ಬಂಟ್ವಾಳ: ಆಕಸ್ಮಿಕವಾಗಿ ಬೆಂಕಿ ಮನೆಯ ಕೊಟ್ಟಿಗೆಗೆ ತಗುಲಿ ಪರಿಣಾಮ ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪೆರಾಜೆ ಗ್ರಾಮದ ಪಾಳ್ಯ ಎಂಬಲ್ಲಿ ನಡೆದಿದೆ.
ಪೆರಾಜೆ ಗ್ರಾಮದ ಪಾಳ್ಯ ನಿವಾಸಿಯಾದ ದಿವಗಂತ ಬಾಳಪ್ಪ ಗೌಡ ಅವರ ಪತ್ನಿ ವಾಸಮ್ಮ ಇವರ ಮನೆಯ ಕೊಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಬೆಂಕಿ ಅವಘಡದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳೀಯರ ಸಹಕಾರದೊಂದಿಗೆ, ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.