Wednesday, February 8, 2023

ಲಂಚ ಬಾಕ ​​ಕುಂದಾಪುರ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ..

ಲಂಚ ಬಾಕ ​​ಕುಂದಾಪುರ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ..

ಉಡುಪಿ : ಭೂ ಪರಿವರ್ತನೆಗಾಗಿ ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ​ಕುಂದಾಪುರ ಕಂದಾಯ ನಿರೀಕ್ಷಕರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಂದಾಯ ನಿರೀಕ್ಷಕರು ಭರತ್ ಶೆಟ್ಟಿ ಬಂಧಿತ ಆರೋಪಿ. ರಾಘವೇಂದ್ರ ಸ್ವಾಮಿ ನೀಡಿದ ದೂರಿನಂತೆ ಈ ದಾಳಿ ಮಾಡಲಾಗಿದೆ.

ಭೂ ಪರಿವರ್ತನೆಗಾಗಿ ಭರತ್ ಶೆಟ್ಟಿ 5,000 ರೂ. ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ.

ಈ ಕಾರ್ಯಾಚರಣೆ ಯಲ್ಲಿ ಎಸಿಬಿ ಡಿವೈಎಸ್ಪಿ ಮಂಜುನಾಥ್ ಬಿ ಕವರಿ, ಇನ್ಸ್ಪೆಕ್ಟರ್ ಗಳಾದ ಸತೀಶ್ ಬಿ .ಸ್. ಹಾಗೂ ಚಂದ್ರಕಲಾ, ಸಿಬ್ಬಂದಿಗಳು ಯತೀನ್ ಕುಮಾರ್, ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ಲತೀಫ್, ರಾಘವೇಂದ್ರ ಪೂಜಾರಿ ಹೊಸಕೋಟೆ, ಸೂರಜ್ ಕಾಪು ಹಾಗೂ ಪ್ರತಿಮಾ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Hot Topics