Connect with us

bangalore

ಲೋಕ ಸಮರಕ್ಕೆ ‘ಕೈ’ ಕಸರತ್ತು…! ಮಹಿಳೆಯರಿಗೆ ಪಂಚ ಗ್ಯಾರೆಂಟಿ ಘೋಷಣೆ…!

Published

on

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Legislative Assembly Election ) ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರೆಂಟಿಗೆ ಮತದಾರರು ಜೈ ಅಂದು ರಾಜ್ಯದಲ್ಲಿ 136 ಸೀಟು ಗೆಲ್ಲಿಸಿಕೊಟ್ಟಿದ್ದರು. ಇದೀಗ ಲೋಕಸಭಾ ಚುನಾವಣೆ ( Parliament Election )   ಸಮೀಪಿಸ್ತಾ ಇದ್ದು ಕೇಂದ್ರದಲ್ಲೂ ಕಾಂಗ್ರೆಸ್‌ ತನ್ನ ಮೊದಲ ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿ ನೀಡಿದೆ. ಕರ್ನಾಟಕದಲ್ಲಿ ಪಂಚ ಗ್ಯಾರೆಂಟಿ ಯಶಸ್ವಿಯ ಹಿನ್ನಲೆಯಲ್ಲಿ ಸಮಾವೇಶಗಳನ್ನು ನಡೆಸ್ತಾ ಇರೋ ಸರ್ಕಾರ ನಾವು ನುಡಿದಂತೆ ನಡೆಯುತ್ತೇವೆ ಅಂತ ಹೇಳುತ್ತಿದೆ. ಇದೇ ಸಮಯದಲ್ಲಿ ಕೇಂದ್ರದಲ್ಲಿ ಐದು ನ್ಯಾಯ್‌ ಗ್ಯಾರೆಂಟಿ ( Nyay Guarantee )  ಯೋಜನೆಯನ್ನು ಘೋಷಣೆ ಮಾಡಿ ಮತ್ತೆ ಜನರ ವಿಶ್ವಾಸಗಳಿಸುವ ಪ್ರಯತ್ನ ಮಾಡಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಯ ಘೋಷಣೆ ಮಾಡಲಾಗಿತ್ತು. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು ‘ನಾರಿ ನ್ಯಾಯ್’ ಯೋಜನೆ ಎಂದು ಕರೆಯಲಾಗಿದೆ.

ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನೀಡಿರುವ ನ್ಯಾಯ್ ಯೋಜನೆಗಳು ಯಾವುದು..?

1) ಮಹಾಲಕ್ಷ್ಮಿ ಯೋಜನೆ

2) ಆದಿ ಅಬಾದಿ ಪೂರಾ ಹಕ್

3) ಶಕ್ತಿ ಕಾ ಸಮ್ಮಾನ್

4) ಅಧಿಕಾರ ಮೈತ್ರಿ

5) ಸಾವಿತ್ರಿ ಬಾಯಿ ಪುಲೆ ಹಾಸ್ಟೆಲ್

ಈ ನ್ಯಾಯ್ ಯೋಜನೆಯಿಂದ ಮಹಿಳೆಯರಿಗೆ ಸಿಗಲಿರುವುದೇನು..?

 

1) ಮಹಾಲಕ್ಷ್ಮಿ ಯೋಜನೆ : ದೇಶದ ಬಡ ಕುಟುಂಬದ ಓರ್ವ ಮಹಿಳೆಗೆ ವಾರ್ಷಿಕ 1 ಲಕ್ಷ ರೂಪಾಯಿ ನಗದು ಹಣ ನೀಡಲಾಗುವುದು.

2) ಆದಿ ಅಬಾದಿ ಪೂರಾ ಹಕ್ : ಕೇಂದ್ರ ಸರ್ಕಾರದ ನೌಕರಿಯಲ್ಲಿ ಶೇಖಡಾ 50 ರಷ್ಟು ಮೀಸಲಾತಿ.

3) ಶಕ್ತಿ ಕಾ ಸಮ್ಮಾನ್ : ಅಂಗನವಾಡಿ,  ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ನೀಡುವ ವೇತನದಲ್ಲಿನ ಕೇಂದ್ರದ ಪಾಲು ದ್ವಿಗುಣಗೊಳಿಸಲಾಗುವುದು.

4) ಅಧಿಕಾರ ಮೈತ್ರಿ : ಪಂಚಾಯತ್ ಮಟ್ಟದಲ್ಲೇ ಮಹಿಳೆಯರ ಹಕ್ಕುಗಳ ಜಾಗೃತಿ ಮೂಡಿಸುವುದು ಹಾಗೂ ಇದಕ್ಕಾಗಿ ಕಾನೂನು ತಜ್ಞರನ್ನು ನಿಯೋಜಿಸುವುದು.  ಈ ಮೂಲಕ ಮಹಿಳೆಯರಿಗೆ ಅವರ ಹಕ್ಕುಗಳನ್ನು ಪಡೆಯಲು ಅನುಕೂಲ ಮಾಡಿಕೊಡುವುದು.

5) ಸಾವಿತ್ರಿ ಬಾಯಿ ಪುಲೆ ಹಾಸ್ಟೆಲ್ : ದೇಶದ ಪ್ರತಿ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಉದ್ಯೋಗಿ ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್‌ಗಳ ನಿರ್ಮಾಣ

rahul and mallikarjuna kharge

ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿರುವ ಈ ನಾರಿ ನ್ಯಾಯ್‌ ಬಗ್ಗೆ ಕಾಂಗ್ರೆಸ್‌ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಶತಾಯಗತಾಯ ಎನ್‌ಡಿಎ ಓಟವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೊಸ ಹೊಸ ತಂತ್ರಗಳನ್ನು ರೂಪಿಸ್ತಾ ಇದೆ. ಇದರ ಭಾಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ‘ನಾರಿ ನ್ಯಾಯ್’ ಯೋಜನೆಯ ಘೋಷಣೆ ಮಾಡಿದ್ದಾರೆ. ನ್ಯಾಯ್ ಯಾತ್ರೆಯಲ್ಲಿ ಇರುವ ರಾಹುಲ್ ಗಾಂಧಿ ಜೊತೆ ಆನ್‌ಲೈನ್ ಕಾನ್ಫರೆನ್ಸ್ ಮೂಲಕ ಈ ಘೋಷಣೆ ಮಾಡಿದ್ದಾರೆ. ಕಲಬುರ್ಗಿಯ ಸಮಾವೇಶದಲ್ಲೂ ಜನರಿಗೆ ಈ ನ್ಯಾಯ್ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

bangalore

ಶೋಭಾ ಕರಂದ್ಲಾಜೆ ಕಾರಿಗೆ ಸಿಕ್ಕಿ ಯುವಕನ ದುರ್ಮ*ರಣ..!

Published

on

ಬೆಂಗಳೂರು : ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಅವರ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಅಸು ನೀಗಿದ್ದಾನೆ.

ಟಿಸಿ ಪಾಳ್ಯ ನಿವಾಸಿ ಪ್ರಕಾಶ್( 35 ) ಎಂಬವರು ಅಸುನೀಗಿದ ದುರ್ದೈವಿ. ಬೆಂಗಳೂರಿನ ಕೆ.ಆರ್.ಪುರಂ ಸಮೀಪ ಈ ಅಪ*ಘಾತ ಸಂಭವಿಸಿದ್ದು, ಕೆ.ಆರ್‌.ಪುರಂ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.  ದೇವಸಂದ್ರ ವಿನಾಯಕ ದೇವಸ್ಥಾನ ಬಳಿ ಕಾರು ನಿಲ್ಲಿಸಿದ ಕಾರಿನಿಂದ ಸಡನ್ ಆಗಿ ಬಾಗಿಲು ತೆರೆದು ಈ ದುರ್ಘಟನೆ ನಡೆದಿದೆ. ಕಾರಿನ ಡೋರ್ ತೆಗೆದಾಗ ಹಿಂಬಂದಿಯಿಂದ ಬಂದಿದ್ದ ಬೈಕ್‌ ಸವಾರ ಕಾರಿನ ಡೋರ್‌ಗೆ ತಾಗಿ ಕೆಳಗೆ ಬಿದ್ದಿದ್ದಾನೆ.

 

ತಲೆಗೆ ಗಂ*ಭೀರ ಗಾಯಗೊಂಡಿದ್ದ ಬೈಕ್ ಸವಾರ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಪ್ರಕಾಶ್ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ : ಬೇಸಿಗೆಯ ಬಿಸಿ ತಡೆಯಲಾರದೆ 14 ಲಕ್ಷ ವೆಚ್ಚದಲ್ಲಿ ಕೂಲ್ ಹೋಮ್ ನಿರ್ಮಾಣ ಮಾಡಿದ ಯುವ ಇಂಜಿನಿಯರ್

Continue Reading

bangalore

ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ದಿಢೀರ್ ಅಸ್ವ*ಸ್ಥ..!! ಆಸ್ಪತ್ರೆ ದಾಖಲು

Published

on

ಬೆಂಗಳೂರು:  47 ವಿದ್ಯಾರ್ಥಿನಿಯರು ಅಸ್ವ*ಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರಿನ ಹಾಸ್ಟೆಲ್‌ನಲ್ಲಿ ನಡೆದಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ(BMCRI) ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವ*ಸ್ಥಗೊಂಡಿದ್ದು ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

medical college of bangalore

ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದು, 28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐವರಿಗೆ ಹೆಚ್​​ ಬ್ಲಾಕ್ ಹಾಗೂ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.  ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸದ್ಯ ವಿದ್ಯಾರ್ಥಿಗಳು ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿನಿಯರು ಅಸ್ವ*ಸ್ಥಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬಿಎಂಸಿಆರ್‌ಐ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ರಮೇಶ್‌ ಕೃಷ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಲರ ಭೀತಿ ಶುರುವಾಗಿದ್ದು, ಈ ಮಧ್ಯೆ ಹಾಸ್ಟೆಲ್ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅಸ್ವಸ್ಥಗೊಂಡಿರುವುದು ಆತಂಕಕ್ಕೆ ಎಡೆ ಮಾಡಿದೆ.

ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವುದಕ್ಕೆ ನೈಜ ಕಾರಣವೇನು ಅನ್ನೋದು ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.

Continue Reading

bangalore

ಧಗಧಗನೇ ಹೊ*ತ್ತಿ ಉ*ರಿದ ಖಾಸಗಿ ಕಂಪನಿಯ ಕಟ್ಟಡ!

Published

on

ಬೆಂಗಳೂರು : ಶುಕ್ರವಾರ ಮಧ್ಯಾಹ್ನ 1:50ರ ಸುಮಾರಿಗೆ ಬೆಂಗಳೂರಿನ ಆರ್‌.ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರಿಂಕ್ಸ್ ಕಟ್ಟಡದ ಕೆಳ ಮಹಡಿಯಲ್ಲಿ ಬೆಂ*ಕಿ ಅವಘ*ಡ ಸಂಭವಿಸಿದೆ.

ಕೂಡಲೇ ಘಟನಾ ಸ್ಥಳಕ್ಕೆ ಎರಡು ಅ*ಗ್ನಿಶಾಮಕ ವಾಹನ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಬೆಂಕಿ ಅವಘ*ಡ ಸಂಭವಿಸಿದಾಗ ಕೆಲ ಉದ್ಯೋಗಿಗಳು ಕಟ್ಟಡದಲ್ಲಿ ಸಿಲುಕಿದ್ದರು. ಕೂಡಲೇ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು, RT ನಗರ ಪೊಲೀಸರು ದೌಡಾಯಿಸಿ ರಕ್ಷಣಾ ಕಾರ್ಯ ಆರಂಭಿಸಿದರು.

ಅ*ಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಯಾರಿಗೂ ಪ್ರಾಣಾಪಾಯವಿಲ್ಲ. ಲಕ್ಷಾಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಅ*ಗ್ನಿಗೆ ಆ*ಹುತಿಯಾಗಿದೆ. ಅ*ಗ್ನಿ ಅ*ನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

Continue Reading

LATEST NEWS

Trending