Connect with us

    BANTWAL

    ವಿಟ್ಲ: ಜಾಗದ ವಿವಾದದಲ್ಲಿ ಅಣ್ಣನನ್ನೇ ಹತ್ಯೆಗೈದ ಪ್ರಕರಣ-ಆರೋಪಿ ಬಂಧನ

    Published

    on

    ವಿಟ್ಲ: ಜಾಗದ ವಿಚಾರಕ್ಕೆ ಸಂಬಂಧಪಟ್ಟಂತೆ ತಮ್ಮನೇ ಅಣ್ಣನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿಟ್ಲಪಡ್ನೂರು ಗ್ರಾಮದ ಪದ್ಮನಾಭ ಬಂಗೇರ (49) ಬಂಧಿತ ಆರೋಪಿ.


    ಗಣೇಶ್ ಬಂಗೇರ (54) ಇವರಿಂದ ಹತ್ಯೆಗೊಳಗಾದ ವ್ಯಕ್ತಿ.

    ಇವರಿಬ್ಬರ ನಡುವೆ ಈ ಮೊದಲು ಕೂಡಾ ಅನೇಕ ಬಾರಿ ಜಾಗದ ವಿಚಾರದಲ್ಲಿ ಗಲಾಟೆ ನಡೆಯುತ್ತಿದ್ದು ನಿನ್ನೆ ಮಾತ್ರ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಪದ್ಮನಾಭ ಯಾವುದೋ ಮಾರಕಾಸ್ತ್ರಗಳಿಂದ ಅವರ ದೇಹದ ಮೇಲೆ ಹಲ್ಲೆ ನಡೆಸಿದ್ದಾರೆ.

    ಈ ಹಿನ್ನೆಲೆ ಗಂಭೀರ ಗಾಯಗೊಂಡು ಗಣೇಶ್ ಬಂಗೇರ ಸಾವನ್ನಪ್ಪಿದ್ದಾರೆ.

    ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    BANTWAL

    ಬಂಟ್ವಾಳ: ಹಂಚಿಕಟ್ಟೆಯಲ್ಲಿ ಸಾಗಾಟದ ಲಾರಿಯಲ್ಲಿದ್ದ ಸಿಎನ್‌ಜಿ ಸೋರಿಕೆ

    Published

    on

    ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪದ ಹಂಚಿಕಟ್ಟೆಯಲ್ಲಿ ಗೇಲ್ ಕಂಪನಿಯ ಸಿಎನ್‌ಜಿ ಗ್ಯಾಸ್ ಸಾಗಾಟದ ಲಾರಿಯಲ್ಲಿದ್ದ ಸಿಎನ್‌ಜಿ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾದ ಘಟನೆ ನಡೆದಿದೆ.

    ಸಿಎನ್‌ಜಿ ಸೋರಿಕೆ ಗಮನಕ್ಕೆ ಬಂದ ತಕ್ಷಣ ಲಾರಿ ಚಾಲಕ ಹೆದ್ದಾರಿ ಬದಿಗೆ ನಿಲ್ಲಿಸಿದ್ದು, ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿದ್ದಾರೆ.

    ಅದಾಗಲೇ ಸೋರಿಕೆಯನ್ನು ಚಾಲಕ ಹಾಗೂ ಸ್ಥಳೀಯರು ಸೇರಿ ತಡೆದಿದ್ದಾರೆ.

    Continue Reading

    BANTWAL

    ಬಂಟ್ವಾಳ: ವಿದ್ಯುತ್ ಶಾ*ಕ್‌ ಹೊಡೆದು ಶಾಮಿಯಾನದ ಕೆಲಸಗಾರ ಬ*ಲಿ

    Published

    on

    ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ನಿನ್ನೆಯ ದಿನ ಶಾಮಿಯಾನದ ಲಾರಿ ಪಲ್ಟಿಯಾಗಿ ಓರ್ವ ಮೃ*ತಪಟ್ಟ ಘಟನೆಯ ಬೆನ್ನಲ್ಲೇ ಶಾಮಿಯಾನದ ಕೆಲಸಗಾರನೋರ್ವ ವಿದ್ಯುತ್ ಶಾ*ಕ್‌ ಗೆ ಬ*ಲಿಯಾದ ದುರಂ*ತ ಘಟನೆ ನಡೆದಿದೆ.

    ಲಾರಿಯಿಂದ ಶಾಮಿಯಾನದ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ವಯರ್ ತಾಗಿ ನಾಲ್ವರು ಕೆಲಸಗಾರರಿಗೆ ಗಾಯವಾಗಿದ್ದು, ಅದರಲ್ಲಿ ಓರ್ವ ಗಂಭೀರವಾಗಿ ಗಾ*ಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಇದ್ದರು. ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃ*ತಪಟ್ಟ ಘಟನೆ ಕಡೇಶಿವಾಲಯ ಸಮೀಪ ಕಾಡಬೆಟ್ಟು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

    ಈತ ಕಲ್ಲಡ್ಕ ಸಾಲಿಯಾನ್ ಶಾಮಿಯಾನದ ಕೆಲಸಗಾರರು ಎಂದು ಸ್ಥಳೀಯರು ತಿಳಿಸಿದ್ದು, ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ನಾಲ್ವರು ಕೆಲಸಗಾರರು ಉತ್ತರಪ್ರದೇಶ ಮೂಲದವರು ಎಂದು ಹೇಳಲಾಗುತ್ತಿದೆ.

    ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    BANTWAL

    ವಿಟ್ಲದಲ್ಲಿ ಕುಸಿದು ಬಿದ್ದ ಕೋಳಿ ಶೆಡ್; 1500ಕ್ಕೂ ಅಧಿಕ ಕೋಳಿ ಸಾ*ವು

    Published

    on

    ವಿಟ್ಲ: ಕೋಳಿ ಸಾಕಾಣೆ ಮಾಡುವ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು.

    ಶೆಡ್ಡಿನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾ*ಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

    Continue Reading

    LATEST NEWS

    Trending