Connect with us

  International news

  ಕುವೈತ್ ಅ*ಗ್ನಿ ದುರಂ*ತ: 40 ಭಾರತೀಯರ ಸಾ*ವು; ಪ್ರಧಾನಿ ಮೋದಿ ಸಂತಾಪ

  Published

  on

  ಮಂಗಳೂರು/ಕುವೈತ್ : ಕುವೈತ್‌ನ ವಸತಿ ಕಾರ್ಮಿಕರ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಭಾರೀ ಅ*ಗ್ನಿ ಅವಘ*ಡದಲ್ಲಿ 43ಕ್ಕೂ ಅಧಿಕ ಮಂದಿ ಸಾ*ವನ್ನಪ್ಪಿದ್ದಾರೆ. ಇವರಲ್ಲಿ 40 ಜನ ಭಾರತೀಯರು ಕೂಡ ಸೇರಿದ್ದಾರೆ. ಮಲಯಾಳಿ ಉದ್ಯಮಿಯೊಬ್ಬರಿಗೆ ಸೇರಿದ ಕುವೈತ್​ನ ದಕ್ಷಿಣ ಅಹ್ಮದಿ ಗವರ್ನರೇಟ್‌ನಲ್ಲಿರುವ ಮಂಗಾಫ್ ಪ್ರದೇಶದಲ್ಲಿರುವ ಕಟ್ಟಡದಲ್ಲಿ 160ಕ್ಕೂ ಹೆಚ್ಚು ಕಾರ್ಮಿಕರು ನೆಲೆಸಿದ್ದರು. ಬುಧವಾರ 6 ಅಂತಸ್ತಿನ ಕಟ್ಟಡದ ಅಡುಗೆ ಕೋಣೆಯಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ.

  ಕುವೈತ್ ಉಪಪ್ರಧಾನ ಮಂತ್ರಿ ಶೇಖ್ ಫಹಾದ್ ಯೂಸುಫ್ ಸೌದ್ ಅಲ್-ಸಬಾಹ್ ಈ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ 43 ಕಾರ್ಮಿಕರು ಸಾ*ವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.


  ಪ್ರಧಾನಿ ಮೋದಿ ಸಂತಾಪ :

  ಈ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕುವೈತ್ ನಗರದಲ್ಲಿ ಸಂಭವಿಸಿದ ಅ*ಗ್ನಿ ದುರಂ*ತವು ದುಃಖಕರವಾಗಿದೆ. ನನ್ನ ಆಲೋಚನೆಗಳು ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡಿರುವ ಎಲ್ಲರೊಂದಿಗೆ ನಾವಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ನಮ್ಮ ದೇಶದವರು ಅಲ್ಲಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

  ಇದನ್ನೂ ಓದಿ : ಪುರಿ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳು ಭಕ್ತರ ಪ್ರವೇಶಕ್ಕೆ ಮುಕ್ತ

  ಭಾರತೀಯ ರಾಯಭಾರಿ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಕುವೈತ್ ನಗರದಲ್ಲಿ ನಡೆದ ಅ*ಗ್ನಿ ದುರಂ*ತದ ಸುದ್ದಿಯಿಂದ ತೀವ್ರ ಆಘಾತವಾಗಿದೆ. 40ಕ್ಕೂ ಹೆಚ್ಚು ಸಾ*ವುಗಳು ಸಂಭವಿಸಿದ್ದು, 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಮ್ಮ ರಾಯಭಾರಿ ಘಟನಾ ಸ್ಥಳಕ್ಕೆ ಹೋಗಿದ್ದು ನಾವು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ, ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಹಿತಿ ನೀಡಿದ್ದಾರೆ.

  International news

  ಜಗತ್ತಿನ ದೊಡ್ಡಣ್ಣನಲ್ಲಿ ಹ*ತ್ಯೆಯಾದ ಅಧ್ಯಕ್ಷರುಗಳು ಇವರು..!

  Published

  on

  ಮಂಗಳೂರು/ವಾಷಿಂಗ್ಟನ್ : ಅಮೆರಿಕಾದಲ್ಲಿ ಅಧ್ಯಕ್ಷರ ಮೇಲೆ ಗುಂ*ಡಿನ ದಾಳಿ ನಡೆದಿರುವುದು ಹಾಗೂ ಅಧ್ಯಕ್ಷರ ಹ*ತ್ಯೆ ನಡೆದಿರುವುದು ಇದೇ ಮೊದಲೇನಲ್ಲ. 1865 ರಲ್ಲಿ ಅಮೇರಿಕಾದ ಅಧ್ಯಕ್ಷ ಅಬ್ರಾಹಂ ಲಿಂಕನ್ ಈ ರೀತಿಯ ದಾ*ಳಿಯಲ್ಲಿ ಹ*ತ್ಯೆಯಾದ ಮೊದಲ ಅಮೆರಿಕಾ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ ಟ್ರಂಪ್‌ ದಾಳಿಗೆ ಒಳಗಾದ ಅಮೆರಿಕಾದ ಎರಡನೇ ಮಾಜಿ ಅಧ್ಯಕ್ಷರಾಗಿದ್ದಾರೆ.

  ಜಗತ್ತಿನ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೆರಿಕಾದ ಅಧ್ಯಕ್ಷರಿಗೆ ದೊಡ್ಡ ಬೆಂಗಾವಲು ಪಡೆಯೇ ಇದೆ. ಆದ್ರೆ, ಆ ಬೆಂಗಾವಲು ಪಡೆಯನ್ನು ಬೇಧಿಸಿ ಗುಂ*ಡಿನ ದಾಳಿ ನಡೆಸಿ ಇದುವರೆಗೆ ನಾಲ್ವರು ಅಧ್ಯಕ್ಷರನ್ನು ಹ*ತ್ಯೆ ಮಾಡಲಾಗಿದೆ. ಇನ್ನು ನಾಲ್ವರು ಅಧ್ಯಕ್ಷರ ಮೇಲೆ ದಾ*ಳಿ ನಡೆದಿದ್ದರೂ ಜೀವ ಉಳಿಸಿಕೊಂಡಿದ್ದಾರೆ. ಇನ್ನು ಟ್ರಂಪ್‌ಗೂ ಮೊದಲು 1912 ರಲ್ಲಿ ಮಾಜಿ ಅಧ್ಯಕ್ಷ ಥಿಯೋಡೋರ್‌ ರೋಸ್‌ವೆಲ್ಸ್‌ ಮೇಲೆ ದಾಳಿ ನಡೆಸಲಾಗಿತ್ತು. ಅವರೂ ಕೂಡ ಗಾ*ಯಗೊಂಡು ಜೀವ ಉಳಿಸಿಕೊಂಡಿದ್ದರು.

  ಇದುವರೆಗೆ ಗುಂ*ಡಿನ ದಾಳಿಗೆ ಹ*ತ್ಯೆಯಾದ ಅಮೆರಿಕಾ ಅಧ್ಯಕ್ಷರು ಇವರು..!


  1. ಅಬ್ರಹಾಮ್ ಲಿಂಕನ್ (Abraham Lincoln). ಹ*ತ್ಯೆ ನಡೆದ ವರ್ಷ: 1865 . ಹ*ತ್ಯೆ ನಡೆದ ಸ್ಥಳ : ವಾಷಿಂಗ್ಟನ್‌ ಡಿ.ಸಿ. , ಫೋರ್ಡ್‌ ಥಿಯೇಟರ್‌. ಹ*ತ್ಯೆ ಮಾಡಿದಾತ : ಜಾನ್‌ ವಿಲ್ಕ್ಸ್‌ ಬೂತ್.

   


  2. ಜೇಮ್ಸ್ ಎ. ಗಾರ್ಫೀಲ್ಡ್ (James A. Garfield). ಹ*ತ್ಯೆ ನಡೆದ ವರ್ಷ: 1881. ಹ*ತ್ಯೆ ನಡೆದ ಸ್ಥಳ : ವಾಷಿಂಗ್ಟನ್‌ ಡಿ.ಸಿ. Baltimore and Potomac Railroad Station. ಹ*ತ್ಯೆ ಮಾಡಿದಾತ : ಚಾರ್ಲ್ಸ್ ಜೆ. ಗುಟೀಯೋ


  3. ವಿಲಿಯಂ ಮಕ್ಕಿನ್‌ಲಿಯೆ (William McKinley). ಹ*ತ್ಯೆ ನಡೆದ ವರ್ಷ: 1901. ಹತ್ಯೆ ನಡೆದ ಸ್ಥಳ : ಬಫಲೋ, ನ್ಯೂಯಾರ್ಕ್. ಹ*ತ್ಯೆ ಮಾಡಿದಾತ : ಲಿಯೋನ್ ಚೋಲ್ಗೊಶ್


  4. ಜಾನ್ ಎಫ್. ಕೆನಡಿ (John F. Kennedy). ಹ*ತ್ಯೆ ನಡೆದ ವರ್ಷ: 1963. ಹ*ತ್ಯೆ ನಡೆದ ಸ್ಥಳ : ಡಲ್ಲಾಸ್, ಟೆಕ್ಸಾಸ್, ಹ*ತ್ಯೆ ಮಾಡಿದಾತ : ಲೀ ಹಾರ್ವೇ ಓಸ್ವಾಲ್ಡ್

  ಅಧ್ಯಕ್ಷರಾಗಿದ್ದಾಗಲೇ ಇವರ ಮೇಲೆ ದಾ*ಳಿ ನಡೆದಿತ್ತು..!


  1. ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ (Franklin D. Roosevelt). ದಾ*ಳಿ ನಡೆದ ವರ್ಷ : 1933. ದಾ*ಳಿ ನಡೆದ ಸ್ಥಳ : ಮಿಯಾಮಿ, ಫ್ಲೋರಿಡಾ. ದಾ*ಳಿ ಮಾಡಿದ ಆರೋಪಿ : ಜ್ಯೂಸೆಪ್ಸ್‌.


  2. ಹ್ಯಾರಿ ಎಸ್. ಟ್ರೂಮನ್ (Harry S. Truman). ದಾ*ಳಿ ನಡೆದ ವರ್ಷ : 1950 . ದಾ*ಳಿ ನಡೆದ ಸ್ಥಳ : ಬ್ಲೇರ್ ಹೌಸ್, ವಾಷಿಂಗ್ಟನ್‌ ಡಿ.ಸಿ., ದಾ*ಳಿ ಮಾಡಿದಾತ : ಓಸ್ಕರ್ ಕೊಲ್ಲಾಜೋ ಮತ್ತು ಗ್ರೈಸಿಯೋ ಟೊರ್ರೆಸೊಲಾ.


  3. ಜೆರಾಲ್ಡ್ ಫೋರ್ಡ್ (Gerald Ford). ದಾಳಿ ನಡೆದ ವರ್ಷ : 1975 . ಇವರ ಮೇಲೆ ಎರಡು ಬಾರಿ ದಾ*ಳಿ ನಡೆಸಲಾಗಿದ್ದು ಒಂದು ಬಾರಿ ಸಕ್ರಾಮೆಂಟೋ, ಕ್ಯಾಲಿಫೋರ್ನಿಯಾ ಹಾಗೂ ಸಾನ್‌ ಫ್ರಾನ್ಸಿಸ್ಕೋದಲ್ಲಿ ದಾ*ಳಿ ನಡೆದಿತ್ತು. ಲಿನೆಟ್ “ಸ್ಕ್ವೀಕಿ” ಫ್ರೊಮ್ ಮತ್ತು ಸಾರೆ ಜೇನ್ಮೂರ್ ಎಂಬವರು ಈ ವಿಫಲ ದಾ*ಳಿ ನಡೆಸಿದ್ದರು.


  4. ರೋನಾಲ್ಡ್ ರೀಗನ್ (Ronald Reagan). ದಾ*ಳಿ ನಡೆದ ವರ್ಷ : 1981 . ದಾಳಿ ನಡೆದ ಸ್ಥಳ : ವಾಷಿಂಗ್ಟನ್ ಡಿ.ಸಿ. ದಾ*ಳಿ ಮಾಡಿದವ : ಜಾನ್‌ ಹಿಂಕ್ಲಿ ಜೂನಿಯರ್‌.

  ಇದನ್ನೂ ಓದಿ : ಶ್ವಾನಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕರು!
  ಅಧ್ಯಕ್ಷರನ್ನು ಗುರಿಯಾಗಿಸಿ ದಾ*ಳಿ ನಡೆದಿದ್ದ ಅಮೆರಿಕಾದಲ್ಲಿ ಎರಡು ಬಾರಿ ಮಾಜಿ ಅಧ್ಯಕ್ಷರ ಮೇಲೆ ದಾ*ಳಿ ನಡೆಸಲಾಗಿದೆ. ಮೊದಲ ಬಾರಿ 1912 ರಲ್ಲಿ ಮಾಜಿ ಅಧ್ಯಕ್ಷ ಥಿಯೋಡೋರ್ ರೂಸ್‌ವೆಲ್ಟ್ ಮೇಲೆ ದಾ*ಳಿ ನಡೆದಿತ್ತು. ದಾ*ಳಿಯಲ್ಲಿ ರೂಸ್‌ವೆಲ್ಟ್‌ ಬದುಕಿ ಉಳಿದಿದ್ದರು. ಇದಾದ ಬಳಿಕ 2024 ರಲ್ಲಿ ಡೊನಾಲ್ಡ್‌ ಟ್ರಂಪ್‌ ಮೇಲೆ ದಾ*ಳಿ ನಡೆಸಲಾಗಿದೆ. ಕಿವಿಗೆ ಗಾ*ಯವಾಗಿ ಟ್ರಂಪ್ ಕೂಡ ಬದುಕಿ ಉಳಿದಿದ್ದಾರೆ.

  Continue Reading

  International news

  WATCH : ನೋಡು ನೋಡುತ್ತಿದ್ದಂತೆ ಕೆಂಪಾದ ಸಮುದ್ರ…ವೀಡಿಯೋ ವೈರಲ್

  Published

  on

  ಮಂಗಳೂರು/ಟೆಕ್ಸಾಸ್ : ಆ ಸಮುದ್ರ ನೋಡು ನೋಡುತ್ತಿದ್ದಂತೆ ಕೆಂಪಾಗಿದೆ. ಆಶ್ಚರ್ಯ ಆದ್ರೂ ಇದು ಸತ್ಯ! ಆದ್ರೆ, ಇದಕ್ಕೆ ಕಾರಣ ಶಾರ್ಕ್. ಈ ಘಟನೆ ನಡೆದಿರೋದು ಟೆಕ್ಸಾಸ್‌ನ ಸೌತ್ ಪಾಡ್ರೆ ದ್ವೀಪದಲ್ಲಿ.


  ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಮಹಿಳೆಯ ಕಾಲಿಗೆ ಬಾಯಿ ಹಾಕಿರುವ ಶಾರ್ಕ್ ಆಕೆಯ ಕಾಲಿನ ಪೀಸ್ ತಿಂದು ಹಾಕಿದೆ. ಇದರಿಂದ ಸಮುದ್ರದ ನೀರು ಕೆಂಬಣ್ಣಕ್ಕೆ ತಿರುಗಿದೆ. ಈ ಭಯಾನಕ ವಿಡಿಯೋ ವೈರಲ್ ಆಗಿದೆ.

  ಆ ಶಾರ್ಕ್ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಮಹಿಳೆಯ ಕಾಲು ಕಟ್ ಆಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸಮುದ್ರದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.

  ಇದನ್ನೂ ಓದಿ : ಏನಾಶ್ಚರ್ಯ!! ನಾಗರ ಹಾವು ಕಡಿದು ಮಹಿಳೆ ಸಾ*ವು; ಅಂತ್ಯಸಂಸ್ಕಾರದ ವಿಧಿಗೆ ಬಂದು ನೀರು ಕುಡಿದು ಹೋದ ನಾಗರಹಾವು

  ಸುಮಾರು 6 ಅಡಿ (ಸುಮಾರು 1.8 ಮೀಟರ್) ಉದ್ದದ ಒಂದೇ ಶಾರ್ಕ್ ಈ ಘಟನೆಗೆ ಕಾರಣ. ಈ ದಾಳಿಯ ನಂತರ ಸುರಕ್ಷತಾ ದೃಷ್ಟಿಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಡಲ ತೀರದಲ್ಲಿ ಗಸ್ತು ತಿರುಗುತ್ತಿದ್ದಾರೆ ಮತ್ತು ಡ್ರೋನ್‌ಗಳನ್ನು ಹಾರಿಸುತ್ತಿದ್ದು ಕಟ್ಟುನಿಟ್ಟಿನ ಎಚ್ಚರ ವಹಿಸಿದ್ದಾರೆ.

  Continue Reading

  International news

  ಅತಿಯಾದ ಕೆಲಸದ ಒತ್ತಡ..! ರೋಬೋಟ್ ಸೂಸೈ*ಡ್‌..?

  Published

  on

  ಮಂಗಳೂರು/ ದಕ್ಷಿಣ ಕೊರಿಯಾ : ಮಾನಸಿಕ ಒತ್ತಡಕ್ಕೆ ಸಿಲುಕಿದ ಮನುಷ್ಯರು ಜೀವಾಂ*ತ್ಯಗೊಳಿಸುವುದು ಸರ್ವೇ ಸಾಮಾನ್ಯ. ಆದ್ರೆ, ದಕ್ಷಿಣ ಕೊರಿಯಾದಲ್ಲಿ ರೋಬೋಟ್ ಒಂದು ಕೆಲಸದ ವಿಚಾರದಲ್ಲಿ ಹತಾಶೆಯಿಂದ ಸೂ*ಸೈಡ್ ಮಾಡಿಕೊಂಡಿದೆ ಎನ್ನಲಾಗಿದೆ. ದಕ್ಷಿಣ ಮದ್ಯ ಕೊರಿಯಾದ ಪುರಸಭೆಯೊಂದು ಈ ವಿಚಾರ ಬಹಿರಂಗ ಪಡಿಸಿದ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

  ಮುನ್ಸಿಪಲ್ ಕಾರ್ಪೋರೇಷನ್‌ನಲ್ಲಿ ಆಡಳಿತಾತ್ಮಕ ಕೆಲಸದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರೋಬೋಟ್ ಮೆಟ್ಟಿಲಿನಿಂದ ಹಾರಿ ಆತ್ಮಹ*ತ್ಯೆ ಮಾಡಿಕೊಂಡಿದೆ ಎಂದು ಕಾರ್ಪೋರೇಷನ್ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಒಂದು ವರ್ಷದಿಂದ ಈ ರೋಬೋಟ್ ಇಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿತ್ತು.

  ಕ್ಯಾಲಿಫೋರ್ನಿಯಾದ ಬೇರ್ ರೋಬೋಟಿಕ್ಸ್ ಅಭಿವೃದ್ಧಿಪಡಿಸಿದ ಈ ರೋಬೋಟ್ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕೆಲಸ ಮಾಡುತ್ತಿತ್ತು. ತನ್ನದೇ ಆದ ಸಾರ್ವಜನಿಕ ಸೇವಾ ಕಾರ್ಡ್ ಅನ್ನು ಸಹ ಹೊಂದಿದ್ದ ಇದು ಕೇವಲ ಒಂದು ಮಹಡಿಗೆ ಸೀವಿತವಾಗಿರಲಿಲ್ಲ.

  ಒಂದು ಮಹಡಿಗೆ ಸೀಮಿತವಾದ ಇತರ ರೋಬೋಟ್‌ಗಳಿಗಿಂತ ಭಿನ್ನವಾಗಿ, ಇದು ಬೇರೆ ಬೇರೆ ಮಹಡಿಗಳಿಗೆ ತೆರಳಿ ಕೆಲಸ ಮಾಡುತ್ತಿತ್ತು. ಆದರೆ, ಕಳೆದ ವಾರ ನಿಧಾನವಾಗಿ ಚಲಿಸಲು ಆರಂಭಿಸಿದ್ದ ರೋಬೋಟ್ ಬಳಿಕ ಮಹಡಿಯ ಮೆಟ್ಟಿಲ ಕೆಳಗೆ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ರೋಬೋಟ್ ಆತ್ಮಹ*ತ್ಯೆ ಮಾಡಿಕೊಂಡಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

  ಇದನ್ನೂ ಓದಿ : WATCH : ಕೂದಲು ಕತ್ತರಿಸಿಕೊಂಡ ಹೀನಾ ಖಾನ್; ಗೆಲ್ಲಬೇಕು ಅಂದ್ರೆ ಕಠಿಣ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದ ನಟಿ

  ರೋಬೋಟ್‌ನ ಅವಶೇಷಗಳನ್ನು ಸಂಗ್ರಹಿಸಿರುವ ಅದರ ವಿನ್ಯಾಸಕಾರ ಕಂಪೆನಿ ಈ ಘಟನೆಯ ನಿಖರ ಕಾರಣ ಹುಡುಕುವ ಪ್ರಯತ್ನ ನಡೆಸಿದೆ.

  Continue Reading

  LATEST NEWS

  Trending