Friday, May 27, 2022

ಮಹಿಳೆಯ ಸಂಬಳವೇ ಅವಳ ಆರೋಗ್ಯಕ್ಕೆ ಮುಳುವಾಯಿತೇ; ಆಸ್ಪತ್ರೆಗೆ ಬಿಟ್ಟು ಪರಾರಿಯಾದ ರಿಕ್ಷಾ ಚಾಲಕ..!

ಮಹಿಳೆಯ ಸಂಬಳವೇ ಅವಳ ಆರೋಗ್ಯಕ್ಕೆ ಮುಳುವಾಯಿತೇ; ಆಸ್ಪತ್ರೆಗೆ ಬಿಟ್ಟು ಪರಾರಿಯಾದ ರಿಕ್ಷಾ ಚಾಲಕ..!

ಮಂಗಳೂರು:ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರ ತಲೆಗೆ ಗಂಭೀರ ಏಟು ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಘಟನೆಗೆ ಕಾರಣ ನಿಗೂಢವಾಗಿದ್ದು, ಮಹಿಳೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಾತನಾಡದ ಸ್ಥಿತಿಯಲ್ಲಿದ್ದಾರೆ.ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯ ಮಿರಾಕಲ್ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬ್ಲಮೊಗರುವಿನ ಮದಕ ಸಮೀಪದ ತಾರಿಗುಡ್ಡೆ ನಿವಾಸಿ ದಿನೇಶ್ ಎಂಬವರ ಪತ್ನಿ ಶೋಭಾ (30) ಎಂಬುವರು ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದಾರೆ.

ಜ.5 ರಂದು ತೊಕ್ಕೊಟ್ಟಿನಿಂದ ಬಸ್ಸಿನಲ್ಲಿ ಹೊರಟ ಶೋಭಾ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆಸ್ಪತ್ರೆಯಿಂದಲೇ ಮನೆಗೆ ಮಾಹಿತಿ ಬಂದಿದೆ. ಈ  ಕುರಿತು ಆಸ್ಪತ್ರೆ ಮಂದಿಯಲ್ಲಿ ವಿಚಾರಿಸಿದಾಗ ರಿಕ್ಷಾ ಚಾಲಕನೊಬ್ಬ ಗಾಯಾಳು ಮಹಿಳೆಯನ್ನು ತಂದು ಆಸ್ಪತ್ರೆ ತುರ್ತು ನಿಗಾ ಘಟಕದ ಎದುರು ಕುಳ್ಳಿರಿಸಿ, ಗಾಯದ ಮೂಲವನ್ನು ತಿಳಿಸದೆ ಕಣ್ಮರೆಯಾಗಿದ್ದಾನೆ ಎಂದು ತಿಳಿದು ಬಂದಿದೆ..

ಆಸ್ಪತ್ರೆ ಆಡಳಿತ ಗಾಯಾಳು ಮಹಿಳೆಯನ್ನು ತಕ್ಷಣ ದಾಖಲಿಸಿ ಚಿಕಿತ್ಸೆ ಆರಂಭಿಸಿ ಮಾನವೀಯತೆ ಮರೆದಿದ್ದಾರೆ.ತಲೆಗೆ ಗಾಯಗಳಾಗಿರುವುದರಿಂದ ಅಪಘಾತ ಪ್ರಕರಣವೆಂಬ ಸಂಶಯದಡಿ ನಾಗುರಿ ಸಂಚಾರಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಆದರೆ ಶೋಭಾರನ್ನು ಬಲ್ಲವರ ಪ್ರಕಾರ, ಅವರ ಬಳಿ ಅಂದು ಸಂಬಳದ ಹಣವಿರಬೇಕಿತ್ತು. ಆದರೆ ಅದು ಅವರ ಬಳಿಯಿರಲಿಲ್ಲ. ಅಪಘಾತ ಪ್ರಕರಣವಾಗಿದ್ದಲ್ಲಿ ರಿಕ್ಷಾ ಚಾಲಕ ಆಸ್ಪತ್ರೆ ಸಿಬ್ಬಂದಿಯಲ್ಲಿ ತಿಳಿಸಿ ತೆರಳಬಹುದಿತ್ತು ಅನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics