Connect with us

DAKSHINA KANNADA

ಕೈಗೆ ಮೇಜರ್ ಸರ್ಜರಿ ಮಾಡಿದ ಹೈಕಮಾಂಡ್..! ಕೆಪಿಸಿಸಿಗೆ 40 ಜನ ಉಪಾಧ್ಯಕ್ಷರು, 109 ಪ್ರಧಾನ ಕಾರ್ಯದರ್ಶಿಗಳ ನೇಮಕ..!

Published

on

ಬೆಂಗಳೂರು :ಕಳೆದ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿ ಪಟ್ಟಿಗೆ ಕೊನೆಗೂ ಕಾಂಗ್ರೆಸ್‌ ಹೈಕಮಾಂಡ್‌ ಅಂಕಿತ ಹಾಕಿದ್ದು, ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದೆ.

ಎಐಸಿಸಿಯಿಂದ ಕಾಂಗ್ರೆಸ್‌ ಪದಾಧಿಕಾರಿಗಳ ಪಟ್ಟಿ ಪ್ರಕಟವಾಗಿದ್ದು, ಮೊದಲ ಹಂತದಲ್ಲಿ ಉದ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ 40 ಜನರಿಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ, 109 ಜನರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.

ಉಪಾಧ್ಯಕ್ಷರುಗಳ ಪಟ್ಟಿ:

ಅಭಯಚಂದ್ರ ಜೈನ್, ಪಿ.ಎಂ. ಅಶೋಕ್, ಬಿ.ಎನ್. ಚಂದ್ರಪ್ಪ, ಬಸವರಾಜ ರಾಯರಡ್ಡಿ, ಡಿ.ಆರ್. ಪಾಟೀಲ, ಡೇವಿಡ್ ಸಿಮಿಯೋನ್, ಬಿ.ಎಲ್.ಶಂಕರ್, ಡಾ. ಎಲ್.ಹನುಮಂತಯ್ಯ, ಡಾ. ಶರಣಪ್ರಕಾಶ ಪಾಟೀಲ, ಜಿ.ಪದ್ಮಾವತಿ, ಜಿ.ಟಿ. ಚಂದ್ರಶೇಖರ್, ಎಚ್.ಆಂಜನೇಯ, ಎಚ್.ಎಂ. ರೇವಣ್ಣ, ಹಸನ್‌ಸಾಬ್  ದೋಟಿಹಾಳ, ಐವಾನ್ ಡಿಸೋಜಾ, ಕೆ.ಎನ್. ರಾಜಣ್ಣ, ಎಂ.ಸಿ. ವೇಣಗೋಪಾಲ, ಎಂ.ಆರ್. ಸೀತಾರಾಂ, ಮಧು ಬಂಗಾರಪ್ಪ, ಮಲ್ಲಿಕಾರ್ಜುನ ನಾಗಪ್ಪ, ಮಂಜುನಾಥ ಭಂಡಾರಿ, ಎನ್.ಚಲುವರಾಯ ಸ್ವಾಮಿ, ನಾರಾಯಣ ಸ್ವಾಮಿ, ನರೇಂದ್ರ ಸ್ವಾಮಿ, ನಾಸಿರ್ ಹುಸೇನ್, ಪಿ.ಆರ್. ರಮೇಶ್, ಪಿ.ವಿ. ಮೋಹನ್, ಪ್ರಕಾಶ ಹುಕ್ಕೇರಿ, ಪ್ರಮೋದ್ ಮಧ್ವರಾಜ, ಆರ್.ಬಿ. ತಿಮ್ಮಾಪೂರ, ರಮಾನಾಥ ರೈ, ಎಸ್.ಇ. ಸುಧೀಂದ್ರ, ಸಂತೋಷ್ ಲಾಡ್, ಶರಣಪ್ಪ ಮಟ್ಟೂರ, ಶಿವರಾಮೇಗೌಡ, ಕೆ.ತಿಪ್ಪಣ್ಣಪ್ಪ, ವಿ.ಎಸ್. ಉಗ್ರಪ್ಪ, ವಿನಯ್ ಕುಲಕರ್ಣಿ, ವಿನಯಕುಮಾರ ಸೊರಕೆ.

ಪ್ರಧಾನ ಕಾರ್ಯದರ್ಶಿಗಳು:

ಎ.ಸಿ. ಶ್ರೀನಿವಾಸ್, ಗಜಾನನ ತಾರಿಸ್ಕರ್, ಆಘಾ ಸುಲ್ತಾನ್, ಅಕೈ ಪದ್ಮಶಾಲಿ, ಅಲ್ಕೋಡ್ ಹನುಮಂತಪ್ಪ, ಅನಿಲ್‌ಕುಮಾರ್ ಪಾಟೀಲ, ಅನಿಲ್‌ಕುಮಾರ್, ಅರುಣ್ ಮಾಚಯ್ಯ, ಬಿ.ಬಾಲರಾಜ್ ನಾಯ್ಕ, ಬಿ.ಬಿ. ರಾಮಸ್ವಾಮಿ ಗೌಡ, ಬಿ.ಟಿ. ಶ್ರೀನಿವಾಸಮೂರ್ತಿ, ಬಾಲರಾಜ್ ಬಸವನಗೌಡ ಬಾದರ್ಲಿ, ಭೀಮಣ್ಣ ನಾಯ್ಕ, ಬೃಜೇಶ್ ಕಾಳಪ್ಪ, ಪಿ.ಡಿ. ಗಂಗಾಧರ, ಚಂದ್ರಮೌಳಿ, ಡಿ.ಕೆ. ಮೋಹನ್, ದಯಾನಂದ ಪಾಟೀಲ, ದೀಪಕ್ ಪೂಜಾರಿ, ಎ.ಧನಂಜಯ, ಎಂ.ಎಚ್. ಚಲವಾದಿ, ಡಾ. ಸಾಸಲು ಸತೀಶ್, ಬಿ. ಗುರಪ್ಪ ನಾಯ್ಡು, ಡಾ.ಎಚ್.ಎನ್.  ರವೀಂದ್ರ, ಡಾ.ನಾಗಲಕ್ಷ್ಮೀ ಚೌಧರಿ, ಎಫ್.ಎಚ್. ಜಕ್ಕಪ್ಪನವರ, ಜಿ.ಎ. ಬಾವಾ, ಜಿ.ಶೇಖರ, ಗಾಯತ್ರಿ ಶಾಂತನಗೌಡ, ಗೀತಾರಾವ್ ಚಿದ್ರಿ, ಎಚ್.ಸಿದ್ದಯ್ಯ, ಎಚ್.ಕೆ. ಶ್ರೀಕಂಠು, ಹುಚ್ಚಪ್ಪ, ಇನಾಯತ್ ಅಲಿ, ಜೆ.ಎಂ. ಮಂಜುನಾಥ, ಜೆ.ಎಸ್. ಆಂಜನೇಯಲು, ಜಯಸಿಂಹ, ಕೆ. ಶಿವಮೂರ್ತಿ, ಕೆ.ಪಿ ಚಂದ್ರಕಲಾ, ಕೆ.ರತ್ನಾಕರ, ಕಮಲಾಕ್ಷಿ ರಾಜಣ್ಣ, ಕಾಂತಾ ನಾಯ್ಕ, ಕವಿತಾ ರೆಡ್ಡಿ, ಕೇಶವಮೂರ್ತಿ, ಕೃಷ್ಣಂ ರಾಜು, ಕೃಪಾ ಆಳ್ವಾ, ಲಕ್ಷ್ಮಣ, ಎಂ.ಡಿ. ಲಕ್ಷ್ಮೀನಾರಾಯಣ, ಲತಾ, ಎಂ.ಎ. ಗಫೂರ್, ಎಂ.ರಾಜಕುಮಾರ್, ಎಂ.ರಾಮಚಂದ್ರಪ್ಪ, ಎಂ.ರಾಮಪ್ಪ, ಎಂ.ಸುರೇಶ, ಎಂ.ಉದಯಶಂಕರ, ಮಹಾವೀರ ಲಕ್ಷ್ಮಣ ಮೋಹಿತೆ, ಮಲ್ಲಿಕಾರ್ಜುನ ಪಾಟೀಲ, ಮಮತಾ ಗಟ್ಟಿ, ಮಂಜುಳಾ ಮಾನಸ, ಮಂಜುಳಾ ನಾಯ್ಡು, ಮಂಜುಳಾ ರಾಜು, ಮಂಜುನಾಥ ರೆಡ್ಡಿ, ಮನ್ಸೂರ್ ಅಲಿ ಖಾನ್, ಮರಿಗೌಡ ಪಾಟೀಲ, ಮೀನಾಕ್ಷಿ ಸಂಗ್ರಾಮ್, ಮೆಹ್ರೋಜ್‌ ಖಾನ್, ಮಿಲಿಂದ್ ಧರ್ಮಸೇನಾ, ಮಿಥುನ್ ರೈ, ಮುನಿ ಶಾಮಣ್ಣ, ಮುರಳೀಧರ ಹಾಲಪ್ಪ, ಎನ್.ಸಂಪಂಗಿ, ನೈನಾ ಝವರ್, ನಿವೇದಿತ್ ಆಳ್ವಾ, ಪ್ಯಾರೇ ಜಾನ್, ಆರ್.ಮಂಜುನಾಥ, ಆರ್.ಎಸ್. ಸತ್ಯನಾರಾಯಣ, ಆರ್.ಬಿ. ವೆಂಕಟೇಶ, ರಫೀಕ್ ಅಹಮದ್, ರಾಜನಂದಿನಿ ಕಾಗೋಡು, ರಾಜಕುಮಾರ್, ರಕ್ಷಿತ್ ಶಿವರಾಮ್, ರಮಾನಂದ ಬಿ. ನಾಯ್ಕ, ರತ್ನಪ್ರಭಾ, ರುದ್ರಪ್ಪ ಲಮಾಣಿ, ಎಸ್. ಮನೋಹರ, ಎಸ್.ಎ. ಹುಸೇನ್, ಎಸ್.ಸಿ. ಬಸವರಾಜ್, ಎಸ್.ಪಿ. ಪ್ರಭಾಕರ ಗೌಡ, ಎಸ್.ಎಸ್. ಮಲ್ಲಿಕಾರ್ಜುನ, ಸದಾನಂದ ಡಂಗನವರ, ಸಯೀದ್ ಅಹಮದ್, ಶಾರದಾ ಗೌಡ, ಶಾ ನಿಜಾಮುದ್ದಿನ್ ಅಲಿಯಾಸ್ ನಿಜಾಮ್, ಶಾಕಿರ್ ಸನದಿ, ಶರಣು ಮೋದಿ, ಪಿ.ಒ. ಶಿವಕುಮಾರ, ಶಿವಣ್ಣ ಮಳವಳ್ಳಿ, ಸುಜಾತಾ ದೊಡ್ಡಮನಿ, ಸಿರಾಜ್ ಶೇಖ್, ಸುನೀಲ್ ಜೆ. ಹನುಮಣ್ಣವರ, ಸುಷ್ಮಾ ರಾಜಗೋಪಾಲ, ಟಿ. ಈಶ್ವರ, ಎ. ವಸಂತಕುಮಾರ್, ವೀಣಾ ಕಾಶಪ್ಪನವರ್, ವೆಂಕಟರಾವ್ ಘೋರ್ಪಡೆ, ವಿಜಯ್ ಕೆ.ಮುಳಗುಂದ, ವಿಜಯ ಸಿಂಗ್, ವೈ.ಎನ್. ಗೌಡರ್.

Click to comment

Leave a Reply

Your email address will not be published. Required fields are marked *

DAKSHINA KANNADA

ಚೌಟ ಪರ ಪ್ರಚಾರಕ್ಕೆ ಪುತ್ತೂರಿಗೆ ಬರಲಿದ್ದಾರೆ ಅಣ್ಣಾಮಲೈ

Published

on

ಪುತ್ತೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಪರವಾಗಿ ಏಪ್ರಿಲ್ ೨೩ರಂದು ಪುತ್ತೂರಿನಲ್ಲಿ ರೋಡ್ ಶೋ ನಡೆಯಲಿದೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾದ ಅಣ್ಣಾಮಲೈ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಬಿಜೆಪಿ ಚುನಾವಣಾ ಸಂಯೋಜಕರಾದ ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದರು.


ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೮.೩೦ಕ್ಕೆ ಅಣ್ಣಾ ಮಲೈ ಅವರು ಸುಳ್ಯ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ೧೦.೩೦ಕ್ಕೆ ಪುತ್ತೂರಿಗೆ ಬರಲಿದ್ದು, ದರ್ಬೆ ವೃತ್ತದಿಂದ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದಾದ ಬಳಿಕ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದರು.


ಅದೇ ದಿನ ಅಪರಾಹ್ನ ೩ ಗಂಟೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ಬಿಜೆಪಿ ರೋಡ್‌ ಶೋ ನಡೆಯಲಿದೆ. ಸಂಜೆ ೫.೩೦ಕ್ಕೆ ವಿಟ್ಲದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ಬದಲ್ಲಿ ರೋಡ್ ಶೋ ನಡೆಯಲಿದೆ ಎಂದರು.

ಇದನ್ನೂ ಓದಿ : ಚಾಕೊಲೇಟ್ ತಿಂದು ರಕ್ತಕಾರಿದ ಒಂದೂವರೆ ವರ್ಷದ ಮಗು
ಮಹಾ ಅಭಿಯಾನ:

ಏಪ್ರಿಲ್ ೨೧ ರಂದು ಭಾನುವಾರ ಬೆಳಗ್ಗಿನಿಂದ ಸಂಜೆಯವರೆಗೂ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ೨೨೧ ಬೂತ್‌ಗಳಲ್ಲಿ ಕಾರ್ಯಕರ್ತರಿಂದ ಮನೆ ಮನೆ ಭೇಟಿ ಮತಯಾಚನೆಯ ಮಹಾ ಅಭಿಯಾನ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ನೇತೃತ್ವದಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಹಕಾರ ಭಾರತಿಯಡಿಯಲ್ಲಿ ಗೆದ್ದ ಸಹಕಾರಿ ಸಂಘಗಳ ನಿರ್ದೇಶಕರ ಸಭೆ ನಡೆಸಲಾಗಿದೆ ಎಂದು ನುಡಿದರು.

Continue Reading

DAKSHINA KANNADA

2 ಗ್ರಾಮಸ್ಥರ ನಡುವೆ ಬೆಂಕಿಯ ಕಾದಾಟ; ಇದು ಕಟೀಲು ಜಾತ್ರೆಯ ತೂಟೆದಾರದ ವಿಶೇಷ

Published

on

ಕಟೀಲು: ಅವರೆಲ್ಲ ಮಿತ್ರರಾದರೂ ಶತ್ರುಗಳಂತೆ ಆವೇಶದಿಂದ ಒಬ್ಬರ ಮೇಲೆ ಒಬ್ಬರು ಬೆಂಕಿಯನ್ನು ಎಸೆಯುತ್ತಿದ್ದರು. ಹಾಗಂತ ಇವರು ವೈರಿಗಳಂತೆ ಹೋರಾಡಿದರೂ ಯಾರಿಗೂ ಏನೂ ಆಗುವುದಿಲ್ಲ. ಯಾಕೆಂದರೆ ಇವರು ಈ ರೀತಿ ಮಾಡುವುದು ಸಂಪ್ರದಾಯವಾಗಿದ್ದು,  ಹರಕೆಯ ರೀತಿಯಲ್ಲಿ ಇದು ಪ್ರತಿ ವರ್ಷ ನಡೆಯತ್ತದೆ. ಆದ್ರೆ ಈ ದೃಶ್ಯ ನೋಡಲು ಮಾತ್ರ ಭೀಕರ ಕಾಳಗದಂತೆ ಕಾಣಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರ ಆರಾಧ್ಯ ದೇವತೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸಂತೃಪ್ತಿಗಾಗಿ ನಡೆಯುವ ಒಂದು ಸೇವೆಯಾಗಿ ಸ್ಥಳೀಯವಾಗಿ ತೂಟೆದಾರು ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಪ್ರತಿ ವರ್ಷವು ಇಲ್ಲಿನ  ಜಾತ್ರೆಯ ಕೊನೆಯ ದಿನ ದೇವಿಯ ಅವಭೃತ ಸ್ನಾನ ನಡೆಯುತ್ತದೆ. ಈ ಸಂದರ್ಭದಲ್ಲಿ ಮೂರು ಕಡೆಗಳಲ್ಲಿ ಈ ರೀತಿಯಾಗಿ ಭಕ್ತರು ಬೆಂಕಿಯನ್ನು ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ.

ಬೆಂಕಿಯ ಆಟ ಎಂದರೆ ದೇವಿಗೆ ಬಲು ಇಷ್ಟ:

ಪುರಾಣದ ಪ್ರಕಾರ, ಲೋಕ ಕಂಟಕನಾದ ಅರುಣಾಸುರನನ್ನು ಸಂಹರಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿಯನ್ನ  ಸಂತೃಪ್ತಿಗೊಳಿಸಲು ದೇವತೆಗಳು ಬೆಂಕಿಯ ಮಳೆ ಸುರಿಸಿದ್ರು ಅನ್ನೋ ಪೌರಾಣಿಕ ಕಥೆ ಇದೆ. ಹೀಗಾಗಿ ಪ್ರತಿ ವರ್ಷ ಜಾತ್ರೆಯಲ್ಲಿ ದೇವಿಯು ರಥೋತ್ಸವದ ಬಳಿಕ ಅವಭೃತ ಸ್ನಾನ ಮುಗಿಸಿ ವಾಪಾಸು ಆಗುವಾಗ ಭಕ್ತರು ಈ ಸೇವೆಯನ್ನು ಮಾಡುತ್ತಾರೆ. ಮೈ ಮೇಲೆ ಆವೇಶ ಬಂದವರಂತೆ ಒಬ್ಬರಿಗೊಬ್ಬರು ತೆಂಗಿನ ಗರಿಯಿಂದ ಮಾಡಿದ ಬೆಂಕಿಯ ದೀವಟಿಗೆಯನ್ನು  ಒಬ್ಬರ ಮೇಲೊಬ್ಬರು ಎಸೆಯುತ್ತಾ ದೇವಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಎಂಟು ದಿನಗಳ ಜಾತ್ರೋತ್ಸವ ನಡೆದು, ಜಾತ್ರೋತ್ಸವದ ಕೊನೆಯ ದಿನ ಈ ತೂಟೆದಾರು ಅನ್ನೋ ಬೆಂಕಿಯ ಆಟ ನಡೆಯುತ್ತದೆ.

 

ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರ ಕಾದಾಟ:

ಈ ಆಟವನ್ನು ಆಡಲು ಎಲ್ಲರಿಗೂ ಅವಕಾಶ ಇಲ್ಲ. ಅತ್ತೂರು ಹಾಗೂ ಕೊಡೆತ್ತೂರು ಗ್ರಾಮದ ಜನರಿಗೆ ಮಾತ್ರ ಅವಕಾಶ. ಎರಡೂ ಗ್ರಾಮದ ಜನರು ಎದುರೆದುರಾಗಿ ನಿಂತು ತೆಂಗಿನ ಗರಿಗಳಿಂದ ಮಾಡಿದ ಸೂಟೆಗಳನ್ನು ಹಿಡಿದು ಇದನ್ನು ಒಬ್ಬರಿಗೊಬ್ಬರು ಎಸೆಯುತ್ತಾರೆ. ಆದರೆ ವಿಶೇಷ ಅಂದ್ರೆ  ಈ ಕಾದಾಟದಲ್ಲಿ ಯಾರಿಗೂ ಗಾಯಗಳಾಗುವುದಿಲ್ಲ ಅಲ್ಲದೆ ಅವರು ಉಟ್ಟ ಬಟ್ಟೆಗೂ ಹಾನಿ ಆಗುವುದಿಲ್ಲ ಅನ್ನೋದೇ ದೇವಿಯ ಮಹಿಮೆ.

ಜಾತ್ರೆಯ ಸಂದರ್ಭದಲ್ಲಿ ಮಾತ್ರ ನಡೆಯುವ ಈ  ಬೆಂಕಿಯ ಕಾದಾಟ ಒಂದು ರೀತಿ ಹರಕೆಯ ರೂಪದಲ್ಲಿ ನಡೆಯುತ್ತದೆ. ಮೊದಲಾಗಿ ಈ ಕಾದಾಟದಲ್ಲಿ ಭಾಗವಹಿಸುವ ಭಕ್ತರು ದೇವಿಯ ಕುಂಕುಮ ಪಡೆದು ಮೈಗೆ ಲೇಪಿಸುತ್ತಾರೆ ಮತ್ತು ದೇವಿಯ ಹೂವನ್ನು ತಲೆಗೆ ಕಟ್ಟಿಕೊಂಡು ಈ ಸೇವೆಗೆ ಸಿದ್ಧರಾಗುತ್ತಾರೆ. ಬಳಿಕ ಹೊಸ ಕೇಸರಿ ಬಣ್ಣದ ಪಂಚೆಯನ್ನು ಧರಿಸಿ ಈ ಕಾದಾಟವನ್ನು ಮಾಡುತ್ತಾರೆ. ಈ ವೇಳೆ ಇವರನ್ನು ನಿಯಂತ್ರಿಸಲು ಎರಡೂ ಕಡೆಯಿಂದ ಊರ ಮುಖಂಡರಿದ್ದು, ಕಾದಾಡ ವಿಕೋಪಕ್ಕೆ ಹೋದಾಗ ಅವರೇ ಇವರನ್ನು ನಿಯಂತ್ರಣ ಮಾಡುತ್ತಾರೆ.

ಮನೆಯಿಂದ ತಾವೇ ತಯಾರಿಸಿದ ತೆಂಗಿನ ಗರಿಯ ಸೂಟೆ ತರುತ್ತಾರೆ:

ಎಂಟು ದಿನಗಳ ಕಾಲ ಶುದ್ಧ ಸಸ್ಯಾಹಾರಿಗಳಾಗಿ, ದುಶ್ಚಟವನ್ನು ತ್ಯಜಿಸುತ್ತಾರೆ. ಗ್ರಾವಸ್ಥರು ಬರುವಾಗ ಮನೆಯಿಂದ ತಾವೇ ತಯಾರಿಸಿದ ತೆಂಗಿನ ಗರಿಯ ಸೂಟೆಯನ್ನು ತರುತ್ತಾರೆ. ಬೆಂಕಿಯನ್ನು ಎಸೆಯುವಾಗ ಇರುವ ಆವೇಶ ಈ ಆಟ ಮುಗಿದ ಬಳಿಕ ಇರುವುದಿಲ್ಲ. ಎಲ್ಲರೂ ಒಂದಾಗಿ ದೇವರ ದರ್ಶನ ಮಾಡಿ ಜೊತೆಯಾಗಿ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಈ ಬೆಂಕಿ ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಆದರೆ, ಇದುವರೆಗೆ ಯಾರಿಗೂ ಏನೂ ಆಗದಿರುವುದಕ್ಕೆ ಇಲ್ಲಿನ ದೇವಿಯ ಮಹಿಮೆಯೇ ಕಾರಣ ಎಂಬುದು ಎಲ್ಲರ ನಂಬಿಕೆ.

Continue Reading

DAKSHINA KANNADA

ಪ್ರಾಣ ಸಂಕಟದಲ್ಲಿದ್ದ ಹೆಬ್ಬಾವು..! ರಕ್ಷಣೆ ವೇಳೆ ದೇಹದಲ್ಲಿ 11 ಬುಲ್ಲೆಟ್ ಪತ್ತೆ..!

Published

on

ಮಂಗಳೂರು: ಆಹಾರಕ್ಕಾಗಿ ಪರ್ಸಿಯನ್ ಕ್ಯಾಟ್ ಒಂದನ್ನು ತಿಂದಿದ್ದ ಹೆಬ್ಬಾವು ಆಹಾರ ನುಂಗಲಾರದೆ ಸಂಕಷ್ಟಕ್ಕೆ ಸಿಲುಕಿದೆ. ಇದನ್ನ ಗಮನಿಸಿದ ಸ್ಥಳಿಯರು ಉರಗರಕ್ಷಕರ ಮೂಲಕ ಹಾವನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಹಾವಿನ ವೈದ್ಯಕೀಯ ಪರೀಕ್ಷೆ ವೇಳೆ ಹಾವಿನ ದೇಹದಲ್ಲಿ 11 ಬುಲ್ಲೆಟ್‌ಗಳು ಪತ್ತೆಯಾಗಿದೆ.

snake

ಬಿಜೈ ಆನೆಗುಂಡಿಯಲ್ಲಿ ಈ  ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.  ಹೆಬ್ಬಾವು ಪರ್ಷಿಯನ್ ಕ್ಯಾಟ್ ಅನ್ನು ನುಂಗಿ ಒದ್ದಾಡುತ್ತಿತ್ತು. ಪರಿಶೀಲನೆ ಮಾಡಿದಾಗ ಹೆಬ್ಬಾವಿನ ಕತ್ತಿನ ಕೆಳಭಾಗದಲ್ಲಿ ಬಲೆ ಸಿಲುಕಿ ಆಹಾರ ನುಂಗಲು ತೊಂದರೆಯಾಗುತ್ತಿತ್ತು‌. ತಕ್ಷಣ ಉರಗರಕ್ಷಕ ಭುವನ್ ದೇವಾಡಿಗ ಅವರಿಗೆ ಕರೆ ಮಾಡಲಾಗಿದ್ದು, ಅವರು ತಕ್ಷಣ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಬಂದ ಭುವನ್ ದೇವಾಡಿಗ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಅರಣ್ಯ ಅಧಿಕಾರಿಗಳ ಸಹಕಾರದಿಂದ ಬಲೆಯನ್ನು ಕತ್ತರಿಸಿ ಹೆಬ್ಬಾವನ್ನು ರಕ್ಷಿಸಿದ್ದರು.

ಸುಮಾರು 8.50 ಫೀಟ್ ಉದ್ದದ, 8ಕೆಜಿ ತೂಕವುಳ್ಳ ಈ ಹೆಬ್ಬಾವನ್ನು ವೈದ್ಯಕೀಯ ತಪಾಸಣೆಗೆ ಮರೋಳಿಯ ಪಶುವೈದ್ಯ ಡಾ.ಯಶಸ್ವಿಯವರಲ್ಲಿಗೆ ಕೊಂಡೊಯ್ಯಲಾಯಿತು. ಅವರು ಪರೀಕ್ಷೆ ನಡೆಸಿದಾಗ ಬೆನ್ನಿನ ಭಾಗದಲ್ಲಿ ಗಟ್ಟಿಯಾದ ವಸ್ತು ಸಿಕ್ಕಿದಂತಾಗಿದೆ. ಆದ್ದರಿಂದ ಎಕ್ಸರೇ ಮಾಡಿದಾಗ ಹೆಬ್ಬಾವಿನ ದೇಹದೊಳಗೆ ಹನ್ನೊಂದು ಏರ್ ಬುಲೆಟ್ ಪತ್ತೆಯಾಗಿದೆ. ಇದರಲ್ಲಿ ಎರಡು ಬುಲೆಟ್ ಅನ್ನು ಮಾತ್ರ ಹೆಬ್ಬಾವು ದೇಹದಿಂದ ಹೊರತೆಗೆಯಲು ಸಾಧ್ಯವಾಗಿದೆ. ಈ ಹಿಂದೆ ಯಾರೋ ಏರ್ ಗನ್ ನಿಂದ ಶೂಟ್ ಮಾಡಿದ್ದರಿಂದ ಅದರ ದೇಹದೊಳಗೆ ಏರ್ ಬುಲೆಟ್ ಸೇರಕೊಂಡಿರಬಹುದು. ಸದ್ಯ ಈ ಹೆಬ್ಬಾವನ್ನು ಪರಿವೀಕ್ಷಣೆ ಮಾಡಲಾಗುತ್ತಿದೆ ಎಂದು ಉರಗ ರಕ್ಷಕ ಭುವನ್ ದೇವಾಡಿಗ ಹೇಳಿದ್ದಾರೆ‌.

 

Continue Reading

LATEST NEWS

Trending