Connect with us

    LATEST NEWS

    ಉಡುಪಿ : ಪೊಲೀಸ್ ಠಾಣೆ ಪಕ್ಕದಲ್ಲೇ ಸರಣಿ ಕಳ್ಳತನ; ಆರು ಮನೆಯ ಬೀಗ ಒಡೆದು ಕನ್ನ

    Published

    on

    ಉಡುಪಿ : ಪೊಲೀಸ್ ಠಾಣೆಯ ಎದುರಿನಲ್ಲೇ ಕಳ್ಳರು ಕೈ ಚಳಕ ತೋರಿಸಿ ಆರು ಮನೆಗಳ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯ ಮುಂದೆ ಈ ಘಟನೆ ನಡೆದಿದ್ದು, ಸರ್ಕಾರಿ ನೌಕರರ ವಸತಿಗೃಹದಲ್ಲಿ ಈ ಕಳ್ಳತನ ನಡೆಸಲಾಗಿದೆ. ಉಡುಪಿ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ ಈ ವಸತಿ ಗೃಹಗಳಿದ್ದು ವೀಕೆಂಡ್‌ನಲ್ಲಿ ಮನೆಗೆ ಬೀಗ ಹಾಕಿ ಹೋಗಿದ್ದ ಮನೆಯವರು ವಾಪಾಸ್ ಬಂದಾಗ ಈ ವಿಚಾರ ಬೆಳಕಿಗೆ ಬಂದಿದೆ.

    ನಗ – ನಗದು ದೋಚಿದ ಖದೀಮರು :

    ಶನಿವಾರದಂದು(ಸೆ.28) ಇಲ್ಲಿನ ಹಲವು ಮನೆಯವರು ಬೀಗ ಹಾಕಿ ತಮ್ಮ ಊರುಗಳಿಗೆ ಹಾಗೂ ತಿರುಗಾಡಲು ಅಂತ ಹೋಗಿದ್ದಾರೆ. ಇಂದು ಮುಂಜಾನೆ(ಸೆ.30) ಊರಿನಿಂದ ವಾಪಾಸಾಗಿದ್ದು, ಮನೆಗೆ ಬಂದ ವೇಳೆ ಬೀಗ ಮುರಿದಿರುವುದು ಗೊತ್ತಾಗಿದೆ. ಎರಡು ಮನೆಯಲ್ಲಿ ನಗದಿನ ಜೊತೆಗೆ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಒಂದು ಮನೆಯಿಂದ 120 ಗ್ರಾಂ ಚಿನ್ನ, 20,000 ನಗದು ಕಳ್ಳತನ, ಮತ್ತೊಂದು ಮನೆಯಿಂದ 20,000 ನಗದು ಕಳ್ಳತನ ಮಾಡಲಾಗಿದೆ. ನಾಲ್ಕು ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

    ಸಿಸಿ ಕ್ಯಾಮರಾವೇ ಇಲ್ಲ :

    ವಿಪರ್ಯಾಸ ಅಂದ್ರೆ, ಈ ವಸತಿ ಸಮುಚ್ಚಯದ ಆಸುಪಾಸಿನಲ್ಲಿ ಯಾವುದೇ ಸಿಸಿ ಕ್ಯಾಮೆರಾ ಕೂಡ ಇಲ್ಲವಾಗಿದ್ದು, ಕಳ್ಳರ ಸುಳಿವು ಪತ್ತೆಗೆ ಹಿನ್ನೆಡೆ ಆಗಿದೆ.  ಮನೆಯವರು ವಾರಾಂತ್ಯದಲ್ಲಿ ಬೀಗ ಹಾಕಿ ಹೋಗುವುದನ್ನು ಗಮನಿಸಿದ ಯಾರದೋ ಕೃ*ತ್ಯ ಇದಾಗಿರಬಹುದು ಎಂಬ ಅನುಮಾನ ಇದೆ.

    ಇದನ್ನೂ ಓದಿ : BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳದ ಮೂಲಕ ಕಳ್ಳರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ.  ಬೆರಳಚ್ಚು ಪತ್ತೆಗಾಗಿ ಫೋರೆನ್ಸಿಕ್‌ ಟೀಮ್ ಕರೆಸಿ ಪರಿಶೀಲನೆ ನಡೆಸಲಾಗಿದೆ.

    bangalore

    ಅಮಾನವೀಯ ಘಟನೆ : ಮಣ್ಣಿನಲ್ಲಿ ಜೀವಂತ ಹೂತಿದ್ದ ಗಂಡು ಮಗು ಪತ್ತೆ

    Published

    on

    ಮಂಗಳೂರು/ಬೆಂಗಳೂರು : ನಮ್ಮಲ್ಲಿ ಅದೆಷ್ಟೋ ಮಂದಿಗೆ ಮಕ್ಕಳಿಲ್ಲದ ಕೊರಗು ಇದೆ. ಮಗುವಿಗಾಗಿ ಅದೆಷ್ಟೋ ಹರಕೆ ಹೊರುತ್ತಾರೆ. ಆದರೆ, ಬೆಂಗಳೂರಿನಲ್ಲಿ ಅಮಾನವೀಯ ಕೃ*ತ್ಯ ನಡೆದಿದೆ. ಹುಟ್ಟಿದ ಒಂದೇ ದಿನಕ್ಕೆ ಹಸುಗೂಸನ್ನು ಜೀವಂ*ತವಾಗಿ ಮಣ್ಣಲ್ಲಿ ಹೂತಿಟ್ಟಿರುವ ಘಟನೆ ನಡೆದಿದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿನ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನೀಲಗಿರಿಯ ತೋಪಿನಲ್ಲಿ ನಿರ್ಜನ ಪ್ರದೇಶದಲ್ಲಿ ಮಗುವನ್ನು ಜೀವಂ*ತವಾಗಿ ಹೂತು ಹಾಕಲಾಗಿದೆ. ಇಂದು (ಸೆ. 30) ಆಟೋ ಚಾಲಕರು ಬಹಿರ್ದೆಸೆಗೆ ತೆರಳಿದ್ದ ವೇಳೆ ಮಗು ಅಳುವ ಶಬ್ದ ಕೇಳಿದ್ದರಿಂದ ವಿಚಾರ ಬೆಳಕಿಗೆ ಬಂದಿದೆ.

    ಇದನ್ನೂ ಓದಿ : ಕೇಕ್ ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆ

    ಕೂಡಲೇ ಮಗುವನ್ನು ರಕ್ಷಿಸಿದ ಸ್ಥಳೀಯರು, ಮಕ್ಕಳ ರಕ್ಷಣಾ ವೇದಿಕೆಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.  ಮಗುವಿಗೆ ಸಣ್ಣ ಪುಟ್ಟ ಗಾ*ಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    Continue Reading

    LATEST NEWS

    ಕೇಕ್ ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆ

    Published

    on

    ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಗೋಬಿ, ಕಬಾಬ್ ಮತ್ತು ಪಾನಿಪುರಿ ಪ್ರಿಯರಿಗೆ ಇವುಗಳ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ ಎಂಬ ಶಾಕಿಂಗ್ ಸುದ್ದಿಯೊಂದನ್ನು ನೀಡಿತ್ತು. ಆದರೆ ಇದೀಗ ಮತ್ತೆ ಇಂತಹದ್ದೇ ಸುದ್ದಿಯೊಂದನ್ನು ಕೇಕ್ ಪ್ರಿಯರಿಗೆ ನೀಡುತ್ತಿದೆ.

    ಕೇಕ್ ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಕೇಕ್ ಬಳಸುವ ಪದಾರ್ಥಗಳು ಕಲಬರಕೆಯಿಂದ ಕೂಡಿವೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿಯೇ ಕೇಕ್ ಮಾದರಿಗಳನ್ನು ಸಂಗ್ರಹಿಸಿ, ಪರಿಶೀಲನೆಗೆ ಒಳಪಡಿಸಿದ್ದಾರೆ.

    ಈ ಪರಿಶೀಲನೆಯ ಸಂದರ್ಭದಲ್ಲಿ ಸಂಗ್ರಹಿಸಿದ್ದ 12 ಮಾದರಿ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು ವಿಶೇಷವಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್ ನಲ್ಲಿ ಅತೀ ಹೆಚ್ಚು ಬಣ್ಣ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

    Continue Reading

    FILM

    ತಿರುಪತಿ ಲಡ್ಡು ಪ್ರಸಾದ ಅಪವಿತ್ರಕ್ಕೆ ನಟ ಸುಮನ್ ಆಕ್ರೋಶ

    Published

    on

    ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಕೆಯಾಗಿರುವ ವಿಚಾರದಲ್ಲಿ ನಟ ಸುಮನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನೂರಾರು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿರುವ ನಟ ಸುಮನ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಅಪಚಾರ ಎಸಗಿರುವ ಯಾರೇ ಆದರೂ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಅನಂತಪುರ ಜಿಲ್ಲೆಯ ಗುಂಟಕಲ್ಲಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸುಮನ್ ಈ ವಿಚಾರವಾಗಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇದು ಹಿಂದೂಗಳ ಭಾವನೆಗೆ ದೊಡ್ಡ ಆಘಾತ ನೀಡಿದ ಘಟನೆಯಾಗಿದ್ದು, ಇಂತಹ ಕೃತ್ಯವನ್ನು ಎಸಗಲು ಭಯೋತ್ಪಾಧಕರು ಹಾಗೂ ಫ್ಯಾಸಿಸ್ಟ್‌ ಶಕ್ತಿಗಳಿಂದಷ್ಟೇ ಸಾಧ್ಯ. ಅಂತಹ ಒಂದು ಘೋರ ಕೃತ್ಯ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದಿದೆ ಎಂದು ಅವರು ಹೇಳಿದ್ದಾರೆ. ತಿರುಪತಿ ದೇವಸ್ಥಾನದ ಆಡಳಿತ ಹಾಗೂ ಟ್ರಸ್ಟ್‌ನಲ್ಲಿ ತಿಮ್ಮಪ್ಪನ ಭಕ್ತರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

    Continue Reading

    LATEST NEWS

    Trending