಲೆಮಾರಿನವರು ಆಗಮಿಸಿ ಶುಭ ಹಾರೈಸಿದ್ದಾರೆ. ಈ ಜೋಡಿಹಕ್ಕಿ 60ನೇ ವಯಸ್ಸಿನಲ್ಲಿ ತಮ್ಮ ಬಾಳ ಸಂಗಾತಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿತ್ತು. ಇದೀಗ ಪ್ರೀತಿ ಚಿಗುರಿ ಮದುವೆಯಾಗುವ ಮೂಲಕ ಹೊಸ ಜೀವನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬರ್ನಿ ಲಿಟ್‌ಮ್ಯಾನ್ ಮತ್ತು ಮಾರ್ಜೋರಿ ಫಿಟರ್‌ಮ್ಯಾನ್ ಜೊತೆ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿನ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ಬರ್ನಿ, ಮಾಜಿ ಇಂಜಿನಿಯರ್ ಮತ್ತು ಮಾರ್ಜೋರಿ, ನಿವೃತ್ತ ಶಿಕ್ಷಕಿ. ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ(www.instagram.com/guinnessworldrecords)ಯಲ್ಲಿ ಇವರ ಮದುವೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.1 ಮಿಲಿಯನ್ ಅಂದರೆ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 36,820 ನೆಟ್ಟಿಗರು ಲೈಕ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.