LATEST NEWS
ರೀಲ್ಸ್ ರಾಣಿಯ ಐಷಾರಾಮಿ ಜೀವನದ ಗುಟ್ಟು ರಟ್ಟು; ಇವಳ ಅಸಲಿ ಕಥೆ ಗೊತ್ತಾ ?
ಕೇರಳ: ರೀಲ್ಸ್ ನೋಡಿ ಸ್ಟಾರ್ ಆಗಲು ಹೊರಡುತ್ತಿರುವವರು ಹಲವರಿದ್ದಾರೆ. ರೀಲ್ಸ್ ಮಾಡುತ್ತಾ ಐಷಾರಾಮಿ ಜೀವನ ಸಾಗಿಸುತ್ತಿದ್ದ 26ರ ಹರೆಯದ ಯುವತಿ ಮುಬೀನಾ ಎಲ್ಲರ ರೋಲ್ ಮಾಡೆಲ್ ಆಗಿದ್ದಳು. ರೀಲ್ಸ್ ಮೂಲಕವೇ ಈಕೆ ಕಾರು, 5 ಸ್ಟಾರ್ ರೆಸ್ಟೋರೆಂಟ್, ಪ್ರವಾಸ, ಹೊಸ ಹೊಸ ಬಟ್ಟೆ ಖರೀದಿಸುತ್ತಿದ್ದಾಳೆ ಅನ್ನೋ ಮಾತು ಎಲ್ಲೆಡೆ ಕೇಳಿಬಂದಿತ್ತು. ಈ ರೀಲ್ಸ್ ರಾಣಿಯ ನೋಡಿ ಹಲವು ಯುವತಿಯರು, ಮಹಿಳೆಯರು ಕೂಡ ರೀಲ್ಸ್ ಮಾಡಲು ಆರಂಭಿಸಿದ್ದರು. ಆದರೆ ಈಕೆ ಶೋಕಿ, ಐಷಾರಾಮಿಯ ಅಸಲಿ ಕತೆಯನ್ನು ಕೇರಳದ ಕೊಲ್ಲಂ ಪೊಲೀಸರು ತೆರೆದಿಟ್ಟಿದ್ದಾರೆ.
ಮುಬೀನಾ ಬಣ್ಣ ಬಣ್ಣದ ಲಿಪ್‌ಸ್ಟಿಕ್, ಹೊಸ ಹೊಸ ಬಟ್ಟೆ ಹಾಕಿ ಲಕಲಕ ಅಂತಾ ರೀಲ್ಸ್ ಮಾಡಿ ಹರಿಬಿಡುತ್ತಿದ್ದಳು. ಒಂದಷ್ಟು ಫ್ಯಾನ್ ಫಾಲೋವಿಂಗ್ ಸೃಷ್ಟಿ ಮಾಡಿಕೊಂಡಿದ್ದಳು. ರೀಲ್ಸ್‌ಗೆ ಬರುತ್ತಿದ್ದ ಪ್ರತಿ ಕಮೆಂಟ್‌ಗೂ ಪ್ರತಿಕ್ರಿಯೆ ನೀಡುತ್ತಿದ್ದ ಮಬೀನಾ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ಆದರೆ ಮುಬೀನಾ ಮಾಡುತ್ತಿದ್ದ ರೀಲ್ಸ್‌ನಿಂದ ಯಾವುದೇ ಆದಾಯ ಬರುತ್ತಿರಲಿಲ್ಲ. ಒಂದು ಬಿಡಿಗಾಸು ಬಂದಿಲ್ಲ.
ಹಾಗಂತ ಜನರ ಮುಂದೆ ತಾನೊಬ್ಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನ್ನೋದು ತೋರಿಸಿಕೊಳ್ಳಲು ಯಾವುತ್ತು ಹಿಂದೇಟು ಹಾಕಿಲ್ಲ. ರೀಲ್ಸ್ ಮೂಲಕ ತಾನು ಲಕ್ಷ ಲಕ್ಷ ರೂಪಾಯಿ ಸಂಪಾದಿಸುತ್ತಿರುವುದಾಗಿ ಕೊಚ್ಚಿ ಕೊಂಡಿದ್ದಾಳೆ. ಇದಕ್ಕೆ ತಕ್ಕಂತೆ ತನ್ನ ಜೀವನಶೈಲಿಯನ್ನೂ ಬದಲಿಸಿದ್ದಾಳೆ. ಹೀಗಿರುವಾಗ ಈಕೆಯ ಸಂಬಂಧಿಕರಾದ ಮುನೀರಾ ದೂರೊಂದನ್ನು ದಾಖಲಿಸಿದ್ದಾರೆ.
ಮಬೀನಾ ಮನೆಗೆ ಆಗಮಿಸಿದ ಬಳಿಕ ಚನ್ನಾಭರಣ ನಾಪತ್ತೆಯಾಗಿದೆ.ಹೀಗಾಗಿ ಅನುಮಾನಗೊಂಡ ಮುನೀರಾ ದೂರು ನೀಡಿದ್ದಾಳೆ. ಇತ್ತ ಪೊಲೀಸರು ಸಿಸಿಟಿವಿ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಮುಬೀನಾ ಅಸಲಿ ವೃತ್ತಿ ಕಳ್ಳತನ ಅನ್ನೋದು ಪೊಲೀಸರಿಗೆ ಖಚಿತವಾಗಿದೆ. ಬಳಿಕ ಪೊಲೀಸರು ಮುಬೀನಾಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಮುಬೀನಾ ರೀಲ್ಸ್ ಸ್ಟಾರ್ ಎಂದು ಬಿಂಬಿಸಿಕೊಳ್ಳಲು ಹೋಗಿ ಒಂದು ನಯಾಪೈಸೆ ಸಂದಿಸಿಲ್ಲ. ಐಷಾರಾಮಿತನಕ್ಕೆ, ಜೀವನಕ್ಕೆ ಚಿನ್ನಾಭರಣ ಕದಿಯುತ್ತಿದ್ದೆ ಅನ್ನೋದನ್ನು ಮುಬೀನಾ ಬಾಯಿಬಿಟ್ಟಿದ್ದಾಳೆ.
LATEST NEWS
ಮಗ ಸಾ*ವನ್ನಪ್ಪಿದ್ದು ಗೊತ್ತಾಗದೇ 4 ದಿನಗಳ ಕಾಲ ಶವದೊಂದಿಗೆ ಕಳೆದ ಅಂಧ ದಂಪತಿ
ಹೈದರಾಬಾದ್: ಮಗ ಸಾ*ವನ್ನಪ್ಪಿರುವ ವಿಷಯ ಗೊತ್ತಾಗದೇ ವೃದ್ಧ ಅಂಧ ದಂಪತಿ ನಾಲ್ಕು ದಿನಗಳ ಕಾಲ ಶವದ ಜೊತೆಯೇ ಕಳೆದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ವ್ಯಕ್ತಿಯೊಬ್ಬ ಶ*ವವಾಗಿ ಪತ್ತೆಯಾಗಿದ್ದು, ನಾಲ್ಕೈದು ದಿನಗಳ ಹಿಂದೆಯೇ ನಿದ್ರೆಯಲ್ಲಿಯೇ ಮೃ*ತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೃದ್ಧ ಅಂಧ ದಂಪತಿಗೆ ತಮ್ಮ ಮಗ ಸಾವನ್ನಪ್ಪಿರುವುದು ಗೊತ್ತಾಗಿಲ್ಲ. ಆಹಾರ ಹಾಗೂ ನೀರಿಗಾಗಿ ತಮ್ಮ ಮಗನನ್ನು ಕರೆಯಲು ಅವರು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾಲ್ಕು ದಿನಗಳಿಂದ ಊಟ, ನೀರು ಇಲ್ಲದೇ ದಂಪತಿ ಸುಸ್ತಾಗಿ ಬಳಲಿದ್ದಾರೆ. ಅವರ ಕೂಗು ಅಕ್ಕಪಕ್ಕದವರಿಗೂ ಕೇಳಿಲ್ಲ. ದಂಪತಿಯ ಮಗ ನಾಲ್ಕು ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ಇದೆ ಎಂದು ನಾಗೋಲ್ ಪೊಲೀಸ್ ಠಾಣೆಯ ಸೂರ್ಯ ನಾಯಕ್ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
FILM
ಇಬ್ಬರು ಪತ್ನಿಯರಿದ್ದರೂ ಮನೆಕೆಲಸದವಳೊಡನೆ ಮತ್ತೊಂದು ಮದುವೆ; ಖ್ಯಾತ ಯೂಟ್ಯೂಬರ್ ಫೊಟೋಸ್ ವೈರಲ್..!!
ಮುಂಬಯಿ: ಇಬ್ಬರು ಪತ್ನಿಯರನ್ನು ಹೊಂದಿರುವ ಖ್ಯಾತ ಯೂಟ್ಯೂಬರ್, ವ್ಲಾಗರ್ ಅರ್ಮಾನ್ ಮಲಿಕ್ ಒಂದಲ್ಲ ಒಂದು ವಿವಾದದಿಂದಲೇ ಸುದ್ದಿಯಾಗುತ್ತಿರುತ್ತಾರೆ.
ಇತ್ತೀಚೆಗಷ್ಟೇ ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ -3 ನಲ್ಲಿ ಹೈದರಾಬಾದ್ ಮೂಲದ ಅರ್ಮಾನ್ ಮಲಿಕ್ ತನ್ನ ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಿದ್ದರು.
ವಿವಾದದಿಂದಲೇ ಹೆಚ್ಚು ಸುದ್ದಿಯಾದ ಯೂಟ್ಯೂಬರ್:
ಅರ್ಮಾನ್ ಬಿಗ್ ಬಾಸ್ ಮನೆಗೆ ಪತ್ನಿಯರಾದ ಪಾಯಲ್ ಹಾಗೂ ಕೃತಿಕಾ ಅವರೊಂದಿಗೆ ಹೋಗಿದ್ದರು. ಇವರಗಳ ಪೈಕಿ ಮೊದಲ ಪತ್ನಿ ಪಾಯಲ್ ಬೇಗನೇ ಎಲಿಮಿನೇಟ್ ಅಗಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿ ವಿಶಾಲ್ ಪಾಂಡೆ ಕೃತಿಕಾ ಅವರ ಬಗ್ಗೆ ಮಾತನಾಡಿದ್ದಕ್ಕೆ ಅರ್ಮಾನ್ ಸಿಟ್ಟೆದ್ದು ಕಪಾಳಕ್ಕೆ ಬಾರಿಸಿದ್ದರು. ಇದು ಅನೇಕ ವಿವಾದಕ್ಕೆ ಕಾರಣವಾಗಿತ್ತು. ಅರ್ಮಾನ್ ಅವರನ್ನು ಕೂಡಲೇ ಶೋನಿಂದ ಹೊರಹಾಕಬೇಕೆಂದು ಅನೇಕರು ಆಗ್ರಹಿಸಿದ್ದರು.
ಪತ್ನಿಯ ಸ್ನೇಹಿತೆಯನ್ನೇ ವರಿಸಿದ.
2011ರಲ್ಲಿ ಖಾಸಗಿ ಬ್ಯಾಂಕ್ ವೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಅರ್ಮಾನ್, ಅದೇ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್ ಅವರೊಂದಿಗೆ ಪರಿಚಯವಾಗಿ ಪ್ರೀತಿಸಲು ಶುರು ಮಾಡುತ್ತಾರೆ. ಕೆಲ ಸಮಯದ ಬಳಿಕ ಕೋರ್ಟಿನಲ್ಲಿ ಅರ್ಮಾನ್ – ಪಾಯಲ್ ಮದುವೆ ಆಗುತ್ತಾರೆ. ಈ ದಂಪತಿಗೆ ಚಿರಾಯ್ ಎಂಬ ಮಗ ಹುಟ್ಟುತ್ತಾನೆ.
2018 ರಲ್ಲಿ ಅರ್ಮಾನ್ ಗೆ ಪಾಯಲ್ ಅವರ ಸ್ನೇಹಿತೆಯಾಗಿದ್ದ ಕೃತಿಕಾ ಎನ್ನುವಾಕೆಯ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗುತ್ತದೆ. ಈ ವಿಚಾರವನ್ನು ಅರ್ಮಾನ್ ಪಾಯಲ್ ಗೆ ಹೇಳುತ್ತಾರೆ. ಮೊದಲ ಪತ್ನಿಯ ಸಮ್ಮುಖದಲ್ಲೇ ಅರ್ಮಾನ್ ಖುಷಿಯಿಂದಲೇ ಕೃತಿಕಾ ಅವರನ್ನು ವಿವಾಹವಾಗುತ್ತಾರೆ.
ನಾಲ್ಕನೇ ಮದುವೆ ಆದರೇ ಅರ್ಮಾನ್?:
ಪಾಯಲ್, ಕೃತಿಕಾ ಅವರನ್ನು ವಿವಾಹವಾಗುವ ಮುನ್ನ ಅರ್ಮಾನ್ ಮೊದಲು ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದರು. ಅವರಿಂದ ದೂರವಾದ ಬಳಿಕ ಪಾಯಲ್, ಕೃತಿಕಾ ಅವರನ್ನು ವಿವಾಹವಾಗಿದ್ದರು.
ಫ್ಯಾಮಿಲಿ ಫಿಟ್ನೆಸ್ ಸೇರಿದಂತೆ ಅರ್ಮಾನ್ ಹಲವು ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು ಲಕ್ಷಂತಾರ ಸಬ್ ಸ್ಕ್ರೈಬರ್ಸ್‌ಗಳನ್ನು ಹೊಂದಿದ್ದಾರೆ. ಅರ್ಮಾನ್ ಅವರ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಲಕ್ಷ್ ಎನ್ನುವಾಕೆ ಮನೆ ಕೆಲಸದವಳಾಗಿ ಕೆಲಸ ಮಾಡುತ್ತಿದ್ದಾಳೆ. ಅರ್ಮಾನ್ ಮಕ್ಕಳನ್ನು ನೋಡಿಕೊಳ್ಳುವ, ಮನೆ ಕೆಲಸದ ಜತೆಗೆ ಯೂಟ್ಯೂಬ್ ಚಾನೆಲ್ ಗಳನ್ನು ಲಕ್ಷ್ ಹ್ಯಾಂಡಲ್ ಮಾಡುತ್ತಾಳೆ. ಪಾಯಲ್, ಕೃತಿಕಾ, ಅರ್ಮಾನ್ ಅವರ ಬಹುತೇಕ ಎಲ್ಲ ವ್ಲಾಗ್ ಗಳಲ್ಲಿ ಲಕ್ಷ್ ಕಾಣಿಸಿಕೊಳ್ಳುತ್ತಾಳೆ. ಹಾಗಾಗಿ ಅರ್ಮಾನ್ ಕುಟುಂಬದ ಜತೆ ಲಕ್ಷ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಇದೀಗ ಮನೆ ಕೆಲಸದವಳನ್ನೇ ಅರ್ಮಾನ್ ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯೊಂದು ಕಳೆದ ಕೆಲ ದಿನಗಳಿಂದ ಇಂಟರ್ ನೆಟ್ ನಲ್ಲಿ ಭಾರೀ ವೈರಲ್ ಆಗುತ್ತಿದೆ.
ಸುದ್ದಿ ಹಬ್ಬಲು ಕಾರಣವೇನು? :
ಇತ್ತೀಚೆಗೆ ಪಾಯಲ್ ಯೂಟ್ಯೂಬ್ ವ್ಲಾಗ್ ಮಾಡುವಾಗ ಲಕ್ಷ್ ಅವರು ಕೋರ್ಟ್‌ನಲ್ಲಿ ಮದುವೆ ಆಗಿದ್ದಾರೆ. ಅವರ ಗಂಡ ಮುಖ ತೋರಿಸಲು ಇಷ್ಟಪಡುತ್ತಿಲ್ಲ. ಅವರು ಯೂಟ್ಯೂಬ್‌ನಲ್ಲಿ ಕಾಣಿಸಿಕೊಳ್ಳಲ್ಲ ಎಂದಿದ್ದಾರೆ. ಮದುವೆಯಾದ ಬಳಿಕ ಗಂಡನ ಮನೆಬಿಟ್ಟು ಇಲ್ಲಿಕೆ ಯಾಕೆ ಬಂದಿದ್ದೀಯಾ ಎಂದು ಪಾಯಲ್ ಕೇಳಿದ್ದಾರೆ. ಇದಕ್ಕೆ ಲಕ್ಷ್ , “ಇದು ನನ್ನ ಮನೆ ಸಹ ಆಗಿದೆ ಹಾಗಾಗಿ ನಾನು ಬೇರೆಲ್ಲಿಯೂ ಹೋಗುವುದಿಲ್ಲ. ತಾನು ಮದುವೆಯಾಗಿರುವ ವಿಷಯವನ್ನು ಇನ್ನೂ ತನ್ನ ಮನೆಯಲ್ಲಿ ಬಹಿರಂಗಪಡಿಸಿಲ್ಲ” ಎಂದು ಲಕ್ಷ್ ಹೇಳಿದ್ದಾರೆ.
ಪತ್ನಿಯ ಸ್ಪಷ್ಟನೆ:
“ಅರ್ಮಾನ್ ಅವರಿಗೆ ಎರಡು ಪತ್ನಿಯರು ಮಾತ್ರ ಇದ್ದಾರೆ. ಅರ್ಮಾನ್ ಅವರನ್ನು ನೀವು ಇತರೆ ಹುಡುಗಿಯರ ಜತೆ ನೋಡಿದರೆ ಮೂರನೇ ಪತ್ನಿ, ನಾಲ್ಕನೇ ಪತ್ನಿ ಎಂದು ಕಮೆಂಟ್ ಮಾಡುತ್ತೀರಿ. ಹಾಗೇ ಯಾವತ್ತೂ ಆಗಲ್ಲ. ಲಕ್ಷ್ ನಮ್ಮ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಇದ್ದಾಳೆ. ಅವಳು ನಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಮಕ್ಕಳ ಅಕೌಂಟ್ ನಿಂದ ವಿಡಿಯೋ ಮಾಡುತ್ತಾಳೆ. ನಮ್ಮ ಅಕೌಂಟ್ ಮ್ಯಾನೇಜ್ ಮಾಡುತ್ತಾಳೆ. ಅವಳು ನಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾಳೆ ಎಂದು ಪಾಯಲ್ ಸ್ಪಷ್ಟಪಡಿಸಿದ್ದಾರೆ.
LATEST NEWS
ಬಿಯರ್ ಬಾಟಲ್‌ನಲ್ಲಿ ಪತ್ತೆಯಾಯ್ತು ಸತ್ತ ಹಲ್ಲಿ
ಐಸ್‌ಕ್ರೀಮ್‌ನಲ್ಲಿ ಮಾನವನ ಬೆರಳು, ರೈಲಿನಲ್ಲಿ ವಿತರಿಸಿದ ಆಹಾರದಲ್ಲಿ ಚೇಳು, ಜ್ಯೂಸ್‌ನಲ್ಲಿ ಜೀವಂತ ಹುಳು ಪತ್ತೆಯಾದ ಘಟನೆ ವೈರಲ್ ಆಗಿತ್ತು. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ. ತಾನು ಕುಡಿಯಬೇಕೆಂದು ಖದೀದಿಸಿದ ಬಿಯರ್‌ನಲ್ಲಿ ಹಲ್ಲಿ ಇರುವುದನ್ನು ಕಂಡು ಆ ಗ್ರಾಹಕ ಫುಲ್ ಶಾಕ್ ಆಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಗ್ರಾಹಕರೊಬ್ಬರು ವೈನ್‌ಶಾಪ್‌ನಿಂದ ಖರೀದಿಸಿದ ಬಡ್‌ವೈಸರ್ ಬಿಯರ್ ಬಾಟಲ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಈ ಅಚ್ಚರಿಯ ಘಟನೆ ಸುರಕ್ಷತೆ ಮತ್ತು ನೈರ್ಮದ್ಯದ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ವರದಿಗಳ ಪ್ರಕಾರ ವಿಕಾರಾಬಾದ್ ಕೆರಳ್ಳಿ ಗ್ರಾಮದ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಅನಂತಯ್ಯ ಎಂಬ ಇಬ್ಬರು ವ್ಯಕ್ತಿಗಳು ಪಾರ್ಟಿಯ ಸಲುವಾಗಿ ಧಾರೂರಿನ ವೈನ್ ಶಾಪ್‌ನಿಂದ ಸುಮಾರು 4,000 ರೂಪಾಯಿ ಮೌಲ್ಯದ ಮದ್ಯವನ್ನು ಖರೀದಿಸಿದ್ದರು. ಹೀಗೆ ಎಣ್ಣೆ ಪಾರ್ಟಿಯಲ್ಲಿ ಬಡ್ ವೈಸರ್ ಬಿಯರ್ ಬಾಟಲ್ ಓಪನ್ ಮಾಡಿದಾಗ ಅದರಲ್ಲಿ ಸತ್ತ ಹಲ್ಲಿಯೊಂದು ತೇಳುವುದು ಪತ್ತೆಯಾಗಿದೆ. ಈ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಮದ್ಯ ಖರೀದಿಸಿದ ಆ ಇಬ್ಬರು ವ್ಯಕ್ತಿಗಳು ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ.
- BIG BOSS2 days ago
BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??
- BIG BOSS5 days ago
ಕಲರ್ಸ್ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್ಗೆ ಗುಡ್ ನ್ಯೂಸ್
- FILM5 days ago
ತುಳು ಚಿತ್ರರಂಗಕ್ಕೆ ಕಾಲಿಟ್ಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್
- BIG BOSS4 days ago
BBK11: ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು ಮನೆಯೊಳಕ್ಕೆ ನುಗ್ಗಿ ಬಂದ ಜನರು! ಯಾಕೆ ಗೊತ್ತಾ?