NATIONAL
ರೈಲು ಹಳಿ ಮೇಲೆ ಕುಳಿತಿದ್ದ ವಿದ್ಯಾರ್ಥಿ ಪಾಲಿಗೆ ಮುಳುವಾದ ಹೆಡ್ ಫೋನ್.!
ಭೋಪಾಲ್: ರೈಲು ಹಳಿ ಮೇಲೆ ಹೆಡ್ ಫೋನ್ ಹಾಕಿ ಸಂಗೀತ ಕೇಳುತ್ತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಿನ್ನೆ (ಅ.30) ಸಂಭವಿಸಿದೆ.
ಬಿಬಿಎ ವಿದ್ಯಾರ್ಥಿ ಮನರಾಜ್ ತೋಮರ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮನರಾಜ್ ಹಾಗೂ ಆತನ ಸ್ನೇಹಿತ ರೈಲು ಹಳಿಯ ಮೇಲೆ ಕುಳಿತು ಮೊಬೈಲ್ ನಲ್ಲಿ ಏನೋ ಹುಡುಕಾಡುತ್ತಿದ್ದ ವೇಳೆ ಮನರಾಜ್ ಹೆಡ್ ಫೋನ್ ಹಾಕಿಕೊಂಡಿದ್ದು ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಿದ್ದ.
ಈ ಸಂದರ್ಭ ಅದೇ ಹಳಿಯಲ್ಲಿ ಬಂದ ರೈಲು ಮನರಾಜ್ ಗೆ ಡಿಕ್ಕಿ ಹೊಡೆದಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
LATEST NEWS
ಅಮೆರಿಕದಲ್ಲಿ ನಾಲ್ಕು ಪೆಪ್ಸಿಕೋ ಫ್ಯಾಕ್ಟರಿಗೆ ಬೀಗ – ಉದ್ಯೋಗ ನಷ್ಟ
ನ್ಯೂಯಾರ್ಕ್: ಪೆಪ್ಸಿಕೋ ತನ್ನ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಪ್ರಯತ್ನಗಳ ಭಾಗವಾಗಿ ನಾಲ್ಕು ಯುಎಸ್ ಬಾಟ್ಲಿಂಗ್ ಪ್ಲಾಂಟ್‌ಗಳನ್ನು ಮುಚ್ಚಲು ಮತ್ತು ಸುಮಾರು 400 ಕಾರ್ಮಿಕರನ್ನು ವಜಾಗೊಳಿಸಲು ಯೋಜಿಸಿದೆ ಎಂದು ಬುಧವಾರ ಹೇಳಿದೆ.
ಷೇರು ವಿನಿಮಯ ಕೇಂದ್ರಕ್ಕೆ ಪೆಪ್ಸಿಕೋ ನೀಡಿದ ಮಾಹಿತಿ ಪ್ರಕಾರ ಅಮೆರಿಕದ ಸಿನ್ಸಿನಾಟಿ, ಚಿಕಾಗೋ, ಪೆನ್ಸಿಲ್ವೇನಿಯಾ ಮತ್ತು ಅಟ್ಲಾಂಟಾದ ಬಾಟ್ಲಿಂಗ್ ಯೂನಿಟ್ಗಳು ಮುಚ್ಚಲ್ಪಡುತ್ತಿವೆ ಎಂದು ಹೇಳಲಾಗಿದೆ. ಮುಚ್ಚಲಾಗುತ್ತಿರುವ ನಾಲ್ಕು ಘಟಕಗಳ ಪೈಕಿ ಚಿಕಾಗೋ ಯೂನಿಟ್ ಪೂರ್ಣವಾಗಿ ಬಂದ್ ಆಗುತ್ತದೆ.
ಇನ್ನುಳಿದ ಮೂರು ಘಟಕಗಳಲ್ಲಿ ಬಾಟ್ಲಿಂಗ್ ಯೂನಿಟ್ ಮಾತ್ರವೇ ಮುಚ್ಚಲಾಗುತ್ತದೆ. ಅಮೆರಿಕದಲ್ಲಿ 75ಕ್ಕೂ ಹೆಚ್ಚು ಬಾಟ್ಲಿಂಗ್ ಘಟಕಗಳನ್ನು ಹೊಂದಿದೆ. ಹೀಗಾಗಿ, ನಾಲ್ಕು ಘಟಕಗಳನ್ನು ಮುಚ್ಚುತ್ತಿರುವುದು ಕಂಪನಿಗೆ ಆಘಾತಕಾರಿ ಸಂಗತಿಯಲ್ಲ. ಬಿಸಿನೆಸ್ ಕಡಿಮೆ ಆಗುತ್ತಿರುವ ಕಾರಣ, ಅದನ್ನು ಸರಿದೂಗಿಸಲು ಮತ್ತು ಅನಗತ್ಯ ವೆಚ್ಚ ಕಡಿಮೆ ಮಾಡಲು ಬಾಟ್ಲಿಂಗ್ ಪ್ಲಾಂಟ್ಸ್ ಮುಚ್ಚುತ್ತಿದೆ ಎಂದು ಹೇಳಲಾಗಿದೆ.
LATEST NEWS
17 ವರ್ಷದ ಹುಡುಗಿ ಹಿಂದೆ ಬಿದ್ದ 20 ಪುರುಷರು; ಆಮೇಲೆ ಸಿಕ್ತು ಆಘಾತವಾಗೋ ಸುದ್ದಿ!
ಮಂಗಳೂರು/ಉತ್ತರಖಂಡ : ಹೆಚ್ ಐ ವಿ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಾಕಾಗುತ್ತಿಲ್ಲ. ದೈಹಿಕ ಸಂಪರ್ಕದ ಚಪಲಕ್ಕೆ ಬಿದ್ದು ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಬಹುದೊಡ್ಡ ಸಾಕ್ಷಿಯಾಗಿ ಉತ್ತರಖಂಡದಲ್ಲಿ ನಡೆದ ಈ ಘಟನೆ ನಿಂತಿದೆ. ಆದರೆ, ಈ ಘಟನೆಯ ವಿಚಾರದಲ್ಲಿ ಬೆಚ್ಚಿ ಬೀಳುವ ಸಂಗತಿಯೊಂದು ಹೊರಬಿದ್ದಿದೆ.
17 ವರ್ಷದ ಹುಡುಗಿ ಕೈವಾಡ :
ಉತ್ತರ ಖಂಡದ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ಐದು ತಿಂಗಳಲ್ಲಿ 20 ಮಂದಿ ಹೆಚ್ ಐ ವಿ ಪಾಸಿಟಿವ್ ಆಗಿದ್ದಾರೆ. ಇದಕ್ಕೆ ಕಾರಣ 17 ವರ್ಷದ ಹುಡುಗಿ ಅನ್ನೋದೇ ಶಾಕಿಂಗ್ ವಿಚಾರ. ಹೌದು, ಈ ವಿಚಾರದ ಬಗ್ಗೆ ತನಿಖೆ ಶುರುವಾಗಿದ್ದೇ ರಹಸ್ಯ ಬಯಲಾಗಿದೆ.
17ರ ಹುಡುಗಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದಳಂತೆ. ಡ್ರಗ್ಸ್ ಕೊಳ್ಳಲು ಹಣವಿಲ್ಲದ್ದಕ್ಕೆ ಆಕೆ ಹಿಡಿದ ಕೆಲಸವೇ ಪುರುಷರಿಗೆ ಬಲೆ ಬೀಸೋದು. ಆಕೆಯ ಆಮಿಷಕ್ಕೊಳಗಾದ ಪುರುಷರು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಐದು ತಿಂಗಳಲ್ಲಿ ಅನೇಕರ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಹಣಕ್ಕಾಗಿ ಈ ಕೆಲಸಕ್ಕಿಳಿದ ಹುಡುಗಿ ಈ ಬಗ್ಗೆ ಸಮಾಲೋಚಕರ ಬಳಿ ತಿಳಿಸಿದ್ದಾಳೆ. ಆಕೆಯ ಆರೋಗ್ಯ ಸರಿಯಿಲ್ಲ ಅನ್ನೋದು ಪಾಪ! ಬಡಪಾಯಿ ಪುರುಷರಿಗೆ ಇದರ ಅರಿವೇ ಇರಲಿಲ್ಲ.
ಇದನ್ನೂ ಓದಿ : ರೈಲು ಹಳಿ ಮೇಲೆ ಕುಳಿತಿದ್ದ ವಿದ್ಯಾರ್ಥಿ ಪಾಲಿಗೆ ಮುಳುವಾದ ಹೆಡ್ ಫೋನ್.!
ಯಾವಾಗ ಸತ್ಯ ಬಯಲಾಯ್ತೋ ಎಲ್ಲಾ ಆಘಾ*ತಕ್ಕೊಳಗಾಗಿದ್ದಾರೆ. ಪರೀಕ್ಷೆಗೆ ಒಳಪಡಿಸಿದಾಗ ಹೆಚ್ ಐ ವಿ ಸೋಂಕು ತಗುಲಿರೋದು ಗೊತ್ತಾಗಿದೆ. ಅವರಲ್ಲಿ ಕೆಲವರು ವಿವಾಹಿತರಾಗಿದ್ದು, ಅವರ ಪತ್ನಿಯರಿಗೂ ಹೆಚ್ ಐ ವಿ ಸೋಂಕು ತಗುಲಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
LATEST NEWS
ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಅಮಿತ್ ಶಾ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಡಿನ ಜನತೆಗೆ ಗುರುವಾರ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ.
“ದೀಪಾವಳಿಯ ಶುಭ ಸಂದರ್ಭದಲ್ಲಿ, ನಾನು ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೀಪಾವಳಿಯ ಶುಭ ಸಂದರ್ಭದಲ್ಲಿ, ನಾವು ನಮ್ಮ ಆತ್ಮಸಾಕ್ಷಿಯನ್ನು ಬೆಳಗಿಸಲು ಸಂಕಲ್ಪ ಮಾಡಬೇಕು ಮತ್ತು ಪ್ರೀತಿ, ಸಹಾನುಭೂತಿ ಮತ್ತು ಸಾಮಾಜಿಕ ಸಾಮರಸ್ಯದಂತಹ ಉತ್ತಮ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಈ ಹಬ್ಬವು ವಂಚಿತರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಮತ್ತು ಅವರೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಒಂದು ಅವಕಾಶವಾಗಿದೆ. ನಾವು ಹೆಮ್ಮೆಪಡೋಣ. ಭಾರತದ ವೈಭವಯುತ ಸಂಸ್ಕೃತಿಯಲ್ಲಿ ಒಳ್ಳೆಯತನವನ್ನು ನಂಬುವ ಮೂಲಕ ಮತ್ತು ಆರೋಗ್ಯಕರ, ಸಮೃದ್ಧ ಮತ್ತು ಸಂವೇದನಾಶೀಲ ಸಮಾಜವನ್ನು ನಿರ್ಮಿಸಲು ಪ್ರತಿಜ್ಞೆ ಮಾಡಿ ಮತ್ತು ಮಾಲಿನ್ಯ ಮುಕ್ತ ದೀಪಾವಳಿಯನ್ನು ಆಚರಿಸಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಪೋಸ್ಟ್‌ನಲ್ಲಿ, ” ದೇಶವಾಸಿಗಳಿಗೆ ದೀಪಾವಳಿಯ ಶುಭಾಶಯಗಳು. ಈ ದಿವ್ಯ ಬೆಳಕಿನ ಹಬ್ಬದಲ್ಲಿ, ನಾನು ಎಲ್ಲರಿಗೂ ಆರೋಗ್ಯ, ಸಂತೋಷ ಮತ್ತು ಸಮೃದ್ಧ ಜೀವನವನ್ನು ಬಯಸುತ್ತೇನೆ. ಮಾ ಲಕ್ಷ್ಮಿ ಮತ್ತು ಭಗವಾನ್ ಶ್ರೀ ಗಣೇಶನ ಆಶೀರ್ವಾದದಿಂದ ಎಲ್ಲರೂ ಸಮೃದ್ಧಿಯಾಗಲಿ ಎಂದಿದ್ದಾರೆ.
ಗೃಹ ಸಚಿವ ಶಾ ಕೂಡ ಜನತೆಗೆ ಶುಭಾಶಯ ಕೋರಿದ್ದಾರೆ. “ಎಲ್ಲಾ ದೇಶವಾಸಿಗಳಿಗೆ ಬೆಳಕಿನ ಹಬ್ಬ ದೀಪಾವಳಿಯ ಹೃತ್ಪೂರ್ವಕ ಶುಭಾಶಯಗಳು. ಈ ಬೆಳಕಿನ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೀಪಾವಳಿಯು ಸಂತೋಷದ ಹಬ್ಬವಾಗಿದೆ, ಇದು ಕತ್ತಲೆಯ ಮೇಲೆ ಬೆಳಕು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಕೆಡುಕಿನ ವಿರುದ್ಧದ ವಿಜಯದ ಆಚರಣೆಯಾಗಿದೆ. ಈ ಹಬ್ಬವನ್ನು ವಿವಿಧ ಸಮುದಾಯಗಳು ಮತ್ತು ವರ್ಗದವರು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಭಾರತ ಮತ್ತು ವಿದೇಶಗಳಲ್ಲಿ ಈ ಹಬ್ಬವು ಉಜ್ವಲ ಭವಿಷ್ಯದ ಭರವಸೆಯನ್ನು ನೀಡುತ್ತದೆ.
- BIG BOSS4 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- LATEST NEWS3 days ago
ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್ ಕಾಂಡೋಮ್ʼ !! ಬಳಕೆ ಹೇಗೆ ?
- LATEST NEWS3 days ago
ರೀಲ್ಸ್ ರಾಣಿ ಪತಿ ಕೊ*ಲೆಯಲ್ಲಿ ಮತ್ತೊಂದು ಟ್ವಿಸ್ಟ್ : ಪ್ರತಿಮಾ ಬಳಸಿದ್ದ ವಿಷ ಯಾವುದು ಗೊತ್ತಾ ?
- BIG BOSS4 days ago
BBK 11 : ಹನುಮಂತನ ನಿಜಬಣ್ಣ ಬಯಲು ಮಾಡಿದ ಭಟ್ರು !!